ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಲಾಕ್‌ಡೌನ್‌ ಆರಂಭದಿಂದ ಮುಕೇಶ್ ಅಂಬಾನಿ ಸಂಪಾದನೆ ಗಂಟೆಗೆ 90 ಕೋಟಿ ರೂಪಾಯಿ

|
Google Oneindia Kannada News

ನವದೆಹಲಿ, ಸೆಪ್ಟೆಂಬರ್ 30: ರಿಲಯನ್ಸ್‌ ಇಂಡಸ್ಟ್ರೀಸ್ ಮುಖ್ಯಸ್ಥ ಮುಕೇಶ್ ಅಂಬಾನಿ 2020ನೇ ಸಾಲಿನ ಭಾರತದ ಅತಿದೊಡ್ಡ ಶ್ರೀಮಂತರಾಗಿದ್ದು, ಸತತ ಒಂಭತ್ತನೇ ವರ್ಷದಲ್ಲಿಯೂ ದೇಶದ ಅತ್ಯಂತ ಶ್ರೀಮಂತ ವ್ಯಕ್ತಿ ಸ್ಥಾನ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

ಹರೂನ್ ಇಂಡಿಯಾ ಸಿದ್ಧಪಡಿಸಿರುವ 2020ನೇ ಸಾಲಿನ ಶ್ರೀಮಂತ ಪಟ್ಟಿ ಬಿಡುಗಡೆ ಆಗಿದ್ದು, ವಿಶ್ವದ ಐದು ಶ್ರೀಮಂತರ ಪಟ್ಟಿಯಲ್ಲಿ ಸ್ಥಾನ ಪಡೆದಿರುವ ವಿಶ್ವದ ಏಕೈಕ ವ್ಯಕ್ತಿ ಮುಕೇಶ್ ಅಂಬಾನಿ ಆಗಿದ್ದಾರೆ.

Mukesh ambani

ಇನ್ನೊಂದು ಕುತೂಹಲಕಾರಿ ವಿಷಯ ಏನೆಂದರೆ, ಮುಕೇಶ್ ಅಂಬಾನಿಯು ದೇಶಾದ್ಯಂತ ಮಾರ್ಚ್‌ ತಿಂಗಳಿನಲ್ಲಿ ಲಾಕ್‌ಡೌನ್ ಆರಂಭವಾದಾಗಿನಿಂದ ಗಂಟೆಗೆ 90 ಕೋಟಿ ರೂಪಾಯಿ ಸಂಪಾದಿಸಿದ್ದಾರೆ. ವಾರ್ಷಿಕ ವರದಿಯ ಪ್ರಕಾರ, ಅಂಬಾನಿಯ ವೈಯಕ್ತಿಕ ಸಂಪತ್ತು 2,77,700 ಕೋಟಿ ರೂ.ಗಳಿಂದ 6,58,400 ಕೋಟಿ ರೂ.ಗೆ ಏರಿದೆ. ಅಲ್ಲದೆ ಅವರು ಒಂಬತ್ತನೇ ವರ್ಷದ ಚಾಲನೆಯಲ್ಲಿ ಭಾರತದ ಶ್ರೀಮಂತ ಪ್ರಶಸ್ತಿಯನ್ನು ಉಳಿಸಿಕೊಂಡಿದ್ದಾರೆ.

 ಅಗ್ಗದ ದರದ ಸ್ಮಾರ್ಟ್‌ಫೋನ್ ತರಲು ಅಂಬಾನಿ ಪ್ಲ್ಯಾನ್ ಅಗ್ಗದ ದರದ ಸ್ಮಾರ್ಟ್‌ಫೋನ್ ತರಲು ಅಂಬಾನಿ ಪ್ಲ್ಯಾನ್

ಆಯಿಲ್‌ನಿಂದ ಟೆಲಿಕಾಂವರೆಗೆ ಪ್ರಮುಖ ಉದ್ಯಮ ಹೊಂದಿರುವ ರಿಲಯನ್ಸ್ ಇಂಡಸ್ಟ್ರೀಸ್‌ನ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಮುಕೇಶ್ ಕಳೆದ 12 ತಿಂಗಳಲ್ಲಿ ಅವರ ಒಟ್ಟು ಸಂಪತ್ತು ಶೇಕಡಾ 73 ರಷ್ಟು ಏರಿಕೆ ಕಂಡಿದ್ದು, ಅವರು ಏಷ್ಯಾದ ಅತ್ಯಂತ ಶ್ರೀಮಂತ ವ್ಯಕ್ತಿ ಮತ್ತು ವಿಶ್ವದ ನಾಲ್ಕನೇ ಶ್ರೀಮಂತರಾಗಿದ್ದಾರೆ.

ಮಾಹಿತಿ ತಂತ್ರಜ್ಞಾನ ಕ್ಷೇತ್ರದ ಹ್ಯಾಪಿಯೆಸ್ಟ್ ಮೈಂಡ್ಸ್‌ ಕಂಪನಿಯ ಸಂಸ್ಥಾಪಕ ಅಶೋಕ್ ಸೂಟಾ ಅವರು ಈ ವರ್ಷ ಈ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ. ಅವರ ಆಸ್ತಿಯ ಮೌಲ್ಯ 3,700 ಕೋಟಿ. ಅವರು ಇತ್ತೀಚೆಗಷ್ಟೇ ತಮ್ಮ ಕಂಪನಿಯ ಷೇರುಗಳನ್ನು ಸಾರ್ವಜನಿಕ ಮುಕ್ತವಾಗಿಸಿದ್ದರು.

English summary
India’s richest man, Mukesh Ambani, has earned Rs 90 crore every hour since the March lockdown, suggests the IIFL Wealth Hurun India Rich List 2020.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X