ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೋವಿಡ್ ಭೀತಿ: ಷೇರುಪೇಟೆಯಲ್ಲಿ 6.5 ಲಕ್ಷ ಕೋಟಿ ಹೂಡಿಕೆ ರು ನಷ್ಟ

|
Google Oneindia Kannada News

ಮುಂಬೈ, ನವೆಂಬರ್ 26: ಕೊರೊನಾವೈರಸ್ ಹೊಸ ರೂಪಾಂತರ ಹರಡುವಿಕೆ ಸುದ್ದಿ ಬರುತ್ತಿದ್ದಂತೆ, ಭಾರತದ ಷೇರು ಮಾರುಕಟ್ಟೆ ಇಂದು ತೀವ್ರ ಕುಸಿತ ಕಂಡಿದೆ. ಬಿಎಸ್‌ಇ ಸೆನ್ಸೆಕ್ಸ್ 1,400 ಅಂಕ ಕುಸಿದರೆ, ನಿಫ್ಟಿ 50 ಕನಿಷ್ಠ 17,160ಕ್ಕೆ ತಲುಪಿದೆ. ಏಷ್ಯಾದ ಮಾರುಕಟ್ಟೆಗಳಲ್ಲಿ ಇದೇ ರೀತಿಯ ಇಳಿಕೆ ಕಂಡು ಬರುತ್ತಿದೆ. ಹೊಸ ಕೋವಿಡ್ ರೂಪಾಂತರದ ಸುದ್ದಿಯು ಮಾರುಕಟ್ಟೆಯಲ್ಲಿ ಸಂಚಲನ ಮೂಡಿಸಿದೆ. ಲೈವ್ ಮಿಂಟ್‌ನಲ್ಲಿನ ವರದಿಯ ಪ್ರಕಾರ, ಫೆಡರಲ್ ರಿಸರ್ವ್‌ನಿಂದ ವಿತ್ತೀಯ ನೀತಿಯನ್ನು ಬಿಗಿಗೊಳಿಸುವ ಒತ್ತಡದಲ್ಲಿ ಸೂಚ್ಯಂಕಗಳು ಈಗಾಗಲೇ ತತ್ತರಿಸುತ್ತಿವೆ. ಕೋವಿಡ್ ರೂಪಾಂತರ ಭೀತಿಯಿಂದ ಷೇರುಪೇಟೆಯಲ್ಲಿ ಇಂದು ಸುಮಾರು 6.5 ಲಕ್ಷ ಕೋಟಿ ಹೂಡಿಕೆದಾರರಿಗೆ ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ.

ಟಾಟಾ ಮೋಟಾರ್ಸ್, ಒಎನ್‌ಜಿಸಿ, ಹಿಂಡಾಲ್ಕೊ ಮತ್ತು ಬಿಪಿಸಿಎಲ್ ೀ ದಿನದ ವಹಿವಾಟಿನಲ್ಲಿ ಅತ್ಯಂತ ನಷ್ಟ ಅನುಭವಿಸಿವೆ. ಎನ್‌ಎಸ್‌ಇ ವೆಬ್‌ಸೈಟ್‌ನಲ್ಲಿನ ಅಂಕಿ ಅಂಶ ಪ್ರಕಾರ, ಶುಕ್ರವಾರದ ಆರಂಭಿಕ ವಹಿವಾಟಿನಲ್ಲಿ ಟಾಟಾ ಮೋಟಾರ್ಸ್ ಶೇ.4ರಷ್ಟು ಮತ್ತು ಒಎನ್‌ಜಿಸಿ ಶೇ.3.9ರಷ್ಟು ಮೌಲ್ಯ ಕಳೆದುಕೊಂಡಿವೆ.

ನಿಫ್ಟಿ 50 ರಲ್ಲಿ, ಬಿಎಸ್‌ಇ ವೆಬ್‌ಸೈಟ್ ಅಂಕಿ ಅಂಶದಂತೆ, ಫಾರ್ಮಾ ಸಂಸ್ಥೆಗಳಾದ ಸಿಪ್ಲಾ ಮತ್ತು ಡಾ ರೆಡ್ಡೀಸ್ ಅತಿ ಹೆಚ್ಚು ನಷ್ಟ ಅನುಭವಿಸಿವೆ. ಎಕನಾಮಿಕ್ ಟೈಮ್ಸ್ ವರದಿಯ ಪ್ರಕಾರ ಹೂಡಿಕೆದಾರರು ಮಾರುಕಟ್ಟೆಯಲ್ಲಿ 6.5 ಲಕ್ಷ ಕೋಟಿ ರೂಪಾಯಿಗೂ ಹೆಚ್ಚು ಸಂಪತ್ತನ್ನು ಕಳೆದುಕೊಂಡಿದ್ದಾರೆ.

New Covid Variant effect: Sensex Crashes 1400 Points, Over Rs 6.5 Lakh Crore Investor Wealth Lost.

ಉಳಿದಂತೆ, ಜಪಾನ್‌ನ ನಿಕ್ಕಿ 500 ಸೂಚ್ಯಂಕವು 2,850 ಪಾಯಿಂಟ್‌ಗಳ ಕೆಳಗೆ ವಹಿವಾಟು ನಡೆಸುತ್ತಿದೆ, ಹಿಂದಿನ ದಿನಕ್ಕಿಂತ 2 ಶೇಕಡಾಕ್ಕಿಂತ ಹೆಚ್ಚಿದ್ದರೂ ಚೇತರಿಕೆ ಕಾಣುವ ಲಕ್ಷಣಗಳಿಲ್ಲ. ಬ್ಲೂಮ್‌ಬರ್ಗ್‌ನ ವೆಬ್‌ಸೈಟ್‌ನಲ್ಲಿ ಲಭ್ಯವಿರುವ ಮಾಹಿತಿಯ ಪ್ರಕಾರ ಹಾಂಗ್ ಕಾಂಗ್‌ನ ಎಚ್ ಎಸ್ ಚೀನಾ 100 ಸೂಚ್ಯಂಕವು ಹಿಂದಿನ ದಿನಕ್ಕಿಂತ 2.29 ಶೇಕಡಾ ಕಡಿಮೆ 7,175 ನಲ್ಲಿ ವಹಿವಾಟು ನಡೆಸುತ್ತಿದೆ.

ಮಾರುಕಟ್ಟೆಯಲ್ಲಿ ಸಂಚಲನ ಮೂಡಿಸಿದ ಹೊಸ ಕೋವಿಡ್ ರೂಪಾಂತರ

ಹೆಚ್ಚು ತ್ವರಿತವಾಗಿ ಹರಡಬಹುದಾದ ಹೊಸ ಕೋವಿಡ್ ರೂಪಾಂತರವನ್ನು ದಕ್ಷಿಣ ಆಫ್ರಿಕಾದ ವಿಜ್ಞಾನಿಗಳು ಕಂಡುಹಿಡಿದಿದ್ದಾರೆ. ಮಿಂಟ್ ವರದಿಯ ಪ್ರಕಾರ, ಮನುಷ್ಯರ ಮೇಲೆ ಇದರ ಪರಿಣಾಮದ ಬಗ್ಗೆ ಖಚಿತ ಮಾಹಿತಿ ಲಭ್ಯವಾಗದಿದ್ದರೂ, ಸಾರಿಗೆ ಸಂಪರ್ಕ ನಿರ್ಬಂಧ ಹೇರಿಕೆ, ಅಂತಾರಾಷ್ಟ್ರೀಯ ವಿಮಾನ ಸಂಚಾರ ನಿರ್ಬಂಧ ಎಲ್ಲವೂ ಆರ್ಥಿಕ ಚಟುವಟಿಕೆಯನ್ನು ಘಾಸಿಗೊಳಿಸುವ ಸಾಧ್ಯತೆಯಿದೆ.

New Covid Variant effect: Sensex Crashes 1400 Points, Over Rs 6.5 Lakh Crore Investor Wealth Lost.

ಕೋವಿಡ್ ಪ್ರಕರಣಗಳು ಹೆಚ್ಚಾಗುವುದರಿಂದ ಕೆಲವು ಯುರೋಪಿಯನ್ ರಾಷ್ಟ್ರಗಳು ಲಾಕ್‌ಡೌನ್ ಕ್ರಮಗಳನ್ನು ಮರುಪರಿಶೀಲಿಸಲು ಚಿಂತಿಸುತ್ತಿವೆ ಎಂಬ ವರದಿಗಳಿಗೆ ಮಾರುಕಟ್ಟೆಯು ತಲ್ಲಣಗೊಂಡಿದೆ. ಹೆಚ್ಚುತ್ತಿರುವ ಕೊರೊನಾವೈರಸ್ ಪ್ರಕರಣಗಳು ಜಾಗತಿಕ ಬೇಡಿಕೆಯ ಬಗ್ಗೆ ಆತಂಕವನ್ನುಂಟು ಮಾಡಿದ್ದು ಹೂಡಿಕೆದಾರರಲ್ಲಿ ಭಯ ಮೂಡಿಸಿದೆ.

Recommended Video

ಚಳಿಗಾಲದಲ್ಲಿ ಕೊರೊನಾ 3 ನೇ ಅಲೆ ಅಪ್ಪಳಿಸೋದು ಗ್ಯಾರೆಂಟಿ | Oneindia Kannada

ಮಿಂಟ್ ವರದಿಯ ಪ್ರಕಾರ, ಹೊಸ ರೂಪಾಂತರ B.1.1.529 ಅನ್ನು ದಕ್ಷಿಣ ಆಫ್ರಿಕಾದಲ್ಲಿ ಸೋಂಕು ಪ್ರಕರಣಗಳ ಉಲ್ಬಣಕ್ಕೆ ಕಾರಣ ಎಂದು ಹೇಳಲಾಗಿದೆ. ಹಾಂಗ್ ಕಾಂಗ್‌ನಲ್ಲಿಯೂ ಹೊಸ ಪ್ರಕರಣಗಳು ಪತ್ತೆಯಾಗಿವೆ.

ವಿಶ್ವ ಆರೋಗ್ಯ ಸಂಸ್ಥೆ ಕೂಡ, ಹೊಸ ರೂಪಾಂತರದ ಮೇಲೆ ನಿಗಾ ಇಡಲಾಗಿದ್ದು, ಈ ಬಗ್ಗೆ ಪರಿಶೀಲನೆ ಜಾರಿಯಲ್ಲಿದೆ ಎಂದ್ ಹೇಳಿದೆ.

English summary
New Covid Variant effect: Indian Share market fell sharply today. While BSE Sensex dropped 1,400 points, the Nifty 50 touched a low of 17,160. Similar trends have been noted in the other Asian markets. T
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X