ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆದಾಯ ತೆರಿಗೆ ರಿಟರ್ನ್ಸ್ ಕುರಿತಂತೆ ಮಹತ್ವದ ಸೂಚನೆ ಪ್ರಕಟ

|
Google Oneindia Kannada News

ನವದೆಹಲಿ, ಏಪ್ರಿಲ್ 20: ಪ್ರಸಕ್ತ ಹಣಕಾಸು ವರ್ಷದ ಆದಾಯ ತೆರಿಗೆ ರಿಟರ್ನ್ಸ್ ಗೆ ಸಂಬಂಧಿಸಿದ ವಿವಿಧ ಹೂಡಿಕೆ ಡಿಕ್ಲೇರೇಷನ್ ಸಲ್ಲಿಕೆಯ ದಿನಾಂಕವನ್ನು ಕೇಂದ್ರ ಸರ್ಕಾರ ವಿಸ್ತರಿಸಿದೆ.

ಲಾಕ್‌ಡೌನ್‌ನಿಂದಾಗಿ ಆರ್ಥಿಕ ಸಂಕಷ್ಟದಲ್ಲಿರುವ ತೆರಿಗೆದಾರರಿಗೆ ನಿರಾಳವಾಗುವ ಸುದ್ದಿ ಸಿಕ್ಕಿದೆ. ಸರ್ಕಾರದಿಂದ ಸಿಗುವ ಪರಿಹಾರ ಕ್ರಮಗಳ ಪ್ರಯೋಜನಗಳನ್ನು ತೆರಿಗೆದಾರರು ಪಡೆಯುವುದಕ್ಕಾಗಿ ಆದಾಯ ತೆರಿಗೆ ರಿಟರ್ನ್ (ಐಟಿಆರ್) ದಿನಾಂಕವನ್ನು ಪರಿಷ್ಕರಿಸಿರುವುದಾಗಿ ಆದಾಯ ತೆರಿಗೆ ಇಲಾಖೆ ಪ್ರಕಟಿಸಿದೆ.

ಸಂಬಳದಾರರ ತಲೆಗೆ ಹುಳ ಬಿಟ್ಟ ನಿರ್ಮಲಾ ತೆರಿಗೆ ಲೆಕ್ಕಾಚಾರ! ಸಂಬಳದಾರರ ತಲೆಗೆ ಹುಳ ಬಿಟ್ಟ ನಿರ್ಮಲಾ ತೆರಿಗೆ ಲೆಕ್ಕಾಚಾರ!

ಈ ಮೂಲಕ ಭಾರತ ಸರ್ಕಾರವು ನೀಡಿರುವ ವಿವಿಧ ಟೈಮ್‌ಲೈನ್ ವಿಸ್ತರಣೆಗಳ ಸಂಪೂರ್ಣ ಪ್ರಯೋಜನಗಳನ್ನು ತೆರಿಗೆದಾರರಿಗೆ ಅನುಕೂಲವಾಗಲಿದೆ. 2019-20ನೇ ಹಣಕಾಸು ವರ್ಷಕ್ಕೆ (ಮೌಲ್ಯಮಾಪನ ವರ್ಷ 2020-21) ರಿಟರ್ನ್ ಫಾರ್ಮ್‌ಗಳನ್ನು ಸಿಬಿಡಿಟಿ ಪರಿಷ್ಕರಿಸುತ್ತಿದೆ. ಏಪ್ರಿಲ್ ತಿಂಗಳಾಂತ್ಯಕ್ಕೆ ಅಧಿಕೃತ ನೋಟಿಫಿಕೇಷನ್ ಸಿಗಲಿದೆ ಎಂದು ವಿತ್ತ ಸಚಿವಾಲಯವು ಹೇಳಿದೆ.

New Income Tax Return Forms To Accommodate Extended Investment Deadlines

2020ರ ಮಾರ್ಚ್ 30ಕ್ಕೆ ಕೊನೆಗೊಳ್ಳುವ ಆರ್ಥಿಕ ವರ್ಷಕ್ಕೆ ಅನುಗುಣವಾಗಿ ಏಪ್ರಿಲ್ 1 ರಿಂದ 2020 ರ ಜೂನ್ 30 ರವರೆಗೆ ನಡೆಸಿದ ಆರ್ಥಿಕ ವಹಿವಾಟುಗಳು ತೆರಿಗೆ ಕ್ಲೇಮ್ ಗೆ ಅರ್ಹವಾಗಿವೆ.

ರಾಷ್ಟ್ರವ್ಯಾಪಿ ಲಾಕ್‌ಡೌನ್ ಎರಡನೇ ಅವಧಿಗೆ ವಿಸ್ತರಣೆಯಾಗಿದೆ. ಸೆಕ್ಷನ್ 80 ಸಿ, 80ಡಿ, 80 ಜಿ ಅಡಿಯಲ್ಲಿ ಹೂಡಿಕೆಗಳು, ಎಲ್ ಐಸಿ, ಪಿಪಿಎಫ್ ಹೂಡಿಕೆಗಳು ಮತ್ತು ವೆಚ್ಚಗಳಿಗೆ ಸಂಬಂಧಿಸಿದಂತೆ ತೆರಿಗೆ ಕ್ಲೇಮ್ ಪ್ರಯೋಜನದ ಕಾಲಮಿತಿಗಳನ್ನು ಜೂನ್ 30ರ ವರೆಗೆ ಸರ್ಕಾರ ವಿಸ್ತರಿಸಿದೆ.

ಹೀಗಾಗಿ, ಐಟಿ ರಿಟರ್ನ್ಸ್ ಘೋಷಣೆ 2019-2020 ಆರ್ಥಿಕ ವರ್ಷ(2020-21Assessmentವರ್ಷ) ಹೊಸ ದಿನಾಂಕ ಮೇ 31, 2020 ಆಗಿದೆ. ಸಾಮಾನ್ಯವಾಗಿ ಏಪ್ರಿಲ್ ಮೊದಲ ವಾರಕ್ಕೆ ಐಟಿ ರಿಟರ್ನ್ಸ್ ಸಲ್ಲಿಕೆ ಪ್ರಕ್ರಿಯೆಗೆ ಕೊನೆಯಾಗುತ್ತದೆ. ಜುಲೈ 31, 2020 ರಿಟರ್ನ್ಸ್ ಸಲ್ಲಿಕೆಗೆ ಕೊನೆ ದಿನಾಂಕವಾಗಿದೆ.

English summary
The CBDT (Central Board of Direct Taxes) will be notifying revised income tax return (ITR) forms for the financial year 2019-20 by the end of April to enable taxpayers to claim benefits of extension of timelines announced on various investments in the light of COVID-19 situation.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X