ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರೈಲ್ವೆ ಟಿಕೆಟ್ ಬುಕ್ಕಿಂಗ್ ಸುಲಭಗೊಳಿಸಿದ ಎಂರುಪೀ

By Mahesh
|
Google Oneindia Kannada News

ಬೆಂಗಳೂರು, ಫೆ. 16: ಎಂರುಪೀ, ಟಾಟಾ ಟೆಲಿಸರ್ವೀಸಸ್ ನ ಅಂಗಸಂಸ್ಥೆ ಹೆಚ್ಚುವರಿ ಪಾವತಿ ಮಾರ್ಗವನ್ನು ಒದಗಿಸಲು ಐಆರ್ ಟಿಸಿ, ಭಾರತದ ಅತಿದೊಡ್ಡ ಇ-ಕಾಮರ್ಸ್ ಕಂಪನಿಯೊಂದಿಗಿನ ತನ್ನ ಸಹಭಾಗಿತ್ವವನ್ನು ಘೋಷಿಸಿದೆ. ಭಾರತೀಯ ರೈಲ್ವೆ ದಿನಕ್ಕೆ 23 ಮಿಲಿಯನ್ ಗೂ ಹೆಚ್ಚು ಪ್ರಯಾಣಿಕರನ್ನು ಹೊತ್ತೊಯ್ಯುತ್ತದೆ

ಈ ಸಹಭಾಗಿತ್ವವು ಗಣನೀಯ ಸಂಖ್ಯೆಯ ಯಾತ್ರಿಕರಿಗೆ ಎಂರುಪೀ ವ್ಯಾಲೆಟ್ ಮೂಲಕ ರೈಲು ಟಿಕೆಟ್ ಬುಕ್ ಮಾಡಲು ಒನ್-ಟ್ಯಾಪ್ ಪಾವತಿಯ ಅವಕಾಶ ನೀಡುತ್ತದೆ.

ಇಂಡಿಯನ್ ರೈಲ್ವೆ ಕ್ಯಾಟರಿಂಗ್ ಆಂಡ್ ಟೂರಿಸಂ ಕಾರ್ಪೊರೇಶನ್ (ಐಆರ್ ಸಿಟಿಸಿ), ಭಾರತೀಯ ರೈಲ್ವೆಯ ಒಂದು ಅಂಗಸಂಸ್ಥೆಯಾಗಿದ್ದು, ಇದು ರೈಲ್ವೆಯ ಆಹಾರ ಪೂರೈಕೆ, ಪ್ರವಾಸೋದ್ಯಮ ಮತ್ತು ಆನ್ ಲೈನ್ ಟಿಕೆಟ್ ನೀಡುವ ಕಾರ್ಯಾಚರಣೆಗಳನ್ನು ನಿಭಾಯಿಸುತ್ತದೆ.[ರೈಲ್ವೆ ಇ-ಟಿಕೆಟ್ ಬುಕಿಂಗ್‌ಗೆ 15 ನಿಮಿಷ ಹೆಚ್ಚುವರಿ ಅವಕಾಶ]

ಭಾರತದ ಅತಿದೊಡ್ಡ ಇ-ಕಾಮರ್ಸ್ ಪೋರ್ಟಲ್ ಆಗಿರುವ ಐಆರ್ ಸಿಟಿಸಿ 2015ರ ಏಪ್ರಿಲ್ ನ ಒಂದು ದಿನ 13 ಲಕ್ಷ ಟಿಕೆಟ್ ಗಳನ್ನು ಬುಕ್ ಮಾಡಿದ ದಾಖಲೆಯನ್ನು ಹೊಂದಿದೆ. ಈ ಪೋರ್ಟಲ್ ಪ್ರತಿದಿನಕ್ಕೆ ಸರಾಸರಿ 4.5 ಲಕ್ಷದಿಂದ 5 ಲಕ್ಷ ಬುಕಿಂಗ್ ಗಳನ್ನು ಕಾಣುತ್ತದೆ.[ತತ್ಕಾಲ್ ಟಿಕೆಟ್ ರದ್ದು ಮಾಡಿದ್ರೂ ಹಣ ವಾಪಸ್]

mRupee ties up with IRCTC for additional payment gateway

"ಇಂದು, ಮೊಬೈಲ್ ಸೇವೆಗಳು ದೂರವಾಣಿ ಕರೆಯಿಂದಾಚೆಗೆ ವೇಗವಾಗಿ ವಿಕಾಸಗೊಂಡಿದ್ದು, ಧ್ವನಿ ಸಂದೇಶಗಳು ಜಗತ್ತನ್ನು ಸಂಪರ್ಕಿಸುವ ವಿಧಾನವಾಗಿ ಕೇಂದ್ರ ಸ್ಥಾನಕ್ಕೆ ಬಂದಿದೆ. ಐಆರ್‍ಸಿಟಿಸಿಯೊಂದಿಗಿನ ನಮ್ಮ ಸಹಭಾಗಿತ್ವವು ಎಂರುಪೀಯ ಮಾರುಕಟ್ಟೆ ತಲುಪುವಿಕೆಯನ್ನು ಅದ್ಭುತವಾಗಿ ಹೆಚ್ಚಿಸಲಿದೆ.

ಈ ರೀತಿಯ ಅರ್ಥಪೂರ್ಣ ಸಹಭಾಗಿತ್ವಗಳು ನಮ್ಮ ಗ್ರಾಹಕರಿಗೆ ಕೇವಲ ಕ್ಷಿಪ್ರ ಮತ್ತು ಅನುಕೂಲಕರ ಬುಕಿಂಗ್ ಅನ್ನು ಮಾತ್ರ ನೀಡಲು ನೆರವಾಗುವುದಿಲ್ಲ, ಜತೆಗೆ ಸರ್ಕಾರದ ಮಹತ್ವಾಕಾಂಕ್ಷೆಯಂತೆ ಭಾರತದಲ್ಲಿ ಡಿಜಿಟಲ್ ಹಣದ ವಿಶಾಲ ಅಳವಡಿಕೆಯನ್ನೂ ವರ್ಧಿಸಲಿದೆ ಎಂಬುದಕ್ಕೆ ನಮಗೆ ಹರ್ಷವಾಗುತ್ತಿದೆ. ಈ ಸೇವೆಯ ಮೂಲಕ, ಭವಿಷ್ಯ ಸಿದ್ಧವಾಗಿರುವ ಮೂಲಸೌಕರ್ಯವನ್ನು ಒದಗಿಸುವ ಗುರಿ ನಮ್ಮದಾಗಿದ್ದು, ಇದು ಕೇವಲ ಇಂದಿನ ನಿರೀಕ್ಷೆಗಳನ್ನಷ್ಟೇ ಅಲ್ಲ, ನಾಳೆಯದ್ದನ್ನೂ ತಲಪುತ್ತದೆ,'' ಎಂದು ಪ್ರದೀಪ್ ಕೆ.ಸಂಪತ್, ಮುಖ್ಯ ಕಾರ್ಯಾಚರಣಾ ಆಧಿಕಾರಿ, ಎಂರುಪೀ ಹೇಳಿದ್ದಾರೆ,[ಒಂದು ಲಾಗ್ ಇನ್ ಗೆ ಒಂದೇ ರೈಲ್ವೆ ಟಿಕೆಟ್]

ಎಂರುಪೀ ಇತ್ತೀಚೆಗೆ ಸ್ಮಾರ್ಟ್ಮ್ಡಿ ಲೈಫ್ ಸ್ಟೈಲ್ ನಿರ್ವಹಣಾ ವೇದಿಕೆಯೊಂದಿಗೆ ಸಹಭಾಗಿತ್ವ ಸಾಧಿಸಿದ್ದು, ಇದು ಚೆನ್ನೈನಲ್ಲಿ ಗ್ರಾಹಕರಿಗೆ ಸ್ವಾದಿಷ್ಟ, ಆರೋಗ್ಯಕರ ಮತ್ತು ಕೈಗೆಟಕುವ ಆಹಾರವನ್ನು ಪ್ರತಿದಿನ ಅನ್ವೇಷಿಸಲು ನೆರವಾಗುತ್ತಿದೆ. ಜತೆಗೆ, ಎಂರುಪೀ ಈ ಹಿಂದೆ ದಿಲ್ಲಿ ಮೆಟ್ರೋ ಕಾರ್ಡ್ ಗಳಿಗೆ ರಿಚಾರ್ಜ್ ಸೌಲಭ್ಯ ಒದಗಿಸಲು ಐಸಿಐಸಿಐ ಬ್ಯಾಂಕ್‍ನೊಂದಿಗೆ ಸಹಭಾಗಿತ್ವ ಮಾಡಿಕೊಂಡಿದೆ.

ಇದರೊಂದಿಗೆ ಎಂಎಂಪಿಎಲ್ ಓಪನ್ ಲೂಪ್ ಪ್ರಿಪೇಯ್ಡ್, ವೀಸಾ ಪವರ್ಡ್, ಕಾರ್ಡ್ ಅನ್ನು ಆರ್ ಬಿಎಲ್ ಬ್ಯಾಂಕ್ (ರತ್ನಾಕರ್ ಬ್ಯಾಂಕ್)ನೊಂದಿಗಿನ ಸಹಭಾಗಿತ್ವದಲ್ಲಿ ಬಿಡುಗಡೆಗೊಳಿಸಿದೆ. ಪೇ ಸ್ಮಾರ್ಟ್ ಕಾರ್ಡ್ ಪಡೆಯುವ ಮೂಲಕ, ಎಂರುಪೀ ಗ್ರಾಹಕರು ವೀಸಾ ಪರವಾನಗಿಯುಕ್ತ ಎಟಿಎಂಗಳಿಂದ ಹಣ ಡ್ರಾ ಮಾಡಬಹುದು ಮತ್ತು ವೀಸಾ ಡೆಬಿಟ್/ ಕ್ರೆಡಿಟ್ ಕಾರ್ಡ್ ಸ್ವೀಕರಿಸುವ ದೇಶದೊಳಗಿನ ಎಲ್ಲಾ ವರ್ತಕರಲ್ಲಿ ಸರಕು ಮತ್ತು ಸೇವೆಗಳಿಗೆ ಪಾವತಿಸಬಹುದಾಗಿದೆ.

English summary
mRupee, a subsidiary of Tata Teleservices, has tied up with IRCTC to provide an additional payment gateway. Indian Railways carries more than 23 million passengers a day and the association will allow users one-tap payments for rail ticket bookings via mRupee wallet
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X