ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

2025ರ ಯೋಜನೆಯನ್ನು ಬಿಚ್ಚಿಟ್ಟ ಮದರ್ಸನ್ ಸುಮಿ ಸಿಸ್ಟಮ್ಸ್ : ಷೇರುಗಳ ಬೆಲೆ ಏರಿಕೆ

|
Google Oneindia Kannada News

ನವದೆಹಲಿ, ನವೆಂಬರ್ 23: ಅನೇಕ ರಾಷ್ಟ್ರಗಳಲ್ಲಿ ಕೋವಿಡ್-19 ಲಾಕ್‌ಡೌನ್ ಮುಗಿದ ಬಳಿಕ ಜಾಗತಿಕ ವಾಹನ ಉದ್ಯಮದಲ್ಲಿ ಚೇತರಿಕೆ ಕಂಡು ಬರುತ್ತಿದೆ. ಇದರ ನಡುವೆ ವಾಹನಗಳ ಬಿಡಿ ಭಾಗಗಳ ತಯಾರಕ ಮದರ್ಸನ್ ಸುಮಿ ಸಿಸ್ಟಮ್ಸ್ ಕಂಪನಿಯು ತನ್ನ 2025ರ ದೃಷ್ಟಿಕೋನವನ್ನು ತೆರೆದಿಟ್ಟಿದೆ. ಇದರಿಂದಾಗಿ ಮದರ್ಸನ್ ಸುಮಿ ಸಿಸ್ಟಮ್ಸ್ ಷೇರುಗಳು ಶೇಕಡಾ 5ಕ್ಕಿಂತ ಹೆಚ್ಚಾಗಿ 146.75 ರೂಪಾಯಿಗೆ ತಲುಪಿದೆ.

ಪ್ರಸ್ತುತ ಉತ್ಪನ್ನಗಳಲ್ಲಿ ಹೊಸ ತಂತ್ರಜ್ಞಾನಗಳು ಮತ್ತು ವಿಶಾಲವಾದ ಸ್ಥಳವನ್ನು ಪರಿಹರಿಸುವತ್ತ ಗಮನಹರಿಸುತ್ತಿದೆ. ಭೌಗೋಳಿಕತೆಗೆ ಅನುಗುಣವಾಗಿ ತನ್ನ ಹೊಸ ಯೋಜನೆಗಳನ್ನು ವಿಸ್ತರಿಸುವ ಹೆಜ್ಜೆಯನ್ನಿಟ್ಟಿದೆ.

ಒಂದು ವರ್ಷದಲ್ಲಿ 2.80 ರೂ.ನಿಂದ 228 ರೂಪಾಯಿಗೆ ಏರಿಕೆಗೊಂಡ ಷೇರುಒಂದು ವರ್ಷದಲ್ಲಿ 2.80 ರೂ.ನಿಂದ 228 ರೂಪಾಯಿಗೆ ಏರಿಕೆಗೊಂಡ ಷೇರು

''2025ರ ನಮ್ಮ ದೃಷ್ಟಿಕೋನವು ಪ್ರಸ್ತುತ ಕಂಪನಿಯ ವ್ಯವಹಾರದಲ್ಲಿನ ಕಾರ್ಯತಂತ್ರಗಳಿಗೆ ಹೊಸ ರೂಪವನ್ನು ನೀಡಲು ಸಾಧ್ಯವಾಗುತ್ತದೆ. ಇದು ಮುಂದಿನ ಹಂತದ ಬೆಳವಣಿಗೆಗೆ ಸಹಾಯ ಮಾಡುತ್ತದೆ. ಮದರ್ಸನ್ ಸುಮಿ ಸಿಸ್ಟಮ್ಸ್ ಜಾಗತಿಕ ಆಟೋಮೋಟಿವ್ ಚೇತರಿಕೆಗೆ ಅತ್ಯುತ್ತಮ ಸಾಕ್ಷಿಯಾಗುತ್ತದೆ ಎಂದು ನಾವು ನಂಬುತ್ತೇವೆ. ಇದು ಕಂಪನಿಯ ನಿರ್ದಿಷ್ಟ ಗಳಿಕೆಗೆ ಸಾಧ್ಯ'' ಎಂದು ಮೋತಿಲಾಲ್ ಓಸ್ವಾಲ್ ತನ್ನ ಹೇಳಿಕೆಯಲ್ಲಿ ತಿಳಿಸಿದೆ.

Motherson Sumi Unveils Vision 2025: Shares Surge

ಮತ್ತೊಂದು ದಲ್ಲಾಳಿ (ಬ್ರೋಕ್‌ರೇಜ್) ಸಂಸ್ಥೆ ಜೆಎಂ ಫೈನಾನ್ಷಿಯಲ್ ಪ್ರಕಾರ ''ಮದರ್ಸನ್ ಸುಮಿ ಸಿಸ್ಟಮ್ಸ್ (ಎಂಎಸ್ಎಸ್ಎಲ್) ಇತ್ತೀಚೆಗೆ ತನ್ನ ವಿಷನ್ 2025 ಅನ್ನು ತಿಳಿಸಲು ಹೂಡಿಕೆದಾರರ ಸಭೆ ನಡೆಸಿತು. ಕಂಪನಿಯು ಹಣಕಾಸು ವರ್ಷ 2025 ರ ವೇಳೆಗೆ 36 ಬಿಲಿಯನ್ ಡಾಲರ್ ಆದಾಯವನ್ನು ಸಾಧಿಸುವ ಮಹತ್ವಾಕಾಂಕ್ಷೆಯ ಗುರಿಯನ್ನು ಹೊಂದಿದೆ ಮತ್ತು ಅದನ್ನು ಸಾಧಿಸಲು ಯೋಜನೆಗಳನ್ನು ರೂಪಿಸಿದೆ. ವಾಹನ ರಹಿತ ವ್ಯವಹಾರಗಳಿಂದ ಶೇ. 25ರಷ್ಟು ಕೊಡುಗೆ ಪಡೆಯಲು ಮುಂದಾಗಿದೆ" ಎಂದು ಹೇಳಿಕೆಯಲ್ಲಿ ತಿಳಿಸಿದೆ.

ಮದರ್ಸನ್ ಸುಮಿ ಷೇರುಗಳು ತಮ್ಮ 52 ವಾರಗಳ ಕನಿಷ್ಠ 48.50 ರೂಪಾಯಿಯಿಂದ ಬಲವಾಗಿ ಏರಿಕೆ ಕಂಡಿದ್ದು, ಈ ವರ್ಷದ ಮಾರ್ಚ್‌ನಲ್ಲಿ ಕನಿಷ್ಠ ಹಂತಕ್ಕೆ ತಲುಪಿದೆ. ಪ್ರಸ್ತುತ ಕಂಪನಿಯ ಷೇರು ಬೆಲೆ 147 ರೂ. ಗಡಿ ದಾಟಿದೆ.

English summary
Auto Manufacturer Motherson Sumi Systems Share today surges 5 Percent to Rs 147 after company unveils vision 2025 .
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X