ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಾಲದ ಸುಳಿಯಲ್ಲಿರುವ ಐಎಲ್ ಆಂಡ್ ಎಫ್ಎಸ್ ಕಂಪೆನಿ ಸೂಪರ್‌ಸೀಡ್

|
Google Oneindia Kannada News

ನವದೆಹಲಿ, ಅಕ್ಟೊಬರ್ 1: ಸಾಲದ ಸುಳಿಯಲ್ಲಿ ಸಿಲುಕಿರುವ ಇನ್‌ಫ್ರಾಸ್ಟ್ರಕ್ಚರ್ ಲೀಸಿಂಗ್ ಆಂಡ್ ಫೈನಾನ್ಷಿಯಲ್ ಸರ್ವೀಸಸ್ ಲಿಮಿಟೆಡ್ (ಐಎಲ್&ಎಫ್ಎಸ್) ಮಂಡಳಿಯನ್ನು ವಜಾಗೊಳಿಸಲು ರಾಷ್ಟ್ರೀಯ ಕಂಪೆನಿ ಕಾನೂನು ನ್ಯಾಯ ಮಂಡಳಿ (ಎನ್‌ಸಿಎಲ್‌ಟಿ) ಆದೇಶಿಸಿದೆ.

ಅಲ್ಲದೆ, ತಕ್ಷಣದಿಂದಲೇ ಹಣಕಾಸು ಸಂಸ್ಥೆಯ ಆಡಳಿತ ನಿರ್ವಹಿಸಲು ಸರ್ಕಾರದಿಂದ ನೇಮಕವಾದ ಆರು ಸದಸ್ಯರ ತಂಡದ ನೂತನ ಮಂಡಳಿಗೆ ಅನುಮತಿ ನೀಡಿದೆ.

ಐಎಲ್&ಎಫ್ಎಸ್‌ನ ಹಾಲಿ ಮಂಡಳಿಯ ಮುಂದುವರಿಕೆಯು ಸಾರ್ವಜನಿಕ ಹಿತಾಸಕ್ತಿಗೆ ತೊಡಕುಂಟುಮಾಡಲಿದೆ ಎಂಬ ಸರ್ಕಾರದ ವಾದವನ್ನು ಒಪ್ಪಿಕೊಂಡ ನ್ಯಾಯಮಂಡಳಿ, ಸಂಸ್ಥೆಯನ್ನು ಸೂಪರ್‌ಸೀಡ್ ಮಾಡುವ ಉದ್ದೇಶಕ್ಕೆ ಸಮ್ಮತಿ ಸೂಚಿಸಿತು.

ಸ್ಟೇಟ್ ಬ್ಯಾಂಕ್ ಗ್ರಾಹಕರಿಗೆ ದೊಡ್ಡ ಶಾಕ್: ಎಟಿಎಂ ವಿತ್ ಡ್ರಾ ಮಿತಿಯಲ್ಲಿ ಭಾರೀ ಕಡಿತಸ್ಟೇಟ್ ಬ್ಯಾಂಕ್ ಗ್ರಾಹಕರಿಗೆ ದೊಡ್ಡ ಶಾಕ್: ಎಟಿಎಂ ವಿತ್ ಡ್ರಾ ಮಿತಿಯಲ್ಲಿ ಭಾರೀ ಕಡಿತ

ಅಮಾನತ್ತಾಡ ಆಡಳಿತ ಮಂಡಳಿಯು ಇನ್ನುಮುಂದೆ ಎಲ್ಲಿಯೂ ಕಂಪೆನಿಯನ್ನು ಪ್ರತಿನಿಧಿಸುವಂತಿಲ್ಲ ಎಂದು ನ್ಯಾಯಮಂಡಳಿ ಆದೇಶಿಸಿದೆ.

ಐಎಲ್&ಎಫ್ಎಸ್ ಪರಿಸ್ಥಿತಿಯ ಮೇಲೆ ನಿಗಾ ಇರಿಸಿದ್ದು, ಹಣಕಾಸು ವ್ಯವಸ್ಥೆ ಮೇಲೆ ಯಾವುದೇ ಕೆಟ್ಟ ಪರಿಣಾಮ ಉಂಟಾಗದಂತೆ ನೋಡಿಕೊಳ್ಳಲು ಸೂಕ್ತ ಕ್ರಮ ತೆಗೆದುಕೊಳ್ಳುವುದಾಗಿ ಕೇಂದ್ರ ಸರ್ಕಾರ ಸೂಚಿಸಿತ್ತು.

ಯಾರು ಸದಸ್ಯರು?

ಯಾರು ಸದಸ್ಯರು?

ಸರ್ಕಾರದಿಂದ ನೇಮಕವಾದ ನೂತನ ಐಎಲ್&ಎಫ್ಎಸ್ ಮಂಡಳಿಯಲ್ಲಿ ಖ್ಯಾತ ಉದ್ಯಮಿ ಉದಯ್ ಕೋಟಕ್, ವಿನೀತ್ ನಾಯರ್, ಜೆ.ಸಿ. ಚತುರ್ವೇದಿ, ಡಾ. ಮಾಲಿನಿ ಶಂಕರ್, ಜಿ.ಎನ್. ಬಾಜ್ಪೈ ಮತ್ತು ನಂದಕಿಶೋರ್ ಸದಸ್ಯರಾಗಿದ್ದಾರೆ.

ನೂತನವಾಗಿ ರಚಿಸಿರುವ ಮಂಡಳಿಯು ಅಕ್ಟೋಬರ್ 8ರಂದು ಮೊದಲ ಸಭೆ ನಡೆಸಲಿದೆ.

ಬಂಧನ್ ಬ್ಯಾಂಕ್ ನಿಂದ ಹೊಸ ಶಾಖೆ ಆರಂಭಿಸುವಂತಿಲ್ಲ ಎಂದ ಆರ್ ಬಿಐಬಂಧನ್ ಬ್ಯಾಂಕ್ ನಿಂದ ಹೊಸ ಶಾಖೆ ಆರಂಭಿಸುವಂತಿಲ್ಲ ಎಂದ ಆರ್ ಬಿಐ

90 ಸಾವಿರ ಕೋಟಿ ಸಾಲ

ಐಎಲ್&ಎಫ್ಎಸ್ 90 ಸಾವಿರ ಕೋಟಿಗೂ ಹೆಚ್ಚಿನ ಸಾಲ ಹೊಂದಿದೆ. ಭಾರತೀಯ ಜೀವ ವಿಮಾ ನಿಗಮ (ಎಲ್‌ಐಸಿ), ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ) ಮತ್ತು ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ ಐಎಲ್&ಎಫ್ಎಸ್‌ನ ಪ್ರಮುಖ ಷೇರುದಾರ ಕಂಪೆನಿಗಳಾಗಿವೆ. ಇದರಲ್ಲಿ ಎಲ್‌ಐಸಿ ಅತಿ ದೊಡ್ಡ ಷೇರು ಪಾಲುದಾರಿಕೆ ಹೊಂದಿದ್ದು, ಶೇ 25.34ರಷ್ಟು ಷೇರನ್ನು ಹೊಂದಿದೆ.

ನೀರವ್ ಮೋದಿ ವಿರುದ್ಧ ಹಾಂಗ್ ಕಾಂಗ್ ನಲ್ಲಿ ವಂಚನೆ ಕೇಸ್ ನೀರವ್ ಮೋದಿ ವಿರುದ್ಧ ಹಾಂಗ್ ಕಾಂಗ್ ನಲ್ಲಿ ವಂಚನೆ ಕೇಸ್

ಡಿ ರೇಟಿಂಗ್ ಪಡೆದ ಕಂಪೆನಿ

ಡಿ ರೇಟಿಂಗ್ ಪಡೆದ ಕಂಪೆನಿ

ಸೆಪ್ಟೆಂಬರ್ ತಿಂಗಳಿನಲ್ಲಿ ಬ್ಯಾಂಕುಗಳಿಗೆ ಮತ್ತು ಬ್ಯಾಂಕೇತರ ಹಣಕಾಸು ಸಂಸ್ಥೆಗಳಿಗೆ ಪಾವತಿಸಬೇಕಾದ ಸಾಲದ ಹಣವನ್ನು ಪಾವತಿ ಮಾಡುವುದು ಐಎಲ್&ಎಫ್ಎಸ್‌ಗೆ ಸಾಧ್ಯವಾಗಿರಲಿಲ್ಲ.

ಒಂದು ಕಾಲದಲ್ಲಿ ಅತ್ಯುತ್ತಮ ಆರ್ಥಿಕ ವ್ಯವಹಾರಗಳಿಂದ ಎಎಎ+ ರೇಟಿಂಗ್ ಹೊಂದಿದ್ದ ಸಮೂಹಕ್ಕೆ ರೇಟಿಂಗ್ ಏಜೆನ್ಸಿಗಳು ಎಂಟು ಹಂತಗಳು 'ಡಿ' ರೇಟಿಂಗ್ ನೀಡಿದ್ದವು. ಸುಸ್ತಿದಾರ ಎನಿಸಿಕೊಂಡಿರುವ ಸಮೂಹ ತೀವ್ರ ಸಂಕಷ್ಟಕ್ಕೆ ಸಿಲುಕಿತ್ತು.

ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸಲು ಅಕ್ಟೋಬರ್ 15ರ ವರೆಗೆ ಕಾಲಾವಕಾಶಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸಲು ಅಕ್ಟೋಬರ್ 15ರ ವರೆಗೆ ಕಾಲಾವಕಾಶ

Array

ಇನ್‌ಫ್ರಾಸ್ಟ್ರಕ್ಚರ್ ಲೀಸಿಂಗ್ ಆಂಡ್ ಫೈನಾನ್ಷಿಯಲ್ ಸರ್ವೀಸಸ್ ಲಿಮಿಟೆಡ್, ಭಾರತೀಯ ಮೂಲಸೌಕರ್ಯ ಅಭಿವೃದ್ಧಿ ಮತ್ತು ಹಣಕಾಸು ಕಂಪೆನಿಯಾಗಿದೆ. ಇದರ ಅಡಿಯಲ್ಲಿ ಹಣಕಾಸು ಹಾಗೂ ಮೂಲಸೌಕರ್ಯಕ್ಕೆ ಸಂಬಂಧಿಸಿದಂತೆ 250ಕ್ಕೂ ಅಧಿಕ ಸಂಸ್ಥೆಗಳು ಕಾರ್ಯನಿರ್ವಹಿಸುತ್ತಿವೆ.

ಪ್ರಮುಖ ಮೂಲಸೌಕರ್ಯ ಯೋಜನೆಗಳಿಗೆ ಹಣಕಾಸು ಮತ್ತು ಸಾಲದ ನೆರವು ಒದಗಿಸುವ ಸಲುವಾಗಿ 1987ರಲ್ಲಿ ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ, ಗೃಹ ಅಭಿವೃದ್ಧಿ ಹಣಕಾಸು ನಿಗಮ (ಎಚ್‌ಡಿಎಫ್‌ಸಿ) ಮತ್ತು ಯುನಿಟ್ ಟ್ರಸ್ಟ್ ಆಫ್ ಇಂಡಿಯಾ (ಯುಟಿಐ) ಹಣಕಾಸು ಸಂಸ್ಥೆಗಳು ಭಾರತ ಸರ್ಕಾರದ ಸ್ವಾಮ್ಯದಲ್ಲಿ 'ಆರ್‌ಬಿಐ ರಿಜಿಸ್ಟರ್ಡ್ ಕೋರ್ ಇನ್ವೆಸ್ಟ್‌ಮೆಂಟ್ ಕಂಪೆನಿ' ಹೆಸರಿನಲ್ಲಿ ಐಎಲ್&ಎಫ್ಎಸ್ ಆರಂಭವಾಗಿತ್ತು.

ಇದು ದೀರ್ಘಾವಧಿ ಮತ್ತು ಬಹುದೀರ್ಘಾವಧಿ ಸಾಲಗಳನ್ನು ಒದಗಿಸುತ್ತಿತ್ತು. ವಿವಿಧ ಯೋಜನೆಗಳಿಗೆ ಸಾಲ ನೀಡಲು ಬ್ಯಾಂಕೇತರ ಹಣಕಾಸು ಸಂಸ್ಥೆಗಳಿಂದ ಪಡೆದುಕೊಂಡಿದ್ದ ಅಲ್ಪಾವಧಿ ಸಾಲವನ್ನು ಸಕಾಲದಲ್ಲಿ ಮರುಪಾವತಿ ಮಾಡುವುದು ಕಂಪೆನಿಗೆ ಸಾಧ್ಯವಾಗಿಲ್ಲ.

English summary
The National Company Law Tribunal (NCLT) ordered suspension of the IL&FS board and allowed six members new board which include Uday Kotak to take controll of the company.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X