ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇನ್ಫಿ ನಾರಾಯಣ ಮೂರ್ತಿಗೆ ಜಾಗತಿಕ ನಾಯಕತ್ವ ಪ್ರಶಸ್ತಿ

By Mahesh
|
Google Oneindia Kannada News

ಬೆಂಗಳೂರು, ಸೆಪ್ಟೆಂಬರ್ 4 : ಇನ್ಫೋಸಿಸ್ ಸಹ ಸ್ಥಾಪಕ ಎನ್.ಆರ್. ನಾರಾಯಣಮೂರ್ತಿ ಮತ್ತು ಮುಂಬೈ ಮೂಲಕ ವಿಜ್ಞಾನಿ ವೀಣಾ ಸಹಜ್ ವಾಲಾ ಅವರು ಪ್ರತಿಷ್ಠಿತ ಪ್ಲಸ್ ಅಲೈಯನ್ಸ್ ಬಹುಮಾನವನ್ನು ನವೀನ ಸಂಶೋಧನೆ, ಶೈಕ್ಷಣಿಕ ಸಾಧನೆ, ಜಾಗತಿಕ ನಾಯಕತ್ವಕ್ಕಾಗಿ ನೀಡಲಾಗುತ್ತದೆ. ನಾರಾಯಣಮೂರ್ತಿ ಅವರ ಪರವಾಗಿ ಅವರ ಪುತ್ರಿ ಅಕ್ಷತಾ ಅವರು ಪ್ರಶಸ್ತಿ ಸ್ವೀಕರಿಸಿದರು.

ಇನ್ಫೋಸಿಸ್ ಗೆ ಬಂದ ನಿಲೇಕಣಿಗೆ ಮೂರ್ತಿ ಹೇಳಿದ ಕಿವಿಮಾತೇನು?ಇನ್ಫೋಸಿಸ್ ಗೆ ಬಂದ ನಿಲೇಕಣಿಗೆ ಮೂರ್ತಿ ಹೇಳಿದ ಕಿವಿಮಾತೇನು?

ಬಹುಮಾನದ ಮೊತ್ತ ಒಟ್ಟು 50,000 ಅಮೆರಿಕ ಡಾಲರ್ ಆಗಿದ್ದು, ಎರಡು ವರ್ಗದಲ್ಲಿ ಅಂದರೆ ಶೈಕ್ಷಣಿಕ ಸಾಧನೆ ಮತ್ತು ಸಂಶೋಧನೆ ಅನ್ವೇಷಣೆಗೆ ಸ್ಥಾಪಿಸಲಾಗಿದೆ. ಇಬ್ಬರೂ ವಿಜೇತರನ್ನು ಅಭಿವೃದ್ಧಿ ಮತ್ತು ಜಾಗತಿಕ ವಿಷಯಗಳಿಗೆ ಅನ್ವಯಿಸಿ ನವೀನ ಪರಿಕ್ರಮಗಳನ್ನು ಸ್ಥಾಪಿಸಿದ್ದಕ್ಕಾಗಿ ಸ್ಥಾಪಿಸಲಾಯಿತು.

 Narayana Murthy, Veena Sahajwalla win top global honour for Leadership, Research Innovation

ಮೂರ್ತಿ ಅವರಿಗೆ ಪ್ಲಸ್ ಅಲೈಯನ್ಸ್ ಪ್ರೈಜ್ ಅನ್ನು ಜಾಗತಿಕ ನಾಯಕತ್ವಕ್ಕಾಗಿ ಹಾಗೂ ಪ್ರೊ. ಸಹಜ್ ವಾಲಾ ಅವರಿಗೆ ಪ್ಲಸ್ ಅಲೈಯನ್ಸ್ ಪ್ರೈಜ್ ಅನ್ನು ಸಂಶೋಧನೆ ನವೀನತೆಗಾಗಿ ದ ನ್ಯೂ ಸೈನ್ಸ್ ಆಫ್ ಗ್ರೀನ್ ಮ್ಯಾನುಫ್ಯಾಕ್ಚರಿಂಗ್' ಯೋಜನೆಗಾಗಿ ನೀಡಲಾಗಿದೆ.

ಈ ಪ್ರಶಸ್ತಿಯನ್ನು ಮೂರ್ತಿ ಮತ್ತು ಪ್ರೊ. ಸಹಜ್ ವಾಲಾ ಇತರೆ ವಿಜೇತರಿಗೆ ಪ್ರೊ. ಸರ್ ಮ್ಯಾಲ್ಕಂ ಗ್ರಾಂಟ್, ಎನ್‍ಎಚ್‍ಎಸ್ ಇಂಗ್ಲೆಂಡ್ ಅಧ್ಯಕ್ಷ, ಪ್ಲಸ್ ಅಲೈಯನ್ಸ್ ಅಡ್ವೈಸರಿ ಬೋರ್ಡ್‍ನ ಅಧ್ಯಕ್ಷ ಅವರು ಲಂಡನ್‍ನಲ್ಲಿ ನಡೆದ ದ ವರ್ಲ್ಡ್ ಅಕಾಡೆಮಿಕ್ ಸಮ್ಮಿಟ್ ಕಾರ್ಯಕ್ರಮದಲ್ಲಿ ಪ್ರದಾನ ಮಾಡಿದರು.

ಪ್ಲಸ್ ಅಲೈಯನ್ಸ್ ಎಂಬುದು ಅರಿಜೋನಾ ಸ್ಟೇಟ್ ಯೂನಿವರ್ಸಿಟಿ, ಕಿಂಗ್ಸ್ ಕಾಲೇಜು ಲಂಡನ್ ಮತ್ತು ಯುಎನ್ ಎಸ್‍ಡಬ್ಲ್ಯೂ ಸಿಡ್ನಿಯಲ್ಲಿ ವಿಶೇಷ ಜಂಟಿ ಸಹಭಾಗಿತ್ವವಾಗಿದೆ. ಫೆಬ್ರುವರಿ 2016ರಲ್ಲಿ ಆರಂಭಿಸಿದ ಇದು ಸಂಶೋಧನಾ ಆಧಾರಿತ ಜಾಗತಿಕ ಸವಾಲುಗಳಿಗೆ ಸ್ಪಂದಿಸಲು ವಿಶ್ವದರ್ಜೆಯ ಕಲಿಕೆಗೆ ಉತ್ತೇಜನ ನೀಡಲಿದೆ.

ಭಾರತ, ಅಮೆರಿಕ, ಇಂಗ್ಲೆಂಡ್, ಆಸ್ಟ್ರೇಲಿಯಾದ ವಿಜೇತರನ್ನು ಜಾಗತಿಕವಾದ ಉದ್ಯಮದ ಪರಿಣಿತರು ಆಯ್ಕೆ ಮಾಡಿದರು. ಈ ಪರಿಣಿತ ತೀರ್ಪುಗಾರರಲ್ಲಿ ಲಿಂಕ್ಡ್ ಇನ್ ಉಪಾಧ್ಯಕ್ಷ ಎಲೆನ್ ಲೆವಿ (ಈಗ ಸಿಲಿಕಾನ್ ವ್ಯಾಲಿ ಕನೆಕ್ಟ್ ವ್ಯವಸ್ಥಾಪಕ ನಿರ್ದೇಶಕ, ಎನ್‍ಎಸ್‍ಡಬ್ಲ್ಯೂ ಮುಖ್ಯ ವಿಜ್ಞಾನಿ, ಎಂಜಿನಿಯರ್ ಮೆರಿ ಒ'ಕೇನ್, ಮಾಜಿ ಉಪಾಧ್ಯಕ್ಷ, ಜಿ.ಇ ಮೆಡಿಕಲ್, ಯುರೋಪ್, ಟಿಮೊಥಿ ಐರಿಶ್ ಮತ್ತು ಪ್ಲಸ್ ಅಲೈಯನ್ಸ್ ಯೂನಿವರ್ಸಿಟಿಯ ಮೂವರು ಅಧ್ಯಕ್ಷರು ಇದ್ದಾರೆ.

ಪ್ರಶಸ್ತಿ ಕುರಿತು ಪ್ರತಿಕ್ರಿಯಿಸಿದ ನಾರಾಯಣ ಮೂರ್ತಿ ಅವರು, ಮೂರು ಖ್ಯಾತ ವಿಶ್ವವಿದ್ಯಾಲಯಗಳಿಂದ ಜಾಗತಿಕ ನಾಯಕ ಎಂದು ಗುರುತಿಸಿಕೊಳ್ಳುವುದು ನಿಜಕ್ಕೂ ಸಂತಸದ ವಿಷಯ. ಈ ಮೂರು ವಿಶ್ವವಿದ್ಯಾಲಯಗಳು ಪ್ಲಸ್ ಅಲೈಯನ್ಸ್ ಅಡಿ ಒಟ್ಟುಗೂಡಿವೆ.

ನಾಯಕತ್ವ ಎಂಬುದು ನವೀನ ಅನ್ವೇಷಣೆಯಲ್ಲಿ ಪ್ರಮುಖ ಪಾತ್ರ ನಿರ್ವಹಿಸಲಿದೆ. ಹೊಸ ಅನ್ವೇಷಣೆಗಳು ಜಾಗತಿಕವಾಗಿ ಹೊಸ ಬದಲಾವಣೆ ತರಲಿದೆ ಎಂದು ತಿಳಿಸಿದರು.

ಸ್ಪಷ್ಟ ದೃಷ್ಟಿಕೋನಕ್ಕಾಗಿ ಹೆಸರಾಗಿರುವ ಮೂರ್ತಿ ಅವರಿಂದ ಅವರ ಕಂಪೆನಿಗಳು ದೊಡ್ಡ ಯಶಸ್ಸಿನ ಜೊತೆಗೆ ಭಾರತದಲ್ಲಿ ಮಾಹಿತಿ ತಂತ್ರಜ್ಞಾನದ ಅಲೆಯನ್ನೇ ಸೃಷ್ಟಿಸಿದೆ. ತೀರ್ಪುಗಾರರು ಇವರ ನಾಯಕತ್ವ ಮತ್ತು ದೂರದರ್ಶಿತ್ವ ಗುರುತಿಸಿ ಆಯ್ಕೆ ಮಾಡಿದ್ದಾರೆ. ಮುಖ್ಯವಾಗಿ ಇನ್ಫೋಸಿಸ್ ಸೈನ್ಸ್ ಫೌಂಡೇಷನ್ ಮುಖ್ಯವಾಗಿ ಯುವ ವಿಜ್ಞಾನಿಗಳಿಗೆ ಹೊಸ ಸಂಶೋಧನೆ, ಅನ್ವೇಷಣೆಗಳಿಗೆ ನೀಡುತ್ತಿರುವ ಆದ್ಯತೆಯನ್ನು ಪರಿಣಿಸಲಾಗಿದೆ ಎಂದು ಹೇಳಿದರು.

English summary
Infosys co-founder N.R Narayana Murthy and Mumbai-born scientist Veena Sahajwalla were among the recipients of the PLuS Alliance Prize ­– a prestigious honour that recognises Research Innovation, Education Innovation, Global Leadership and Global Innovation. The Prize of USD$50,000 was awarded in two categories; Education Innovation and Research Innovation.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X