ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮುಬದಾಲದಿಂದ ರಿಲಯನ್ಸ್ ರೀಟೇಲ್ ನಲ್ಲಿ 6,247.5 ಕೋಟಿ ರು. ಹೂಡಿಕೆ

|
Google Oneindia Kannada News

ಮುಂಬೈ, ಅಕ್ಟೋಬರ್ 1: ಅಬುಧಾಬಿ ಮೂಲದ ಸಾರ್ವಭೌಮ ಹೂಡಿಕೆದಾರ ಮುಬದಾಲ ಇನ್‌ವೆಸ್ಟ್‌ಮೆಂಟ್ ಕಂಪೆನಿಯಿಂದ (ಮುಬದಾಲ) ರಿಲಯನ್ಸ್ ರೀಟೇಲ್ ವೆಂಚರ್ಸ್ ಲಿಮಿಟೆಡ್ ನಲ್ಲಿ (RRVL) 6,247.5 ಕೋಟಿ ರುಪಾಯಿ (AED 3.1 ಬಿಲಿಯನ್) ಹೂಡಿಕೆ ಮಾಡಲಿದೆ ಎಂದು ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ಹಾಗೂ ರಿಲಯನ್ಸ್ ರೀಟೇಲ್ ವೆಂಚರ್ಸ್ ಲಿಮಿಟೆಡ್ ಗುರುವಾರದಂದು ಘೋಷಣೆ ಮಾಡಿವೆ.

ಈ ಹೊಸ ಹೂಡಿಕೆಯು ರಿಲಯನ್ಸ್ ರೀಟೇಲ್ ಪ್ರೀ ಮನಿ ಈಕ್ವಿಟಿ ಮೌಲ್ಯವನ್ನು 4.285 ಲಕ್ಷ ಕೋಟಿ ರುಪಾಯಿ ಮಾಡಿದೆ. ಇಷ್ಟು ಮೊತ್ತಕ್ಕೆ ಫುಲ್ಲಿ ಡೈಲ್ಯೂಟೆಡ್ ಆಧಾರದಲ್ಲಿ ರಿಲಯನ್ಸ್ ರೀಟೇಲ್ ವೆಂಚರ್ಸ್ ನ 1.40% ಈಕ್ವಿಟಿ ಪಾಲು ಖರೀದಿಯನ್ನು ಮುಬದಾಲ ಮಾಡಿದಂತಾಗುತ್ತದೆ.

ಸಿಲ್ವರ್ ಲೇಕ್ ಸಹ ಹೂಡಿಕೆದಾರರಿಂದ RRVLನಲ್ಲಿ ಹೆಚ್ಚುವರಿ 1,875 ಕೋಟಿ ರು. ಹೂಡಿಕೆ ಸಿಲ್ವರ್ ಲೇಕ್ ಸಹ ಹೂಡಿಕೆದಾರರಿಂದ RRVLನಲ್ಲಿ ಹೆಚ್ಚುವರಿ 1,875 ಕೋಟಿ ರು. ಹೂಡಿಕೆ

ಈ ವರ್ಷದ ಆರಂಭದಲ್ಲಿ ಮುಬದಾಲದಿಂದ ಜಿಯೋ ಪ್ಲಾಟ್ ಫಾರ್ಮ್ಸ್ ನಲ್ಲಿ 1.2 ಬಿಲಿಯನ್ ಅಮೆರಿಕನ್ ಡಾಲರ್ ಹೂಡಿಕೆಯ ಘೋಷಣೆ ಮಾಡಲಾಗಿತ್ತು. ಜಿಯೋ ಪ್ಲಾಟ್ ಫಾರ್ಮ್ಸ್ ನಂತರ ರಿಲಯನ್ಸ್ ಇಂಡಸ್ಟ್ರೀಸ್ ನ ಮತ್ತೊಂದು ಅಂಗಸಂಸ್ಥೆಯಾದ ರಿಲಯನ್ಸ್ ರೀಟೇಲ್ ವೆಂಚರ್ಸ್ ನಲ್ಲಿ ಮುಬದಾಲ ಮಾಡುತ್ತಿರುವ ಅತಿ ಮುಖ್ಯವಾದ ಹೂಡಿಕೆ ಇದು.

ರಿಲಯನ್ಸ್ ಇಂಡಸ್ಟ್ರೀಸ್ ಅಂಗಸಂಸ್ಥೆ

ರಿಲಯನ್ಸ್ ಇಂಡಸ್ಟ್ರೀಸ್ ಅಂಗಸಂಸ್ಥೆ

ರಿಲಯನ್ಸ್ ರೀಟೇಲ್ ಲಿಮಿಟೆಡ್ ಎಂಬುದು ರಿಲಯನ್ಸ್ ಇಂಡಸ್ಟ್ರೀಸ್ ಅಂಗಸಂಸ್ಥೆ. ಭಾರತದ ಅತಿ ದೊಡ್ಡ ಹಾಗೂ ವೇಗವಾಗಿ ಬೆಳೆಯುತ್ತಿರುವ ಮತ್ತು ಲಾಭದಾಯಕವಾದ ಉದ್ಯಮ. ದೇಶದಾದ್ಯಂತ 12 ಸಾವಿರ ಮಳಿಗೆಗಳನ್ನು ಹೊಂದಿದೆ. ಭಾರತದ ರೈತರು, ಎಂಎಸ್ ಎಂಇ ವಲಯ ಬಲಪಡಿಸುವ ಮೂಲಕ ಲಕ್ಷಾಂತರ ಗ್ರಾಹಕರಿಗೆ ಸೇವೆ ಸಲ್ಲಿಸುವ ಉದ್ದೇಶ RRVLಗೆ ಇದೆ.

ರಿಲಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷ ಮುಕೇಶ್ ಅಂಬಾನಿ ಮಾತನಾಡಿ, ರಿಲಯನ್ಸ್ ರೀಟೇಲ್ ವೆಂಚರ್ಸ್ ನ ಮೌಲ್ಯಯುತ ಹೂಡಿಕೆದಾರರಾಗಿ ಮುಬದಾಲವನ್ನು ಸ್ವಾಗತಿಸಲು ಸಂತೋಷವಾಗುತ್ತದೆ. ಜ್ಞಾನ ಶ್ರೀಮಂತಿಕೆಯಿಂದ ಕೂಡಿರುವ ಮುಬದಾಲದಂಥ ಸಂಸ್ಥೆ ಜತೆಗೆ ಸಹಭಾಗಿತ್ವ ವಹಿಸಿರುವುದನ್ನು ಗೌರವಿಸುತ್ತೇವೆ ಎಂದಿದ್ದಾರೆ.

ಅಧ್ಯಕ್ಷ ಮುಕೇಶ್ ಅಂಬಾನಿ ಮಾತನಾಡಿ

ಅಧ್ಯಕ್ಷ ಮುಕೇಶ್ ಅಂಬಾನಿ ಮಾತನಾಡಿ

ಭಾರತದ ರೀಟೇಲ್ ವಲಯವನ್ನು ಬಲಪಡಿಸಬೇಕು ಎಂದಿರುವ ನಮ್ಮ ಗುರಿಯ ಮೇಲೆ ಮುಬದಾಲ ಇಟ್ಟಿರುವ ವಿಶ್ವಾಸವನ್ನು ಉಳಿಸಿಕೊಳ್ಳುತ್ತೇವೆ. ಅದು ಕೂಡ ಲಕ್ಷಾಂತರ ಸಣ್ಣ ಪ್ರಮಾಣದ ಚಿಲ್ಲರೆ ಮಾರಾಟಗಾರರು, ವರ್ತಕರು- ತಂತ್ರಜ್ಞಾನದ ಶಕ್ತಿಯ ಮೂಲಕ. ಮುಬದಾಲದ ಹೂಡಿಕೆ ಮತ್ತು ಮಾರ್ಗದರ್ಶನವು ಈ ಪ್ರಯಾಣದಲ್ಲಿ ಬೆಲೆಯೇ ಕಟ್ಟಲಾಗದ ಬೆಂಬಲ ಆಗಲಿದೆ ಎಂದು ಅಧ್ಯಕ್ಷ ಮುಕೇಶ್ ಅಂಬಾನಿ ಹೇಳಿದ್ದಾರೆ.

ಮುಬದಾಲ ಇನ್ವೆಸ್ಟ್ ಮೆಂಟ್ ಕಂಪೆನಿ ಸಮೂಹದ ಸಿಇಒ ಹಾಗೂ ಕಾರ್ಯನಿರ್ವಾಹಕ ನಿರ್ದೇಶಕ ಖಲ್ದೂನ್ ಅಲ್ ಮುಬಾರಕ್ ಮಾತನಾಡಿ, ರಿಲಯನ್ಸ್ ರೀಟೇಲ್ ವೆಂಚರ್ಸ್ ಲಿಮಿಟೆಡ್ ನಲ್ಲಿ ಹೂಡಿಕೆ ಮಾಡುವ ಮೂಲಕ ರಿಲಯನ್ಸ್ ಇಂಡಸ್ಟ್ರೀಸ್ ಜತೆಗೆ ಬಾಂಧವ್ಯ ಗಟ್ಟಿಯಾಗುತ್ತಿರುವುದಕ್ಕೆ ಸಂತೋಷವಾಗುತ್ತಿದೆ ಎಂದು ಹೇಳಿದ್ದಾರೆ.

ಸಣ್ಣ ವ್ಯಾಪಾರಿಗಳಿಗೆ ಮಾರುಕಟ್ಟೆಗೆ ಸಂಪರ್ಕ

ಸಣ್ಣ ವ್ಯಾಪಾರಿಗಳಿಗೆ ಮಾರುಕಟ್ಟೆಗೆ ಸಂಪರ್ಕ

ಅವರ ದೃಷ್ಟಿಕೋನವು ಎಲ್ಲರನ್ನೂ ಒಳಗೊಂಡಂತೆ ಭಾರತದ ಗ್ರಾಹಕರ ಆರ್ಥಿಕತೆಯನ್ನು ಡಿಜಿಟೈಸೇಷನ್ ಶಕ್ತಿಯ ಮೂಲಕ ಬದಲಾವಣೆ ಮಾಡುತ್ತದೆ. ಅವಕಾಶಗಳನ್ನು ಸೃಷ್ಟಿಸುತ್ತದೆ. ದೇಶದಲ್ಲಿರುವ ಲಕ್ಷಾಂತರ ಮಂದಿ ಸಣ್ಣ ವ್ಯಾಪಾರಿಗಳಿಗೆ ಮಾರುಕಟ್ಟೆಗೆ ಸಂಪರ್ಕ ಪಡೆಯಲು ಸಹಾಯ ಮಾಡುತ್ತದೆ. ಕಂಪೆನಿಯ ನಿರಂತರ ಬೆಳವಣಿಗೆಗೆ ಬೆಂಬಲಿಸಲು ಬದ್ಧವಾಗಿದ್ದೇವೆ ಎಂದು ಹೇಳಿದ್ದಾರೆ.

ನಿಯಂತ್ರಕರು ಮತ್ತು ಇತರ ಅನುಮತಿಗಳ ಆಧಾರದ ಮೇಲೆ ಈ ವ್ಯವಹಾರವು ಅಂತಿಮವಾಗುತ್ತದೆ. ಮೊರ್ಗನ್ ಸ್ಟ್ಯಾನ್ಲಿಯು ಆರ್ಥಿಕ ಸಲಹೆಗಾರರಾಗಿ ಹಾಗೂ ಸಿರಿಲ್ ಅಮರ್ ಚಂದ್ ಮಂಗಲ್ ದಾಸ್ ಮತ್ತು ಡೇವಿಸ್ ಪೋಲ್ಕ್ ಅಂಡ್ ವಾರ್ಡ್ ವೆಲ್ ಕಾನೂನು ಸಲಹೆಗಾರರಾಗಿ ರಿಲಯನ್ಸ್ ರೀಟೇಲ್ ಪರ ಇದ್ದರು.

ಸಿಲ್ವರ್ ಲೇಕ್ ಸಹ ಹೂಡಿಕೆದಾರರಿಂದ ಹೂಡಿಕೆ

ಸಿಲ್ವರ್ ಲೇಕ್ ಸಹ ಹೂಡಿಕೆದಾರರಿಂದ ಹೂಡಿಕೆ

ಸಿಲ್ವರ್ ಲೇಕ್ ಸಹ ಹೂಡಿಕೆದಾರರಿಂದ ರಿಲಯನ್ಸ್ ರೀಟೇಲ್ ವೆಂಚರ್ಸ್ ಲಿಮಿಟೆಡ್ ನಲ್ಲಿ (RRVL) ಹೆಚ್ಚುವರಿಯಾಗಿ 1,875 ಕೋಟಿ ರುಪಾಯಿ ಹೂಡಿಕೆ ಆಗಲಿದೆ ಎಂದು ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ಹಾಗೂ ರಿಲಯನ್ಸ್ ರೀಟೇಲ್ ವೆಂಚರ್ಸ್ ಲಿಮಿಟೆಡ್ ಬುಧವಾರದಂದು ಘೋಷಣೆ ಮಾಡಿವೆ. ಈ ಮೂಲಕ ಸಿಲ್ವರ್ ಲೇಕ್ ಮತ್ತು ಅದರ ಸಹ ಹೂಡಿಕೆದಾರರು ರಿಲಯನ್ಸ್ ರೀಟೇಲ್ ನಲ್ಲಿ ಮಾಡುವ ಸರಾಸರಿ ಹೂಡಿಕೆ ಮೊತ್ತ 9,375 ಕೋಟಿ ರುಪಾಯಿ ಆಗುತ್ತದೆ. ಇಷ್ಟು ಮೊತ್ತಕ್ಕೆ ಫುಲ್ಲಿ ಡೈಲ್ಯೂಟೆಡ್ ಆಧಾರದಲ್ಲಿ ರಿಲಯನ್ಸ್ ರೀಟೇಲ್ ವೆಂಚರ್ಸ್ ನ 2.13% ಈಕ್ವಿಟಿ ಪಾಲು ಖರೀದಿ ಆದಂತಾಗುತ್ತದೆ. ಈ ಹೊಸ ಹೂಡಿಕೆಯು ರಿಲಯನ್ಸ್ ರೀಟೇಲ್ ಪ್ರೀ ಮನಿ ಈಕ್ವಿಟಿ ಮೌಲ್ಯವನ್ನು 4.285 ಲಕ್ಷ ಕೋಟಿ ರುಪಾಯಿ ಮಾಡಿದೆ.

English summary
Reliance Industries Limited (“Reliance Industries”) and Reliance Retail Ventures Limited (“RRVL”) announced today that Mubadala Investment Company (Mubadala), the Abu Dhabi-based sovereign investor, will invest ₹ 6,247.5 crore (AED 3.1 billion) into Reliance Retail Ventures Limited (RRVL), a subsidiary of India’s Reliance Industries Limited (Reliance Industries).
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X