ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

2021ನೇ ಆರ್ಥಿಕ ವರ್ಷದಲ್ಲಿ ನಿವ್ವಳ ತೆರಿಗೆ ಸಂಗ್ರಹ ಶೇ 31ರಷ್ಟು ಕುಸಿತ!

|
Google Oneindia Kannada News

ನವದೆಹಲಿ, ಸೆ. 20: ಕೊರೊನಾ ಸಂಕಷ್ಟ ಕಾಲದಲ್ಲಿ ಎಲ್ಲಾ ರೀತಿಯ ತೆರಿಗೆ ಸಂಗ್ರಹ ಕುಸಿತ ಕಾಣುತ್ತಿದೆ. ಕೇಂದ್ರ ಹಣಕಾಸು ಖಾತೆ ರಾಜ್ಯ ಸಚಿವ ಅನುರಾಗ್ ಠಾಕೂರ್ ಅವರು ಈ ಬಗ್ಗೆ ಲೋಕಸಭೆ ಅಧಿವೇಶನದಲ್ಲಿ ಮಾಹಿತಿ ನೀಡಿ ವರ್ಷದಿಂದ ವರ್ಷಕ್ಕೆ ಲೆಕ್ಕಾಚಾರದಂತೆ 2021ನೇ ಆರ್ಥಿಕ ವರ್ಷದ ಏಪ್ರಿಲ್ -ಆಗಸ್ಟ್ ಅವಧಿಯಲ್ಲಿ 1.92 ಲಕ್ಷ ಕೋಟಿ ರು ಸಂಗ್ರಹವಾಗಿದೆ.

ಇದು ಕಳೆದ ವರ್ಷಕ್ಕೆ ಹೋಲಿಸಿದರೆ ಶೇ 31.1 ರಷ್ಟು ಇಳಿಕೆಯಾಗಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ ಒಟ್ಟು 2.79 ಲಕ್ಷ ಕೋಟಿ ರು ನಿವ್ವಳ ತೆರಿಗೆ ಸಂಗ್ರಹವಾಗಿತ್ತು.

ದೇಶದ ಒಟ್ಟಾರೆ ತೆರಿಗೆ ಸಂಗ್ರಹ ಶೇಕಡಾ 22.5ರಷ್ಟು ಕುಸಿತ: ಮೂಲಗಳುದೇಶದ ಒಟ್ಟಾರೆ ತೆರಿಗೆ ಸಂಗ್ರಹ ಶೇಕಡಾ 22.5ರಷ್ಟು ಕುಸಿತ: ಮೂಲಗಳು

ಎರಡನೇ ತ್ರೈಮಾಸಿಕದಲ್ಲಿ ಮುಂಗಡ ತೆರಿಗೆ ಸಂಗ್ರಹ ಸೇರಿದಂತೆ ಕೇಂದ್ರದ ಒಟ್ಟು ತೆರಿಗೆ ಸಂಗ್ರಹವು ಪ್ರಸಕ್ತ ಹಣಕಾಸು ವರ್ಷದ ಸೆಪ್ಟೆಂಬರ್ 15 ರವರೆಗೆ ಶೇಕಡಾ 22.5ರಷ್ಟು ಇಳಿದು 2,53,532.3 ಕೋಟಿಗೆ ತಲುಪಿದೆ ಎಂದು ಆದಾಯ ತೆರಿಗೆ ಇಲಾಖೆಯ ಮೂಲಗಳು ತಿಳಿಸಿದ್ದನ್ನು ಇಲ್ಲಿ ಸ್ಮರಿಸಬಹುದು.

Net direct tax collections decline 31% in April-August FY21

ಜೂನ್‌ನಿಂದ ಕೊನೆಗೊಂಡ ಮೊದಲ ತ್ರೈಮಾಸಿಕದಲ್ಲಿ, ಸಾಂಕ್ರಾಮಿಕ ರೋಗದಿಂದಾಗಿ ದೇಶವು ಸಂಪೂರ್ಣ ಲಾಕ್‌ಡೌನ್ ಆಗಿದ್ದರಿಂದ, ಒಟ್ಟು ತೆರಿಗೆ ಸಂಗ್ರಹವು ಶೇಕಡಾ 31 ರಷ್ಟು ಕುಸಿದಿದೆ.

ಪರೋಕ್ಷ ತೆರಿಗೆ ಸಂಗ್ರಹ ಕೂಡಾ ಇಳಿಕೆಯಾಗಿದೆ. ವರ್ಷದಿಂದ ವರ್ಷಕ್ಕೆ ಲೆಕ್ಕಾಚಾರದಂತೆ 2021ನೇ ಆರ್ಥಿಕ ವರ್ಷದ ಈ ಅವಧಿಯಲ್ಲಿ 3.42 ಲಕ್ಷ ಕೋಟಿ ರು ಸಂಗ್ರಹವಾಗಿದೆ. ಈ ಹಿಂದಿನ ಹಣಕಾಸು ವರ್ಷದ ಇದೇ ಅವಧಿಯಲ್ಲಿ 3.85 ಲಕ್ಷ ಕೋಟಿ ರು ಸಂಗ್ರಹ ಕಾಣಲಾಗಿತ್ತು. ಇದೇ ವೇಳೆ ಏಪ್ರಿಲ್ -ಆಗಸ್ಟ್ ಅವಧಿಯ ಸರಕು ಸಾಗಣೆ ತೆರಿಗೆ(ಜಿಎಸ್ಟಿ) ಸಂಗ್ರಹ 1.81 ಲಕ್ಷ ಕೋಟಿ ರುಗಳಷ್ಟಾಗಿದೆ ಎಂದು ಅನುರಾಗ್ ಠಾಕೂರ್ ಹೇಳಿದರು.

English summary
The net direct tax collection in April-August period of the current fiscal was 31.1 per cent lower on year-on-year (YoY) basis at over Rs 1.92 lakh crore, according to data provided by Minister of State for Finance Anurag Thakur in Lok Sabha.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X