ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ತೈಲ ಮಾರುಕಟ್ಟೆಯಲ್ಲಿ ಕುಸಿತ, ಅಂಬಾನಿಗೆ 5 ಬಿಲಿಯನ್ ಡಾಲರ್ ನಷ್ಟ

|
Google Oneindia Kannada News

ಮುಂಬೈ, ನ.2: ಏಷ್ಯಾದ ಅತಿ ಶ್ರೀಮಂತ ಉದ್ಯಮಿ ಮುಖೇಶ್ ಅಂಬಾನಿ ಅವರಿಗೆ ಸರಿ ಸುಮಾರು 5 ಬಿಲಿಯನ್ ಡಾಲರ್ ನಷ್ಟವಾಗಿದೆ. ಕಳೆದ ತ್ರೈಮಾಸಿಕ ವರದಿಯಲ್ಲಿ ಉಂಟಾದ ನಿವ್ವಳ ಲಾಭದ ನಷ್ಟದ ಜೊತೆಗೆ ರಿಲಯನ್ಸ್ ಇಂಡಸ್ಟ್ರಿಯ ಷೇರುಗಳು ಕುಸಿದಿರುವುದು ಭಾರಿ ನಷ್ಟಕ್ಕೆ ಕಾರಣವಾಗಿದೆ.

ಮಾರುಕಟ್ಟೆಯಲ್ಲಿ ಅತಿ ಶ್ರೀಮಂತ ಸಂಸ್ಥೆಯಾಗಿರುವ ರಿಲಯನ್ಸ್ ಷೇರುಗಳು ಸೋಮವಾರದಂದು ಶೇ 6.8ರಷ್ಟು ಕುಸಿತ ಕಂಡಿದ್ದು, ಮೇ 12ರ ನಂತರ ಇದೇ ಮೊದಲ ಬಾರಿಗೆ ಇಷ್ಟು ಮಟ್ಟದ ಕುಸಿತವಾಗಿದೆ. ಮಾರ್ಚ್ ತಿಂಗಳಿನಲ್ಲಿ ಸರಿ ಸುಮಾರು 73 ಬಿಲಿಯನ್ ಡಾಲರ್ ನಷ್ಟು ಆಸ್ತಿ ಮೌಲ್ಯವನ್ನು ಮುಖೇಶ್ ಕಳೆದುಕೊಂಡಿದ್ದಾರೆ.

ರಿಲಯನ್ಸ್ ಸಂಸ್ಥೆಗೆ 400 ದಶಲಕ್ಷಕ್ಕೂ ಹೆಚ್ಚು ಮೊಬೈಲ್ ಚಂದಾದಾರರುರಿಲಯನ್ಸ್ ಸಂಸ್ಥೆಗೆ 400 ದಶಲಕ್ಷಕ್ಕೂ ಹೆಚ್ಚು ಮೊಬೈಲ್ ಚಂದಾದಾರರು

ರಿಫೈನರಿಯಿಂದ ರೀಟೆಲ್ ವ್ಯವಹಾರದ ತನಕ ಎಲ್ಲೆಡೆ ತನ್ನ ಪ್ರಭುತ್ವ ಸಾಧಿಸುತ್ತಾ ಬಂದಿರುವ ರಿಲಯನ್ಸ್ ಸಂಸ್ಥೆಯ ಕಳೆದ ತ್ರೈಮಾಸಿಕ ವರದಿಯಂತೆ ಶೇ 15ರಷ್ಟು ನಿವ್ವಳ ಲಾಭ ಸುಮಾರು 1.3 ಬಿಲಿಯನ್ ಡಾಲರ್ ಕುಸಿತ ಕಂಡಿದೆ. ಆದಾಯ ಕೂಡಾ 24% ಅಥವಾ 1.16ಟ್ರಿಲಿಯನ್ ರುಪಾಯಿ ಇಳಿಮುಖವಾಗಿದೆ.

Mukesh Ambani loses $5 billion as oil sinks Reliance shares

ಕೊವಿಡ್ 19 ಕಾರಣದಿಂದ ರಿಲಯನ್ಸ್ ತೈಲ ಘಟಕಗಳು ಭಾರಿ ನಷ್ಟ ಅನುಭವಿಸಿವೆ. ಇದೇ ವೇಳೆ ಟೆಲಿಕಾಂ ಹಾಗೂ ರೀಟೈಲ್ ಕ್ಷೇತ್ರದಲ್ಲಿ ಷೇರುಗಳು ಈ ವರ್ಷ 29% ಏರಿಕೆ ಕಂಡಿದ್ದು, 25 ಬಿಲಿಯನ್ ಷೇರುಗಳ ವಹಿವಾಟು ನಡೆಸಲಾಗಿದ್ದು, ಅಂಬಾನಿ 19.1 ಬಿಲಿಯನ್ ಡಾಲರ್ ಆಸ್ತಿ ಮೌಲ್ಯ ಹೆಚ್ಚಿಸಿಕೊಂಡಿದ್ದಾರೆ. ವಿಶ್ವದ 6ನೇ ಅತಿ ಶ್ರೀಮಂತ ಉದ್ಯಮಿ ಎನಿಸಿಕೊಂಡಿದ್ದಾರೆ ಎಂದು ಬ್ಲೂಮ್ ಬರ್ಗ್ ಬಿಲಿಯನೇರ್ಸ್ ಇಂಡೆಕ್ಸ್ ವರದಿ ಮಾಡಿದೆ.

English summary
Mukesh Ambani, Asia’s richest man, lost as much as $5 billion from his net worth as Reliance Industries Ltd.’s shares tumbled to the lowest price in more than three months following a drop in quarterly profit.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X