ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಲಕ್ಷಾಂತರ ಜೀಮೇಲ್ ಹ್ಯಾಕ್, ಪಾಸ್ವರ್ಡ್ ಲೀಕ್

By Mahesh
|
Google Oneindia Kannada News

ಬೆಂಗಳೂರು, ಸೆ.11: ಗೂಗಲ್ ಸಂಸ್ಥೆಯ ಇ ಮೇಲ್ ಸೌಲಭ್ಯವಾದ ಜೀಮೇಲ್ ಗೆ ಹ್ಯಾಕರ್ ಗಳು ಕನ್ನ ಹಾಕಿದ್ದು, ಲಕ್ಷಾಂತರ ಅಕೌಂಟ್ ಗಳನ್ನು ಹ್ಯಾಕ್ ಮಾಡಿ ಪಾಸ್ ವರ್ಡ್ ಗಳನ್ನು ರಷ್ಯನ್ ಬಿಟ್ ಕಾಯಿನ್ ಸೆಕ್ಯುರಿಟಿ ಫೋರಮ್ ನಲ್ಲಿ ಬಹಿರಂಗಗೊಳಿಸುವ ಸುದ್ದಿ ಬಂದಿದೆ.

ಡ್ಯಾನಿಶ್ ನ ಸೈಬರ್ ಸೆಕ್ಯುರಿಟಿ ತಜ್ಞರ ಪ್ರಕಾರ ರಷ್ಯನ್ ಇಮೇಲ್ ಕೌಂಟ್ ಗಳು ಮೊದಲಿಗೆ ಹ್ಯಾಕ್ ಆಗಿವೆ. ಸೋರಿಕೆಯಾಗಿರುವ ಪಾಸ್ ವರ್ಡ್ ಗಳೆಲ್ಲ ಮೂರು ವರ್ಷ ಹಳೆಯದಾಗಿವೆ ಎಂದು ತಿಳಿದು ಬಂದಿದೆ.ಸುಮಾರು 50 ಲಕ್ಷದಷ್ಟು ಗೂಗಲ್ ಅಕೌಂಟ್ ಗಳೂ ಹ್ಯಾಕ್ ಆಗಿವೆ ಎಂಬ ಮಾಹಿತಿ ಲಭ್ಯವಾಗಿದೆ. ಹಲವಾರು ಜಿಮೇಲ್ ನ ಯೂಸರ್ ನೇಮ್ ಮತ್ತು ಪಾಸ್ವರ್ಡ್ ಗಳ ಸಂಪೂರ್ಣ ಮಾಹಿತಿ ರಷ್ಯಾದ ಭದ್ರತಾ ವೇದಿಕೆ ಬಿಟ್ ಕಾಯಿನ್ ನಲ್ಲಿ ಬಹಿರಂಗವಾಗಿದೆ.

5 Million Gmail Accounts Hacked Password leaked

ಗೂಗಲ್ ಸಂಸ್ಥೆ ಈ ಸುದ್ದಿಯನ್ನ ನಿರಾಕರಿಸಿದೆ. ತನ್ನ ಬಳಕೆದಾರರ ಅಕೌಂಟ್ ಹ್ಯಾಕ್ ಆಗಿಲ್ಲ ಎಂದು ಗೂಗಲ್ ಸ್ಪಷ್ಟಪಡಿಸಿದೆ. ಆದರೂ, ನಿಮ್ಮ ಗೂಗಲ್ ಖಾತೆಯ ಸುರಕ್ಷತೆ ಬಗ್ಗೆ ತಿಳಿಯಲು ಇಂಟರ್ನೆಟ್ ನಲ್ಲಿ isleaked.com ವೆಬ್ ಸೈಟ್ ನಲ್ಲಿ ಪರೀಕ್ಷಿಸಬಹುದು. ಅಲ್ಲದೆ, ಗೂಗಲ್ ನ ಎರಡು ಮಟ್ಟದ ಸೆಕ್ಯುರಿಟಿ ಪಾಸ್ ವರ್ಡ್ ಬದಲಾವಣೆ ಮಾರ್ಗ ಅನುಸರಿಸಿ ನಿಮ್ಮ ಖಾತೆಯ ಪಾಸ್ ವರ್ಡ್ ತಕ್ಷಣವೇ ಬದಲಾಯಿಸಿಕೊಳ್ಳಿ ಎಂದು ಸೂಚಿಸಿದ್ದಾರೆ.

ಇತ್ತೀಚೆಗೆ 4.6 ಮಿಲಿಯನ್ Mail.ru ಹಾಗೂ 1.25 ಮಿಲಿಯನ್ ಯಾಂಡೆಕ್ಸ್ ಇಮೇಲ್ ಇನ್ ಬ್ಯಾಕ್ಸ್ ಗಳು ಹ್ಯಾಕ್ ಆಗಿದ್ದ ಸುದ್ದಿ ಬಂದ ಬೆನ್ನಲ್ಲೇ ಗೂಗಲ್ ಇ ಮೇಲ್ ಸೇವೆಯ ಮೇಲೆ ಅತಿಕ್ರಮಿಗಳ ಕಣ್ಣು ಬಿದ್ದಿರುವ ಸುದ್ದಿ ಬಂದಿದೆ.

English summary
Nearly five million usernames and passwords associated with Google Gmail accounts were hacked and leaked Tuesday on a Russian Bitcoin security forum.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X