ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕನ್ನಡಿಗರಿಗೆ ಮೀಸಲಾತಿ ನೀಡಲು ವಿಫಲವಾದ ಸಂಸ್ಥೆ ತೆರಿಗೆ ವಿನಾಯತಿ ಇಲ್ಲ: ಸುನೀಲ್ ಕುಮಾರ್

|
Google Oneindia Kannada News

ಬೆಂಗಳೂರು ಸೆಪ್ಟೆಂಬರ್ 23: ಕರ್ನಾಟಕದ ಕೈಗಾರಿಕೆಗಳು ಅಥವಾ ಸಂಸ್ಥೆಗಳು ರಾಜ್ಯದ ಕೈಗಾರಿಕಾ ನೀತಿಯ ಪ್ರಕಾರ ಕನ್ನಡಿಗರಿಗೆ ಮೀಸಲಾತಿ ನೀಡಲು ವಿಫಲವಾದರೆ, ಅಂಥ ಸಂಸ್ಥೆಗಳಿಗೆ ಭೂಮಿಯ ರಿಯಾಯಿತಿ, ತೆರಿಗೆ ರಿಯಾಯಿತಿ, ತೆರಿಗೆ ಮುಂದೂಡಿಕೆ ಅಥವಾ ಯಾವುದೇ ರೀತಿಯ ಸಹಾಯಧನಕ್ಕೆ ಅರ್ಹರಾಗಿರುವುದಿಲ್ಲ ಎಂದು ಕನ್ನಡ ಮತ್ತು ಸಂಸ್ಕೃತಿ ಸಚಿವರು ಹೇಳಿದ್ದಾರೆ. ಕನ್ನಡದ ವ್ಯಾಪಕ ಬಳಕೆ ಮತ್ತು ಪ್ರಚಾರವನ್ನು ಉತ್ತೇಜಿಸುವ ಉದ್ದೇಶದಿಂದ ಗುರುವಾರ ವಿಧಾನಸಭೆ ಅಂಗೀಕರಿಸಿದ 'ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ ವಿಧೇಯಕ'ವನ್ನು ಮಂಡಿಸಿದ ವಿ ಸುನೀಲ್ ಕುಮಾರ್ ಈ ಹೇಳಿಕೆಯನ್ನು ನೀಡಿದ್ದಾರೆ.

ರಾಜ್ಯದ ಕೈಗಾರಿಕಾ ನೀತಿ 2020-25 ಸ್ಥಳೀಯರಿಗೆ ನಿರ್ದಿಷ್ಟ ಶೇಕಡಾವಾರು ಮೀಸಲಾತಿಯನ್ನು ಸೂಚಿಸುತ್ತದೆ. 100ಕ್ಕಿಂತ ಹೆಚ್ಚು ಉದ್ಯೋಗಿಗಳನ್ನು ಹೊಂದಿರುವ ಕೈಗಾರಿಕೆಗಳಲ್ಲಿ ಕನ್ನಡೇತರರಿಗೆ ಕನ್ನಡ ಬೋಧನಾ ಘಟಕಗಳನ್ನು ಸ್ಥಾಪಿಸಲು ಇದು ಒತ್ತಿಹೇಳುತ್ತದೆ.

ಕರ್ನಾಟಕದಲ್ಲಿ ಇರೋರಿಗೆ ಕನ್ನಡ ಕಡ್ಡಾಯ; ಇದೊಂದು ಹೊಸ ಮಸೂದೆ!ಕರ್ನಾಟಕದಲ್ಲಿ ಇರೋರಿಗೆ ಕನ್ನಡ ಕಡ್ಡಾಯ; ಇದೊಂದು ಹೊಸ ಮಸೂದೆ!

ಜೊತೆಗೆ ಮಸೂದೆಯು ತನ್ನ ನಿಬಂಧನೆಗಳನ್ನು ಉಲ್ಲಂಘಿಸುವವರ ವಿರುದ್ಧ ಕ್ರಮ ಕೈಗೊಳ್ಳಲು ಸರ್ಕಾರಕ್ಕೆ ಅಧಿಕಾರವನ್ನು ನೀಡುತ್ತದೆ. ಕನ್ನಡವನ್ನು ಜಾರಿಗೆ ತರಲು ಅಸ್ತಿತ್ವದಲ್ಲಿರುವ ನಿಯಮಗಳು ನಿರೀಕ್ಷಿತ ಫಲಿತಾಂಶಗಳನ್ನು ಸಾಧಿಸಲು ವಿಫಲವಾದ ಕಾರಣ ಹೊಸ ಕಾನೂನು ಅಗತ್ಯವಿದೆ ಎಂದು ಸರ್ಕಾರ ಹೇಳಿದೆ.

 New bill warns industries that do not provide incentive employment opportunities to Kannadigas

ಶಿಕ್ಷಣ, ಉದ್ಯೋಗ, ನೀತಿಗಳು, ಸಂವಹನ ಮತ್ತು ತಂತ್ರಜ್ಞಾನದಲ್ಲಿ ಕನ್ನಡದ ಅನುಷ್ಠಾನ ಮತ್ತು ಉನ್ನತ, ತಾಂತ್ರಿಕ ಮತ್ತು ವೃತ್ತಿಪರ ಕೋರ್ಸ್‌ಗಳಲ್ಲಿ ಕನ್ನಡವನ್ನು ಒಂದು ಭಾಷೆಯಾಗಿ ಪರಿಚಯಿಸಲು ಹೊಸ ಮಸೂದೆಯು ಒತ್ತು ನೀಡುತ್ತದೆ. ಇದು ಉನ್ನತ, ತಾಂತ್ರಿಕ ಮತ್ತು ವೃತ್ತಿಪರ ಶಿಕ್ಷಣದಲ್ಲಿ ಕನ್ನಡ ಮಾಧ್ಯಮ ಶಾಲೆಗಳಲ್ಲಿ ಓದುವವರಿಗೆ ಮೀಸಲಾತಿ ಬಗ್ಗೆ ಹೇಳುತ್ತದೆ. ಜೊತೆಗೆ ಸರ್ಕಾರಿ, ಸ್ಥಳೀಯ ಶಾಸನಬದ್ಧ ಮತ್ತು ಶಾಸನಬದ್ಧವಲ್ಲದ ಸಂಸ್ಥೆಗಳಲ್ಲಿ ಉದ್ಯೋಗ ಪಡೆಯಲು ಕನ್ನಡವನ್ನು ಅತ್ಯಗತ್ಯ ಭಾಷೆಯನ್ನಾಗಿ ಮಾಡುತ್ತದೆ.

ಇದು ಅಧೀನ ನ್ಯಾಯಾಲಯಗಳು, ನ್ಯಾಯಮಂಡಳಿಗಳು ಮತ್ತು ಬ್ಯಾಂಕುಗಳಲ್ಲಿ ಕನ್ನಡದ ಬಳಕೆಯನ್ನು ಪ್ರಸ್ತಾಪಿಸುತ್ತದೆ. ಜೊತೆಗೆ ಅನುಷ್ಠಾನ ಮತ್ತು ಮೇಲ್ವಿಚಾರಣೆಗಾಗಿ ಯಾಂತ್ರಿಕ ವ್ಯವಸ್ಥೆಯನ್ನು (ಸಮಿತಿಗಳು ಅಥವಾ ಜಾರಿ ಅಧಿಕಾರಿಗಳು) ಸ್ಥಾಪಿಸಲು ಒತ್ತು ನೀಡುತ್ತದೆ.

ಶಾಲೆಗಳಲ್ಲಿ ಕನ್ನಡವನ್ನು ಒಂದು ಭಾಷೆಯಾಗಿ ಪರಿಚಯಿಸಲಾಗಿದ್ದರೂ, ವೃತ್ತಿಪರ ಕೋರ್ಸ್‌ಗಳು ಸೇರಿದಂತೆ ಉನ್ನತ ಶಿಕ್ಷಣದಲ್ಲಿ ಭಾಷೆಯನ್ನು ಕಲಿಯಲು ಸರಿಯಾದ ಅವಕಾಶವಿಲ್ಲ ಎಂದು ಮಸೂದೆ ಹೇಳುತ್ತದೆ.

 New bill warns industries that do not provide incentive employment opportunities to Kannadigas

ಅಧಿಕೃತ ಮತ್ತು ಆಡಳಿತಾತ್ಮಕ ವ್ಯವಹಾರಗಳಲ್ಲಿ ಕನ್ನಡ ಭಾಷೆಯನ್ನು ಬಳಸುವಲ್ಲಿ ಸರ್ಕಾರಿ ಅಧಿಕಾರಿಗಳ ಕಡೆಯಿಂದ ವಿಫಲವಾದರೆ, ಅದು ಕರ್ತವ್ಯ ಲೋಪವಾಗುತ್ತದೆ ಎಂದು ಮಸೂದೆ ಹೇಳುತ್ತದೆ. ಅಲ್ಲದೆ, ಯಾವುದೇ ಉದ್ಯಮ ಅಥವಾ ವಾಣಿಜ್ಯ ಸಂಸ್ಥೆಗೆ ಸಂಬಂಧಿಸಿದ ಮಾಲೀಕರು ಅಥವಾ ಪ್ರಾಧಿಕಾರವು ನಿಯಮಗಳನ್ನು ಅನುಸರಿಸಲು ವಿಫಲವಾದರೆ, ಅವರಿಗೆ ಮೊದಲ ಬಾರಿಗೆ 5,000 ರೂ., ಎರಡನೇ ಬಾರಿಗೆ ರೂ. 10,000 ಮತ್ತು ಮೂರನೇ ಬಾರಿಗೆ ರೂ. 20,000 ದಂಡವನ್ನು ವಿಧಿಸಲಾಗುತ್ತದೆ.

English summary
The Kannada and Culture Minister V Sunil Kumar said that if industries or institutions in Karnataka fail to provide reservation to Kannadigas as per the state's industrial policy, they will not be entitled to land concession, tax concession, tax deferment or any other form of subsidy.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X