ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಮಾನ್ಯಗೊಂಡಿದ್ದ ಶೇಕಡಾ 99.3ರಷ್ಟು ನೋಟುಗಳು ಬ್ಯಾಂಕ್ ಗಳಿಗೆ ವಾಪಸ್

|
Google Oneindia Kannada News

ನವದೆಹಲಿ, ಅಗಸ್ಟ್ 29: ಅಮಾನ್ಯಗೊಂಡಿದ್ದ 500 ಹಾಗೂ 1000 ರುಪಾಯಿ ನೋಟುಗಳ ಲೆಕ್ಕಾಚಾರ ಮುಗಿದಿದೆ ಎಂದು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್ ಬಿಐ) 2017-18ರ ವಾರ್ಷಿಕ ವರದಿಯಲ್ಲಿ ತಿಳಿಸಿದೆ. ಇದರ ಜತೆಗೆ ಶೇಕಡಾ 99.3ರಷ್ಟು ನೋಟುಗಳು ಅಂದರೆ, 15.3 ಲಕ್ಷ ಕೋಟಿ ರುಪಾಯಿ ಹಣ ಬ್ಯಾಂಕ್ ಗಳಿಗೆ ವಾಪಸಾಗಿದೆ ಎಂದು ಕೂಡ ತಿಳಿಸಿದೆ.

ನವೆಂಬರ್ 8,2016ಕ್ಕೆ ಮುನ್ನ 500 ಹಾಗೂ 1000 ರುಪಾಯಿ ಮುಖ ಬೆಲೆಯ ನೋಟುಗಳು 15.41 ಲಕ್ಷ ಕೋಟಿ ರುಪಾಯಿ ಚಲಾವಣೆಯಲ್ಲಿದ್ದವು. ಆ ಪೈಕಿ 15.31 ಲಕ್ಷ ಕೋಟಿ ರುಪಾಯಿ ನೋಟುಗಳು ಬ್ಯಾಂಕ್ ಗಳಿಗೆ ವಾಪಸಾಗಿವೆ. "ನೋಟುಗಳ ಪ್ರಕ್ರಿಯೆ ಹಾಗೂ ಪರಿಶೀಲನೆಯಂಥ ಅತಿ ದೊಡ್ಡ ಗುರಿಯೊಂದು ಅಂತಿಮವಾಗಿ ಯಶಸ್ವಿಯಾಗಿ ಪೂರ್ಣವಾಗಿದೆ" ಎಂದು ತಿಳಿಸಲಾಗಿದೆ.

ಆರ್‌ಬಿಐಗೆ ನಕಲಿ ನೋಟು ತುಂಬಿದ ಬ್ಯಾಂಕುಗಳು, ಅಧಿಕಾರಿಗಳು ತಬ್ಬಿಬ್ಬು!ಆರ್‌ಬಿಐಗೆ ನಕಲಿ ನೋಟು ತುಂಬಿದ ಬ್ಯಾಂಕುಗಳು, ಅಧಿಕಾರಿಗಳು ತಬ್ಬಿಬ್ಬು!

ನೋಟುಗಳ ಪರಿಶೀಲನೆ, ಲೆಕ್ಕಾಚಾರ ಹಾಗೂ ಆ ನಂತರದ ಪ್ರಕ್ರಿಯೆಯನ್ನು ವ್ಯವಸ್ಥಿತ ಮತ್ತು ಸರಿಯಾದ ಬಗೆಯಲ್ಲಿ ಪೂರ್ಣಗೊಳಿಸಲಾಗಿದೆ. ನೋಟುಗಳ ಸಾಚಾತನ ಹಾಗೂ ನಿಖರತೆಯನ್ನು ಕರೆನ್ಸಿ ವೆರಿಫಿಕೇಷನ್ ಅಂಡ್ ಪ್ರೊಸೆಸಿಂಗ್ ಸಿಸ್ಟಮ್ (ಸಿವಿಪಿಎಸ್) ಮೂಲಕ ಖಾತ್ರಿ ಮಾಡಿಕೊಂಡು, ಆ ನಂತರ ವಿಲೇವಾರಿ ಮಾಡಲಾಗಿದೆ ಎಂದು ಹೇಳಲಾಗಿದೆ.

More than 99 percent of demonetised notes returned to banks: RBI

ಅಮಾನ್ಯವಾಗುವ ಮುಂಚೆ ಯಾವ ಪ್ರಮಾಣದಲ್ಲಿ ನೋಟುಗಳು ಚಲಾವಣೆಯಲ್ಲಿ ಇದ್ದವೋ ಆ ಮಟ್ಟವನ್ನು ಈಗ ದಾಟಿದೆ. ಕಳೆದ ವರ್ಷಕ್ಕಿಂತ ಸಾಲ ದರದ ಬೆಳವಣಿಗೆ ಏರಿಕೆ ಕಂಡು, ಎರಡಂಕಿ ಮುಟ್ಟಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ. ಆರ್ಥಿಕ ಹಣದುಬ್ಬರ ಹಾಗೂ ವಿತ್ತೀಯ ಕೊರತೆ ವಿಚಾರದ ಬಗ್ಗೆ ವರದಿಯಲ್ಲಿ ಎಚ್ಚರಿಕೆ ನೀಡಲಾಗಿದೆ.

ಆರ್ ಬಿಐನಲ್ಲಿ 60 ವಿಶೇಷ ಅಧಿಕಾರಿಗಳ ಹುದ್ದೆಗಳಿಗೆ ಆಹ್ವಾನ!ಆರ್ ಬಿಐನಲ್ಲಿ 60 ವಿಶೇಷ ಅಧಿಕಾರಿಗಳ ಹುದ್ದೆಗಳಿಗೆ ಆಹ್ವಾನ!

ಹಣದುಬ್ಬರವು ವಿತ್ತೀಯ ಕೊರತೆ ಮೇಲೆ ಭಾರೀ ಪರಿಣಾಮ ಬೀರುವ ಅಪಾಯವಿದೆ. ಅದರಲ್ಲೂ ಜಾಗತಿಕ ಮಟ್ಟದಲ್ಲಿ ಕಚ್ಚಾ ತೈಲ ಬೆಲೆ ಏರಿಕೆ ಆಗುತ್ತಿರುವ ಪರಿಣಾಮದಿಂದ ಹೀಗಾಗಲಿದೆ ಎಂದು ಎಚ್ಚರಿಸಿದ್ದು, ಅಂತರರಾಷ್ಟ್ರೀಯ ಮಟ್ಟದಲ್ಲಿ ಕಚ್ಚಾ ತೈಲ ಮಾರುಕಟ್ಟೆಯ ಬೇಡಿಕೆ-ಪೂರೈಕೆಯಲ್ಲಿನ ಭಾರೀ ಸ್ಥಿತ್ಯಂತರಗಳು ಭಾರತದ ವಿತ್ತೀಯ ಕೊರತೆ ಮೇಲೆ ಪರಿಣಾಮ ಬೀರಲಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.

ಸರಕು ಹಾಗೂ ಸೇವಾ ತೆರಿಗೆ (ಜಿಎಸ್ ಟಿ) ಜಾರಿಗೆ ತಂದಿದ್ದು ಪರೋಕ್ಷ ತೆರಿಗೆ ವಿಧಾನದಲ್ಲೇ ಬಹಳ ಮುಖ್ಯವಾದ ಮೈಲುಗಲ್ಲು ಎಂದು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ವರದಿಯಲ್ಲಿ ಮೆಚ್ಚುಗೆ ಸೂಚಿಸಲಾಗಿದೆ. ವರದಿಯಲ್ಲಿ ಬಹುಪಾಲು ಭಾಗ ದೇಶದ ವಿತ್ತೀಯ ಕೊರತೆ ಬಗ್ಗೆಯೇ ಆತಂಕ ವ್ಯಕ್ತವಾಗಿದೆ.

English summary
99.3% of demonetized notes worth of 15.31 lakh crore returned to banks, said in RBI annual report 2017-18. Here is the details of the story.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X