• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಜಿಯೋದಲ್ಲಿ 9,033 ಕೋಟಿ ರುಪಾಯಿ ಹೂಡಿಕೆ ಮಾಡಿದ ಮುಬದಾಲ: 6 ವಾರದಲ್ಲಿ 6 ಡೀಲ್

|

ನವದೆಹಲಿ, ಜೂನ್ 5: ರಿಲಯನ್ಸ್ ಜಿಯೋ ಕಂಪನಿಗೆ ವಿಶ್ವದ ಎಲ್ಲಾ ಸಂಸ್ಥೆಗಳು ಹಣ ಹೂಡಿಕೆ ಮಾಡಲು ಎದುರು ನೋಡುತ್ತಿವೆ. ಒಂದರ ಹಿಂದೆ ಮತ್ತೊಂದರಂತ ಬೃಹತ್ ಕಂಪನಿಗಳು ಜಿಯೋ ಪಾಲು ಪಡೆಯಲು ಸ್ಪರ್ಧೆಗಿಳಿದಿವೆ. ಈಗ ಅಬುಧಾಭಿಯ ರಾಜ್ಯ ನಿಧಿ ಮುಬದಾಲಾ ಇನ್ವೆಸ್ಟ್‌ಮೆಂಟ್ ಕಂಪನಿ ರಿಲಯನ್ಸ್ ಇಂಡಸ್ಟ್ರೀಸ್ ಡಿಜಿಟಲ್ ಯುನಿಟ್ ಜಿಯೋ ಪ್ಲಾಟ್‌ಫಾರ್ಮ್‌ಗಳಲ್ಲಿ ಸುಮಾರು 1 ಬಿಲಿಯನ್ ಅಮೆರಿಕನ್ ಡಾಲರ್ ಹೂಡಿಕೆ ಮಾಡಲು ಮುಂದಾಗಿದೆ ಎಂದು ಮೂಲಗಳು ತಿಳಿಸಿವೆ.

ಜಿಯೋ ಪ್ಲಾಟ್‌ಫಾರ್ಮ್‌ಗಳಲ್ಲಿ 1.85 ಪರ್ಸೆಂಟ್‌ನಷ್ಟು ಪಾಲನ್ನು ಪಡೆಯಲು ಮುಂದಾಗಿರುವ ಅಬುದಾಬಿಯ ಮುಬದಾಲ 9,033 ಕೋಟಿ ರುಪಾಯಿ ಹೂಡಿಕೆ ಮಾಡಲಿದೆ.

ಜಿಯೋದಲ್ಲಿ ಒಟ್ಟು 87,655 ಕೋಟಿ ರುಪಾಯಿ ಹೂಡಿಕೆ

ಜಿಯೋದಲ್ಲಿ ಒಟ್ಟು 87,655 ಕೋಟಿ ರುಪಾಯಿ ಹೂಡಿಕೆ

ಕಳೆದ ತಿಂಗಳಿಂದ ಈಚೆಗೆ ಫೇಸ್ ಬುಕ್, ಸಿಲ್ವರ್ ಲೇಕ್, ವಿಸ್ಟಾ, ಜನರಲ್ ಅಟ್ಲಾಂಟಿಕ್ ಹಾಗೂ ಕೆಕೆಆರ್ ಸೇರಿ ಒಂದರ ಹಿಂದೆ ಮತ್ತೊಂದು ಕಂಪನಿಗಳು ಹೂಡಿಕೆ ಮಾಡುತ್ತಲೇ ಬಂದಿವೆ. ಇದರ ಜೊತೆಗೆ ಮುಬದಾಲ ಸೇರಿದ್ದರಿಂದ ರಿಲಯನ್ಸ್ ಜಿಯೋದಲ್ಲಿ ಒಟ್ಟು 87,655.35 ಕೋಟಿ ರುಪಾಯಿ ಹೂಡಿಕೆ ಆಗಿದೆ.

5ನೇ ಬಹುದೊಡ್ಡ ಹೂಡಿಕೆ ಪಡೆದ ರಿಲಯನ್ಸ್ ಜಿಯೋ

ಜಿಯೋ ಸಂಸ್ಥೆಯ 18.97 ಪರ್ಸೆಂಟ್ ಪಾಲು ಮಾರಾಟ

ಜಿಯೋ ಸಂಸ್ಥೆಯ 18.97 ಪರ್ಸೆಂಟ್ ಪಾಲು ಮಾರಾಟ

ಸಂಗೀತ ಮತ್ತು ಚಲನಚಿತ್ರ ಅಪ್ಲಿಕೇಶನ್‌ಗಳು ಮತ್ತು ರಿಲಯನ್ಸ್‌ನ ಟೆಲಿಕಾಂ ಉದ್ಯಮವಾದ ಜಿಯೋ ಇನ್ಫೋಕಾಮ್ ಅನ್ನು ಹೊಂದಿರುವ ಜಿಯೋ ಪ್ಲಾಟ್‌ಫಾರ್ಮ್‌ಗಳು, ಒಂದು ತಿಂಗಳಲ್ಲಿ ಫೇಸ್‌ಬುಕ್ ಇಂಕ್ ಸೇರಿದಂತೆ ಹೂಡಿಕೆದಾರರಿಂದ 10 ಬಿಲಿಯನ್ ಡಾಲರ್ ಮೊತ್ತವನ್ನು ಪಡೆದುಕೊಂಡಿದೆ. ಈ ಆರು ಬೃಹತ್ ನಿಧಿಸಂಗ್ರಹ ವ್ಯವಹಾರಗಳಲ್ಲಿ ಜಿಯೋ 18.97 ಪರ್ಸೆಂಟ್ ಪಾಲನ್ನು ಮಾರಾಟ ಮಾಡಿದೆ.

ಆರು ವಾರಗಳಲ್ಲಿ ಆರು ಡೀಲ್!

ಆರು ವಾರಗಳಲ್ಲಿ ಆರು ಡೀಲ್!

ಹೌದು, ಜಗತ್ತಿನಲ್ಲಿ ಕೊರೊನಾ ಕಾಟದಿಂದ ಅನೇಕ ದೇಶಗಳ ಅರ್ಥ ವ್ಯವಸ್ಥೆ ಕಂಗೆಟ್ಟು ಹೋಗಿದೆ, ಇದರಿಂದ ಭಾರತವೂ ಹೊರತಾಗಿಲ್ಲ. ಇಂತಹ ಸಂದರ್ಭದಲ್ಲೂ ರಿಲಯನ್ಸ್ ಇಂಡಸ್ಟ್ರೀಸ್ ವಿದೇಶಿ ಹೂಡಿಕೆಯನ್ನು ಸೆಳೆಯುವಲ್ಲಿ ಯಶಸ್ವಿಯಾಗಿದೆ. ಕಳೆದ ಆರು ವಾರಗಳಲ್ಲಿ ಆರು ಡೀಲ್ ಮಾಡಿಕೊಂಡಿದೆ.

ಜಿಯೋ ಪ್ಲಾಟ್‌ಫಾರ್ಮ್ಸ್‌ನಲ್ಲಿ ಜನರಲ್ ಅಟ್ಲಾಂಟಿಕ್ ಹೂಡಿಕೆ

ಏಪ್ರಿಲ್ 22 ರಂದು ಫೇಸ್‌ಬುಕ್‌ ಜಿಯೋದ 9.99 ಪರ್ಸೆಂಟ್‌ರಷ್ಟು ಪಾಲು ಖರೀದಿಸಲು 43,574 ಕೋಟಿ ರುಪಾಯಿ ಹೂಡಿಕೆ ಮಾಡಿತ್ತು. ನಂತರದಲ್ಲಿ ಸರಣಿ ಒಪ್ಪಂದಗಳು ನಡೆದವು. ಅಂದಿನಿಂದ, ಜನರಲ್ ಅಟ್ಲಾಂಟಿಕ್, ಸಿಲ್ವರ್ ಲೇಕ್, ವಿಸ್ಟಾ ಇಕ್ವಿಟಿ ಪಾರ್ಟ್‌ನರ್ಸ್ ಮತ್ತು ಕೆಕೆಆರ್ ಒಟ್ಟಾಗಿ ಜಿಯೋಗೆ 78,562 ಕೋಟಿ ರುಪಾಯಿ ಹೂಡಿಕೆ ಮಾಡಿದವು.

ಯಾವ್ಯಾವ ಕಂಪನಿಗೆ ಎಷ್ಟು ಪಾಲು?

ಯಾವ್ಯಾವ ಕಂಪನಿಗೆ ಎಷ್ಟು ಪಾಲು?

ಈ ಮೇಲೆ ತಿಳಿಸಿದಂತೆ ಫೇಸ್‌ಬುಕ್‌ ಮೊದಲು ಜಿಯೋದ 9.9 ಪರ್ಸೆಂಟ್ ಪಾಲನ್ನು ಪಡೆದರೆ, ಸಿಲ್ವರ್ ಲೇಕ್ 1.15%, ವಿಸ್ಟಾ 2.32%, ಜನರಲ್ ಅಟ್ಲಾಂಟಿಕ್ 1.34%, ಕೆಕೆಆರ್ 2.32%, ಹಾಗೂ ಇದೀಗ ಮುಬದಾಲ 1.85% ಪಾಲನ್ನು ಪಡೆದಿದ್ದು ಒಟ್ಟಾರೆ ಹೂಡಿಕೆ 87,655.35 ಕೋಟಿ ರುಪಾಯಿ ಆಗಿದೆ.

ಜಿಯೋ ರೀಚಾರ್ಜ್ ಮಾಡಿ ನಾಲ್ಕು ಪಟ್ಟು ಹೆಚ್ಚು ಲಾಭ ಪಡೆಯಿರಿ

2021ರ ವೇಳೆಗೆ ಶೂನ್ಯ ಸಾಲ ಹೊಂದಲಿರುವ RIL

2021ರ ವೇಳೆಗೆ ಶೂನ್ಯ ಸಾಲ ಹೊಂದಲಿರುವ RIL

ಸಾಮಾಜಿಕ ಜಾಲತಾಣ ದಿಗ್ಗಜ ಫೇಸ್‌ಬುಕ್ ಸೇರಿದಂತೆ ಆರು ಕಂಪನಿಗಳು ರಿಲಯನ್ಸ್‌ ಜಿಯೋದಲ್ಲಿ ಭಾರೀ ಹೂಡಿಕೆಯಿಂದಾಗಿ ರಿಲಯನ್ಸ್ ಇಂಡಸ್ಟ್ರೀಸ್ (ಆರ್‌ಐಎಲ್) ಮಾರ್ಚ್ 2021ರ ವೇಳೆಗೆ ಶೂನ್ಯ ನಿವ್ವಳ ಸಾಲ ಕಂಪನಿಯಾಗುತ್ತದೆ ಎಂದು ವಿಶ್ಲೇಷಕರು ಹೇಳುತ್ತಿದ್ದಾರೆ. ಒಪ್ಪಂದದ ನಗದು ಹರಿವು ಆರ್ಐಎಲ್ ಒಟ್ಟಾರೆ ನಿವ್ವಳ ಸಾಲವನ್ನು ತಗ್ಗಿಸಲು ಸಹಾಯ ಮಾಡುತ್ತದೆ ಮತ್ತು ಮಾರ್ಚ್ 2021 ರ ವೇಳೆಗೆ ಶೂನ್ಯ ನಿವ್ವಳ ಸಾಲವನ್ನು ಸಾಧಿಸುವ ಗುರಿಯತ್ತ ಸಾಗಲು ಸಹಾಯ ಮಾಡುತ್ತದೆ.

English summary
Abu Dhabi sovereign fund Mubadala Investment Company will inject Rs 9,093.6 crore in Jio Platforms in exchange for 1.85 percent
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X