ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇನ್ಫೋಸಿಸ್ ಗೆ ಮತ್ತೆ ನಂದನ್ ನಿಲೇಕಣಿ ಸಾರಥಿ?

By Mahesh
|
Google Oneindia Kannada News

ಬೆಂಗಳೂರು, ಆಗಸ್ಟ್ 23: ಭಾರತದ ಎರಡನೇ ಅತಿದೊಡ್ಡ ಸಾಫ್ಟ್ ವೇರ್ ಸಂಸ್ಥೆಯಾದ ಬೆಂಗಳೂರು ಮೂಲದ ಇನ್ಫೋಸಿಸ್ ಸಂಸ್ಥೆಯ ಸಿಇಒ ಸ್ಥಾನಕ್ಕೆ ವಿಶಾಲ್ ಸಿಕ್ಕಾ ರಾಜೀನಾಮೆ ನೀಡಿದ್ದು ಹೂಡಿಕೆದಾರರಲ್ಲಿ ಅಸಮಾಧಾನ ಮೂಡಿಸಿದೆ.

ನಂದನ್ ನಿಲೇಕಣಿ ವ್ಯಕ್ತಿಚಿತ್ರ

ಈ ನಡುವೆ ಇನ್ಫೋಸಿಸ್ ಸಹ ಸ್ಥಾಪಕ ನಂದನ್ ನಿಲೇಕಣಿ ಅವರನ್ನು ಮತ್ತೆ ಸಂಸ್ಥೆಯ ಮುಖ್ಯಸ್ಥರನ್ನಾಗಿ ಕರೆ ತರಲು ಇನ್ಫೋಸಿಸ್ ನ ಬೋರ್ಡ್ ಮುಂದಾಗಿದೆ.

ಇನ್ಫೋಸಿಸ್ ಬೋರ್ಡ್ ನ ಸದಸ್ಯರು ಅಸಮಾಧಾನವನ್ನು ಇನ್ಫೋಸಿಸ್ ಸ್ಥಾಪಕ ಎನ್.ಆರ್ ನಾರಾಯಣ ಮೂರ್ತಿ ಅವರ ಮೇಲೆ ಹೇರಿದ್ದಾರೆ. ಬುಧವಾರ(ಆಗಸ್ಟ್ 23) ಹೂಡಿಕೆದಾರರನ್ನು ಉದ್ದೇಶಿಸಿ ನಾರಾಯಣ ಮೂರ್ತಿ ಅವರು ಮಾತನಾಡುವ ಕಾರ್ಯಕ್ರಮ ರದ್ದಾಗಿದೆ.

Nandan Nilekani Likely to Head Infosys Again

71 ವರ್ಷ ವಯಸ್ಸಿನ ನಾರಾಯಣ ಮೂರ್ತಿ ಅವರು ಬೋರ್ಡ್ ಸದಸ್ಯರ ವಿರೋಧ ಕಟ್ಟಿಕೊಳ್ಳದೆ ನಾಜೂಕಾಗಿ ವ್ಯವಹಾರ ಮುಗಿಸಿಕೊಳ್ಳುವ ಸಾಧ್ಯತೆಯಿದೆ.1981ರಲ್ಲಿ ಎನ್ ಆರ್ ನಾರಾಯಣ ಮೂರ್ತಿ ಅವರ ಜತೆಗೆ ನಂದನ್ ನಿಲೇಕಣಿ ಅವರು ಕೂಡಾ ಸಹ ಸ್ಥಾಪಕರಾಗಿ ಇನ್ಫೋಸಿಸ್ ಸ್ಥಾಪಿಸಿದರು.

2009ರಲ್ಲಿ ಯುಐಡಿಎಐ ಯೋಜನೆ ಅಥವಾ ಆಧಾರ್ ಕಾರ್ಡ್ ಯೋಜನೆ ಅನುಷ್ಠಾನದ ಚೇರ್ಮನ್ ಆಗಿ ನಂದನ್ ನಿಲೇಕಣಿ ಕಾರ್ಯನಿರ್ವಹಿಸಿದರು. ಹೀಗಾಗಿ, ಅನಿವಾರ್ಯವಾಗಿ ಇನ್ಫೋಸಿಸ್ ತೊರೆದರು.

7,700 ಕೋಟಿ ರೂ ಆಸ್ತಿಯ ಒಡೆಯ ನಂದನ್ ಅವರು ಇನ್ಫೋಸಿಸ್ ನ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿದ್ದವರು. ಯುಪಿಎ ಸರ್ಕಾರದ ಅವಧಿಯಲ್ಲಿ ಆಧಾರ್ ಚೇರ್ಮನ್ ಆಗಿ ಕ್ಯಾಬಿನೆಟ್ ದರ್ಜೆ ಸ್ಥಾನಮಾನ ಅಲಂಕರಿಸಿದವರು. ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಲು ಟಿಕೆಟ್ ಪಡೆದು ಭರ್ಜರಿಯಾಗಿ ಕ್ಯಾಂಪೇನ್ ಮಾಡಿದರೂ ಎಚ್ .ಎನ್ ಅನಂತ್ ಕುಮಾರ್ ಅವರು ಡಬ್ಬಲ್ ಹ್ಯಾಟ್ರಿಕ್ ತಪ್ಪಿಸಲು ಸಾಧ್ಯವಾಗ್ಲಿಲ್ಲ.

English summary
Nandan Nilekani is likely to be brought back at the helm of Infosys following the resignation of Vishal Sikka as CEO and MD.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X