ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನರ್ಮದಾ ಒಡಲು ಬರಿದು ಮಾಡುತ್ತಿರುವ ಕೋಲಾ

By Mahesh
|
Google Oneindia Kannada News

ಅಹಮದಾಬಾದ್‌, ಸೆ.11: ನರ್ಮದಾ ನದಿ ಕಾಲುವೆಯ ನೀರನ್ನು ಬಳಸಿಕೊಂಡು ಅಮೆರಿಕದ ತಂಪು ಪಾನೀಯ ತಯಾರಾಕಾ ಸಂಸ್ಥೆ ಕೋಕಾಕೋಲಾ ತನ್ನ ಬಾಟಲಿ ತುಂಬಿಸಿಕೊಳ್ಳುತ್ತಿದೆ. ಈಗಾಗಲೇ ನರ್ಮದಾ ನದಿ ನೀರನ್ನು ವಿವಿಧ ಕೈಗಾರಿಕಾ ಸಂಸ್ಥೆಗಳು ಖಾಲಿ ಮಾಡುತ್ತಿರುವುದರಿಂದ ನರ್ಮದಾ ಒಡಲು ಬರಿದಾಗುವ ಕಾಲ ದೂರಿಲ್ಲ ಎಂದು ಪರಿಸರವಾದಿಗಳು ಆತಂಕ ವ್ಯಕ್ತಪಡಿಸಿದ್ದಾರೆ.

ಗುಜರಾತಿನ ಸಾನಂದ್‌ನಲ್ಲಿ ಆರಂಭಗೊಳ್ಳಲಿರುವ ಅಮೆರಿಕದ ಕೋಕಾ ಕೋಲಾ ಕಂಪನಿ ಘಟಕಕ್ಕೆ ಪ್ರತಿ ದಿನ 30 ದಶಲಕ್ಷ ಲೀ. ನೀರು ಸರಬರಾಜು ಮಾಡಬೇಕಾಗುತ್ತದೆ. ಸುಅಮರು 500 ಕೋಟಿ ರೂ. ವೆಚ್ಚದ ಈ ಘಟಕಕ್ಕೆ ನರ್ಮದಾ ನದಿ ನೀರೇ ಮೂಲವಾಗಿದೆ.

ಕೋಕಾ ಕೋಲಾ ಸಂಸ್ಥೆಯ ಬಾಟ್ಲಿಂಗ್ ಪಾಲುದಾರ ಸಂಸ್ಥೆಯಾದ ಹಿಂದೂಸ್ತಾನ್ ಕೋಕಾ ಕೋಲಾ ಬಿವರೇಜರ್ಸ್ ಪ್ರೈ ಲಿ(HCCBPL) ಸಂಸ್ಥೆ ತನ್ನ ಘಟಕದಲ್ಲಿ ಕೋಕ್, ಸ್ಪ್ರೈಟ್, ಫಾಂಟಾ, ಥಮ್ಸ್ ಅಪ್ ಮುಂತಾದ ಪೇಯಗಳನ್ನು ತಯಾರಿಸಲಿದೆ.[ನರ್ಮದಾ ಅಣೆಕಟ್ಟು ಎತ್ತರ ಏರಿಕೆ, ಲಕ್ಷಾಂತರ ಮಂದಿಗೆ ಸಂಕಷ್ಟ]

ಈ ಘಟಕವು ಸುಮಾರು 3 ಮಿಲಿಯನ್ ಲೀಟರ್ ನೀರು ಪ್ರತಿ ದಿನ (MLD) ಬಳಕೆ ಮಾಡಿಕೊಳ್ಳಲಿದೆ. ಸುಮಾರು 5 MLD ನೀರು ಬಳಕೆಗೆ ಸಂಸ್ಥೆ ಮನವಿ ಸಲ್ಲಿಸಿತ್ತು ಎಂದು ರಾಜ್ಯ ಸರ್ಕಾರ ಹೇಳಿದೆ. ಈಗಾಗಲೇ ಸನಂದ್ ನಲ್ಲಿ ಕಾರ್ಯ ನಿರ್ವಹಿಸುತ್ತಿರುವ ಕೈಗಾರಿಕಾ ಸಂಸ್ಥೆಗಳು ಬಳಸುತ್ತಿರುವ ನೀರಿನ ಪ್ರಮಾಣಕ್ಕೆ ಹೋಲಿಸಿದರೆ ಕೋಕಾ ಕೋಲಾ ಸಂಸ್ಥೆ ಅಧಿಕ ಪ್ರಮಾಣದಲ್ಲಿ ನೀರು ಬಳಕೆ ಮಾಡುತ್ತಿದೆ.

Narmada waters to fuel Coca Cola’s new bottling plant at Sanand

ತ್ಯಾಜ್ಯ ನಿರ್ವಹಣೆ ಬಗ್ಗೆ ಮಾತಿಲ್ಲ: ಯಥೇಚ್ಛವಾಗಿ ನೀರು ಬಳಕೆ ಅವಕಾಶ ಪಡೆದುಕೊಂಡಿರುವ ಕೋಕಾ ಕೋಲಾ ಕಂಪನಿ ತನ್ನ ಘಟಕದಿಂದ ವಿಸರ್ಜನೆಗೊಳ್ಳಲಿರುವ ತ್ಯಾಜ್ಯಗಳ ನಿರ್ವಹಣೆ ಬಗ್ಗೆ ಸ್ಪಷ್ಟನೆ ನೀಡಿಲ್ಲ. ಗುಜರಾತ್ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ(GPCB) ಕೋರಿಕೆ ಮೇರಿಗೆ ಶೂನ್ಯ ತ್ಯಾಜ್ಯ ಘಟಕೆ ಎಂಬ ಪ್ರಮಾಣ ಪತ್ರ ಪಡೆದುಕೊಂಡಿದೆ. ಅದರೆ, ಸ್ಥಳೀಯರು ಈ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಖೇದ ಜಿಲ್ಲೆಯಲ್ಲಿ ಈಗಾಗಲೇ ಬೃಹತ್ ಘಟಕ ಹೊಂದಿರುವ ಕೋಕಾ ಕೋಲಾ ಸುಮಾರು 500 ಕೋಟಿ ರು ವೆಚ್ಚದಲ್ಲಿ ತನ್ನ ಯೋಜನೆ ವಿಸ್ತರಣೆ ಮಾಡುತ್ತಿದೆ. ಸನಂದ್ ಘಟಕದಿಂದ ಪ್ರತಿದಿನ 450 ಕೆಜಿಯಷ್ಟು ತ್ಯಾಜ್ಯ ಹೊರಬೀಳಲಿದೆ ಎಂಬ ಅಂದಾಜು ಸಿಕ್ಕಿದೆ. ಇದರ ನಿರ್ವಹಣೆ ಬಗ್ಗೆ ಕೋಕಾ ಕೋಲಾ ಸಂಸ್ಥೆ ಇನ್ನೂ ಪ್ರತಿಕ್ರಿಯೆ ನೀಡಬೇಕಿದೆ.

ಸನಂದ್ ನಲ್ಲಿ ಸುಮಾರು 20 MLD ಯಷ್ಟು ನರ್ಮದಾ ನದಿ ನೀರನ್ನು ಟಾಟಾ ಮೋಟರ್ಸ್ ಹಾಗೂ ಫೋರ್ಡ್ ಮೋಟರ್ಸ್ ಸಂಸ್ಥೆ ಬಳಸಿಕೊಳ್ಳುತ್ತಿದೆ. ಒಟ್ಟಾರೆ ಕೈಗಾರಿಕಾ ವಸಾಹತುಗಳು 90 MLD ನೀರು ಬಳಸಲು ಸರ್ಕಾರ ಅನುಮತಿ ನೀಡಿದೆ. ಕೋಕಾ ಕೋಲಾ ಒಟ್ಟಾರೆ 24ಕ್ಕೂ ಅಧಿಕ ಉತ್ಪಾದನಾ ಘಟಕಗಳನ್ನು ಹೊಂದಿದ್ದು, ತಂಪು ಪಾನೀಯ ಮಾರುಕಟ್ಟೆಯಲ್ಲಿ 2020ರ ಹೊತ್ತಿಗೆ ಜಾಗತಿಕವಾಗಿ ಭಾರತ ಉನ್ನತ ಸ್ಥಾನಕ್ಕೇರಲಿದೆ ಎಂದು ಕೋಕಾ ಕೋಲಾ ಸಂಸ್ಥೆ ಹೇಳಿಕೊಂಡಿದೆ. ಅದರೆ, ಆ ವೇಳೆಗೆ ನರ್ಮದಾ ನದಿ ನೀರಿನ ಕಥೆ ಏನಾಗುವುದೋ ಗೊತ್ತಿಲ್ಲ.

English summary
Water sourced from the Narmada river has been allocated to US multinational soft-drink maker Coca Cola to manufacture soft-drinks at the company’s new Rs 500 crore bottling plant that is coming up at Sanand, near Ahmedabad, sources in the state government said.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X