ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇ ಕಾಮರ್ಸ್ ಕಂಪೆನಿಗಳಿಗೆ ಎಕ್ಸ್ ಪೈರಿ ದಿನಾಂಕ, ಎಂಆರ್ ಪಿ ಕಡ್ಡಾಯ

|
Google Oneindia Kannada News

ಬೆಂಗಳೂರು, ಜೂನ್ 30: ಪ್ಯಾಕೇಜ್ಡ್ ಗ್ರಾಹಕ ವಸ್ತುಗಳಿಗೆ ಇನ್ನು ಮುಂದೆ ಇ ಕಾಮರ್ಸ್ ಕಂಪೆನಿಗಳವರು ಎಕ್ಸ್ ಪೈರಿ ದಿನಾಂಕ ಮತ್ತು ಎಂಆರ್ ಪಿ (ಗರಿಷ್ಠ ಮಾರಾಟ ಬೆಲೆ) ಅನ್ನು ಕಡ್ಡಾಯವಾಗಿ ಘೋಷಿಸಬೇಕು. ಹಳೆ ವಸ್ತುಗಳನ್ನು ಮಾರಾಟದಿಂದ ಗ್ರಾಹಕರಿಗೆ ರಕ್ಷಣೆ ಒದಸುವ ದೃಷ್ಟಿಯಿಂದ ಈ ಹೊಸ ನಿಯಮ ಮಾಡಲಾಗಿದೆ.

ನಿಮ್ಮ ಆನ್ ಲೈನ್ ವ್ಯವಹಾರದ ಮೇಲೆ ಸರಕಾರದ ಕಣ್ಣುನಿಮ್ಮ ಆನ್ ಲೈನ್ ವ್ಯವಹಾರದ ಮೇಲೆ ಸರಕಾರದ ಕಣ್ಣು

ಗ್ರಾಹಕ ವ್ಯವಹಾರಗಳ ಸಚಿವಾಲಯವು ಜೂನ್ ಇಪ್ಪತ್ಮೂರರಂದು ಅಧಿಸೂಚನೆ ಹೊರಡಿಸಿದೆ. ಲೀಗಲ್ ಮೆಟ್ರಾಲಜಿ (ಪ್ಯಾಕೇಜ್ಡ್ ವಸ್ತುಗಳು) ನಿಯಮ, 2011ಕ್ಕೆ ತಿದ್ದುಪಡಿ ತರಲಾಗಿದೆ. ಈ ನಿಯಮದ ಅನ್ವಯ ಇ ಕಾಮರ್ಸ್ ಕಂಪೆನಿಗಳು ಆನ್ ಲೈನ್ ವಸ್ತುಗಳ ಮೂಲ ಎಲ್ಲಿಯದು ಎಂಬ ಬಗ್ಗೆ ಮಾಹಿತಿಯನ್ನು ದಾಖಲಿಸಬೇಕು.

MRP, expiry dates now must on products sold by ecommerce companies

ಮುಂದಿನ ವರ್ಷದ ಜನವರಿ ಒಂದರಿಂದ ಈ ನಿಯಮ ಜಾರಿಗೆ ಬರುತ್ತದೆ. ಭಾರತದಲ್ಲಿರುವ ಅಮೆಜಾನ್, ಫ್ಲಿಪ್ ಕಾರ್ಟ್ ನಂಥ ಆನ್ ಲೈನ್ ಮಾರಾಟಗಾರರು ತಮ್ಮ ಮಳಿ ವಸ್ತುಗಳ ದಾಸ್ತಾನು ಇಟ್ಟುಕೊಂಡಿರುವುದಿಲ್ಲ. ಆರ್ಡರ್ ಬಂದ ನಂತರವಷ್ಟೇ ವಸ್ತುಗಳನ್ನು ಗ್ರಾಹಕರಿಗೆ ತಲುಪಿಸುತ್ತಾರೆ. ಈ ವಿಚಾರದಲ್ಲಿ ಅಗತ್ಯ ಮುನ್ನೆಚ್ಚರಿಕೆ ತೆಗೆದುಕೊಳ್ತೀವಿ ಎಂದು ಆ ಕಂಪೆನಿಗಳವರು ಹೇಳ್ತಾರೆ.

ಇನ್ನು ಆಹಾರ ಪದಾರ್ಥಗಳನ್ನು ಆಹಾರ ಸುರಕ್ಷತಾ ಕಾಯ್ದೆ ನಿಯಮಗಳಂತೆಯೇ ಮಾರಾಟ ಮಾಡಬೇಕು. "ಆಲಿವ್ ಎಣ್ಣೆಯಂಥ ದುಬಾರಿ ಆಮದು ವಸ್ತುಗಳನ್ನು ರಿಯಾಯಿತಿ ದರದಲ್ಲಿ ಹೇಗೆ ಮಾರಲು ಸಾಧ್ಯ? ಏಕೆಂದರೆ ಎಕ್ಸ್ ಪೈರಿ ದಿನಾಂಕ ಹತ್ತಿರ ಇರುವಾಗ ಅವುಗಳನ್ನು ಮಾರಾಟ ಮಾಡುತ್ತಾರೆ" ಎಂದು ಹೆಸರು ಹೇಳಲು ಇಚ್ಛಿಸದ, ಇ ಕಾಮರ್ಸ್ ಕಂಪೆನಿಯ ಉದ್ಯೋಗಿಯೊಬ್ಬರು ಹೇಳುತ್ತಾರೆ.

English summary
Ecommerce companies will have to declare online the expiry dates and maximum retail prices of packaged consumer products under new rules meant to protect consumers from being sold old goods.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X