ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸ್ಟಾರ್ ಬಕ್ಸ್ ಜತೆ ಡೀಲ್ ಕುದುರಿಸಿದ ಸ್ವಿಸ್ ದೈತ್ಯ 'ನೆಸ್ಲೆ'

By Mahesh
|
Google Oneindia Kannada News

ಜ್ಯೂರಿಚ್, ಆಗಸ್ಟ್ 29: ಯುಎಸ್ ದೈತ್ಯ ಸ್ಟಾರ್ ಬಕ್ಸ್ ಹಾಗೂ ಸ್ವಿಸ್ ದೈತ್ಯ ನೆಸ್ಲೆ ಜತೆ ಒಪ್ಪಂದವಾಗಿದೆ.

ಕಳೆದ ಮೇ ತಿಂಗಳಿನಲ್ಲಿ ಘೋಷಿಸಿದಂತೆ, ನೆಸ್ ಕೆಫೆ ಇನ್ ಸ್ಟಂಟ್ ಕಾಫಿ ತಯಾರಿಕಾ ಸಂಸ್ಥೆ ನೆಸ್ಲೆ ಈಗ ಜಾಗತಿಕವಾಗಿ ಸ್ಟಾರ್ ಬಕ್ಸ್ ಕಾಫಿಯ ಪ್ರಚಾರ ಮಾರುಕಟ್ಟೆ ಮೇಲೆ ಹಿಡಿತ ಹೊಂದಲಿದೆ. ಇದಕ್ಕಾಗಿ 7.15 ಬಿಲಿಯನ್ ಡಾಲರ್ ನೀಡಿ ಒಪ್ಪಂದ ಮಾಡಿಕೊಂಡಿದೆ.

ಈ ಒಪ್ಪಂದದಂತೆ ಯುಎಸ್ ಹಾಗೂ ಯುರೋಪಿನಲ್ಲಿರುವ ಸುಮಾರು 500ಕ್ಕೂ ಅಧಿಕ ಸ್ಟಾರ್ ಬಕ್ಸ್ ಸಿಬ್ಬಂದಿಗಳು ಇನ್ಮುಂದೆ ನೆಸ್ಲೆ ಸಂಸ್ಥೆ ಸೇರಲಿದ್ದಾರೆ.

Nestle seals $7.5 billion deal to market Starbucks coffee

'ಸ್ಟಾರ್ ಬಕ್ಸ್, ನೆಸ್ ಕೆಫೆ, ನೆಸ್ ಪ್ರೆಸೋ ಜತೆಗೂಡಿದ್ದು, ವಿಶ್ವದ ಹೆಗ್ಗುರುತಿನ ಕಾಫಿ ಬ್ರಾಂಡ್ ಆಗಲಿದೆ' ಎಂದು ನೆಸ್ಲೆ ಸಿಇಒ ಮಾರ್ಕ್ ಶೆನೈಡರ್ ಹೇಳಿದ್ದಾರೆ.

ಜನವರಿ 2017ರಲ್ಲಿ ಸಿಇಒ ಆದ ಬಳಿಕ ಮಾರ್ಕ್ ಅವರು ಅಮೆರಿಕದಲ್ಲಿ ನೆಸ್ಲೆ ಮಾರುಕಟ್ಟೆ ವಿಸ್ತರಣೆಗೆ ಕಾರಣರಾಗಿದ್ದಾರೆ. ಕ್ಯಾಲಿಫೋರ್ನಿಯಾ ಮೂಲದ ಬ್ಲೂ ಬಾಟ್ಲ್ ಕಾಫಿ, ಟೆಕ್ಸಾನ್ ಬ್ರಾಂಡ್ ಕಮೀಲಿಯನ್ (Chameleon) ಕೋಲ್ಡ್ ಬ್ರೂವನ್ನು ನೆಸ್ಲಿ ತನ್ನ ತೆಕ್ಕೆಗೆ ತೆಗೆದುಕೊಂಡಿದೆ.

ಈ ಬಗ್ಗೆ ಮಾತನಾಡಿದ ಸ್ಟಾರ್ ಬಕ್ಸ್ ನ ಸಿಇಒ ಕೆವಿನ್ ಜಾನ್ಸನ್, ಕಾಫಿ ರೀಟೈಲ್ ಮಾರುಕಟ್ಟೆಯಲ್ಲಿ ಅಗ್ರಪಂಕ್ತಿಯಲ್ಲಿರುವ ನೆಸ್ಲೆ ಜತೆ ಒಪ್ಪಂದ ಮಾಡಿಕೊಂಡಿರುವುದರಿಂದ ಸ್ಟಾರ್ ಬಕ್ಸ್ ನ ಉತ್ಪನ್ನಗಳು ಮನೆ ಮನೆಗೂ ತಲುಪಿಸಲು ನೆರವಾಗಲಿದೆ ಎಂದಿದ್ದಾರೆ.

English summary
Nespresso maker Nestle said it has sealed a deal to market the products of US coffee giant Starbucks around the world, outside of its cafes.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X