ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೂದು ಬಣ್ಣದ 100 ರೂಪಾಯಿ ನೋಟು ಬರಲಿದೆ

By Mahesh
|
Google Oneindia Kannada News

ಬೆಂಗಳೂರು, ಜುಲೈ 18: ಭಾರತೀಯ ರಿಸರ್ವ್ ಬ್ಯಾಂಕ್ (ಆರ್ ಬಿಐ) ಮತ್ತೊಮ್ಮೆ 100 ರೂಪಾಯಿಯ ಹೊಸ ನೋಟುಗಳನ್ನು ಪರಿಚಯಿಸಲು ಮುಂದಾಗಿದೆ. ಈಗಾಗಲೇ ಮುದ್ರಣ ಶುರುವಾಗಿದ್ದು, ಹೊಸ ನೋಟು ಅಳತೆಯಲ್ಲಿ ಚಿಕ್ಕ ಗಾತ್ರದಲ್ಲಿರಲಿದೆ ಎಂದು ದೈನಿಕ್ ಭಾಸ್ಕರ್ ವರದಿ ಮಾಡಿದೆ.

ಈ ಹೊಸ ನೋಟುಗಳು ಬೂದು ಬಣ್ಣದಿಂದ ಕೂಡಿದ್ದು, ಮಾರುಕಟ್ಟೆಗೆ ಬರುತ್ತಿದಂತೆ ಹಳೆ 100 ರೂಪಾಯಿ ನೋಟುಗಳನ್ನು ಹಿಂಪಡೆಯಲಾಗುತ್ತದೆ.

ಹೊಸದಾಗಿ ಬರುತ್ತಿರುವ 500 ರು. ನೋಟಿನ ಬಗ್ಗೆ ಆರ್ ಬಿಐ ಹೇಳೋದೇನು?ಹೊಸದಾಗಿ ಬರುತ್ತಿರುವ 500 ರು. ನೋಟಿನ ಬಗ್ಗೆ ಆರ್ ಬಿಐ ಹೇಳೋದೇನು?

ಹೇಗಿರಲಿದೆ ನೋಟು?: 10 ರೂಪಾಯಿ ನೋಟಿಗಿಂತ ದೊಡ್ಡದು, ಈಗ ಇರುವ ನೂರು ರೂಪಾಯಿ ನೋಟಿಗಿಂತ ಚಿಕ್ಕದಾಗಿರಲಿದೆ. ಕೇಂದ್ರ ಸರ್ಕಾರವು 10 ರೂಪಾಯಿ, 20 ರೂಪಾಯಿ, 50 ರೂಪಾಯಿ, 500 ರೂಪಾಯಿ ಹಾಗೂ 2 ಸಾವಿರ ರೂಪಾಯಿ ನೋಟುಗಳನ್ನು ಹೊಸ ರೂಪದಲ್ಲಿ ಮಾರುಕಟ್ಟೆಗೆ ತಂದಿದೆ. ಹೊಸ 100 ರೂಪಾಯಿ ನೋಟುಗಳ ಬಗ್ಗೆ ಆಗಸ್ಟ್ ಅಥವಾ ಸೆಪ್ಟೆಂಬರ್ ನಲ್ಲಿ ಅಧಿಕೃತವಾಗಿ ಆರ್ ಬಿಐ ಪ್ರಕಟಣೆ ಹೊರಡಿಸಲಿದೆ.

New Rs 100 note may be violet-coloured, smaller in size: Report

ದೇವಾಸ್ ಬ್ಯಾಂಕ್ ನೋಟ್ ಪ್ರೆಸ್ ನಲ್ಲಿ ದೇಶಿ ಇಂಕ್ ಹಾಗೂ ಪೇಪರ್ ಬಳಸಿ ನೂರು ರೂಪಾಯಿ ನೋಟಿನ ಮುದ್ರಣ ಶುರುವಾಗಿದೆ. ನೂರು ರೂಪಾಯಿ ನೋಟಿನ ಜೊತೆ ಐದು ನೂರು ಹಾಗೂ ಎರಡು ಸಾವಿರ ರೂಪಾಯಿ ನೋಟುಗಳೂ ಮುದ್ರಣವಾಗುತ್ತಿರುವ ಸುದ್ದಿ ಇದ್ದರೂ ಹೆಚ್ಚಿನ ಮಾಹಿತಿಯಿಲ್ಲ. ಹೊಸ ನೋಟಿನಲ್ಲಿ ಮೈಕ್ರೋ ಸೆಕ್ಯುರಿಟಿ ಸೌಲಭ್ಯವಿರಲಿದ್ದು, ಅತಿ ನೇರಳೆ ಕಿರಣ(ultraviolet light) ದಲ್ಲಿ ಮಾತ್ರ ಗೋಚರಿಸಲಿದೆ. ಈ ನೋಟುಗಳು ಚಾಲನೆಗೆ ಬಂದ ಬಳಿಕ ಎಟಿಎಂ ನಲ್ಲೂ ಬದಲಾವಣೆ ಮಾಡಿಕೊಳ್ಳಬೇಕಾಗುತ್ತದೆ.

ಹೊಸ ನೋಟಿನ 11 ಭದ್ರತಾ ವೈಶಿಷ್ಟ್ಯಗಳನ್ನು ಕಾಪಿ ಹೊಡೆದ ಖದೀಮರುಹೊಸ ನೋಟಿನ 11 ಭದ್ರತಾ ವೈಶಿಷ್ಟ್ಯಗಳನ್ನು ಕಾಪಿ ಹೊಡೆದ ಖದೀಮರು

ನವೆಂಬರ್ 8, 2016 ರಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು 500 ಹಾಗೂ ಸಾವಿರ ಮುಖ ಬೆಲೆಯ ನೋಟುಗಳನ್ನು ನಿಷೇಧಿಸಿದ್ದರು. ಇದಾದ ನಂತರ ಮಾರುಕಟ್ಟೆಗೆ 500, 2000 ರೂಪಾಯಿ ನೋಟುಗಳನ್ನು ಪರಿಚಯಿಸಲಾಯಿತು. 10, 20, 50, 500 ಹಾಗೂ 2000 ರೂಪಾಯಿ ಹೊಸ ನೋಟುಗಳನ್ನು ಮುದ್ರಿಸಿ ಮಾರುಕಟ್ಟೆಗೆ ಬಿಟ್ಟಿತ್ತು. ಕಳೆದ ವರ್ಷ ಆಗಸ್ಟ್ ನಲ್ಲಿ 200 ರೂಪಾಯಿ ನೋಟು ಮಾರುಕಟ್ಟೆಗೆ ಬಂದಿತ್ತು. ಈಗ 100 ರೂಪಾಯಿ ನೋಟಿನ ಸರದಿ.

English summary
The new Rs 100 note might be violet in colour, smaller than the previous version and bear the impression of Gujarat's historic stepwell Rani ki Vav, Dainik Bhaskar reported.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X