ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿಶ್ವದ ಆರನೇ ಶ್ರೀಮಂತ ವ್ಯಕ್ತಿಯಾಗಿ ಹೊರಹೊಮ್ಮಿದ ಮುಖೇಶ್ ಅಂಬಾನಿ

|
Google Oneindia Kannada News

ನವದೆಹಲಿ: ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್‌ನ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಮುಖೇಶ್ ಅಂಬಾನಿ ವಿಶ್ವದ ಆರನೇ ಶ್ರೀಮಂತ ವ್ಯಕ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಭಾರತ ಮತ್ತು ಏಷ್ಯಾದ ಅತ್ಯಂತ ಶ್ರೀಮಂತ ವ್ಯಕ್ತಿ ಮುಖೇಶ್ ಅಂಬಾನಿ ಈ ಸ್ಥಾನವನ್ನು ಸಾಧಿಸಿದ್ದು, ಗೂಗಲ್‌ನ ಸಹ-ಸಂಸ್ಥಾಪಕ ಲ್ಯಾರಿ ಪೇಜ್ ಅವರನ್ನು ಹಿಂದಿಕ್ಕಿದ್ದಾರೆ.

Recommended Video

ಸದ್ಯಕ್ಕೆ ಸರಿಯಾಗೋದಿಲ್ಲ ಕೊರೊನ ಪರಿಸ್ಥಿತಿ - WHO | Oneindia Kannada

ಬ್ಲೂಮ್‌ಬರ್ಗ್ ಬಿಲಿಯನೇರ್ಸ್ ಸೂಚ್ಯಂಕದ ಪ್ರಕಾರ, ಮುಖೇಶ್ ಅಂಬಾನಿಯ ಒಟ್ಟು ಆಸ್ತಿ ಈಗ 72.4 ಬಿಲಿಯನ್ ಅಮೆರಿಕನ್ ಡಾಲರ್ ಆಗಿದೆ. ಇದಕ್ಕೂ ಮೊದಲು ಮುಖೇಶ್ ಅಂಬಾನಿ ವಿಶ್ವದ ಅತಿದೊಡ್ಡ ಹೂಡಿಕೆದಾರ ಮತ್ತು ಹ್ಯಾಥ್‌ವೇ ಬರ್ಕ್‌ಷೈರ್‌ನ ವಾರೆನ್ ಬಫೆಟ್‌ರನ್ನು ಹಿಂದಿಕ್ಕಿ 8 ನೇ ಸ್ಥಾನದಲ್ಲಿದ್ದರು. ವಿಶ್ವದ 10 ಶ್ರೀಮಂತರ ಪಟ್ಟಿಯಲ್ಲಿ ಏಷ್ಯಾದ ಏಕೈಕ ವ್ಯಕ್ತಿ ಮುಖೇಶ್ ಅಂಬಾನಿ ಎಂಬುದು ಗಮನಾರ್ಹವಾಗಿದೆ.

ವಾರೆನ್ ಬಫೆಟ್‌ರನ್ನೇ ಹಿಂದಿಕ್ಕಿದ ಮುಕೇಶ್ ಅಂಬಾನಿ: ಈಗ ವಿಶ್ವದ 8ನೇ ಅತಿದೊಡ್ಡ ಶ್ರೀಮಂತವಾರೆನ್ ಬಫೆಟ್‌ರನ್ನೇ ಹಿಂದಿಕ್ಕಿದ ಮುಕೇಶ್ ಅಂಬಾನಿ: ಈಗ ವಿಶ್ವದ 8ನೇ ಅತಿದೊಡ್ಡ ಶ್ರೀಮಂತ

ರಿಲಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷರ ಸಂಪತ್ತು ಹೆಚ್ಚಾಗಲು ಕಾರಣ ರಿಲಯನ್ಸ್ ಇಂಡಸ್ಟ್ರೀಸ್ ಷೇರುಗಳ ನಿರಂತರ ಹೆಚ್ಚಳವಾಗಿದೆ. ಮಾರ್ಚ್‌ನಿಂದ ಆರ್‌ಐಎಲ್ ಷೇರುಗಳು ದ್ವಿಗುಣಗೊಂಡಿವೆ. ವಾಸ್ತವವಾಗಿ, ಇತ್ತೀಚೆಗೆ ರಿಲಯನ್ಸ್‌ನ ತಂತ್ರಜ್ಞಾನ ಘಟಕ ಜಿಯೋ ಪ್ಲಾಟ್‌ಫಾರ್ಮ್‌ಗಳು ಫೇಸ್‌ಬುಕ್ ಸೇರಿದಂತೆ ಹಲವಾರು ಜಾಗತಿಕ ಕಂಪನಿಗಳೊಂದಿಗೆ ಒಪ್ಪಂದಗಳನ್ನು ಘೋಷಿಸಿವೆ

Mukesh Ambani Become Sixth Richest Person In The World

ಅಂದಿನಿಂದ, ಆರ್ಐಎಲ್ ಷೇರುಗಳು ಏರಿಕೆಯನ್ನೇ ಕಾಣುತ್ತಿವೆ. ಮೂರು ತಿಂಗಳಲ್ಲಿ 12 ವಿದೇಶಿ ಕಂಪನಿಗಳು ರಿಲಯನ್ಸ್ ಜಿಯೋದಲ್ಲಿ ಹೂಡಿಕೆ ಮಾಡಿವೆ. ಫೇಸ್‌ಬುಕ್, ಸಿಲ್ವರ್ ಲೇಕ್ ಪಾರ್ಟ್‌ನರ್ಸ್, ವಿಸ್ಟಾ, ಜನರಲ್ ಅಟ್ಲಾಂಟಿಕ್, ಕೆಕೆಆರ್, ಮುಬಡಾಲಾ, ಸಿಲ್ವರ್ ಲೇಕ್, ಎಡಿಐಎ, ಟಿಪಿಜಿ, ಎಲ್ ಕ್ಯಾಟರ್ಟನ್, ಪಿಐಎಫ್ ಜಿಯೋದಲ್ಲಿ ಹೂಡಿಕೆ ಮಾಡಿವೆ. ಜಿಯೋ ಪ್ಲಾಟ್‌ಫಾರ್ಮ್‌ಗಳ ಷೇರು ಮಾರಾಟದಿಂದ ರಿಲಯನ್ಸ್ 1.18 ಲಕ್ಷ ಕೋಟಿ ರುಪಾಯಿ ದಾಟಿದೆ. ಆರ್ಐಎಲ್ ಇದುವರೆಗೆ ಜಿಯೋ ಪ್ಲಾಟ್‌ಫಾರ್ಮ್‌ಗಳಲ್ಲಿ ಶೇಕಡಾ 25.09 ರಷ್ಟು ಪಾಲನ್ನು ಹೂಡಿಕೆ ಮಾಡಿದೆ.

ಬ್ಲೂಮ್‌ಬರ್ಗ್‌ ಬಿಲಿಯನೇರ್‌ ಟಾಪ್‌ 10 ಪಟ್ಟಿ ಇಂತಿದೆ,

1. ಜೆಫ್ ಬೇಜೋಸ್

2. ಬಿಲ್‌ಗೇಟ್ಸ್‌

3. ಬರ್ನಾರ್ಡ್‌ ಅರ್ನಾಲ್ಡ್

‌4. ಮಾರ್ಕ್ ಜುಕರ್‌ಬರ್ಗ್‌

5. ಸ್ಟೀವ್‌ ಬಲ್ಮರ್‌

6. ಮುಕೇಶ್‌ ಅಂಬಾನಿ

7. ಲ್ಯಾರಿ ಪೇಜ್

8. ವಾರೆನ್‌ ಬಫೆಟ್

9. ಸರ್ಗಿ ಬ್ರಿನ್‌

10. ಎಲೋನ್ ಮಸ್ಕ್

English summary
Reliance Industries Limited (RIL) Chairman and Managing Director Mukesh Ambani is now richer than Alphabet (Google's parent) co-founders Sergey Brin and Larry Page in terms of net worth, becoming the world's sixth-richest person.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X