ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪಿಎಫ್ ಹೊಸ ನಿಮಯ : ಟೇಕ್ ಹೋಮ್ ಸಂಬಳಕ್ಕೆ ಕುತ್ತು !

By Mahesh
|
Google Oneindia Kannada News

ನವದೆಹಲಿ, ಮಾ.15: ಭವಿಷ್ಯ ನಿಧಿ ವಂತಿಗೆ ನೀಡುವ ಪ್ರಮಾಣದಲ್ಲಿ ಹೆಚ್ಚು ಕಮ್ಮಿ ಮಾಡಿ ಸರ್ಕಾರ ಹೊಸ ನೀತಿ ರೂಪಿಸಲು ಮುಂದಾಗಿದೆ. ಇದರಿಂದ ಪಿಎಫ್ ವಂತಿಗೆಗೆ ಎಲ್ಲಾ ಭತ್ಯೆಗಳು ಸೇರಿ ಪೂರ್ಣ ವೇತನವನ್ನು ಪರಿಗಣಿಸಲಾಗುತ್ತದೆ. ಹೀಗಾಗಿ ಟೇಕ್ ಹೋಮ್ ಸ್ಯಾಲರಿ ಪ್ರಮಾಣ ಗಣನೀಯವಾಗಿ ತಗ್ಗುವ ಸಾಧ್ಯತೆಯಿದೆ.

ಸದ್ಯಕ್ಕೆ ಪಿಎಫ್ ಲೆಕ್ಕಾಚಾರದಲ್ಲಿ ಸಂಬಳದಾರರ ಬೇಸಿಕ್ ವೇತನ ಹಾಗೂ ತುಟ್ಟಿಭತ್ಯೆ (ಡಿಎ) ಮಾತ್ರ ಸೇರಿಸಿ ಪಿಎಫ್ ಕಡಿತಗೊಳಿಸಲಾಗುತ್ತದೆ. ಅದರೆ, ಹೊಸ ನಿಯಮದಿಂದ ಹೆಚ್ಚುವರಿ ಭತ್ಯೆಗಳು ಕಡಿತಗೊಳಪಡಲಿವೆ. ಇನ್ಮುಂದೆ ಉದ್ಯೋಗಿ(employee) ಹಾಗೂ ಉದ್ಯೋಗದಾತ(empolyer) ಹೆಚ್ಚಿನ ಹಣ ತೆರಬೇಕಾಗುತ್ತದೆ.

ಪಿಎಫ್ ಲೆಕ್ಕಾಚಾರ: ಮೂಲ ವೇತನ ಮತ್ತು ತುಟ್ಟಿಭತ್ಯೆ(ಡಿಎ) ಒಟ್ಟು ಮೊತ್ತದ ಶೇ 12ರಷ್ಟು ಪರಿಗಣಿಸಲಾಗುತ್ತದೆ. ಈ ಪೈಕಿ ಉದ್ಯೋಗದಾತರ ವಂತಿಗೆ ಶೇ 3.67ರಷ್ಟು ಪಿಎಫ್ ಗೆ ಹಾಗೂ ಶೇ 8.33ರಷ್ಟು ಪಿಎಫ್ ಪಿಂಚಣಿ ನಿಧಿಗೆ ಸೇರಲಿದೆ.

New PF Rules May Lower Your Take-Home Salary

1952ರ ಪಿಎಫ್ ವಿಧೇಯಕಕ್ಕೆ ಎನ್ ಡಿಎ ಸರ್ಕಾರ ತಿದ್ದುಪಡಿ ತರಲು ನಿರ್ಧರಿಸಿದೆ. ಹೀಗಾಗಿ ಉದ್ಯೋಗಿ ಪಡೆಯುವ ಟೇಕ್ ಹೋಂ ಸ್ಯಾಲರಿಯಲ್ಲಿ ಶೇ 12ರಷ್ಟು ನೇರವಾಗಿ ಕಡಿತಗೊಳ್ಳುವ ಸಾಧ್ಯತೆಯಿದೆ.

ಪಿಎಫ್ ವಂತಿಗೆ ಮೊತ್ತ ಕಡಿಮೆ ಮಾಡಿಕೊಳ್ಳಲು ಉದ್ಯೋಗದಾತರು ಸಂಬಳವನ್ನು ವಿವಿಧ ಭತ್ಯೆಗಳನ್ನು ವಿಂಗಡಿಸುತ್ತಾರೆ. ವಿಧೇಯಕ ತಿದ್ದುಪಡಿಯಿಂದ ಇಂಥ ಕ್ರಮಕ್ಕೆ ತಡೆ ಬೀಳಲಿದೆ. ಉದ್ಯೋಗಿಗೆ ಹೆಚ್ಚಿನ ಹೊರೆಯಾಗಲಿದೆ ಎಂದು ಭಾರತೀಯ ಮಜ್ದೂರ್ ಸಂಘದ ಪ್ರಧಾನ ಕಾರ್ಯದರ್ಶಿ ಹಾಗೂ ಇಪಿಎಫ್ ಒ ಟ್ರಸ್ಟಿ ವೃಜೇಶ್ ಉಪಾಧ್ಯಾಯ್ ಹೇಳಿದ್ದಾರೆ.
ಪಿಟಿಐ

English summary
Employees as well as employers may have to shell out more towards Employees Provident Fund (EPF), with the government proposing to include all allowances in the wages for deducting PF contribution.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X