ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

PM SVANidhi: 27.34 ಲಕ್ಷ ಬೀದಿ ಬದಿ ವ್ಯಾಪಾರಿಗಳಿಂದ ಸಾಲಕ್ಕಾಗಿ ಅರ್ಜಿ

|
Google Oneindia Kannada News

ನವದೆಹಲಿ, ನವೆಂಬರ್ 19: ಆತ್ಮ ನಿರ್ಭರ ಘೋಷಣೆಯಡಿ ವಾರ್ಷಿಕ ರೂ. 10 ಸಾವಿರ ಸಾಲ ಸೌಲಭ್ಯ ಯೋಜನೆಯಾದ ಪಿಎಂ ಸ್ಟ್ರೀಟ್ ವೆಂಡರ್ಸ್ ಆತ್ಮ-ನಿರ್ಭರ್ ನಿಧಿ (PM SVANidhi) ಅಡಿಯಲ್ಲಿ ಸುಮಾರು 27.34 ಲಕ್ಷ ಬೀದಿ ಬದಿ ವ್ಯಾಪಾರಿಗಳು ಈವರೆಗೆ ಸರ್ಕಾರಕ್ಕೆ ಅರ್ಜಿ ಸಲ್ಲಿಸಿದ್ದಾರೆ.

ಒಟ್ಟು ಅರ್ಜಿ ಸಲ್ಲಿಸಿದರವ ಪೈಕಿ, ಈವರೆಗೆ 14.35 ಲಕ್ಷ ಅರ್ಜಿಗಳನ್ನು ಮಂಜೂರು ಮಾಡಲಾಗಿದ್ದು, ಸುಮಾರು 7.89 ಲಕ್ಷ ಸಾಲಗಳಿಗೆ , 773.6 ಕೋಟಿ ರೂ.ಗಳನ್ನು ಫಲಾನುಭವಿಗಳಿಗೆ ವಿತರಿಸಲಾಗಿದೆ ಎಂದು ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯ ತಿಳಿಸಿದೆ. ಈ ಯೋಜನೆಯಡಿ 50 ಲಕ್ಷ ಬೀದಿ ಬದಿ ವ್ಯಾಪಾರಿಗಳಿಗೆ ಈ ಪ್ರಯೋಜನವನ್ನು ವಿಸ್ತರಿಸುವ ಗುರಿ ಸರ್ಕಾರ ಹೊಂದಿದೆ.

ಸರ್ಕಾರದ ಅಂಕಿಅಂಶಗಳ ಪ್ರಕಾರ, ಈ ಸಾಲ ಪಡೆದ ಅರ್ಧಕ್ಕಿಂತ ಹೆಚ್ಚು ಫಲಾನುಭವಿಗಳು ಉತ್ತರ ಪ್ರದೇಶ ಮತ್ತು ಮಧ್ಯಪ್ರದೇಶದವರು. ಯುಪಿಯಲ್ಲಿ 2.93 ಲಕ್ಷ ಫಲಾನುಭವಿಗಳು ಸಾಲ ಪಡೆದಿದ್ದರೆ, ಇನ್ನೂ 1.53 ಲಕ್ಷ ಫಲಾನುಭವಿಗಳು ಮಧ್ಯಪ್ರದೇಶದವರಾಗಿದ್ದಾರೆ. ಸುಮಾರು ಶೇ. 90ರಷ್ಟು ಸಾಲವನ್ನು ಸಾರ್ವಜನಿಕ ವಲಯದ ಬ್ಯಾಂಕುಗಳು ವಿತರಿಸಿದ್ದು, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಮುನ್ನಡೆ ಸಾಧಿಸಿದೆ.

Nearly 27.34 lakh street vendors apply for loan under PM Scheme

ಕೋವಿಡ್ -19 ಲಾಕ್‌ಡೌನ್‌ನಿಂದಾಗಿ ತಮ್ಮ ಸ್ವಂತ ಊರುಗಳಿಗೆ ತೆರಳಿದ್ದ ಮಾರಾಟಗಾರರು ಹಿಂದಿರುಗಿದ ನಂತರ ಸಾಲಕ್ಕೆ ಅರ್ಹರಾಗಿರುತ್ತಾರೆ.

"ಯಾವುದೇ ಸಾಮಾನ್ಯ ಸೇವಾ ಕೇಂದ್ರ ಅಥವಾ ಪುರಸಭೆ ಕಚೇರಿಯಲ್ಲಿ ಅಥವಾ ಬ್ಯಾಂಕ್‌ಗೆ ಹೋಗುವ ಮೂಲಕ ಆನ್‌ಲೈನ್‌ನಲ್ಲಿ ಅರ್ಜಿಯನ್ನು ಸ್ವಂತವಾಗಿ ಅಪ್‌ಲೋಡ್ ಮಾಡಿಕೊಳ್ಳುವು ಸೌಲಭ್ಯವಿರುವುದರಿಂದ ಸಾಲ ಒದಗಿಸುವಿಕೆಯು ತೊಂದರೆಯಿಲ್ಲದಂತಾಗಿದೆ" ಎಂದು ಸಚಿವಾಲಯ ತಿಳಿಸಿದೆ.

ಅರ್ಜಿದಾರರಿಗೆ ತಮ್ಮ ಉದ್ಯಮಗಳನ್ನು ಪ್ರಾರಂಭಿಸಲು ಸಹಾಯ ಮಾಡಲು ಸಾಲವನ್ನು ಒದಗಿಸಲು ಬ್ಯಾಂಕುಗಳು ಮನೆ ಬಾಗಿಲಿಗೆ ತಲುಪುತ್ತಿವೆ. ಈ ಯೋಜನೆಯು ಡಿಜಿಟಲ್ ವಹಿವಾಟುಗಳಾದ ರಶೀದಿ ಮತ್ತು ಪಾವತಿಗಳನ್ನು ಯುಪಿಐ, ಕ್ಯೂಆರ್-ಕೋಡ್ಸ್ ಆಫ್ ಪೇಮೆಂಟ್ ಅಗ್ರಿಗೇಟರ್ಸ್ ಮತ್ತು ರುಪೇ ಪೇ ಡೆಬಿಟ್ ಕಾರ್ಡ್‌ಗಳನ್ನು ಬೀದಿ ಬದಿ ವ್ಯಾಪಾರಿಗಳಿಂದ ಮಾಸಿಕ ಕ್ಯಾಶ್ ಬ್ಯಾಕ್ ಮೂಲಕ ಉತ್ತೇಜಿಸುತ್ತಿವೆ.

English summary
Nearly 27.34 lakh street vendors have applied to avail Rs 10,000 subsidised loan each from the government under the PM Street vendor's, a special micro-credit facility scheme.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X