ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮುಂಬೈ ವಿಮಾನ ನಿಲ್ದಾಣದ ಶೇ 74ರಷ್ಟು ಶೇರು ಅದಾನಿ ಸಮೂಹದ ಪಾಲಿಗೆ

|
Google Oneindia Kannada News

ಮುಂಬೈ, ಆಗಸ್ಟ್ 31: ಉದ್ಯಮಿ ಗೌತಮ್ ಅದಾನಿ ನೇತೃತ್ವದ ಅದಾನಿ ಸಮೂಹವು ಮುಂಬೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿಯಮಿತದ (ಎಂಐಎಎಲ್) ಶೇ 74ರಷ್ಟು ಶೇರುಗಳನ್ನು ಪಡೆದುಕೊಂಡಿದೆ.

ವ್ಯವಹಾರದ ಅಡಿಯಲ್ಲಿ ಅದಾನಿ ಸಮೂಹವು ಜಿವಿಕೆ ಸಮೂಹದ ಶೇ 50.5ರಷ್ಟು ಶೇರುಗಳನ್ನು ಪಡೆದುಕೊಳ್ಳಲಿದೆ. ಜತೆಗೆ ಅಲ್ಪ ಪ್ರಮಾಣದ ಪಾಲುದಾರರಾಗಿರುವ ದಕ್ಷಿಣಾ ಆಫ್ರಿಕಾ ಏರ್ ಪೋರ್ಟ್ ಕಂಪೆನಿ (ಎಸಿಎಸ್‌ಎ) ಮತ್ತು ಬಿಡ್ವೆಸ್ಟ್‌ಗಳಿಂದ ಶೇ 23.5ರಷ್ಟು ಶೇರುಗಳನ್ನು ಖರೀದಿ ಮಾಡಲಿದೆ. ದೇಶದ ಎರಡನೆಯ ಅತಿದೊಡ್ಡ ವಿಮಾನ ನಿಲ್ದಾಣ ಎಂಐಎಎಲ್‌ನಲ್ಲಿ ಎಸಿಎಸ್‌ಎ ಶೇ 10 ಮತ್ತು ಬಿಡ್ವೆಸ್ಟ್ ಶೇ 13.5 ಶೇರುಗಳನ್ನು ಹೊಂದಿದೆ.

 ಒಂದೇ ವರ್ಷದಲ್ಲಿ ಈ ಕಂಪನಿಯ ಷೇರಿಗೆ ಶೇ. 741ರಷ್ಟು ಆದಾಯ ಒಂದೇ ವರ್ಷದಲ್ಲಿ ಈ ಕಂಪನಿಯ ಷೇರಿಗೆ ಶೇ. 741ರಷ್ಟು ಆದಾಯ

ಮೊದಲ ನಿರಾಕರಣೆಯ ಹಕ್ಕು ತಮಗೆ ಇರುವುದರಿಂದ ಮಾರಾಟದ ಪ್ರಯತ್ನಗಳಿಗೆ ತಡೆ ನೀಡಬೇಕು ಎಂದು ಜಿವಿಕೆ ಈ ಹಿಂದೆ ನ್ಯಾಯಾಲಯದ ಮೆಟ್ಟಿಲೇರಿತ್ತು. ಆದರೆ ಕಂಪೆನಿಗೆ ಸಾಕಷ್ಟು ಪ್ರಮಾಣದ ನಿಧಿ ಸಂಗ್ರಹಿಸಲು ಸಾಧ್ಯವಾಗಿರಲಿಲ್ಲ. ಒಟ್ಟು ಆರು ವಿಮಾನ ನಿಲ್ದಾಣಗಳಲ್ಲಿ ಪ್ರಮುಖ ಪಾಲುದಾರಿಕೆ ಹೊಂದುವ ಮೂಲಕ ಅಸಾನಿ ಸಮೂಹವು ಎರಡನೆಯ ಅತಿ ದೊಡ್ಡ ಖಾಸಗಿ ವಿಮಾನ ನಿಲ್ದಾಣ ನಿರ್ವಾಹಕ ಎನಿಸಿಕೊಂಡಿದೆ. ದೆಹಲಿ ಮತ್ತು ಹೈದರಾಬಾದ್ ವಿಮಾನ ನಿಲ್ದಾಣಗಳನ್ನು ನಿರ್ವಹಿಸುತ್ತಿರುವ ಜಿಎಂಆರ್ ಸಮೂಹ ದೊಡ್ಡ ಖಾಸಗಿ ಕಂಪೆನಿಯಾಗಿದೆ.

Mumbai International Airport: Adani Group Acquires 74 Per Cent Stake

ಜಿವಿಕೆಗೆ ಈ ಪಾಲುದಾರಿಕೆಯನ್ನು ಉಳಿದುಕೊಳ್ಳಲು ಅವಕಾಶ ನೀಡುವಂತೆ ಜಿವಿಕೆ ಮತ್ತು ಅದಾನಿ ಸಮೂಹ ಒಪ್ಪಂದ ಮಾಡಿಕೊಂಡಿವೆ. ಪ್ರತಿಯಾಗಿ ಜಿವಿಕೆ ಪವರ್ ಮತ್ತು ಇನ್‌ಫ್ರಾಸ್ಟ್ರಕ್ಚರ್ ಲಿಮಿಟೆಡ್‌ ಪಡೆದುಕೊಂಡಿರುವ ಸಾಲಕ್ಕೆ ಅನುಗುಣವಾಗಿ ಅದು ಖಾತರಿಯನ್ನು ಬಿಡುಗಡೆ ಮಾಡಲಿದೆ.

English summary
Adani Group has acuired 74% of stake in Mumbai International Airport (MIAL).
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X