ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮುಖೇಶ್ ಅಂಬಾನಿ RIL ಈಗ ಸಂಪೂರ್ಣ ಸಾಲ ಮುಕ್ತ ಸಂಸ್ಥೆ!

|
Google Oneindia Kannada News

ಮುಂಬೈ, ಜೂನ್ 19: ಉದ್ಯಮಿ ಮುಖೇಶ್ ಅಂಬಾನಿ ನೇತೃತ್ವದ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ("ರಿಲಯನ್ಸ್ ಇಂಡಸ್ಟ್ರೀಸ್") ಹಾಗೂ ಡಿಜಿಟಲ್ ಸೇವೆಗಳ ವೇದಿಕೆ ಜಿಯೋ ಪ್ಲಾಟ್‌ಫಾರ್ಮ್ಸ್ ಲಿಮಿಟೆಡ್ ("ಜಿಯೋ ಪ್ಲಾಟ್‌ಫಾರ್ಮ್ಸ್") ಸಂಪೂರ್ಣ ಸಾಲಮುಕ್ತ ಸಂಸ್ಥೆ ಎನಿಸಿಕೊಂಡಿದೆ. ಮಾರ್ಚ್ 31, 2021ರೊಳಗೆ ಈ ಗುರಿ ಮುಟ್ಟಲಾಗುವುದು ಎಂದಿದ್ದ ಮುಖೇಶ್ 2020ರ ಜೂನ್ ತಿಂಗಳಲ್ಲೇ ಈ ಸಾಧನೆ ಮಾಡಿದ್ದಾರೆ.

Recommended Video

ಪಾಕಿಸ್ತಾನದ ಆರಂಭಿಕ ಆಟಗಾರನಿಗೆ ರೋಹಿತ್ ಶರ್ಮ ರೋಲ್ ಮಾಡೆಲ್ | Rohit Sharma | Oneindia Kannada

ಏಪ್ರಿಲ್ 22, 2020ರಿಂದ ಇಲ್ಲಿಯವರೆಗಿನ ಅವಧಿಯಲ್ಲಿ ಫೇಸ್‌ಬುಕ್, ಸಿಲ್ವರ್ ಲೇಕ್, ವಿಸ್ತಾ ಈಕ್ವಿಟಿ ಪಾರ್ಟ್‌ನರ್ಸ್, ಜನರಲ್ ಅಟ್ಲಾಂಟಿಕ್, ಕೆಕೆಆರ್, ಮುಬಾದಲ, ಎಡಿಐಎ, ಟಿಪಿಜಿ, ಎಲ್ ಕ್ಯಾಟರ್‌ಟನ್ ಹಾಗೂ ಪಿಐಎಫ್ ಸೇರಿದಂತೆ ಮುಂಚೂಣಿ ಜಾಗತಿಕ ಹೂಡಿಕೆದಾರರಿಂದ ಜಿಯೋ ಪ್ಲಾಟ್‌ಫಾರ್ಮ್ಸ್ ₹115,693.95 ರೂ.ಗಳ ಹೂಡಿಕೆ ಪಡೆದುಕೊಂಡಂತಾಗಿದೆ. ಇದಲ್ಲದೆ RIL ಹಕ್ಕುಗಳ ಷೇರು ನೀಡಿಕೆ ಮೂಲಕ ₹ 53,124.20 ಕೋಟಿ ರು ಗಳಿಸಿದೆ.ಜೊತೆಗೆ ಬ್ರಿಟಿಷ್ ಪೆಟ್ರೋಲಿಯಂ ರೀಟೇಲ್ ಜೊತೆಗಿನ ಸಹಭಾಗಿತ್ವದಲ್ಲಿ 1.75 ಲಕ್ಷ ಕೋಟಿ ಹೂಡಿಕೆ ಕಂಡಿದ್ದಾರೆ.

RIL ಹಕ್ಕುಗಳ ಷೇರು ನೀಡಿಕೆಯಲ್ಲಿ 5.52 ಲಕ್ಷ ಷೇರುಗಳನ್ನು ಪಡೆದ ಮುಕೇಶ್ ಅಂಬಾನಿRIL ಹಕ್ಕುಗಳ ಷೇರು ನೀಡಿಕೆಯಲ್ಲಿ 5.52 ಲಕ್ಷ ಷೇರುಗಳನ್ನು ಪಡೆದ ಮುಕೇಶ್ ಅಂಬಾನಿ

ಮಾರ್ಚ್ 31, 2020ಕ್ಕೆ ಅನ್ವಯವಾಗುವಂತೆ RIL ನಿವ್ವಳ ಸಾಲದ ಮೊತ್ತ ₹ 161,035 ಕೋಟಿ ರು ನಷ್ಟಿತ್ತು. ಈಗ ಒಟ್ಟಾರೆ ಶೇ 24ರಷ್ಟು ₹ 115,693.95 ಕೋಟಿ ಹೂಡಿಕೆ ಹಾಗೂ ₹ 53,124.20 ಕೋಟಿ ರು ಹಕ್ಕು ಮಾರಾಟ ಮೂಲಕ ಕಳೆದ 58 ದಿನಗಳಲ್ಲಿ ₹168,818.15 ಕೋಟಿ ರು ಗಳಿಸಿ ಸಾಲವನ್ನು ತೀರಿಸಿಕೊಂಡಿದೆ.

Mukesh Ambani RIL is now net debt-free before deadline

ಜಿಯೋ ಬಳಕೆದಾರರಿಗೆ ಆಫರ್ : ಡಿಸ್ನಿ + ಹಾಟ್‌ಸ್ಟಾರ್ ವಿಐಪಿಯಾಗಿ ಜಿಯೋ ಬಳಕೆದಾರರಿಗೆ ಆಫರ್ : ಡಿಸ್ನಿ + ಹಾಟ್‌ಸ್ಟಾರ್ ವಿಐಪಿಯಾಗಿ

ಬ್ರಾಡ್‌ಬ್ಯಾಂಡ್ ಸಂಪರ್ಕ, ಸ್ಮಾರ್ಟ್ ಸಾಧನಗಳು, ಕ್ಲೌಡ್ ಮತ್ತು ಎಡ್ಜ್ ಕಂಪ್ಯೂಟಿಂಗ್, ಬಿಗ್ ಡೇಟಾ ಅನಲಿಟಿಕ್ಸ್, ಆರ್ಟಿಫಿಶಿಯಲ್ ಇಂಟಲಿಜೆನ್ಸ್, ಇಂಟರ್‌ನೆಟ್ ಆಫ್ ಥಿಂಗ್ಸ್, ಆಗ್ಮೆಂಟೆಡ್ ಮತ್ತು ಮಿಕ್ಸೆಡ್ ರಿಯಾಲಿಟಿ ಹಾಗೂ ಬ್ಲಾಕ್‌ಚೈನ್‌ನಂತಹ ಮುಂಚೂಣಿ ತಂತ್ರಜ್ಞಾನಗಳಿಂದ ಚಾಲಿತವಾಗಿರುವ ತನ್ನ ಡಿಜಿಟಲ್ ಇಕೋಸಿಸ್ಟಂನಾದ್ಯಂತ ಜಿಯೋ ಪ್ಲಾಟ್‌ಫಾರ್ಮ್ಸ್ ಗಮನಾರ್ಹ ಹೂಡಿಕೆಗಳನ್ನು ಮಾಡಿದೆ. ಒಳಗೊಳ್ಳುವ ಬೆಳವಣಿಗೆಯ ಫಲಗಳನ್ನು ಎಲ್ಲರೂ ಆನಂದಿಸುವಂತೆ ಮಾಡಲು, ಸಣ್ಣ ವರ್ತಕರು, ಅತಿಸಣ್ಣ ಉದ್ಯಮಗಳು ಹಾಗೂ ರೈತರೂ ಸೇರಿದಂತೆ ಭಾರತದಾದ್ಯಂತ 1.3 ಶತಕೋಟಿ ಜನರು ಹಾಗೂ ಉದ್ಯಮಗಳಿಗೆ ಡಿಜಿಟಲ್ ಇಂಡಿಯಾವನ್ನು ಸಾಧ್ಯವಾಗಿಸುವುದು ಜಿಯೋದ ದೂರದೃಷ್ಟಿಯಾಗಿದೆ.

English summary
Mukesh Ambani led Jio Platfroms has now announced investment of INVESTMENT OF ₹ 115,693.95 Crore by leading Global investors.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X