• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಾಣಿಜ್ಯ ವಿಮಾನ ಹಾರಾಟಕ್ಕೆ ಅನುಮತಿ ಪಡೆದ ಆಕಾಶ ಏರ್: ಜುಲೈ ಅಂತ್ಯದಿಂದ ಆರಂಭ

|
Google Oneindia Kannada News

ನವದೆಹಲಿ, ಜುಲೈ 7: ಭಾರತದ ಹೊಸ ವಿಮಾನಯಾನ ಸಂಸ್ಥೆ ಆಕಾಶ ಏರ್ ವಾಣಿಜ್ಯ ವಿಮಾನಗಳನ್ನು ಪ್ರಾರಂಭಿಸಲು ವಾಯುಯಾನ ನಿಯಂತ್ರಕದ ಅನುಮತಿಯನ್ನು ಪಡೆದುಕೊಂಡಿದೆ ಎಂದು ಬಿಲಿಯನೇರ್ ಮತ್ತು ಏಸ್ ಹೂಡಿಕೆದಾರ ರಾಕೇಶ್ ಜುಂಜುನ್ ವಾಲಾ ಟ್ವೀಟ್ ಮಾಡಿದ್ದಾರೆ. ಜುಲೈ ತಿಂಗಳ ಅಂತ್ಯದ ವೇಳೆಗೆ ಕಾರ್ಯಾಚರಣೆಯನ್ನು ಪ್ರಾರಂಭಿಸುವುದಾಗಿ ಹೇಳಿಕೆಯಲ್ಲಿ ಆಕಾಶ ಏರ್‌ಲೈನ್ಸ್ ತಿಳಿಸಿದೆ.

"ನಮ್ಮ ಏರ್ ಆಪರೇಟರ್ ಸರ್ಟಿಫಿಕೇಟ್ (AOC) ಪಡೆದಿರುವುದನ್ನು ಘೋಷಿಸಲು ನಾವು ಸಂತೋಷಪಡುತ್ತೇವೆ. ಇದು ಮಹತ್ವದ ಮೈಲಿಗಲ್ಲು, ವಿಮಾನಗಳ ಹಾರಾಟ ಆರಂಭಿಸಲು ಮತ್ತು ವಾಣಿಜ್ಯ ಕಾರ್ಯಾಚರಣೆಗಳ ಪ್ರಾರಂಭಕ್ಕೆ ಇದು ಅವಕಾಶ ಮಾಡಿಕೊಡುತ್ತದೆ" ಎಂದು ಆಕಾಶ ಏರ್ ಟ್ವೀಟ್ ಮಾಡಿದೆ.

ರಾಕೇಶ್ ಒಡೆತನದ ಅಕಾಶ ಏರ್ ಸಿಬ್ಬಂದಿ ಯೂನಿಫಾರ್ಮ್ ಲುಕ್ ಹೇಗಿದೆ?ರಾಕೇಶ್ ಒಡೆತನದ ಅಕಾಶ ಏರ್ ಸಿಬ್ಬಂದಿ ಯೂನಿಫಾರ್ಮ್ ಲುಕ್ ಹೇಗಿದೆ?

ಏರ್ ಆಪರೇಟರ್ ಸರ್ಟಿಫಿಕೇಟ್ ಒಂದು ಹೊಸ ಏರ್‌ಲೈನ್‌ಗೆ ವಾಣಿಜ್ಯ ವಾಯು ಸಾರಿಗೆ ಕಾರ್ಯಾಚರಣೆಗಳನ್ನು ಕೈಗೊಳ್ಳಲು ಅನುಮತಿ ನೀಡುತ್ತದೆ.

ವಿಮಾನಯಾನ ಜ್ಞಾನ ವೇದಿಕೆ ಸ್ಕೈಬ್ರೇ ಪ್ರಕಾರ, ಏರ್ ಆಪರೇಟರ್ ಸರ್ಟಿಫಿಕೇಟ್ ತನ್ನ ಉದ್ಯೋಗಿಗಳು ಮತ್ತು ಸಾರ್ವಜನಿಕರ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಸಿಬ್ಬಂದಿ, ಸ್ವತ್ತುಗಳು ಮತ್ತು ವ್ಯವಸ್ಥೆಗಳನ್ನು ಹೊಂದಲು ಏರ್‌ಲೈನ್‌ಗೆ ಅಗತ್ಯವಿದೆ. ಯಾವ ಉದ್ದೇಶಕ್ಕಾಗಿ ಮತ್ತು ಯಾವ ಭೌಗೋಳಿಕ ಪ್ರದೇಶದಲ್ಲಿ ಬಳಸಬಹುದಾದ ವಿಮಾನದ ಪ್ರಕಾರಗಳನ್ನು ಈ ಡಾಕ್ಯುಮೆಂಟ್ ವಿವರಿಸುತ್ತದೆ ಎಂದು ಹೇಳಿದೆ.

ಜುಲೈ ಅಂತ್ಯದ ವೇಳೇದ ಆಗಸದಲ್ಲಿ 'ಆಕಾಶ ವಿಮಾನ' ಹಾರಾಟಜುಲೈ ಅಂತ್ಯದ ವೇಳೇದ ಆಗಸದಲ್ಲಿ 'ಆಕಾಶ ವಿಮಾನ' ಹಾರಾಟ

ಕಾರ್ಯಾಚರಣೆ ಆರಂಭಿಸಲು ಕೊನೆಯ ಪ್ರಕ್ರಿಯೆ ಪೂರ್ಣ

ಕಾರ್ಯಾಚರಣೆ ಆರಂಭಿಸಲು ಕೊನೆಯ ಪ್ರಕ್ರಿಯೆ ಪೂರ್ಣ

"ಏರ್ ಆಪರೇಟರ್ ಸರ್ಟಿಫಿಕೇಟ್ ಅನುದಾನವು ಡಿಜಿಸಿಎಯಿಂದ ರೂಪಿಸಲಾದ ಸಮಗ್ರ ಮತ್ತು ಕಠಿಣ ಪ್ರಕ್ರಿಯೆಯ ಅಂತಿಮ ಹಂತವಾಗಿದೆ ಮತ್ತು ವಿಮಾನಯಾನ ಕಾರ್ಯಾಚರಣೆಯ ಸಿದ್ಧತೆಗಾಗಿ ಎಲ್ಲಾ ನಿಯಂತ್ರಕ ಮತ್ತು ಅನುಸರಣೆ ಅಗತ್ಯತೆಗಳ ತೃಪ್ತಿಕರ ಪೂರ್ಣಗೊಳಿಸಿದ್ದರೆ ಮಾತ್ರ ಅನುಮತಿ ದೊರೆಯುತ್ತದೆ" ಎಂದು ನಿರ್ದೇಶನಾಲಯದ ಏರ್ ಆಪರೇಟರ್ ಸರ್ಟಿಫಿಕೇಟ್ ಪಡೆದಿರುವುದನ್ನು ಉಲ್ಲೇಖಿಸಿ ಆಕಾಶ ಏರ್ ಹೇಳಿದೆ.

ಆಕಾಶ ಏರ್ ಕಳೆದ ತಿಂಗಳು ತನ್ನ ಮೊದಲ ಬೋಯಿಂಗ್ 737 ಮ್ಯಾಕ್ಸ್ ವಿಮಾಣವನ್ನು ಸ್ವೀಕರಿಸಿದೆ. ಜುಲೈ ತಿಂಗಳ ಕೊನೆಯಲ್ಲಿ ಎರಡು ವಿಮಾನಗಳೊಂದಿಗೆ ಹಾರಾಟವನ್ನು ಪ್ರಾರಂಭಿಸುವುದಾಗಿ ಕಂಪನಿಯು ಹೇಳಿಕೆಯಲ್ಲಿ ತಿಳಿಸಿದೆ, ತರುವಾಯ ಪ್ರತಿ ತಿಂಗಳು ತನ್ನ ಹೆಚ್ಚಿನ ವಿಮಾನಗಳ ಹಾರಾಟ ಸೇರಿಸುವುದಾಗಿ ತಿಳಿಸಿದೆ.

2023ರ ಅಂತ್ಯದ ವೇಳೆಗೆ 18 ವಿಮಾನಗಳ ಹಾರಾಟ

2023ರ ಅಂತ್ಯದ ವೇಳೆಗೆ 18 ವಿಮಾನಗಳ ಹಾರಾಟ

2023 ರ ಆರ್ಥಿಕ ವರ್ಷದ ಅಂತ್ಯದ ವೇಳೆಗೆ, ಆಕಾಶ ಏರ್ 18 ವಿಮಾನಗಳನ್ನು ಮತ್ತು ನಂತರ ಪ್ರತಿ 12 ತಿಂಗಳಿಗೊಮ್ಮೆ 12-14 ವಿಮಾನಗಳನ್ನು ಕಾರ್ಯಾಚರಣೆಗೆ ಸೇರಿಸುವ ಗುರಿ ಹೊಂದಿದೆ, ಮುಂದಿನ ಐದು ವರ್ಷಗಳಲ್ಲಿ 72 ವಿಮಾನಗಳನ್ನು ಪೂರೈಸಲು ಆರ್ಡರ್ ನೀಡಿದೆ.

ಎಲ್ಲಾ 72 ವಿಮಾನಗಳು ಬೋಯಿಂಗ್ 737 ಮ್ಯಾಕ್ಸ್, ಸಿಎಫ್‌ಎಂ ಇಂಧನ ದಕ್ಷತೆ, ಲೀಪ್-1ಬಿ ಎಂಜಿನ್‌ಗಳಿಂದ ಚಾಲಿತವಾಗಿದೆ.

2023ರಿಂದ ಅಂತಾರಾಷ್ಟ್ರೀಯ ವಿಮಾನ ಹಾರಾಟ

2023ರಿಂದ ಅಂತಾರಾಷ್ಟ್ರೀಯ ವಿಮಾನ ಹಾರಾಟ

ದೇಶದೊಳಗೆ ವಿಮಾನಯಾನ ಸೇವೆ ನೀಡಲಾಗುತ್ತದೆ. ಪಾಯಿಂಟ್-ಟು-ಪಾಯಿಂಟ್ ಸೇವೆಗಳ ಮೇಲೆ ಕೇಂದ್ರೀಕರಿಸುತ್ತವೆ. 2023 ರ ದ್ವಿತೀಯಾರ್ಧದಲ್ಲಿ ಅಂತರರಾಷ್ಟ್ರೀಯ ವಿಮಾನ ಸೇವೆ ಪ್ರಾರಂಭಿಸಲಾಗುತ್ತದೆ.

ನಾವು ಹಬ್ ಪರಿಕಲ್ಪನೆಯನ್ನು ನಂಬುವುದಿಲ್ಲ. ಆಕಾಶದ ನೆಟ್‌ವರ್ಕ್ ಭಾರತೀಯ ಮೆಟ್ರೋ ನಗರಗಳಿಂದ ಎರಡು ಮತ್ತು ಮೂರನೇ ಶ್ರೇಣಿಯ ನಗರಗಳಿಗೆ ವಿಮಾನ ಸೇವೆ ನೀಡುವುದರ ಮೇಲೆ ಕೇಂದ್ರೀಕರಿಸುತ್ತದೆ ಎಂದು ಆಕಾಶ ಸಂಸ್ಥೆ ತಿಳಿಸಿದೆ.

ಕಡಿಮೆ ವೆಚ್ಚದಲ್ಲಿ ವಿಮಾನ ಸೇವೆ ನೀಡುವ ಗುರಿ

ಕಡಿಮೆ ವೆಚ್ಚದಲ್ಲಿ ವಿಮಾನ ಸೇವೆ ನೀಡುವ ಗುರಿ

ಭಾರತದ ಸ್ಪರ್ಧಾತ್ಮಕ ವಿಮಾನಯಾನ ಮಾರುಕಟ್ಟೆಯಲ್ಲಿ ನೆಲೆ ಕಂಡುಕೊಳ್ಳಬೇಕಿದೆ. ಆಕಾಶ ಸಂಸ್ಥೆ ಕೇವಲ ವಿಮಾನ ಪ್ರಯಾಣ ದರಗಳ ಮೇಲೆ ಸ್ಪರ್ಧಿಸುವುದು ಮಾತ್ರವಲ್ಲದೆ, ಉತ್ತಮ ಗುಣಮಟ್ಟದ ಸೇವೆ ನೀಡಲು ತಯಾರಿ ನಡೆಸುತ್ತಿದೆ.

ಆಕಾಶ ಸಂಸ್ಥೆ ದೆಹಲಿಯಲ್ಲಿ ತನ್ನದೇ ಆದ ಪೈಲಟ್ ತರಬೇತಿ ಕೇಂದ್ರವನ್ನು ಹೊಂದಿದೆ ಮತ್ತು ವಾಣಿಜ್ಯ ಸೇವೆಗಳ ಪ್ರಾರಂಭದ ತಯಾರಿಗಾಗಿ ಕ್ಯಾಬಿನ್ ಸಿಬ್ಬಂದಿಯ ಮೇಲೆ 100 ಕ್ಕೂ ಹೆಚ್ಚು ಪೈಲಟ್‌ಗಳನ್ನು ನೇಮಿಸಿಕೊಂಡಿದೆ.

English summary
New Airline Akasa Air Allowed To Start Commercial Flights It will Start Operations By The July End. the company backed by billionaire and ace investor Rakesh Jhunjhunwala tweeted About aviation regulator's permission.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X