ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಕ್ಟೋಬರ್ 31ರಿಂದ ಎಸ್ಬಿಐ ವಿಥ್ ಡ್ರಾ ಮಿತಿ ಸೇರಿದಂತೆ ಹಲವು ಬದಲಾವಣೆ

|
Google Oneindia Kannada News

Recommended Video

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಗ್ರಾಹಕರಿಗೊಂದು ಗುಡ್ ನ್ಯೂಸ್ | Oneindia Kannada

ಬೆಂಗಳೂರು, ಅಕ್ಟೋಬರ್ 30: ದೇಶದ ಅತಿದೊಡ್ಡ ಬ್ಯಾಂಕ್ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ(ಎಸ್ ಬಿಐ) ಹೊಸ ಡಿಜಿಟಲ್ ಪೇಮೆಂಟ್ ಸೇವೆಯನ್ನು ಒದಗಿಸಲು ಮುಂದಾಗಿದೆ. ಈ ನಿಟ್ಟಿನಲ್ಲಿ ಹಿಟಾಚಿ ಪೇಮೆಂಟ್ ಸರ್ವಿಸ್ ಸಂಸ್ಥೆ ಜತೆ ಒಪ್ಪಂದ ಮಾಡಿಕೊಂಡಿದೆ. ಅಕ್ಟೋಬರ್ 31ರ ನಂತರ ಎಸ್ಬಿಐನ ಗ್ರಾಹಕರು ತಿಳಿದುಕೊಳ್ಳಬೇಕಾದ ಬದಲಾವಣೆಗಳ ಬಗ್ಗೆ ವರದಿ ಇಲ್ಲಿದೆ.

ಡಿಜಿಟಲ್ ಮಾರುಕಟ್ಟೆ ವಿಸ್ತರಣೆ ದೃಷ್ಟಿಯಿಂದ, ಗ್ರಾಹಕರಿಗೆ ಹಾಗೂ ವ್ಯಾಪಾರಸ್ಥರಿಗೆ ದೇಶೆದೆಲ್ಲೆಡೆ ಕ್ಯೂಆರ್ ಕೋಡ್, ಯುಪಿಐ ಬಳಕೆ ಇ-ಕಾಮರ್ಸ್ ಸೇರಿದಂತೆ ವಿವಿಧ ರೀತಿಯ ಯೋಜನೆ ಮೂಲಕ ಡಿಜಿಟಲ್ ಮಾರುಕಟ್ಟೆ ಸರಳೀಕರಣಗೊಳಿಸುವ ನಿಟ್ಟಿನಲ್ಲಿ ಎಸ್ಬಿಐ-ಹಿಟಾಜಿ ಕೈಜೋಡಿಸಿವೆ.

ಎಸ್ ಬಿಐನಿಂದ ವಿಥ್ ಡ್ರಾ ಮಿತಿ ಪ್ರಸ್ತಾವಕ್ಕೆ ಸಾರ್ವಜನಿಕರು ಸಿಟ್ಟೋ ಸಿಟ್ಟುಎಸ್ ಬಿಐನಿಂದ ವಿಥ್ ಡ್ರಾ ಮಿತಿ ಪ್ರಸ್ತಾವಕ್ಕೆ ಸಾರ್ವಜನಿಕರು ಸಿಟ್ಟೋ ಸಿಟ್ಟು

ಎಸ್.ಬಿ.ಐ. ಅಧ್ಯಕ್ಷ ರಜನೀಶ್ ಕುಮಾರ್, ಡಿಜಿಟಲ್ ವ್ಯವಹಾರದಲ್ಲಿ ಎದುರಾಗುತ್ತಿರುವ ತೊಂದರೆ ನಿವಾರಿಸಲು ಈ ಒಪ್ಪಂದಕ್ಕೆ ಸಹಿ ಹಾಕಲಾಗಿದೆ. ಇದರಿಂದ ದೇಶದಲ್ಲಿ ಡಿಜಿಟಲ್ ವ್ಯಾಪಾರದ ವೇಳೆ ಎದುರಾಗುವ ಸರ್ವರ್ ಸಮಸ್ಯೆಗಳು ನಿವಾರಣೆಯಾಗಲಿದೆ ಎಂದಿದ್ದಾರೆ.

ಅಕ್ಟೋಬರ್ 31, 2018ರಿಂದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಎಟಿಎಂನಿಂದ ದಿನದ ವಿಥ್ ಡ್ರಾ ಮಿತಿ ಬದಲಾಗಲಿದೆ.ಇಲ್ಲಿ ತನಕ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಎಟಿಎಂನಿಂದ ದಿನಕ್ಕೆ ನಲವತ್ತು ಸಾವಿರ ರುಪಾಯಿ ವಿಥ್ ಡ್ರಾ ಮಾಡಬಹುದು.

ಆದರೆ, ಅಕ್ಟೋಬರ್ 31ರಿಂದ ಈ ಮಿತಿ 20 ಸಾವಿರಕ್ಕೆ ಕಡಿತವಾಗುತ್ತದೆ. ಈ ಕ್ರಮಕ್ಕೆ ಬ್ಯಾಂಕ್ ಗ್ರಾಹಕರಿಂದ ಭಾರೀ ಅಕ್ರೋಶ ವ್ಯಕ್ತವಾಗಿದೆ. ಅಕ್ಟೋಬರ್ 31ರಿಂದ ಬದಲಾಗುವ ಸೇವೆಗಳ ವಿವರ ಮುಂದಿದೆ...

ಎಸ್ಬಿಐ ಕ್ಲಾಸಿಕ್ ಹಾಗೂ ಮಾಸ್ಟ್ರೋ ಕಾರ್ಡ್ ದಾರರಿಗೆ

ಎಸ್ಬಿಐ ಕ್ಲಾಸಿಕ್ ಹಾಗೂ ಮಾಸ್ಟ್ರೋ ಕಾರ್ಡ್ ದಾರರಿಗೆ

ಎಸ್ಬಿಐ ಕ್ಲಾಸಿಕ್ ಮತ್ತು ಮಾಸ್ಟ್ರೋ ಕಾರ್ಡ್ ಗಳನ್ನು ಹೊಂದಿರುವ ಗ್ರಾಹಕರು ಅಕ್ಟೋಬರ್ 31ರ ಬಳಿಕ ಎಟಿಎಂಗಳಲ್ಲಿ 20 ಸಾವಿರಕ್ಕಿಂತ ಹೆಚ್ಚಿನ ಹಣ ತೆಗೆಯಲು ಸಾಧ್ಯವಾಗುವುದಿಲ್ಲ. ಈ ಮುಂದೆ ಈ ಮಿತಿ 40 ಸಾವಿರ ರು ತನಕ ಇತ್ತು. ಈ ಬದಲಾವಣೆ 42 ಕೋಟಿ ಮಂದಿಗೆ ಅನ್ವಯವಾಗಲಿದೆ. ಕ್ಲಾಸಿಕ್ ಕಾರ್ಡ್ ಗಳು ಚಿಪ್ ಆಧಾರಿತ ಕಾರ್ಡ್ ಅಲ್ಲದಿರುವುದರಿಂದ ಹೆಚ್ಚಿನ ಸುರಕ್ಷತೆ ಹೊಂದಿರುವುದಿಲ್ಲ ಆದರೆ ಬ್ಯಾಂಕ್ ನೀಡುವ ಎಟಿಎಂ ಕಮ್ ಡೆಬಿಟ್ ಕಾರ್ಡ್ ಗಳ ಪೈಕಿ ಕ್ಲಾಸಿಕ್ ಕಾರ್ಡ್ ಜನಪ್ರಿಯವಾಗಿದೆ.

ಡೆಬಿಟ್ ಕಾರ್ಡ್ ಅಪ್ ಗ್ರೇಡ್ ಮಾಡಿಕೊಳ್ಳಿ

ಡೆಬಿಟ್ ಕಾರ್ಡ್ ಅಪ್ ಗ್ರೇಡ್ ಮಾಡಿಕೊಳ್ಳಿ

ಹಣ ವಿಥ್ ಡ್ರಾ ಮಿತಿ ಕ್ಲಾಸಿಕ್ ಹಾಗೂ ಮಾಸ್ಟರ್ ಕಾರ್ಡ್ ಗಳಿಗೆ ಮಾತ್ರ ಅನ್ವಯವಾಗಲಿದೆ. ಮಿಕ್ಕ ಕಾರ್ಡ್ ಗಳಿಗೆ ಅನ್ವಯವಾಗುವುದಿಲ್ಲ. ಆದರೆ, ಕ್ಲಾಸಿಕ್ ಡೆಬಿಟ್ ಕಾರ್ಡ್ ಗಳನ್ನು ಉಚಿತವಾಗಿ ಅಪ್ ಗ್ರೇಡ್ ಮಾಡಿಕೊಳ್ಳಬಹುದು. ಡೆಬಿಟ್ ಕಾರ್ಡ್ ಗಳನ್ನು ಇಎಂವಿ ಚಿಪ್ ಹಾಗೂ ಪಿನ್ ಡೆಬಿಟ್ ಕಾರ್ಡ್ ಆಗಿ ಬದಲಾಯಿಸಿಕೊಂಡು ಹೆಚ್ಚಿನ ಸುರಕ್ಷತೆ ಹೊಂದಬಹುದು.

ಈ ರೀತಿ ಮ್ಯಾಗ್ನೆಟಿಕ್ ಸ್ಟ್ರಿಪ್ ಎಟಿಎಂ ಕಾರ್ಡ್ ಗಳನ್ನು ಇಎಂವಿ ಚಿಪ್ ಅಂಡ್ ಪಿನ್ ಕಾರ್ಡ್ ಆಗಿ ಬದಲಾಯಿಸಲು ಡಿಸೆಂಬರ್ 31 ಡೆಡ್ ಲೈನ್ ನೀಡಿ ಆರ್ ಬಿಐ ಸೂಚನೆ ನೀಡಿದೆ.

ಎಸ್.ಬಿ.ಐ. buddy ಮೊಬೈಲ್ ವ್ಯಾಲೆಟ್ ಸೇವೆ

ಎಸ್.ಬಿ.ಐ. buddy ಮೊಬೈಲ್ ವ್ಯಾಲೆಟ್ ಸೇವೆ

ನವೆಂಬರ್ 1ರಿಂದ ತನ್ನ ಎಸ್.ಬಿ.ಐ. Buddy ಮೊಬೈಲ್ ವ್ಯಾಲೆಟ್ ಸೇವೆ ಮುಚ್ಚುತ್ತಿದೆ. ಅದರ ಬದಲು ಈಗಾಗಲೇ ಚಲಾವಣೆಯಲ್ಲಿರುವ ಯುನೋ ವ್ಯಾಲೆಟ್ ಅನ್ನು ಬಳಕೆಗೆ ಪ್ರೋತ್ಸಾಹಿಸುತ್ತದೆ. ಹಾಗೆ ನೋಡಿದರೆ ಜೂನ್ ತಿಂಗಳ ಬಳಿಕ buddy ವ್ಯಾಲೆಟ್ ಸೇವೆ ತಾತ್ಕಲಿಕವಾಗಿ ಸ್ಥಗಿತಗೊಂಡಿತ್ತು.

ಮೊಬೈಲ್ ಸಂಖ್ಯೆಯನ್ನು ಬ್ಯಾಂಕಿನೊಂದಿಗೆ ನೋಂದಾಯಿಸಿ

ಮೊಬೈಲ್ ಸಂಖ್ಯೆಯನ್ನು ಬ್ಯಾಂಕಿನೊಂದಿಗೆ ನೋಂದಾಯಿಸಿ

ಗ್ರಾಹಕರು ತಮ್ಮ ಮೊಬೈಲ್ ಸಂಖ್ಯೆಯನ್ನು ಬ್ಯಾಂಕಿನ ವಿವಿಧ ಸೇವೆಗಳೊಡನೆ ನೋಂದಾಯಿಸಬೇಕಿದೆ. ಕೆವೈಸಿ ಜತೆ ಮೊಬೈಲ್ ಸಂಖ್ಯೆ ನೀಡಿದ್ದರೂ, ಇನ್ನೊಮ್ಮೆ ನಿಮ್ಮ ಸಮೀಪದ ಬ್ಯಾಂಕಿಗೆ ಅಥವಾ ನಿಮ್ಮ ಖಾತೆ ಇರುವ ಬ್ಯಾಂಕಿಗೆ ತೆರಳಿ ನಿಮ್ಮ ಅಧಿಕೃತ, ಚಾಲನೆಯಲ್ಲಿರುವ ಮೊಬೈಲ್ ಸಂಖ್ಯೆಯನ್ನು ಜೋಡಣೆ ಮಾಡಿಸಿ.

ಇಲ್ಲದಿದ್ದರೆ ಡಿಸೆಂಬರ್ 1ರಿಂದ ಇಂಟರ್ ನೆಟ್ ಬ್ಯಾಂಕಿಂಗ್ ಸೌಲಭ್ಯ ಪಡೆಯಲು ಸಾಧ್ಯವಾಗುವುದಿಲ್ಲ.

ಡೆಬಿಟ್ ಕಾರ್ಡ್ ಪ್ರತಿದಿನದ ಮಿತಿ

ಡೆಬಿಟ್ ಕಾರ್ಡ್ ಪ್ರತಿದಿನದ ಮಿತಿ

ಮಾರ್ಚ್ 2018ರ ಎಣಿಕೆಯಂತೆ ಬ್ಯಾಂಕಿನಿಂದ 39.50 ಕೋಟಿ ಡೆಬಿಟ್ ಕಾರ್ಡ್ ನೀಡಲಾಗಿದೆ. ಈ ಪೈಕಿ 26 ಕೋಟಿ ಕಾರ್ಡ್ ಗಳು ಸಕ್ರಿಯವಾಗಿವೆ. ಡೆಬಿಟ್ ಕಾರ್ಡ್ ಮಾರುಕಟ್ಟೆ ಪೈಕಿ ಎಸ್ಬಿಐ ಶೇ 32.3ರಷ್ಟು ಪಾಲು ಹೊಂದಿದೆ.

ಎಸ್ಬಿಐ ಗ್ಲೋಬಲ್ ಇಂಟರ್ ನ್ಯಾಷನಲ್ ಡೆಬಿಟ್ ಕಾರ್ಡ್ ಮಿತಿ : 50,000 ರು ಪ್ರತಿದಿನ
ಎಸ್ಬಿಐ ಪ್ಲಾಟಿನಂ ಗ್ಲೋಬಲ್ ಇಂಟರ್ ನ್ಯಾಷನಲ್ ಡೆಬಿಟ್ ಕಾರ್ಡ್ ಮಿತಿ : 100,000ರು ಪ್ರತಿದಿನ

English summary
Customers of the State Bank of India (SBI) cannot withdraw more than Rs. 20,000 a day, from Wednesday, October 31. The cash withdrawal limit on the SBI Classic debit card has been halved from Rs. 40,000 amid growing concern over the cloning of ATM cards, the country's largest bank had said earlier this month.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X