ಕಾಫಿ ಬೋರ್ಡಿಗೆ ಅಧ್ಯಕ್ಷನಾದ ಬೆಳೆಗಾರ: ಸಂಸದೆ ಶೋಭಾ ಸಂತಸ

Posted By:
Subscribe to Oneindia Kannada

ಬೆಂಗಳೂರು, ಮೇ 17:ಅಧಿಕಾರಿಗಳ ಸುಪರ್ದಿಯಲ್ಲಿದ್ದ ಕಾಫಿ ಬೋರ್ಡಿಗೆ ಸುಮಾರು 70 ವರ್ಷಗಳ ನಂತರ ಬೆಳೆಗಾರರ ಪ್ರತಿನಿಧಿಯೊಬ್ಬರು ಅಧ್ಯಕ್ಷ ಸ್ಥಾನವನ್ನು ಅಲಂಕರಿಸುತ್ತಿರುವುದನ್ನು ಸಂಸದೆ ಶೋಭಾ ಕರಂದ್ಲಾಜೆ ಸ್ವಾಗತಿಸಿದ್ದಾರೆ.

ಚಿಕ್ಕಮಗಳೂರಿನ ಪ್ಲಾಂಟರ್ ಎಂಎಸ್ ಬೋಜೇಗೌಡ ಅವರು ಕಾಫಿ ಬೋರ್ಡಿಗೆ ಅಧ್ಯಕ್ಷರಾಗಿ ಬುಧವಾರ ಅಧಿಕಾರ ಸ್ವೀಕರಿಸಿದರು. ಬೋಜೇಗೌಡ ಅವರ ಅಧಿಕಾರ ಅವಧಿ ಡಿಸೆಂಬರ್ 14, 2018ರ ತನಕ ಇದೆ.

ಈ ಸಂದರ್ಭದಲ್ಲಿ ಮಾತನಾಡಿದ ಉಡುಪಿ -ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆ, ಅಧಿಕಾರೇತರು ಮತ್ತು ಕಾಫಿ ಬೆಳೆಗಾರರೊಬ್ಬರು ಕಾಫಿ ಮಂಡಳಿಗೆ ಅಧ್ಯಕ್ಷರಾಗಿರುವುದು ಸೂಕ್ತವಾಗಿದೆ. ಇವರಿಗೆ ಕಾಫಿ ಬೆಳೆಗಾರರ ಸಮಸ್ಯೆಗಳ ಅರಿವಿರುತ್ತದೆ ಎಂದು ಹೇಳಿದರು.

M S Boje Gowda planter from Chikkamagaluru takes over as Coffee Board Chairman

ಕಾಫಿ ಮಂಡಳಿ ಕಾರ್ಯದರ್ಶಿ ಶ್ರೀವತ್ಸ ಕೃಷ್ಣ, ಶಾಸಕ ಸಿ.ಟಿ.ರವಿ, ಬಿ.ಎಲ್.ಶಂಕರ್, ವಾಮ ನಾಚಾರ್ಯ, ಅಶ್ವತ್ಥನಾರಾಯಣ ಮತ್ತಿತರರು ಉಪಸ್ಥಿತರಿದ್ದರು.

ಬೋಜೇಗೌಡ ಮಾತನಾಡಿ, ಜಮ್ಮು-ಕಾಶ್ಮೀರದ ಸೈನಿಕರು ಕೂಡ ಕಾಫಿ ಕುಡಿಯುವಂತಾಗ ಬೇಕು. ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೆ ಕಾಫಿ ತಲುಪಬೇಕು. ಮೋದಿ ಅವರ ಆಶಯದಂತೆ ಕಾಫಿ ರಫ್ತು ದ್ವಿಗುಣಗೊಳಿಸಲು ಶ್ರಮಿಸಲಾಗುವುದು. ಸದ್ಯ 3 ಲಕ್ಷ ಟನ್ ಇರುವ ಉತ್ಪಾದನೆಯನ್ನು 6 ಲಕ್ಷ ಟನ್ ಗೇರಿಸಲು ಕ್ರಮ ಕೈಗೊಳ್ಳಲಾಗುವುದು ಎಂದರು.

ಕಾಫಿ ಸೇವನೆ ಹೆಚ್ಚಳ ಮಾಡುವುದು, ಕಾಫಿ ಪುಡಿ -ಚಕೋರಿ ಬಗ್ಗೆ ಇರುವ ಗೊಂದಲ ಪರಿಹರಿಸುವುದು, ಬರದ ಪರಿಸ್ಥಿತಿಯಲ್ಲಿ ಕಾಫಿ ಬೆಳೆಗಾರರ ಪರಿಸ್ಥಿತಿ ಅವಲೋಕನ ಸೇರಿದಂತೆ ಬೆಳೆಗಾರರ ಅನೇಕ ಸಮಸ್ಯೆಗಳನ್ನು ಬಗೆ ಹರಿಸಲು ವಾಣಿಜ್ಯ ಸಚಿವಾಲಯದ ಅಡಿಯಲ್ಲಿ ಬರುವ ಕಾಫಿ ಬೋರ್ಡ್ ಇನ್ಮುಂದೆ ಶ್ರಮಿಸಲಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
M S Boje Gowda planter from Chikkamagaluru takes over as Coffee Board ChairmanM S Boje Gowda, a planter from the India's key coffee growing region of Chikmagalur, took over as the Coffee Board Chairman on Wednesday. MP Shobha Karandlaje has welcomed this move and said man issued of planters will be solved in coming days.
Please Wait while comments are loading...