ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಎಂಟಿಆರ್ ಆಹಾರ, ಮೈಸೂರು ಸ್ಯಾಂಡಲ್ ಸೋಪ್ ಯುಎಸ್ ನಲ್ಲಿ ತಿರಸ್ಕೃತ

|
Google Oneindia Kannada News

ಬೆಂಗಳೂರು, ಸೆಪ್ಟೆಂಬರ್ 22: ಅಮೆರಿಕಾದಲ್ಲಿ ಕರ್ನಾಟಕದ ಮೈಸೂರು ಸ್ಯಾಂಡಲ್ ಸೋಪ್, ಎಂಟಿ ಆರ್ ನ ಆಹಾರ ಪದಾರ್ಥಗಳನ್ನು ತಿರಸ್ಕರಿಸಲಾಗಿದೆ ಎಂದು ವರದಿಯಾಗಿದೆ.

ಈ ವರ್ಷದ ಜನವರಿ ಹಾಗೂ ಆಗಸ್ಟ್ ಮಧ್ಯೆ ಭಾರತದ ವಿವಿಧ ರಾಜ್ಯಗಳ 1859 ಸರಕನ್ನು ಅಮೆರಿಕಾ ತಿರಸ್ಕೃತಗೊಳಿಸಿದೆ. ಆ ಪೈಕಿ ಕೆಲವು ಡೀಲರ್ಸ್ ಗಳಂತೂ ನೇರವಾಗಿ ತಯಾರಿಕರಿಂದಲೇ ವಸ್ತುಗಳನ್ನು ಖರೀದಿಸಿದವರಲ್ಲ. ಬ್ರ್ಯಾಂಡೆಡ್ ವಸ್ತುಗಳನ್ನು ರಫ್ತು ಮಾಡಿದ್ದವರೇ ಬಲಿಪಶುಗಳಾಗಿದ್ದಾರೆ ಎಂದು ತಜ್ಞರು ಅಭಿಪ್ರಾಯಪಡುತ್ತಾರೆ.[ಇನ್ನು ಹಾಪ್ ಕಾಮ್ಸ್ ನಲ್ಲಿ ಎಂಟಿಆರ್ ಉತ್ಪನ್ನಗಳು ಲಭ್ಯ]

MTR

ಎಂಟಿ ಆರ್ ಫುಡ್ಸ್ ನ ಸಿಇಒ ಸಂಜಯ್ ಶರ್ಮಾ, ಅಮೆರಿಕಾ ಆಹಾರ ಸುರಕ್ಷತೆ ಕಾಯ್ದೆ ಅನ್ವಯ ತಿರಸ್ಕೃತವಾದ ಸರಕುಗಳನ್ನು ರಫ್ತು ಮಾಡಿದ್ದವರು ಸಣ್ಣ ವ್ಯಾಪಾರಿಗಳು. ಅವರು ಸ್ಥಳೀಯವಾಗಿ ಖರೀದಿಸಿದವರು. ಆ ದೇಶದ ಆಮದು ನಿಯಮ ತಿಳಿದುಕೊಳ್ಳದೆ ಹೀಗೆ ಆಗಿದೆ. ಇದರಿಂದ ಅಮೆರಿಕಾದ ಆಹಾರ ಸುರಕ್ಷತೆ ಅಧಿಕಾರಿಗಳ ಕಣ್ಣಲ್ಲಿ ಕಂಪೆನಿಯ ಬ್ರ್ಯಾಂಡ್ ಹಾಗೂ ವಿಶ್ವಾಸಾರ್ಹತೆ ಕಡಿಮೆ ಆಗುತ್ತದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

ಇನ್ನು ವಿಪ್ರೋ ಕಂಪೆನಿ ತಯಾರಿಸುವ ವಸ್ತುಗಳು ತಿರಸ್ಕೃತವಾಗಿವೆ. ಈ ಬಗ್ಗೆ ಗ್ರಾಹಕರ ವಿಭಾಗದವರು ಸ್ಪಷ್ಟನೆ ನೀಡಿದ್ದು, ನಾವು ಅಮೆರಿಕಾಗೆ ರಫ್ತು ಮಾಡುವುದಿಲ್ಲ. ಈ ವರದಿಯಿಂದ ಆಶ್ಚರ್ಯವಾಗಿದೆ. ಅವು ನಕಲಿ ವಸ್ತುಗಳು. ಆ ಸ್ಯಾಂಪಲ್ ಗಳು ಮೈಸೂರಿನಲ್ಲಿ ತಯಾರಾದವು ಎಂದು ತಿಳಿದುಬಂದಿದೆ.[ಎಂಟಿಆರ್ ನಲ್ಲಿ ದೋಸೆ, ರವಾ ಇಡ್ಲಿ, ಹಲ್ವಾ ಸವಿದ ಸಿಎಂ]

ನಾವು ಮೈಸೂರಿನಲ್ಲಿ ಯಾವ ಸೋಪೂ ತಯಾರಿಸುವುದಿಲ್ಲ. ಇದರಿಂದ ಭಾರತದ ಮಾರುಕಟ್ಟೆಯಲ್ಲೂ ತೊಂದರೆ ಆಗುತ್ತೆ. ನಾವು ಗ್ರಾಹಕರಿಗೆ ಖಂಡಿತಾ ನಕಲಿ ವಸ್ತುಗಳನ್ನು ಪೂರೈಸುವುದಿಲ್ಲ ಎಂದು ಅವರು ಹೇಳಿದ್ದಾರೆ.

Mysore sandal

ಅಮೆರಿಕಾದ ಆಹಾರ ಮತ್ತು ಔಷಧ ಒಕ್ಕೂಟ 2015ರಲ್ಲಿ ಭಾರತದ ಹಲವು ತಿನಿಸುಗಳ ಆಮದನ್ನು ತಿರಸ್ಕರಿಸುವಂತೆ ಸಲಹೆ ನೀಡಿತ್ತು ಎಂದು ವರದಿಯಾಗಿತ್ತು. ಹಲ್ದೀರಾಮ್ಸ್ ಅವರ ಹಲವು ತಿನಿಸುಗಳು ತಿರಸ್ಕೃತವಾಗಿದ್ದವು. ಅದೇ ವರ್ಷದ ಫೆಬ್ರುವರಿಯಲ್ಲಿ ಬಿಡುಗಡೆ ಮಾಡಿದ್ದ ತಿರಸ್ಕೃತ ತಿನಿಸುಗಳ ಪಟ್ಟಿಯಲ್ಲಿ ಹಲ್ದೀರಾಮ್ಸ್ ಕಂಪೆನಿಯ ಹಲವು ತಿನಿಸುಗಳಿದ್ದವು.[ರೈಲಿನಲ್ಲಿ ಸಿಗಲಿದೆ ಎಂಟಿಆರ್ ಇಡ್ಲಿ, ಸಾಂಬಾರ್]

ಇನ್ನು ಇದಕ್ಕೆ ಕಾರಣವನ್ನೂ ಕೊಡಲಾಗಿದೆ. ಪ್ಯಾಕೇಜಿಂಗ್ ಸಮಸ್ಯೆ, ಕಲಬೆರಕೆ ಆರೋಪ, ಇದರ ಜತೆಗೆ ಭಾರತದ ಪದಾರ್ಥಗಳಲ್ಲಿ ಕೀಟನಾಶಕ ಔಷಧಗಳ ಪ್ರಮಾಣ ಹೆಚ್ಚು, ಬ್ಯಾಕ್ಟೀರಿಯಾಗಳು ಇರುತ್ತವೆ ಎನ್ನಲಾಗಿದೆ.

English summary
Many consignments of soap, detergent manufactured by Karnataka Soaps and Detergents Limited, along with food items of MTR reportedly rejected in US. The FDA website says Indian products have been found to contain high levels of pesticides.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X