ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆದಾಯ ತೆರಿಗೆ ಅಲರ್ಟ್: ಏ.1ರಿಂದ ಈ ನಿಯಮಗಳು ಬದಲಾವಣೆ

|
Google Oneindia Kannada News

ಮುಂದಿನ ಹಣಕಾಸು ವರ್ಷವು ನಾಳೆಯಿಂದಲೇ ಆರಂಭವಾಗಲಿದೆ. ಈ ಹೊಸ ಆರ್ಥಿಕ ವರ್ಷದಲ್ಲಿ ಆದಾಯ ತೆರಿಗೆ ನಿಯಮದಲ್ಲಿ ಹಲವಾರು ಬದಲಾವಣೆಗಳು ಆಗಲಿದೆ. ಬಜೆಟ್‌ ಅಧಿವೇಶನದಲ್ಲಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಆದಾಯ ತೆರಿಗೆ ಪಾವತಿ ಮಿತಿಯಲ್ಲಿ ಬದಲಾವಣೆಯನ್ನು ಘೋಷಣೆ ಮಾಡಿಲ್ಲ. ಆದರೆ ಆದಾಯ ತೆರಿಗೆ ಸಂಬಂಧಿತ ಹಲವಾರು ಬದಲಾವಣೆಗಳ ಬಗ್ಗೆ ಪ್ರಸ್ತಾಪ ಮಾಡಿದ್ದಾರೆ.

ಮುಂದಿನ ಹಣಕಾಸು ವರ್ಷದಿಂದ ಜಾರಿಗೆ ಬರುವ ಆದಾಯ ತೆರಿಗೆ ನಿಯಮಗಳಲ್ಲಿ ಹಲವು ಬದಲಾವಣೆಗಳಿವೆ. ಕ್ರಿಪ್ಟೋ ಸ್ವತ್ತುಗಳ ಮೇಲಿನ ಆದಾಯ ತೆರಿಗೆ, ರಿಟರ್ನ್‌ಗಳ ಫೈಲಿಂಗ್, ಇಪಿಎಫ್ ಬಡ್ಡಿಯ ಮೇಲಿನ ಹೊಸ ತೆರಿಗೆ ನಿಯಮಗಳು ಮತ್ತು ಕೋವಿಡ್-19 ಚಿಕಿತ್ಸೆಯ ಮೇಲಿನ ತೆರಿಗೆ ವಿನಾಯಿತಿಗಳು 1 ಏಪ್ರಿಲ್ 2022 ರಿಂದ ಜಾರಿಗೆ ಬರುವ ಕೆಲವು ಪ್ರಮುಖ ಬದಲಾವಣೆಗಳಾಗಿವೆ.

ಐಟಿಆರ್‌ ಫಾರ್ಮ್‌ನಲ್ಲಿ ಇನ್ಮುಂದೆ ಕ್ರಿಪ್ಟೋ ಆದಾಯಕ್ಕಾಗಿ ಪ್ರತ್ಯೇಕ ಕಾಲಮ್‌!ಐಟಿಆರ್‌ ಫಾರ್ಮ್‌ನಲ್ಲಿ ಇನ್ಮುಂದೆ ಕ್ರಿಪ್ಟೋ ಆದಾಯಕ್ಕಾಗಿ ಪ್ರತ್ಯೇಕ ಕಾಲಮ್‌!

ಈ ಹಣಕಾಸು ವರ್ಷದಲ್ಲಿ ಕ್ರಿಪ್ಟೋ ಮೇಲೆ ಹೂಡಿಕೆ ಮಾಡುವವರು ತೆರಿಗೆಯ ಸುಳಿಗೆ ಬೀಳಲಿದ್ದಾರೆ. ಇದಕ್ಕೂ ಪ್ರಮುಖವಾಗಿ ಇಪಿಎಫ್‌ ಬಡ್ಡಿಯ ಮೇಲೆಯೂ ತೆರಿಗೆ ಬೀಳಲಿದ್ದು, ಇದು ದುಡಿಯುವ ವರ್ಗದ ನಡುವೆ ಆತಂಕ ಸೃಷ್ಟಿಗೆ ಕಾರಣವಾಗಿದೆ. ನಮ್ಮ ಭವಿಷ್ಯಕ್ಕೆಂದು ನಮ್ಮ ದುಡಿಮೆಯಲ್ಲಿ ಮಾಡುವ ಸಣ್ಣ ಪಾಲಿನ ಉಳಿತಾಯದ (ಪಿಎಫ್) ಮೇಲೂ ತೆರಿಗೆ ಬೀಳಲಿದೆ. ಈ ನಡುವೆ ಈ ಹೊಸ ಆರ್ಥಿಕ ವರ್ಷದಲ್ಲಿ ಆದಾಯ ತೆರಿಗೆ ನಿಯಮದಲ್ಲಿ ಏನೆಲ್ಲಾ ಬದಲಾವಣೆ ಆಗಲಿದೆ ಎಂದು ತಿಳಿಯೋಣ ಮುಂದೆ ಓದಿ...

 ಕ್ರಿಪ್ಟೋ ಮೇಲಿನ ತೆರಿಗೆ

ಕ್ರಿಪ್ಟೋ ಮೇಲಿನ ತೆರಿಗೆ

ಕ್ರಿಪ್ಟೋಕರೆನ್ಸಿ ಮಸೂದೆ ಎಲ್ಲಾ ಖಾಸಗಿ ಕ್ರಿಪ್ಟೋಕರೆನ್ಸಿಗಳ ಮೇಲೆ ನಿಷೇಧವನ್ನು ಹೇರುವ ಅಥವಾ ನಿಯಂತ್ರಣ ಮಾಡುವ ಮಸೂದೆ ಜಾರಿಯಾಗುವ ಮೊದಲೇ ಕ್ರಿಪ್ಟೋಕರೆನ್ಸಿಯಂಥ ವರ್ಚುವಲ್ ಡಿಜಿಟಲ್ ಅಸೆಟ್ ಮೇಲೆ ತೆರಿಗೆ ವಿಧಿಸಲು ಕೇಂದ್ರ ಸರ್ಕಾರ ಈಗಾಗಲೇ ನಿರ್ಧಾರ ಮಾಡಿದೆ. ಭಾರತದಲ್ಲಿ ಕ್ರಿಪ್ಟೋ ಆಸ್ತಿ ತೆರಿಗೆಯು ಏಪ್ರಿಲ್ 1 ರಿಂದ ಪ್ರಾರಂಭವಾಗುವ ಹಣಕಾಸು ವರ್ಷದಲ್ಲಿ ಆರಂಭವಾಗಲಿದೆ. ಯಾವುದೇ ವರ್ಚುವಲ್ ಡಿಜಿಟಲ್ ಅಸೆಟ್ ವರ್ಗಾವಣೆಗೆ ಶೇ.30ರ ತೆರಿಗೆ ಕಡಿತಗೊಳ್ಳಲಿದೆ. ಈ ನಿಯಮವು ಹೊಸ ಹಣಕಾಸು ವರ್ಷದ ಆರಂಭದಿಂದಲೇ ಜಾರಿಗೆ ಬರಲಿದೆ. ಇನ್ನು ಶೇಕಡ 1ರಷ್ಟು ಟಿಡಿಎಸ್‌ (ತೆರಿಗೆ ವಿನಾಯಿತಿ) ಆಗಲಿದೆ. ಇದು ಜುಲೈ 1 ರಿಂದ ಜಾರಿಗೆ ಬರುತ್ತವೆ. ಟಿಡಿಎಸ್‌ ಮಿತಿಯು 50,000 ರೂಪಾಯಿ ಆಗಿದೆ. ಅಲ್ಲದೆ, ನೀವು ಕ್ರಿಪ್ಟೋಕರೆನ್ಸಿ ಅಥವಾ ಇನ್ನಾವುದೇ ವರ್ಚುವಲ್ ಡಿಜಿಟಲ್ ಆಸ್ತಿಯ ರೂಪದಲ್ಲಿ ಉಡುಗೊರೆಯನ್ನು ಸ್ವೀಕರಿಸಿದರೆ ಅದಕ್ಕೂ ಕೂಡಾ ತೆರಿಗೆ ಹೇರಲಾಗುತ್ತದೆ.

ಏ.1 ರಿಂದ ಕ್ರಿಪ್ಟೋಕರೆನ್ಸಿ ಜಾಹೀರಾತುಗಳಿಗೆ ಹೊಸ ನಿಯಮ: ಇಲ್ಲಿದೆ ವಿವರಏ.1 ರಿಂದ ಕ್ರಿಪ್ಟೋಕರೆನ್ಸಿ ಜಾಹೀರಾತುಗಳಿಗೆ ಹೊಸ ನಿಯಮ: ಇಲ್ಲಿದೆ ವಿವರ

 ಕ್ರಿಪ್ಟೋ ನಷ್ಟಕ್ಕೆ ತೆರಿಗೆ ವಿನಾಯಿತಿ ಇಲ್ಲ

ಕ್ರಿಪ್ಟೋ ನಷ್ಟಕ್ಕೆ ತೆರಿಗೆ ವಿನಾಯಿತಿ ಇಲ್ಲ

ಇನ್ನು ಪ್ರಮುಖವಾಗಿ ಕ್ರಿಪ್ಟೋ ವಿರುದ್ಧವಾಗಿ ನಿಯಮವನ್ನು ಇನ್ನಷ್ಟು ಬಿಗಿಗೊಳಿಸಿದೆ. ಕ್ರಿಪ್ಟೋ, ಡಿಜಿಟಲ್ ಆಸ್ತಿಯಲ್ಲಿ ಉಂಟಾದ ನಷ್ಟಕ್ಕೆ ತೆರಿಗೆ ವಿನಾಯತಿಗೆ ಭಾರತ ಸರ್ಕಾರವು ನಕಾರ ಎಂದಿದೆ. ಕ್ರಿಪ್ಟೋಗೆ ಯಾವುದೇ ತೆರಿಗೆ ವಿನಾಯಿತಿಗೆ ಸರ್ಕಾರವು ಅವಕಾಶ ನೀಡುವುದಿಲ್ಲ. ಉದಾಹರಣೆಗೆ ನೀವು ಬಿಟ್‌ಕಾಯಿನ್‌ನಲ್ಲಿ 1000 ರೂಪಾಯಿ ಲಾಭ ಗಳಿಸಿದರೆ, ಎಥೆರಿಯಾಮ್‌ನಲ್ಲಿ 700 ರೂಪಾಯಿ ನಷ್ಟವನ್ನು ಅನುಭವಿಸಿದರೆ, ನೀವು 1000 ರೂಪಾಯಿ ಹಣದ ಮೇಲೆ ತೆರಿಗೆಯನ್ನು ಪಾವತಿ ಮಾಡಬೇಕೇ ಹೊರತು ನಷ್ಟವಾದ 700 ರೂಪಾಯಿ ಕಳೆದು 300 ರೂಪಾಯಿಯ ಮೇಲೆ ತೆರಿಗೆ ಪಾವತಿ ಮಾಡುವುದಲ್ಲ. ಹಾಗೆಯೇ ಸ್ಟಾಕ್‌ಗಳು, ಮ್ಯೂಚುಯಲ್ ಫಂಡ್‌ಗಳು ಅಥವಾ ರಿಯಲ್ ಎಸ್ಟೇಟ್‌ನಂತಹ ಇತರ ಸ್ವತ್ತುಗಳಲ್ಲಿನ ಲಾಭಗಳು ಮತ್ತು ನಷ್ಟಗಳ ವಿರುದ್ಧ ನೀವು ಕ್ರಿಪ್ಟೋಕರೆನ್ಸಿಯಲ್ಲಿ ಲಾಭ ಮತ್ತು ನಷ್ಟಗಳನ್ನು ಹೊಂದಿಸಲು ಸಾಧ್ಯವಾಗುವುದಿಲ್ಲ. ಇನ್ನು ಈಗಾಗಲೇ ಏಪ್ರಿಲ್‌ ಒಂದರಿಂದ ಕ್ರಿಪ್ಟೋ ಜಾಹೀರಾತುಗಳಿಗೂ ನಿಯಮ ಬಂದಿದೆ.

 ಐಟಿ ರಿಟರ್ನ್ ಸಲ್ಲಿಕೆ

ಐಟಿ ರಿಟರ್ನ್ ಸಲ್ಲಿಕೆ

ನೀವು ಆದಾಯ ತೆರಿಗೆ ರಿಟರ್ನ್ ಸಲ್ಲಿಕೆ ಮಾಡುವ ಸಂದರ್ಭದಲ್ಲಿ ಕೆಲವು ದೋಷ ಅಥವಾ ತಪ್ಪನ್ನು ಮಾಡಿರಬಹುದು. ಹಾಗಿದ್ದರೆ ಇದು ನಿಮಗೆ ಸಿಹಿಸುದ್ದಿಯಾಗಲಿದೆ. ಈ ಹೊಸ ಆರ್ಥಿಕ ವರ್ಷದ ಆರಂಭದಲ್ಲಿ ಆದಾಯ ತೆರಿಗೆ ರಿಟರ್ನ್ಸ್‌ನಲ್ಲಿ ಮಾಡಿದ ದೋಷಗಳು ಅಥವಾ ತಪ್ಪುಗಳನ್ನು ಸರಿಪಡಿಸುವ ನಿಟ್ಟಿನಲ್ಲಿ ಸರಿಯಾಗಿ ಐಟಿ ರಿಟರ್ನ್ ಸಲ್ಲಿಕೆ ಮಾಡಲು ತೆರಿಗೆದಾರರಿಗೆ ಅವಕಾಶ ಲಭಿಸಲಿದೆ. ಈ ಹೊಸ ನಿಬಂಧನೆಯನ್ನು ನಿಯಮದಲ್ಲಿ ಸೇರಿಸಲಾಗಿದೆ. ತೆರಿಗೆದಾರರು ಈಗ ಸಂಬಂಧಿತ ಮೌಲ್ಯಮಾಪನ ವರ್ಷದ ಅಂತ್ಯದಿಂದ ಎರಡು ವರ್ಷಗಳೊಳಗೆ ಐಟಿ ರಿಟರ್ನ್ ಅನ್ನಯ ಸಲ್ಲಿಸಬಹುದಾಗಿದೆ.

 ರಾಜ್ಯ ಸರ್ಕಾರಿ ನೌಕರರಿಗೆ ಎನ್‌ಪಿಎಸ್‌ ಕಡಿತ

ರಾಜ್ಯ ಸರ್ಕಾರಿ ನೌಕರರಿಗೆ ಎನ್‌ಪಿಎಸ್‌ ಕಡಿತ

ರಾಜ್ಯ ಸರ್ಕಾರಿ ನೌಕರರು ಈಗ ತಮ್ಮ ಮೂಲ ವೇತನ ಮತ್ತು ತುಟ್ಟಿಭತ್ಯೆಯ ಶೇಕಡ 14ರವರೆಗೆ ಕಡಿತವನ್ನು ಪಡೆಯಲು ಸಾಧ್ಯವಾಗುತ್ತದೆ. ಉದ್ಯೋಗದಾತರಿಂದ ಶೇಕಡ 14ರವರೆಗೆ ಎನ್‌ಪಿಎಸ್‌ ಕೊಡುಗೆಗಾಗಿ ಸೆಕ್ಷನ್ 80CCD(2) ಅಡಿಯಲ್ಲಿ ಕಡಿತವನ್ನು ಪಡೆಯಲು ಸಾಧ್ಯವಾಗುತ್ತದೆ. ಕೇಂದ್ರ ಸರ್ಕಾರಿ ಉದ್ಯೋಗಿಗಳಿಗೆ ಇರುವ ಎನ್‌ಪಿಎಸ್‌ ಲಾಭವೇ ಇದಾಗಿದೆ ಎಂದು ವರದಿ ಉಲ್ಲೇಖ ಮಾಡಿದೆ.

 ಪಿಎಫ್‌ ಮೇಲೆ ತೆರಿಗೆ

ಪಿಎಫ್‌ ಮೇಲೆ ತೆರಿಗೆ

ಕೇಂದ್ರೀಯ ನೇರ ತೆರಿಗೆಗಳ ಮಂಡಳಿಯು (ಸಿಬಿಡಿಟಿ) ಆದಾಯ ತೆರಿಗೆ (25 ನೇ ತಿದ್ದುಪಡಿ) ನಿಯಮ 2021 ಅನ್ನು ಏಪ್ರಿಲ್ 1 ರಿಂದ ಜಾರಿಗೆ ತರಲು ತೀರ್ಮಾನ ಮಾಡಿದೆ. ಅಂದರೆ ನೀವು 2.5 ಲಕ್ಷ ರೂಪಾಯಿರೆಗಿನ ನೌಕರರ ಭವಿಷ್ಯ ನಿಧಿ ಹಣವು ತೆರಿಗೆ ಮುಕ್ತವಾಗಿರುತ್ತದೆ. ಆದರೆ 2.5 ಲಕ್ಷ ರೂಪಾಯಿಗಿಂತ ಅಧಿಕ ಹಣ ನಿಮ್ಮ ಪಿಎಫ್‌ ಖಾತೆಯಲ್ಲಿ ಇದ್ದರೆ ಅದನ್ನು ಇದರ ಬಡ್ಡಿಯಿಂದ ಬರುವ ಆದಾಯದ ಮೇಲೆ ತೆರಿಗೆಯನ್ನು ವಿಧಿಸಲಾಗುತ್ತದೆ.

 ಎಲ್‌ಟಿಸಿಜಿ ಮೇಲೆ ಹೆಚ್ಚುವರಿ ಶುಲ್ಕ

ಎಲ್‌ಟಿಸಿಜಿ ಮೇಲೆ ಹೆಚ್ಚುವರಿ ಶುಲ್ಕ

ಪ್ರಸ್ತುತ, ಪಟ್ಟಿಮಾಡಿದ ಇಕ್ವಿಟಿ ಅಥವಾ ಮ್ಯೂಚುಯಲ್ ಫಂಡ್‌ಗಳ ಮಾರಾಟದ ಮೇಲೆ ದೀರ್ಘಾವಧಿಯ ಬಂಡವಾಳ ಲಾಭದ ಮೇಲೆ ಶೇಕಡ 15ರಷ್ಟು ಹೆಚ್ಚುವರಿ ಶುಲ್ಕದ ಮಿತಿ ಇದೆ. 2022ರ ಏಪ್ರಿಲ್ 1ರಿಂದ, ಈ ಮಿತಿಯನ್ನು ಎಲ್ಲಾ ಸ್ವತ್ತುಗಳ ಮೇಲೆ ದೀರ್ಘಾವಧಿಯ ಬಂಡವಾಳ ಲಾಭಕ್ಕೆ ವಿಸ್ತರಣೆ ಮಾಡಲಾಗುತ್ತದೆ.

 ಸೆಕ್ಷನ್‌ 80ಇಇಎ ಅಡಿಯಲ್ಲಿ ಪ್ರಯೋಜನಕ್ಕೆ ಬ್ರೇಕ್‌

ಸೆಕ್ಷನ್‌ 80ಇಇಎ ಅಡಿಯಲ್ಲಿ ಪ್ರಯೋಜನಕ್ಕೆ ಬ್ರೇಕ್‌

ಮೊದಲ ಬಾರಿಗೆ ಮನೆ ಖರೀದಿಸುವವರಿಗೆ 45 ಲಕ್ಷ ರೂಪಾಯಿಗಿಂತ ಕಡಿಮೆ ಮೌಲ್ಯದ ಮನೆ ಆಸ್ತಿಗಳ ಮೇಲೆ 1.5 ಲಕ್ಷ ರೂಪಾಯಿವರೆಗೆ ಗೃಹ ಸಾಲದ ಬಡ್ಡಿಯ ಮೇಲೆ ಹೆಚ್ಚುವರಿ ಕಡಿತವಿದೆ. ಆದರೆ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಈ ಯೋಜನೆಯನ್ನು ಮಾರ್ಚ್ 31, 2022 ರ ನಂತರ ವಿಸ್ತರಿಸಿಲ್ಲ. ಆದ್ದರಿಂದಾಗಿ 1.5 ಲಕ್ಷ ರೂಪಾಯಿ ಈ ಹೆಚ್ಚುವರಿ ಕಡಿತವು 1 ಏಪ್ರಿಲ್ 2022 ರಿಂದ ತೆರಿಗೆದಾರರಿಗೆ ಲಭ್ಯವಿರುವುದಿಲ್ಲ. 2 ಲಕ್ಷದವರೆಗಿನ ಗೃಹ ಸಾಲದ ಬಡ್ಡಿಯ ಖಾತೆಯಲ್ಲಿ ಅಸ್ತಿತ್ವದಲ್ಲಿರುವ ಇತರ ಕಡಿತಗಳನ್ನು ಮುಂದುವರಿಯಲಿದೆ. ಆದರೆ ಸೆಕ್ಷನ್‌ 80ಇಇಎ ಅಡಿಯಲ್ಲಿ ವಿನಾಯತಿ ದೊರಯುವುದಿಲ್ಲ.

Recommended Video

ಕ್ರಿಕೆಟ್ ದಿಗ್ಗಜರ ಮನ ಗೆದ್ದ ಆಟಗಾರರು ! | Oneindia Kannada
 ಕೋವಿಡ್‌ ಚಿಕಿತ್ಸೆ ವೆಚ್ಚಗಳ ಮೇಲೆ ತೆರಿಗೆ ವಿನಾಯಿತಿ

ಕೋವಿಡ್‌ ಚಿಕಿತ್ಸೆ ವೆಚ್ಚಗಳ ಮೇಲೆ ತೆರಿಗೆ ವಿನಾಯಿತಿ

ಜೂನ್ 2021 ರ ಪತ್ರಿಕಾ ಪ್ರಕಟಣೆಯ ಪ್ರಕಾರ, ಕೋವಿಡ್ ವೈದ್ಯಕೀಯ ಚಿಕಿತ್ಸೆಗಾಗಿ ಹಣವನ್ನು ಪಡೆದ ವ್ಯಕ್ತಿಗಳಿಗೆ ತೆರಿಗೆ ವಿನಾಯಿತಿಯನ್ನು ಒದಗಿಸಲಾಗಿದೆ. ಹಾಗೆಯೇ ಕೋವಿಡ್‌ನಿಂದ ವ್ಯಕ್ತಿಯ ಮರಣದ ನಂತರ ಕುಟುಂಬ ಸದಸ್ಯರು ಸ್ವೀಕರಿಸುವ ಹಣಕ್ಕೆ ವಿನಾಯಿತಿ ಇದೆ. 10 ಲಕ್ಷದವರೆಗೆ ಹಣಕ್ಕೆ ವಿನಾಯಿತಿ ಇದೆ. ಅದು ಮರಣದ ದಿನಾಂಕದಿಂದ 12 ತಿಂಗಳೊಳಗೆ ಪಡೆದಿದ್ದರೆ ಮಾತ್ರ ವಿನಾಯಿತಿ ಲಭಿಸಲಿದೆ. ಈ ತಿದ್ದುಪಡಿಯು ಏಪ್ರಿಲ್ 1, 2020 ರಿಂದ ಪೂರ್ವಾನ್ವಯವಾಗಿ ಜಾರಿಗೆ ಬರಲಿದೆ. ಇನ್ನು ವಿಶೇಷ ಚೇತನರ ಪೋಷಕರಿಗೆ ತೆರಿಗೆ ವಿನಾಯಿತಿ ದೊರೆಯಲಿದೆ.

English summary
New income tax rule changes from 1 April 2022, Check Here's Details in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X