• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಸೆಬಿ ಸಲಹಾ ಸಮಿತಿಗೆ ಇನ್ಫಿ ಮೂರ್ತಿ ಅಧ್ಯಕ್ಷ

|

ಬೆಂಗಳೂರು, ಮೇ. 23: ಹೊಸ ಹೊಸ ಉದ್ದಿಮೆ ಗಳ (ಸ್ಟಾರ್ಟ್‌ಅಪ್‌) ಸ್ಥಾಪನೆಗೆ ಮತ್ತು ಪರ್ಯಾಯ ಹೂಡಿಕೆಗೆ ಸಂಬಂಧಿಸಿ ಅಗತ್ಯ ಸಲಹೆ ನೀಡಲು ಭಾರತೀಯ ಷೇರುಪೇಟೆ ನಿಯಂತ್ರಣ ಮಂಡಳಿ (ಸೆಬಿ), ಇನ್ಫೋಸಿಸ್‌ ಸಹ ಸಂಸ್ಥಾಪಕ ಎನ್‌.ಆರ್‌.ನಾರಾಯಣ ಮೂರ್ತಿ ನೇತೃತ್ವದಲ್ಲಿ 18 ಸದಸ್ಯರ ಸಮಿತಿಯನ್ನು ರಚನೆ ಮಾಡಿದೆ.

ಸಲಹಾ ಸಮಿತಿಯಲ್ಲಿ ಸೆಬಿಯ ಹಿರಿಯ ಅಧಿಕಾರಿಗಳು, ಭಾರತೀಯ ರಿಸರ್ವ್‌ ಬ್ಯಾಂಕ್‌ (ಆರ್‌ಬಿಐ) ಮತ್ತು ಕೇಂದ್ರ ಹಣಕಾಸು ಸಚಿವಾಲಯದ ಅಧಿಕಾರಿಗಳು ಇರಲಿ ದ್ದಾರೆ. ಕೈಗಾರಿಕೆಗಳು, ಖಾಸಗಿ ಕಂಪನಿ ಗಳು ಮತ್ತು ಹೊಸ ಉದ್ದಿಮೆ ಅಥವಾ ಸಂಸ್ಥೆಗಳ ಪ್ರತಿನಿಧಿಗಳು ಸಮತಿಯ ಭಾಗವಾಗಿರಲಿದ್ದಾರೆ. [ಮೋದಿ ಸರ್ಕಾರಕ್ಕೆ ನಾರಾಯಣ ಮೂರ್ತಿ ಬಹುಪರಾಕ್]

ದೇಶದಲ್ಲಿ ಸ್ಟಾರ್ಟ್‌ಅಪ್‌ಗಳ ಸ್ಥಾಪನೆ ಮತ್ತು ಪರ್ಯಾಯ ಹೂಡಿಕೆಗೆ ಸಂಬಂಧಿ ಸಿದಂತೆ ಈ ಸಮಿತಿ ವರದಿ ಸಿದ್ಧಪಡಿಸಿ ಸೆಬಿಗೆ ಸಲ್ಲಿಸಲಿದೆ. ಮಾತ್ರವಲ್ಲ, ಪರ್ಯಾಯ ಹೂಡಿಕೆ ಉದ್ದಿಮೆಗಳ ಅಭಿವೃದ್ಧಿಗೆ ಇರುವ ಸಮಸ್ಯೆಗಳಿಗೂ ಸಲಹೆ-ಸೂಚನೆಗಳನ್ನು ನೀಡಲಿದೆ.[ಚುನಾವಣೆ ಗೆದ್ದ ರಿಷಿ, ಮಾವ ಇನ್ಫಿ ಮೂರ್ತಿ ಖುಷ್!]

ನಾರಾಯಣ ಮೂರ್ತಿ ಅವರ ನೇತೃತ್ವದ ಈ ಸಮಿತಿಯಲ್ಲಿ ಇಂಡಿಯನ್‌ ಪ್ರೈವೇಟ್‌ ಈಕ್ವಿಟಿ ಕ್ಯಾಪಿಟಲ್‌ ಅಸೋಸಿಯೇಷನ್‌ ಅಧ್ಯಕ್ಷ ಸಂಜಯ್‌ ನಾಯರ್‌, ಇಂಡಿಯನ್‌ ಏಂಜಲ್‌ ನೆಟ್‌ವರ್ಕ್‌ನ ಸೌರಭ್‌ ಶ್ರೀವಾಸ್ತವ್, ಪಿರಮಲ್‌ ಗ್ರೂಪ್‌ನ ಅಜಯ್‌ ಪಿರಮಲ್‌, ಕಾರ್ಲೈಲ್‌ ಗ್ರೂಪ್‌ನ ದೇವಿಂಜಿತ್ ಸಿಂಗ್‌ ಹಾಗೂ ಟಿಪಿಜಿ ಗ್ರೋತ್‌ ಇಂಡಿಯಾದ ಮನಿಷ್‌ ಚೋಖನಿ ಸದಸ್ಯರಾಗಿ ಕೆಲಸ ನಿರ್ವಹಿಸುವರು.

ಕೆಲ ದಿನಗಳ ಹಿಂದೆ ನಾರಾಯಣ ಮೂರ್ತಿ ಮೋದಿ ಸರ್ಕಾರದ ತೆರಿಗೆ ಪದ್ಧತಿಯನ್ನು ಶ್ಲಾಘಿಸಿದ್ದರು. ಅಲ್ಲದೇ ಬಂದರು ಮತ್ತು ವಿಮಾನ ನಿಲ್ದಾಣಗಳು ಖಾಸಗಿ ವ್ಯಾಪ್ತಿಗೆ ಸೇರಿದರೆ ಅಭಿವೃದ್ಧಿಗೆ ಹೆಚ್ಚಿನ ವೇಗ ದೊರೆಯಲಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದರು.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
SEBI roped in Narayana Murthy to head an 18 member panel which will oversee the implementation of ‘Alternate Investment Funds' program. Named as ‘The Alternative Investment Policy Advisory Committee ‘ or AIPAC, this team represents high profile members from the industry, private equity firms and start-ups, besides Government officials and regulatory members.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more