ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಧಿಕೃತ: ಈಟಿವಿ ವಾಹಿನಿಗಳ ಮೇಲೆ ಅಂಬಾನಿ ಅಧಿಪತ್ಯ

|
Google Oneindia Kannada News

ನವದೆಹಲಿ, ಜ 29: ರಾಮೋಜಿ ರಾವ್ ಒಡೆತನದ ಈಟಿವಿ ಸಮೂಹ ಸಂಸ್ಥೆಯ ವಾಹಿನಿಗಳು ಮಾರಾಟವಾಗುವ ಬಗ್ಗೆ ಹಲವು ದಿನಗಳಿಂದ ಹರಿದಾಡುತ್ತಿದ್ದ ಸುದ್ದಿಗೆ ಈಗ ಅಧಿಕೃತ ತೆರೆಬಿದ್ದಿದೆ. ತೆಲುಗು ವಾಹಿನಿ ಸೇರಿದಂತೆ ಈಟಿವಿಯ ಸಮಸ್ತ ವಾಹಿನಿಗಳ ಮಾರಾಟದ ಬಗ್ಗೆ ಅಂತಿಮ ಘೋಷಣೆ ಹೊರಬಿದ್ದಿದೆ.

2012ರಲ್ಲಿ ಘೋಷಿಸಿದಂತೆ ನೆಟ್ವರ್ಕ್ 18 ಬ್ರಾಡ್ಕಾಸ್ಟ್ ಲಿಮಿಟೆಡ್ ಗ್ರೂಪ್, ಈಟಿವಿ ಸಂಸ್ಥೆಯ ವಿವಿಧ ವಾಹಿನಿಗಳ ಷೇರುಗಳನ್ನು ಮತ್ತು ಆಸ್ತಿಗಳನ್ನು 2,053 ಕೋಟಿ ರೂಪಾಯಿಗೆ ಖರೀದಿಸಿದೆ.

ಈಟಿವಿ ತೆಲುಗು ಸೇರಿದಂತೆ ಇತರ ವಾಹಿನಿಗಳ ಶೇರು ಮತ್ತು ಆಸ್ತಿಗಳನ್ನು ಖರೀದಿಸಿರುವ ಬಗ್ಗೆ ನೆಟ್ವರ್ಕ್ 18 ಸಂಸ್ಥೆ ಬಾಂಬೆ ಸ್ಟಾಕ್ ಎಕ್ಸ್ ಚೇಂಜಿಗೆ (BSE) ಮಾಹಿತಿ ನೀಡಿದೆ.

ನೆಟ್ವರ್ಕ್ 18 ಸಂಸ್ಥೆ, ಈಟಿವಿ ಬಳಗದ ಈಟಿವಿ ಉತ್ತರ ಪ್ರದೇಶ, ಈಟಿವಿ ಮಧ್ಯಪ್ರದೇಶ, ಈಟಿವಿ ರಾಜಸ್ಥಾನ, ಈಟಿವಿ ಬಿಹಾರ್ ಮತ್ತು ಈಟಿವಿ ಉರ್ದು ನ್ಯೂಸ್ ವಾಹಿನಿಗಳನ್ನು ಸಂಪೂರ್ಣವಾಗಿ ಖರೀದಿಸಿದೆ.

ಇನ್ನು ಮನೋರಂಜನಾ ವಾಹಿನಿಗಳಾದ ಈಟಿವಿ ಮರಾಠಿ, ಈಟಿವಿ ಕನ್ನಡ, ಈಟಿವಿ ಬಾಂಗ್ಲಾ, ಈಟಿವಿ ಗುಜರಾತಿ, ಈಟಿವಿ ವರಿಯಾ ವಾಹಿನಿಗಳ ಮೇಲೆ ಶೇ. 50ರಷ್ಟು ಪಾಲನ್ನು ಹೊಂದಿದ್ದರೆ, ಈಟಿವಿ ತೆಲುಗು ಮತ್ತು ಈಟಿವಿ ತೆಲುಗು ನ್ಯೂಸ್ ವಾಹಿನಿಗಳ ಮೇಲೆ ಶೇ. 24.5 ಪಾಲನ್ನು ಹೊಂದಿರುತ್ತದೆ.

ಈ ಎಲ್ಲಾ ಪ್ರಕ್ರಿಯೆಗಳು ಜನವರಿ 22, 2014ರಿಂದ ಅನ್ವಯವಾಗುವಂತೆ ಚಾಲ್ತಿಯಲ್ಲಿರುತ್ತದೆ. (source: Economic Times)

ರಿಲಯನ್ಸ್ ಇಂಡಸ್ಟ್ರೀಸ್

ರಿಲಯನ್ಸ್ ಇಂಡಸ್ಟ್ರೀಸ್

ಫೆಬ್ರವರಿ 1996ರಲ್ಲಿ ರಾಘವ್ ಬೆಹ್ಲ್ ನೆಟ್ವರ್ಕ್ ಟಿವಿ 18 ಸಂಸ್ಥೆಯನ್ನು ಹುಟ್ಟು ಹಾಕಿದ್ದರು. ಜನವರಿ 2012ರಲ್ಲಿ ಮುಖೇಶ್ ಅಂಬಾನಿ ಒಡೆತನದ ರಿಲಯನ್ಸ್ ಇಂಡಸ್ಟ್ರೀಸ್ ಈ ಸಂಸ್ಥೆಯ ಮೇಲೆ ಭಾರೀ ಬಂಡವಾಳ ಹೂಡಿತ್ತು.

2012ರಲ್ಲಿ ಹೈಕೋರ್ಟಿಗೆ ಅಫಿಡವಿಟ್

2012ರಲ್ಲಿ ಹೈಕೋರ್ಟಿಗೆ ಅಫಿಡವಿಟ್

ರಿಲಯನ್ಸ್ ಸಂಸ್ಥೆ, ಜೆಎಂ ಫೈನಾನ್ಸಿಷಿಯಲ್ ಸಮೂಹದ ಮೂಲಕ ಉಷೋದಯ ಎಂಟರ್ ಪ್ರೈಸಸ್ (ಈಟಿವಿ) ನಲ್ಲಿ 2,600 ಕೋಟಿ ರೂಪಾಯಿ ಹೂಡುವುದಾಗಿ 2012ರಲ್ಲಿ ಹೈಕೋರ್ಟಿನಲ್ಲಿ ಅಫಿಡವಿಟ್ ಸಲ್ಲಿಸಿತ್ತು. ಆದರೆ, ಜೆಎಂ ಫೈನಾನ್ಸಿಷಿಯಲ್ ಒಪ್ಪಂದದಿಂದ ಹಿಂದೆ ಸರಿದ ಬಳಿಕ ರಿಲಯನ್ಸ್ ಸಂಸ್ಥೆ ನೆಟ್ವರ್ಕ್ 18 ಹಾಗೂ ಈಟಿವಿ ಮೇಲೆ ಹೂಡಿಕೆ ಮಾಡುವ ನಿರ್ಧಾರಕ್ಕೆ ಬಂದಿತ್ತು.

ನೆಟ್ವರ್ಕ್ ಟಿವಿ18

ನೆಟ್ವರ್ಕ್ ಟಿವಿ18

ಸಿಎನ್ ಬಿಸಿ, ಸಿಎನ್ಎನ್ - ಐಬಿಎನ್, ಎಂಟಿವಿ, ಐಬಿಎನ್ 7, ಐಬಿಎನ್ ಲೋಕಮಾತ, ಕಲರ್ಸ್, ನಿಕ್ ಇಂಡಿಯಾ, ಹೋಂ ಶಾಪ್ 18, ಸಿಎನ್ಬಿಸಿ ಆವಾಜ್, ವಿಎಚ್ 1 ಮುಂತಾದ ಪ್ರಮುಖ ಸುದ್ದಿ ಮತ್ತು ಮನೋರಂಜನಾ ವಾಹಿನಿಗಳನ್ನು ನೆಟ್ವರ್ಕ್ ಟಿವಿ18 ನಿಯಂತ್ರಿಸುತ್ತಿದೆ.

ರಾಜೀವ್ ಚಂದ್ರಶೇಖರ್

ರಾಜೀವ್ ಚಂದ್ರಶೇಖರ್

ರಾಜ್ಯಸಭಾ ಸದಸ್ಯ ಮತ್ತು ಉದ್ಯಮಿ ರಾಜೀವ್ ಚಂದ್ರಶೇಖರ್, ರಾಮೋಜಿ ರಾವ್ ಒಡೆತನದ ಈಟಿವಿ ನೆಟ್‌ವರ್ಕ್‌ನ್ನು ಕೊಳ್ಳಲು ಮುಂದಾಗಿದ್ದರು ಎನ್ನುವ ಸುದ್ದಿ ಡಿಸೆಂಬರ್ 2011ರಲ್ಲಿ ಹರಿದಾಡುತ್ತಿತ್ತು.

ಸೋನಿ ಟಿವಿ

ಸೋನಿ ಟಿವಿ

ದೇಶದ ಪ್ರಮುಖ ಮನರಂಜನಾ ಚಾನೆಲ್ ಗಳಲ್ಲೊಂದಾದ ಸೋನಿ ನೆಟ್ವರ್ಕ್ ಈನಾಡು ಟಿವಿಯ 11 ಪ್ರಾದೇಶಿಕ ಚಾನೆಲ್ ಗಳನ್ನು ಖರೀದಿಸಲು ಸಜ್ಜಾಗಿತ್ತು ಎನ್ನುವ ಸುದ್ದಿ 2011ರಲ್ಲಿ ಚಾಲ್ತಿಯಲ್ಲಿತ್ತು.

English summary
Network18 Group has completed a Rs 2,053-crore deal to acquire stakes in different channels of ETV, which was announced in 2012.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X