ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

2019ರಲ್ಲಿ ಮುಕೇಶ್ ಅಂಬಾನಿ ಸಂಪತ್ತು $17 ಬಿಲಿಯನ್‌ ಹೆಚ್ಚಳ

|
Google Oneindia Kannada News

Recommended Video

2019ರಲ್ಲಿ ಮುಕೇಶ್ ಅಂಬಾನಿ ಸಂಪತ್ತು $17 ಬಿಲಿಯನ್‌ ಹೆಚ್ಚಳ | MUKESH AMBANI | RICHEST ASIAN

ನವದೆಹಲಿ, ಡಿಸೆಂಬರ್ 24: ಪ್ರಸಕ್ತ ವರ್ಷ ಬಹುತೇಕ ಉದ್ಯಮಗಳು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದರೆ, 2019 ಏಷ್ಯಾದ ಅತ್ಯಂತ ಶ್ರೀಮಂತ ವ್ಯಕ್ತಿ ಉದ್ಯಮಿ ಮುಕೇಶ್ ಅಂಬಾನಿ ಸಂತಸದ ವರ್ಷವಾಗಿದೆ.

ಈ ವರ್ಷ ಮುಕೇಶ್ ಅಂಬಾನಿ ಅವರ ಸಂಪತ್ತು ಸುಮಾರು $17 ಬಿಲಿಯನ್‌ನಷ್ಟು ಹೆಚ್ಚಳವಾಗಿದೆ. ಅವರ ಒಟ್ಟಾರೆ ಸಂಪತ್ತು ಸುಮಾರು $61 ಬಿಲಿಯನ್ ತಲುಪಿದೆ ಎಂದು ಬ್ಲೂಮ್‌ಬರ್ಗ್ ಬಿಲಿಯನೇರ್ ಸೂಚ್ಯಂಕ ತಿಳಿಸಿದೆ.

ಭಾರತದ ಅತಿ ಶ್ರೀಮಂತ ವ್ಯಕ್ತಿಗಳ ಸಂಪತ್ತು ಎಷ್ಟು ಹೆಚ್ಚಿದೆ ಗೊತ್ತೇ?ಭಾರತದ ಅತಿ ಶ್ರೀಮಂತ ವ್ಯಕ್ತಿಗಳ ಸಂಪತ್ತು ಎಷ್ಟು ಹೆಚ್ಚಿದೆ ಗೊತ್ತೇ?

ಮುಕೇಶ್ ಅವರಿಗೆ ಪೈಪೋಟಿ ನೀಡುತ್ತಿದ್ದ ಇತರೆ ಸಿರಿವಂತ ವ್ಯಕ್ತಿಗಳಾದ ಅಲಿಬಾಬಾ ಸಮೂಹದ ಸಂಸ್ಥಾಪಕ ಜ್ಯಾಕ್ ಮಾ ಸಂಪತ್ತು $11.3 ಬಿಲಿಯನ್ ಏರಿಕೆಯಾಗಿದ್ದರೆ, ಜೆಫ್ ಬೆಜೋಸ್ $13.3 ಬಿಲಿಯನ್ ನಷ್ಟ ಅನುಭವಿಸಿದ್ದಾರೆ.

Mukesh Ambani Wealth Surge $18 Billion In 2019

ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್‌ನ ಶೇರುಗಳು ಶೇ 40ರಷ್ಟು ಏರಿಕೆಯಾಗಿದ್ದು, ಅಂಬಾನಿ ಸಂಪತ್ತಿನ ಹೆಚ್ಚಳಕ್ಕೆ ಕಾರಣವಾಗಿದೆ. ಹೂಡಿಕೆದಾರರು ಈ ವರ್ಷ ಹೆಚ್ಚಿನ ಪ್ರಮಾಣದಲ್ಲಿ ರಿಲಯನ್ಸ್‌ನಲ್ಲಿ ಹೂಡಿಕೆ ಮಾಡಿದ್ದಾರೆ. ಜತೆಗೆ ಅವರ ದೂರಸಂಪರ್ಕ ಸಂಹವನ ಮತ್ತು ರೀಟೈನ್ ಉದ್ಯಮವೂ ಲಾಭದಾಯಕವಾಗಿದೆ. ಇ-ಕಾಮರ್ಸ್ ಉದ್ಯಮ ಅಮೇಜಾನ್ ಡಾಟ್ ಕಾಂಗೆ ಸವಾಲೊಡ್ಡುವ ಸಲುವಾಗಿ ಭಾರತದ್ದೇ ಇ-ಕಾಮರ್ಸ್ ವ್ಯವಸ್ಥೆ ಸ್ಥಾಪಿಸಲು ಮುಕೇಶ್ ಅಂಬಾನಿ ಸಿದ್ಧತೆ ನಡೆಸಿದ್ದಾರೆ. ಅದರ ನಡುವೆಯೇ ಜಿಯೋ ಮೇಲೆ ಸುಮಾರು $50 ಬಿಲಿಯನ್ ಹೂಡಿಕೆ ಮಾಡುವ ಮೂಲಕ ಮೂರು ವರ್ಷಗಳಲ್ಲಿಯೇ ದೇಶದ ನಂ.1 ಮೊಬೈಲ್ ಸೇವೆಯನ್ನಾಗಿ ಮಾಡಿದ್ದಾರೆ.

ಫೋರ್ಬ್ಸ್‌ ಭಾರತದ ಶ್ರೀಮಂತರ ಪಟ್ಟಿ ಪ್ರಕಟ: ಹಲವು ಅಚ್ಚರಿಯ ಹೆಸರುಗಳುಫೋರ್ಬ್ಸ್‌ ಭಾರತದ ಶ್ರೀಮಂತರ ಪಟ್ಟಿ ಪ್ರಕಟ: ಹಲವು ಅಚ್ಚರಿಯ ಹೆಸರುಗಳು

ರಿಲಯನ್ಸ್ ಇಂಡಸ್ಟ್ರೀಸ್ ಮೂಲಕ ತೈಲ ಮತ್ತು ಅನಿಲ ವಲಯಗಳಲ್ಲದೆ, ಚಿಲ್ಲರೆ ಹಾಗೂ ದೂರಸಂಪರ್ಕ ಕ್ಷೇತ್ರಗಳಲ್ಲಿಯೂ ಮುಕೇಶ್ ಅಂಬಾನಿ ದೇಶಿ ಮಾರುಕಟ್ಟೆಯ ಸ್ಥಿತಿಯನ್ನು ಬದಲಿಸಿದ್ದಾರೆ. ಹೊಸ ವಲಯಗಳಲ್ಲಿ ಅವರು ಹೂಡಿಕೆ, ಸ್ಥಾಪನೆ ಮತ್ತು ಬೆಳೆಸುವ ಕಾರ್ಯವನ್ನು ವೇಗವಾಗಿ ಮಾಡಿದ್ದರ ಫಲವಾಗಿ ಅವರು ಯಶಸ್ಸು ಕಂಡಿದ್ದಾರೆ ಎಂದು ಟಿಸಿಜಿ ಅಸೆಟ್ ಮ್ಯಾನೇಜ್‌ಮೆಂಟ್‌ನ ಮುಖ್ಯ ಹೂಡಿಕೆ ಅಧಿಕಾರಿ ಚಕ್ರಿ ಲೋಕಪ್ರಿಯ ಹೇಳಿದ್ದಾರೆ.

ಎರಡು ದಿನದಲ್ಲೇ ಮುಕೇಶ್ ಅಂಬಾನಿ ಆಸ್ತಿ 29,000 ಕೋಟಿ ಏರಿಕೆ ಎರಡು ದಿನದಲ್ಲೇ ಮುಕೇಶ್ ಅಂಬಾನಿ ಆಸ್ತಿ 29,000 ಕೋಟಿ ಏರಿಕೆ

2016ರ ಅಂತ್ಯದ ಬಳಿಕ ರಿಲಯನ್ಸ್ ಶೇರು ಮೌಲ್ಯ ಮೂರು ಪಟ್ಟು ಹೆಚ್ಚಳವಾಗಿದೆ. ಇದಕ್ಕೆ ಕಾರಣ ಭಾರತೀಯ ಮಾರುಕಟ್ಟೆಯಲ್ಲಿ ಧೂಳೆಬ್ಬಿಸಿದ ಜಿಯೋ ನೆಟ್‌ವರ್ಕ್. 350 ಮಿಲಿಯನ್ ಗ್ರಾಹಕರನ್ನು ಹೊಂದಿರುವ ಜಿಯೋ, ಸೆಪ್ಟೆಂಬರ್ ತ್ರೈಮಾಸಿಕದ ವೇಳೆಗೆ $140 ಮಿಲಿಯನ್ ಒಟ್ಟಾರೆ ಆದಾಯವನ್ನು ಘೋಷಿಸಿಕೊಂಡಿದೆ.

English summary
Asia's richest man Mukesh Ambani's wealth increased about $17 billion in the year 2019.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X