ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಟೆಲ್ಸಾ ಬಾಸ್ ಟ್ವೀಟ್: ಬಿಟ್ ಕಾಯಿನ್ ಕರೆನ್ಸಿ ಮೌಲ್ಯ ಕುಸಿತ

|
Google Oneindia Kannada News

ಬೆಂಗಳೂರು, ಜೂನ್ 4: ಕೊರೊನಾವೈರಸ್ ಸಂಕಷ್ಟದ ಕಾಲದಲ್ಲಿ ಡಿಜಿಟಲ್ ದುಡ್ಡಿನ ಮೇಲೆ ಹೂಡಿಕೆ ಬಗ್ಗೆ ಹೆಚ್ಚಿನ ಆಸಕ್ತಿ ಮೂಡಿತ್ತು. ಆದರೆ, ಇತ್ತೀಚೆಗೆ ಡಿಜಿಟಲ್ ದುಡ್ಡು ಬಿಟ್ ಕಾಯಿನ್ ಸೇರಿ ಕ್ರಿಪ್ಟೋಕರೆನ್ಸಿ ಮಾರುಕಟ್ಟೆ ಮೌಲ್ಯ ಸತತ ಕುಸಿತಗೊಂಡಿದ್ದು, ಹೂಡಿಕೆದಾರರು ಒಂದು ಹೆಜ್ಜೆ ಹಿಂದೆ ಇಡುವಂತೆ ಮಾಡಿದೆ.

ಇದಕ್ಕೆ ಪೂರಕವಾಗಿ ಟೆಲ್ಸಾ ಸಂಸ್ಥೆ ಬಾಸ್ ಇಲಾನ್ ಮಾಸ್ಕ್ ಟ್ವೀಟ್ ಬೆನ್ನಲ್ಲೇ ಕ್ರಿಪ್ಟೋಕರೆನ್ಸಿ ಬಿಟ್ ಕಾಯಿನ್ ಮೌಲ್ಯ ಶುಕ್ರವಾರ ಬೆಳಗ್ಗೆ ಶೇ 3ರಷ್ಟು ಕುಸಿತ ಕಂಡಿದೆ.

$2 ಟ್ರಿಲಿಯನ್‌ಗೆ ಏರಿಕೆಯಾಗಿದ್ದ ಕ್ರಿಪ್ಟೋಕರೆನ್ಸಿ ಮಾರುಕಟ್ಟೆ ಮೌಲ್ಯ ಈಗ 1,702,625,674,610 ಡಾಲರ್ ಗೆ ಕುಸಿದಿದೆ. ಬಿಟ್ ಏಪ್ರಿಲ್ ತಿಂಗಳಲ್ಲಿ ಮೊದಲ ಬಾರಿಗೆ 64 ಸಾವಿರ ಡಾಲರ್ ಮೌಲ್ಯಕ್ಕೇರಿತ್ತು. ಈಗ 37 ಸಾವಿರ ಡಾಲರ್ ಗಳಿಗೆ ಕುಸಿದಿದೆ.

Musk Tweet effect: Popular cryptocurrencies Bitcoin Market cap dropped

ಜೂನ್ 4ರಂದು ಈ ಸಮಯ(10.15)ಕ್ಕೆ ಬಿಟ್ ಕಾಯಿನ್ ಮೌಲ್ಯ:
ಬಿಟ್ ಕಾಯಿನ್ ಬೆಲೆ: $37,713.81
ಒಟ್ಟಾರೆ ಮಾರುಕಟ್ಟೆ ಮೌಲ್ಯ: $706,997,364,961
ಒಂದು ಬಿಟ್ ಕಾಯಿನ್ ಬೆಲೆ = 27,45,019.90
(1 USD=73.02 ರುಪಾಯಿ)

ಬಿಟ್ ಕಾಯಿನ್ ಕಳೆದ 24 ಗಂಟೆಗಳಲ್ಲಿ ಶೇ 0.40ರಷ್ಟು ಕುಸಿತ ಕಂಡಿದೆ. ಈ ವಾರ ಶೇ 1.04ರಷ್ಟು ಏರಿಕೆಯಾಗಿದೆ. ಈ ನಡುವೆ ಮತ್ತೊಂದು ಡಿಜಿಟಲ್ ಕರೆನ್ಸಿ ಇಥೆರಿಯಂ (Ethereum) ಕಳೆದ 24 ಗಂಟೆಗಳಲ್ಲಿ ಶೇ 0.87ರಷ್ಟು ಕುಸಿತ ಕಂಡು 2,739.48ಡಾಲರ್ ಮೌಲ್ಯ ಪಡೆದಿದೆ. ಈ ವಾರದಲ್ಲಿ 2.82 ಏರಿಕೆಯಾಗಿ ಒಟ್ಟಾರೆ $318,041,885,284ಮೌಲ್ಯ ಹೊಂದಿದೆ.

ಬಿಟ್‌ಕಾಯಿನ್‌: ಇದು ಅತ್ಯಂತ ಜನಪ್ರಿಯ ಕ್ರಿಪ್ಟೋಕರೆನ್ಸಿಯಾಗಿದೆ. ಡಿಜಿಟಲ್ ಕರೆನ್ಸಿಯಾಗಿರುವುದರಿಂದ ಯಾವುದೇ ರೀತಿಯಲ್ಲಿ ಮುದ್ರಣ ರೂಪದಲ್ಲಿ ಸಿಗುವುದಿಲ್ಲ. ರೂಪಾಯಿ, ಡಾಲರ್, ಯುರೋ ಗಳಂತೆ ಭೌತಿಕ ರೂಪದಲ್ಲಿ ಇರುವುದಿಲ್ಲ. ಯಾವುದೇ ದೇಶ, ಭಾಷೆ, ಬ್ಯಾಂಕುಗಳಿಗೆ ಇದು ಸೀಮಿತವಾಗಿಲ್ಲ. ಭಾರತ, ಸೌದಿ ಅರೇಬಿಯಾ, ಅಲ್ಜೀರಿಯಾ, ಬೊಲಿವಿಯಾ ಅನೇಕ ದೇಶಗಳಲ್ಲಿ ನಿಷೇಧವಾಗಿರುವ ಕ್ರಿಪ್ಟೋ ಕರೆನ್ಸಿ ಇತ್ತೀಚೆಗೆ ಭಾರಿ ಬೇಡಿಕೆ ಪಡೆದು ತನ್ನ ಮೌಲ್ಯ ಹೆಚ್ಚಿಸಿಕೊಂಡಿದೆ. ಆದರೆ, ಡಿಜಿಟಲ್ ಆಸ್ತಿ ರೂಪದಲ್ಲಿ ಕ್ರಿಪ್ಟೋ ಕರೆನ್ಸಿ ಬಳಕೆಯಾಗಬಹುದೇ ಹೊರತೂ ಸಾಮಾನ್ಯ ವ್ಯವಹಾರಕ್ಕೆ ಸೂಕ್ತವಲ್ಲ ಎಂದು ತಜ್ಞರು ಕೂಡಾ ಅಭಿಪ್ರಾಯಪಟ್ಟಿದ್ದಾರೆ.

English summary
News agency Reuters reported that Bitcoin slipped more than 3% on Friday after Tesla boss Elon Musk fired off a tweet hinting at a breakup with the cryptocurrency
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X