ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರತನ್ ಟಾಟಾ ಉತ್ತರಾಧಿಕಾರಿಯಾಗಿ ಎನ್ ಚಂದ್ರಶೇಖರನ್

ಟಾಟಾ ಸಮೂಹ ಸಂಸ್ಥೆಯ ಟಾಟಾ ಸನ್ಸ್ ಚೇರ್ಮನ್ ಆಗಿ ಟಿಸಿಎಸ್ ನ ಸಿಇಒ ಎನ್ ಚಂದ್ರಶೇಖರನ್ ಆಯ್ಕೆಯಾಗಿದ್ದಾರೆ. ಈ ಮೂಲಕ ರತನ್ ಟಾಟಾ ಅವರ ಉತ್ತಾರಾಧಿಕಾರಿಯನ್ನು ಸಂಸ್ಥೆ ಗುರುವಾರ ಸಂಜೆ ಘೋಷಿಸಿದೆ.

By Mahesh
|
Google Oneindia Kannada News

ಮುಂಬೈ, ಜನವರಿ 12: ಟಾಟಾ ಸಮೂಹ ಸಂಸ್ಥೆಯ ಟಾಟಾ ಸನ್ಸ್ ಚೇರ್ಮನ್ ಆಗಿ ಟಿಸಿಎಸ್ ನ ಸಿಇಒ ಎನ್ ಚಂದ್ರಶೇಖರನ್ ಆಯ್ಕೆಯಾಗಿದ್ದಾರೆ. ಈ ಮೂಲಕ ರತನ್ ಟಾಟಾ ಅವರ ಉತ್ತಾರಾಧಿಕಾರಿಯನ್ನು ಸಂಸ್ಥೆ ಗುರುವಾರ ಸಂಜೆ ಘೋಷಿಸಿದೆ. ದೇಶದ ಅತಿದೊಡ್ಡ ಸಾಫ್ಟ್ ವೇರ್ ಸಂಸ್ಥೆ ಟಿಸಿಎಸ್ ಸಿಇಒ ಆಗಿ ರಾಜೇಶ್ ಗೋಫಿನಾಥನ್ ಅವರನ್ನು ನೇಮಿಸಲಾಗಿದೆ.

103 ಬಿಲಿಯನ್ ಡಾಲರ್ ಮೌಲ್ಯದ ಟಾಟಾ ಸನ್ಸ್ ಉತ್ತರಾಧಿಕಾರಿ ಹಾಗೂ ಟಿಸಿಎಸ್ ಸಿಇಒ ನೇಮಕಕ್ಕಾಗಿ ಐದು ಸದಸ್ಯರ ಆಯ್ಕೆ ಸಮಿತಿಯನ್ನು ಅಕ್ಟೋಬರ್ ತಿಂಗಳಿನಲ್ಲಿ ನೇಮಿಸಲಾಗಿತ್ತು. [ಟಾಟಾ ಸಂಸ್ಥೆಯಿಂದ ಹೊರ ಬಂದ ಮಿಸ್ತ್ರಿ, ಕಾನೂನು ಹೋರಾಟಕ್ಕೆ ಸಜ್ಜು!]

ಈ ಆಯ್ಕೆ ಸಮಿತಿಯಲ್ಲಿ ರತನ್ ಟಾಟಾ ಅಲ್ಲದೆ, ಬೋರ್ಡ್ ಸದಸ್ಯರಾಗಿರುವ ಟಿವಿಎಸ್ ಚೇರ್ಮನ್ ವೇಣು ಶ್ರೀನಿವಾಸನ್, ಬೈನ್ ಕ್ಯಾಪಿಟಲ್ ನ ಅಮಿತ್ ಚಂದ್ರ, ಮಾಜಿ ಆಡಳಿತ ಅಧಿಕಾರಿ ರೊನೆನ್ ಸೇನ್, ವಾರ್ವಿಕ್ ವಿವಿಯ ಕುಮಾರ್ ಭಟ್ಟಾಚಾರ್ಯ ಇದ್ದಾರೆ.[ಟ್ರಸ್ಟ್ ಗಳಿಗೆ ರಾಜೀನಾಮೆ ನೀಡುವ ಪ್ರಶ್ನೆಯೇ ಇಲ್ಲ: ರತನ್ ಟಾಟಾ]

N Chandrasekaran Successor of Ratan Tata as Chairman : Tata Sons

ಚೇರ್ಮನ್ ಸ್ಥಾನಕ್ಕೆ ಪೈಪೋಟಿ: ಟಾಟಾ ಅವರ ಮಲತಮ್ಮ ನಿಯೋಲ್ ಟಾಟಾ, ಯೂನಿಲಿವರ್ ನ ಹರೀಶ್ ಮನ್ವಾನಿ, ಹಾಥ್ ವೇಯ ಅಜಿತ್ ಜೈನ್, ಸಿಟಿ ಗ್ರೂಪ್ ಮಾಜಿ ಬಾಸ್ ವಿಕ್ರಮ್ ಪಂಡಿತ್, ಪೆಪ್ಸಿಕೋ ಸಿಇಒ ಇಂದ್ರಾ ನೂಯಿ ಅವರ ಹೆಸರು ಕೂಡಾ ಕೇಳಿ ಬಂದಿತ್ತು. ಆದರೆ, ಟಿಸಿಎಸ್ ಸಿಇಒ ಎನ್ ಚಂದ್ರಶೇಖರನ್ ಹೆಸರು ಅಂತಿಮಗೊಂಡಿದೆ.[ಟಾಟಾ ಸಂಸ್ಥೆ - ನೀರಾ ರಾಡಿಯಾ ಸಂಬಂಧ ಕೆದಕಿದ ಮಿಸ್ತ್ರಿ]

53 ವರ್ಷ ವಯಸ್ಸಿನ ಟಿಸಿಎಸ್ ಸಿಇಒ, ವ್ಯವಸ್ಥಾಪಕ ನಿರ್ದೇಶಕ ನಟರಾಜನ್ ಚಂದ್ರಶೇಖರನ್ ಅವರು 16.5 ಬಿಲಿಯನ್ ಡಾಲರ್ ಮೌಲ್ಯದ ಸಂಸ್ಥೆಯನ್ನು ಮುನ್ನಡೆಸಿದ ಅನುಭವ ಹೊಂದಿದ್ದಾರೆ.[2015: ಟಿಸಿಎಸ್ ಸಿಇಒ ಚಂದ್ರ ಸಂಬಳ ಶೇ 14ರಷ್ಟು ಏರಿಕೆ]

ರಾಜೇಶ್ ಗೋಪಿನಾಥನ್ ಅವರು ಟಿಸಿಎಸ್ ನ ಸಿಎಫ್ಒ ಹಾಗೂ ಉಪಾಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದಾರೆ. 1971ರಲ್ಲಿ ಜನಿಸಿರುವ ರಾಜೇಶ್ ಮುಂಬೈ ನಿವಾಸಿಯಾಗಿದ್ದು, ಐಐಎಂ ಅಹಮದಾಬಾದಿನಿಂದ ಸ್ನಾತಕೋತ್ತರ ಡಿಪ್ಲೋಮಾ ಪಡೆದುಕೊಂಡಿದ್ದಾರೆ. ತಿರುಚ್ಚಿಯಲ್ಲಿ ಎಲೆಕ್ಟ್ರಿಕಲ್ ಇಂಜಿನಿಯರಿಂಗ್ ಪದವಿ ಪಡೆದು 2001ರಿಂದ ಟಿಸಿಎಸ್ ನಲ್ಲಿದ್ದಾರೆ.

English summary
N Chandrasekaran Sucessor of Ratan Tata as Chairman. A 5 member selection panel was brought in place last October to shortlist the candidates for the top job for the $103 billion conglomerate -- the largest in India. Rajesh Gopinathan is elevated as new CEO of TCS.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X