• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಕೆಕೆಆರ್ ನಿಂದ ರಿಲಯನ್ಸ್ ರೀಟೇಲ್ ನಲ್ಲಿ 5500 ಕೋಟಿ ರುಪಾಯಿ ಹೂಡಿಕೆ

|

ಮುಂಬೈ, ಸೆಪ್ಟೆಂಬರ್ 23: ಜಾಗತಿಕ ಹೂಡಿಕೆ ಸಂಸ್ಥೆ ಕೆಕೆಆರ್ ನಿಂದ ರಿಲಯನ್ಸ್ ರೀಟೇಲ್ ವೆಂಚರ್ಸ್ ಲಿಮಿಟೆಡ್ (ಆರ್ ಆರ್ ವಿಎಲ್) ನಲ್ಲಿ 5500 ಕೋಟಿ ರುಪಾಯಿ ಹೂಡಿಕೆ ಮಾಡಲಾಗುತ್ತದೆ. ಆರ್ ಆರ್ ವಿಎಲ್ ಪ್ರೀ- ಮನಿ ಈಕ್ವಿಟಿ ಮೌಲ್ಯ 4.21 ಲಕ್ಷ ಕೋಟಿ ಇದೆ ಎಂದು ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ಹಾಗೂ ರಿಲಯನ್ಸ್ ರೀಟೇಲ್ ವೆಂಚರ್ಸ್ ಲಿಮಿಟೆಡ್ ಬುಧವಾರದಂದು ಘೋಷಣೆ ಮಾಡಿದೆ.

ಈಗ ಕೆಕೆಆರ್ ಹೂಡಿಕೆ ಮಾಡುತ್ತಿರುವ ಮೊತ್ತಕ್ಕೆ ರಿಲಯನ್ಸ್ ರೀಟೇಲ್ ವೆಂಚರ್ಸ್ ನಲ್ಲಿ 1.28 ಪರ್ಸೆಂಟ್ ಪಾಲು ದೊರೆತಂತಾಗುತ್ತದೆ (ಫುಲ್ಲಿ ಡೈಲ್ಯೂಟೆಡ್ ಆಧಾರದಲ್ಲಿ). ಈ ಹಿಂದೆ ಕೆಕೆಆರ್ ನಿಂದಲೇ ರಿಲಯನ್ಸ್ ಗೆ ಸೇರಿದ ಜಿಯೋ ಪ್ಲಾಟ್ ಫಾರ್ಮ್ ನಲ್ಲಿ 11,367 ಕೋಟಿ ರುಪಾಯಿ ಹೂಡಿಕೆ ಮಾಡಲಾಗಿದೆ.

IPL ಜೊತೆಗೆ ಜಿಯೋ ಕ್ರಿಕೆಟ್ ಪ್ಲೇ ಅಲಾಂಗ್‌ ಆಡಿ ಬಹುಮಾನ ಗೆಲ್ಲಿ

ರಿಲಯನ್ಸ್ ರೀಟೇಲ್ ಲಿಮಿಟೆಡ್ ಎಂಬುದು ಆರ್ ಆರ್ ವಿಎಲ್ ಅಂಗಸಂಸ್ಥೆ. ಭಾರತದ ಅತಿ ದೊಡ್ಡ ಹಾಗೂ ವೇಗವಾಗಿ ಬೆಳೆಯುತ್ತಿರುವ ಮತ್ತು ಲಾಭದಾಯಕವಾದ ಉದ್ಯಮ. ದೇಶದಾದ್ಯಂತ 12 ಸಾವಿರ ಮಳಿಗೆಗಳನ್ನು ಹೊಂದಿದೆ. ಭಾರತದ ರೈತರು, ಎಂಎಸ್ ಎಂಇ ವಲಯ ಬಲಪಡಿಸುವ ಮೂಲಕ ಲಕ್ಷಾಂತರ ಗ್ರಾಹಕರಿಗೆ ಸೇವೆ ಸಲ್ಲಿಸುವ ಉದ್ದೇಶ ಇದೆ.

ಮುಕೇಶ್ ಅಂಬಾನಿ ಮಾತನಾಡಿ

ಮುಕೇಶ್ ಅಂಬಾನಿ ಮಾತನಾಡಿ

ರಿಲಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷ ಮುಕೇಶ್ ಅಂಬಾನಿ ಮಾತನಾಡಿ, ರಿಲಯನ್ಸ್ ರೀಟೇಲ್ ವೆಂಚರ್ಸ್ ನಲ್ಲಿ ಹೂಡಿಕೆದಾರರಾಗಿ ಕೆಕೆಆರ್ ಅನ್ನು ಸ್ವಾಗತಿಸಲು ಸಂತೋಷವಾಗುತ್ತದೆ. ಎಲ್ಲ ಭಾರತೀಯರ ಅನುಕೂಲಕ್ಕಾಗಿ ಭಾರತದ ರೀಟೇಲ್ ವ್ಯವಸ್ಥೆಯಲ್ಲಿ ಬೆಳವಣಿಗೆ ಹಾದಿಯಲ್ಲಿ ಮುಂದಕ್ಕೆ ಸಾಗುತ್ತಿದ್ದೇವೆ. ಕೆಕೆಆರ್ ದಾಖಲೆಗಳಿಂದ ಈಗಾಗಲೇ ಅದು ಅತ್ಯಂತ ಹಲವು ಪ್ರಮುಖ ಸಂಸ್ಥೆಗಳ ಮೌಲ್ಯಯುತ ಸಹಭಾಗಿ ಎಂದು ಸಾಬೀತಾಗಿದೆ. ಮತ್ತು ಭಾರತದ ಜತೆಗೆ ಹಲವು ವರ್ಷಗಳಿಂದ ಇದೆ. ನಮ್ಮ ಡಿಜಿಟಲ್ ಸೇವೆ ಹಾಗೂ ರೀಟೇಲ್ ವ್ಯವಹಾರದಲ್ಲಿ ಕೆಕೆಆರ್ ನ ಜಾಗತಿಕ ಪ್ಲಾಟ್ ಫಾರ್ಮ್ ಜತೆಗೆ ಕೆಲಸ ಮಾಡಲು ಎದುರು ನೋಡುತ್ತೇವೆ ಎಂದಿದ್ದಾರೆ.

ಕೆಕೆಆರ್ ಸಹ ಸಂಸ್ಥಾಪಕ ಹೆನ್ರಿ ಕ್ರೇವೀಸ್

ಕೆಕೆಆರ್ ಸಹ ಸಂಸ್ಥಾಪಕ ಹೆನ್ರಿ ಕ್ರೇವೀಸ್

ಕೆಕೆಆರ್ ಸಹ ಸಂಸ್ಥಾಪಕ ಹೆನ್ರಿ ಕ್ರೇವೀಸ್ ಮಾತನಾಡಿ, ರಿಲಯನ್ಸ್ ರೀಟೇಲ್ ವೆಂಚರ್ಸ್ ನಲ್ಲಿ ಈ ಹೂಡಿಕೆ ಮಾಡುವ ಮೂಲಕ ರಿಲಯನ್ಸ್ ಇಂಡಸ್ಟ್ರೀಸ್ ಜತೆಗಿನ ನಮ್ಮ ಬಾಂಧವ್ಯ ಇನ್ನಷ್ಟು ಗಟ್ಟಿಯಾಗುತ್ತಿದೆ ಎಂಬುದಕ್ಕೆ ಸಂತೋಷವಾಗುತ್ತಿದೆ. ರಿಲಯನ್ಸ್ ರೀಟೇಲ್ ವೆಂಚರ್ಸ್ ಎಲ್ಲ ಪ್ರಮಾಣದ ವರ್ತಕರನ್ನೂ ಸಬಲಗೊಳಿಸುತ್ತಿದೆ ಮತ್ತು ಭಾರತದ ಗ್ರಾಹಕರ ರೀಟೇಲ್ ಅನುಭವವನ್ನೇ ಮೂಲಭೂತವಾಗಿ ಬದಲಾವಣೆ ಮಾಡುತ್ತಿದೆ. ಗ್ರಾಹಕರು ಹಾಗೂ ಸಣ್ಣ ವ್ಯವಹಾರಗಳು ಎರಡರ ಪಾಲಿನ ಬಹುಮುಖ್ಯ ಅಗತ್ಯವನ್ನು ರಿಲಯನ್ಸ್ ರೀಟೇಲ್ ನ ಈ ಹೊಸ ವ್ಯಾಪಾರ ಪ್ಲಾಟ್ ಫಾರ್ಮ್ ಪೂರ್ಣಗೊಳಿಸುತ್ತಿದೆ ಎಂದಿದ್ದಾರೆ.

ಮುಖೇಶ್ ಅಂಬಾನಿ RIL ಈಗ ಸಂಪೂರ್ಣ ಸಾಲ ಮುಕ್ತ ಸಂಸ್ಥೆ!

ಭಾರತೀಯರ ಆನ್ ಲೈನ್ ಶಾಪಿಂಗ್

ಭಾರತೀಯರ ಆನ್ ಲೈನ್ ಶಾಪಿಂಗ್

ಹೆಚ್ಚಿನ ಸಂಖ್ಯೆಯಲ್ಲಿ ಭಾರತೀಯರು ಆನ್ ಲೈನ್ ಶಾಪಿಂಗ್ ಮಾಡುತ್ತಿದ್ದಾರೆ. ಮತ್ತು ಕಂಪೆನಿಯಿಂದ ಕಿರಾಣಿ ಅಂಗಡಿಗಳಿಗೆ ಪೂರೈಕೆ ಜಾಲದ ಬಹು ಅಮೂಲ್ಯ ಭಾಗವನ್ನು ಒದಗಿಸಲಾಗುತ್ತಿದೆ. ಭಾರತದ ಪ್ರಮುಖ ರೀಟೇಲರ್ ಆಗುವ ನಿಟ್ಟಿನಲ್ಲಿ ಹಾಕುತ್ತಿರುವ ಪ್ರಯತ್ನಕ್ಕೆ ಹಾಗೂ ಭಾರತೀಯ ರೀಟೇಲ್ ಆರ್ಥಿಕತೆಯನ್ನು ರೂಪಿಸಿಸಲು ಹಾಕಿಕೊಂಡಿರುವ ಗುರಿಯನ್ನು ತಲುಪುವುದಕ್ಕೆ ನಾವು ಬೆಂಬಲಿಸುತ್ತಿರುವುದು ಖುಷಿ ತಂದಿದೆ ಎಂದಿದ್ದಾರೆ.

  ಹಿಂಗ್ ಮಾಡಿದ್ರೆ ಕಳೆದು ಹೋಗಿರೊ ಫೋನ್ ಸಿಗತ್ತೆ | Oneindia Kannada
  ಈಕ್ವಿಟ್ ಫಂಡ್ಸ್ ಮೂಲಕ ಹೂಡಿಕೆ

  ಈಕ್ವಿಟ್ ಫಂಡ್ಸ್ ಮೂಲಕ ಹೂಡಿಕೆ

  ಕೆಕೆಆರ್ ನಿಂದ ಏಷ್ಯಾ ಪ್ರೈವೇಟ್ ಈಕ್ವಿಟ್ ಫಂಡ್ಸ್ ಮೂಲಕ ಹೂಡಿಕೆ ಮಾಡಲಾಗುತ್ತದೆ. ಈ ವ್ಯವಹಾರವು ನಿಯಂತ್ರಕರು ಮತ್ತು ಇತರ ಅನುಮತಿಗಳ ಆಧಾರದ ಮೇಲೆ ಅಂತಿಮವಾಗುತ್ತದೆ. ಮೊರ್ಗನ್ ಸ್ಟ್ಯಾನ್ಲಿಯು ಆರ್ಥಿಕ ಸಲಹೆಗಾರರಾಗಿ ಹಾಗೂ ಸೈರಿಲ್ ಅಮರ್ ಚಂದ್ ಮಂಗಲ್ ದಾಸ್ ಮತ್ತು ಡೇವಿಸ್ ಪೋಲ್ಕ್ ಅಂಡ್ ವಾರ್ಡ್ ವೆಲ್ ಕಾನೂನು ಸಲಹೆಗಾರರಾಗಿ ರಿಲಯನ್ಸ್ ರೀಟೇಲ್ ಪರ ಇದ್ದರು.ಡೆಲಾಯಿಟ್ ಟಚೆ ಟೊಮಾಟ್ಸು ಇಂಡಿಯಾ ಎಲ್ ಎಲ್ ಪಿ ಕೆಕೆಆರ್ ಗೆ ಆರ್ಥಿಕ ಸಲಹೆಗಾರ ಸ್ಥಾನದಲ್ಲಿ ಕಾರ್ಯ ನಿರ್ವಹಿಸಿತ್ತು.

  English summary
  Here is RIL chaiman Mukesh Ambani's reaction on KKR Investing ₹ 5,550 Cr in Reliance Retail Ventures.
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X