ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶೀಘ್ರದಲ್ಲಿಯೇ 1 ರೂ ಹೊಸ ನೋಟು ಚಲಾವಣೆಗೆ: ಹೇಗೆ ಇರಲಿದೆ ವಿನ್ಯಾಸ?

|
Google Oneindia Kannada News

ನವದೆಹಲಿ, ಫೆಬ್ರವರಿ 11: ನೋಟು ರದ್ದತಿಯ ಬಳಿಕ ವಿವಿಧ ಮುಖಬೆಲೆಯ, ವಿವಿಧ ಬಣ್ಣಗಳ ನೋಟುಗಳನ್ನು ಹೊರತಂದಿರುವ ಕೇಂದ್ರ ಸರ್ಕಾರ, ಒಂದು ರೂ. ಮುಖಬೆಲೆಯ ಹೊಸ ನೋಟುಗಳನ್ನು ಚಲಾವಣೆಗೆ ತರಲಿದೆ.

ಕೇಂದ್ರ ಹಣಕಾಸು ಸಚಿವಾಲಯವು ಫೆ 7ರಂದು 'ಒಂದು ರೂಪಾಯಿ ಕರೆನ್ಸಿ ನೋಟುಗಳ ಮುದ್ರಣ ನಿಯಮ, 2020'ದ ಗೆಜೆಟ್ ಅಧಿಸೂಚನೆ ಹೊರಡಿಸಿದೆ. ಶೀಘ್ರದಲ್ಲಿಯೇ ಈ ನೋಟುಗಳು ಚಲಾವಣೆಗೆ ಬರುವ ನಿರೀಕ್ಷೆಯಿದೆ.

ಆರ್‌ಬಿಐ ನಿಂದ 1000 ಮುಖಬೆಲೆ ಹೊಸ ನೋಟು ಬಿಡುಗಡೆ! ನಿಜವೇನು?ಆರ್‌ಬಿಐ ನಿಂದ 1000 ಮುಖಬೆಲೆ ಹೊಸ ನೋಟು ಬಿಡುಗಡೆ! ನಿಜವೇನು?

ಭಾರತದ ಸರ್ಕಾರದ ಪ್ರಾಧಿಕಾರದ ಅಡಿಯಲ್ಲಿ ಮುದ್ರಣಗೊಳ್ಳುವ ಒಂದು ರೂ ಮುಖಬೆಲೆಯ ನೋಟಿನ ಕುರಿತಾದ ವಿವಿಧ ವಿವರಗಳನ್ನು ಅಧಿಸೂಚನೆಯಲ್ಲಿ ತಿಳಿಸಲಾಗಿದೆ. ಇದರಲ್ಲಿ ಬಣ್ಣ, ವಿನ್ಯಾಸ, ಗುಣಮಟ್ಟದ ತೂಕ, ಆಯಾಮಗಳು ಮುಂತಾದವುಗಳು ಒಳಗೊಂಡಿವೆ.

ಒಂದು ರೂಪಾಯಿ ಕರೆನ್ಸಿ ನೋಟು 9.7*6.3 ಆಯಾತಾಕಾರ ಹೊಂದಿರಲಿದೆ. ಅದನ್ನು ಶೇ 100ರಷ್ಟು ವ್ಯರ್ಥ ಪದಾರ್ಥಗಳಿಂದ ಮಾಡಿದ ಕಾಗದದಿಂದ ತಯಾರಿಸಲಾಗಿದೆ. ಈ ನೋಟು 110 ಮೈಕ್ರಾನ್‌ನಷ್ಟು ದಪ್ಪಗಿದ್ದು, 90 ಜಿಎಂಎಸ್ (ಗ್ರಾಮ್ಸ್ ಪರ್ ಸ್ಕ್ವೇರ್ ಮೀಟರ್) ಹೊಂದಿರಲಿದೆ.

ನೋಟು ಮುದ್ರಣ ಹೆಚ್ಚಳ: ಕ್ಯಾಶ್‌ಲೆಸ್ ಇಂಡಿಯಾ ಕಥೆಯೇನು?ನೋಟು ಮುದ್ರಣ ಹೆಚ್ಚಳ: ಕ್ಯಾಶ್‌ಲೆಸ್ ಇಂಡಿಯಾ ಕಥೆಯೇನು?

ಬಗೆಬಗೆಯ ಗಾತ್ರಗಳ ವಾಟರ್‌ಮಾರ್ಕ್, 'ಸತ್ಯಮೇವ ಜಯತೆ' ಎಂಬ ಪದಗಳಿಲ್ಲದ ಅಶೋಕ ಸ್ತಂಬದ ಚಿತ್ರ ಒಂದು ಬದಿಯಲ್ಲಿ ಇರಲಿದೆ. ಮಧ್ಯಭಾಗದಲ್ಲಿರುವ '1' ಸಂಖ್ಯೆಯು ಪ್ರದರ್ಶನವಾಗುವುದಿಲ್ಲ. ಹಾಗೆಯೇ 'ಭಾರತ್' ಎಂಬ ಪದವೂ ಬಲಭಾಗದಲ್ಲಿ ಲಂಬವಾಗಿದ್ದು, ಅದು ಕೂಡ ಮೇಲ್ನೋಟಕ್ಕೆ ಗೋಚರವಾಗುವುದಿಲ್ಲ.

ನಾಣ್ಯದ ಚಿಹ್ನೆಯ ನಕಲು

ನಾಣ್ಯದ ಚಿಹ್ನೆಯ ನಕಲು

ಮೇಲ್ಮುಖ ಭಾಗದಲ್ಲಿ 'ಭಾರತ ಸರ್ಕಾರ' ಎಂದು ಹಿಂದಿ ಮತ್ತು ಇಂಗ್ಲಿಷ್‌ನಲ್ಲಿ ಮುದ್ರಿಸಲಾಗಿದ್ದು, ಹಣಕಾಸು ಸಚಿವಾಲಯದ ಕಾರ್ಯದರ್ಶಿ ಅತನು ಚಕ್ರವರ್ತಿ ಅವರ ದ್ವಿಭಾಷಾ ಸಹಿ ಇರಲಿದೆ. 'ಸತ್ಯಮೇವ ಜಯತೇ' ಪದ, ಸಂಖ್ಯಾ ಸ್ಥಳದಲ್ಲಿ 'L' ಎಂದು ಒಳಗೆ ಮುದ್ರಿಸಿರುವ 2020ರ 1 ರೂ ಹೊಸ ನಾಣ್ಯದಲ್ಲಿರುವ ರೂಪಾಯಿ ಚಿಹ್ನೆಯ ನಕಲು ಇರಲಿದೆ.

ನೋಟಿನ ಬಲಗಡೆಯ ಕೆಳಭಾಗದಲ್ಲಿ ಮುದ್ರಣ ಸಂಖ್ಯೆಯು ಕಪ್ಪು ಬಣ್ಣದಲ್ಲಿ ಎಡದಿಂದ ಬಲಕ್ಕೆ ಆರೋಹಣ ಕ್ರಮದಲ್ಲಿ ಇರಲಿದೆ. ಅದರಲ್ಲಿ ಮೊದಲ ಮೂರು ಅಕ್ಷರಸಂಖ್ಯಾಯುಕ್ತ ಪದಗಳು ಏಕ ಗಾತ್ರದಲ್ಲಿ ಇರುತ್ತದೆ.

ಕೃಷಿ ವ್ಯವಸ್ಥೆಯ ಬಿಂಬ

ಕೃಷಿ ವ್ಯವಸ್ಥೆಯ ಬಿಂಬ

ಹಿಂಬದಿಯಲ್ಲಿ 'ಭಾರತ ಸರ್ಕಾರ' ಎಂಬುದನ್ನು ಹಿಂದಿ ಮತ್ತು ಇಂಗ್ಲಿಷ್‌ನಲ್ಲಿ ಮುದ್ರಿಸಲಾಗುತ್ತದೆ. 2020ರ ಇಸವಿಯೂ ಇರಲಿದೆ. ಜತೆಗೆ ಒಂದು ರೂ. ನಾಣ್ಯದ ಚಿತ್ರವನ್ನು ಒಳಗೊಂಡಿರಲಿದೆ. ದೇಶದ ಕೃಷಿ ಪ್ರಾಮುಖ್ಯವನ್ನು ಬಿಂಬಿಸುವ ಧಾನ್ಯಗಳ ರೂಪದಲ್ಲಿ ರೂಪಾಯಿ ಚಿಹ್ನೆಯನ್ನು ವಿನ್ಯಾಸ ಮಾಡಲಾಗಿದೆ. ಸುತ್ತಲಿನ ವಿನ್ಯಾಸವು 'ಸಾಗರ್ ಸಾಮ್ರಾಟ್' ತೈಲ ಪರಿಶೋಧನಾ ವಿಭಾಗದ ಚಿತ್ರವನ್ನು ಒಳಗೊಂಡಿದೆ.

'ನೋಟಿನ ಮೇಲೆ ಲಕ್ಷ್ಮಿ ಚಿತ್ರ ಮುದ್ರಿಸಿ ರೂಪಾಯಿ ಮೌಲ್ಯ ಹೆಚ್ಚಿಸಬಹುದು''ನೋಟಿನ ಮೇಲೆ ಲಕ್ಷ್ಮಿ ಚಿತ್ರ ಮುದ್ರಿಸಿ ರೂಪಾಯಿ ಮೌಲ್ಯ ಹೆಚ್ಚಿಸಬಹುದು'

ನಕಲು ಮಾಡಲಾಗದ ವಿನ್ಯಾಸ

ನಕಲು ಮಾಡಲಾಗದ ವಿನ್ಯಾಸ

ಇನ್ನೊಂದು ಬದಿಯಲ್ಲಿ ಭಾರತದ 15 ಭಾಷೆಗಳಲ್ಲಿ ರೂಪಾಯಿ ಮೌಲ್ಯವನ್ನು ಮುದ್ರಿಸಲಾಗಿದೆ. ಸಾಗರ್ ಸಾಮ್ರಾಟ್ ಚಿತ್ರ ಮತ್ತು ಭಾಷೆಗಳ ಭಾಗದ ನಡುವೆ ಲಂಬವಾಗಿ ವರ್ಷವನ್ನು ಮುದ್ರಿಸಲಾಗಿದೆ. ಈ ವಿನ್ಯಾಸವನ್ನು ನಕಲು ಮಾಡಲು ಸಾಧ್ಯವಾಗದಂತೆ ಎಚ್ಚರಿಕೆಯಿಂದ ಸಿದ್ಧಪಡಿಸಲಾಗಿದೆ.

ಗುಲಾಬಿ ಹಸಿರುಬಣ್ಣ

ಗುಲಾಬಿ ಹಸಿರುಬಣ್ಣ

ಒಂದು ರೂ ಮುಖಬೆಲೆಯ ನೋಟು ಮುಂಭಾಗದಲ್ಲಿ ಗುಲಾಬಿ ಹಸಿರುಬಣ್ಣದಲ್ಲಿ ಇರಲಿದೆ. ಹಿಂಭಾಗದಲ್ಲಿ ಹಲವು ಬಣ್ಣಗಳನ್ನು ಒಳಗೊಂಡಿರಲಿದೆ. ಗರಿಷ್ಠ ಮುಖಬೆಲೆಯ ನೋಟುಗಳನ್ನು ಭಾರತೀಯ ರಿಸರ್ವ್ ಬ್ಯಾಂಕ್ ಮುದ್ರಿಸುತ್ತದೆ. ಕನಿಷ್ಠ ಮುಖಬೆಲೆಯ ನೋಟುಗಳನ್ನು ಸರ್ಕಾರವೇ ಮುದ್ರಿಸುತ್ತದೆ.

English summary
The finance ministry has notified printing of One Rupee currencey notes with new design, colour and dimensions.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X