ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಟೆಕ್ಕಿಗಳೇ ಎಚ್ಚರ ! ನಿಮ್ಮ ಉದ್ಯೋಗಕ್ಕೆ ಕಾದಿದೆ ಸಂಚಕಾರ!

ಸಾಮಾನ್ಯವಾಗಿ ವಾರ್ಷಿಕ ಅಪ್ರೈಸಲ್ ಪ್ರಕ್ರಿಯೆಗಳ ನಂತರ, ಒಂದಿಷ್ಟು ಉದ್ಯೋಗಗಳನ್ನು ಕಡಿತ ಮಾಡುತ್ತಿದ್ದ ಈ ಕಂಪನಿಗಳು, ಈ ಬಾರಿ ದೊಡ್ಡ ಮಟ್ಟದಲ್ಲೇ ಉದ್ಯೋಗ ಕಡಿತಕ್ಕೆ ಕೈ ಹಾಕಿವೆ.

|
Google Oneindia Kannada News

ನವದೆಹಲಿ, ಏಪ್ರಿಲ್ 21: ಅಮೆರಿಕ, ಸಿಂಗಾಪುರ ಹಾಗೂ ಆಸ್ಟ್ರೇಲಿಯಾ ಸರ್ಕಾರಗಳ ವೀಸಾ ನಿಯಮಗಳಲ್ಲಿ ಭಾರೀ ಬದಲಾವಣೆಗಳಾಗಿರುವುದು ಭಾರತೀಯ ಐಟಿ ವಲಯದಲ್ಲಿ ಹೊಸ ತಲ್ಲಣ ಸೃಷ್ಟಿ ಮಾಡಿದೆ.

ಸಾಮಾನ್ಯವಾಗಿ ವಾರ್ಷಿಕ ಅಪ್ರೈಸಲ್ ಪ್ರಕ್ರಿಯೆಗಳ ನಂತರ, ಒಂದಿಷ್ಟು ಉದ್ಯೋಗಗಳನ್ನು ಕಡಿತ ಮಾಡುತ್ತಿದ್ದ ಈ ಕಂಪನಿಗಳು, ಈ ಬಾರಿ ದೊಡ್ಡ ಮಟ್ಟದಲ್ಲೇ ಉದ್ಯೋಗ ಕಡಿತಕ್ಕೆ ಕೈ ಹಾಕಿವೆ.

ವಿಪ್ರೋದಲ್ಲಿ ಈಗಾಗಲೇ 600 ಮಂದಿಗೆ ಕೊಕ್ ನೀಡಲಾಗಿದ್ದು, ಈ ಸಂಖ್ಯೆ ಅಲ್ಲಿ 2000ಕ್ಕೆ ಮುಟ್ಟುವ ಸಾಧ್ಯತೆಗಳಿವೆ ಎಂದು ಹೇಳಲಾಗಿದೆ.[600 ಉದ್ಯೋಗಿಗಳನ್ನು ಮನೆಗೆ ಕಳುಹಿಸಿದ ವಿಪ್ರೋ]

More Lay-offs in IT Sector all over the world

ಅಷ್ಟೇ ಅಲ್ಲ, ಕಾಗ್ನಿಜೆಂಟ್ ಹಾಗೂ ಇನ್ನಿತರ ಕಂಪನಿಗಳಲ್ಲಿ ಈ ವರ್ಷ ಜಾಗತಿಕ ಮಟ್ಟದಲ್ಲಿ ಸುಮಾರು 10 ಸಾವಿರದಷ್ಟು ಉದ್ಯೋಗ ಕಡಿತವಾಗಬಹುದು ಎಂದು ಅಂದಾಜಿಸಲಾಗಿದೆ.

ಒಂದೆಡೆ ಇಂಥ ಉದ್ಯೋಗ ಕಡಿತಗಳಾದರೆ, ಮತ್ತೊಂದೆಡೆ ಕಂಪನಿಗಳ ನೇಮಕಾತಿಯಲ್ಲೂ ಗಣನೀಯ ಇಳಿಕೆ ಕಂಡಿದೆ. ಉದಾಹರಣೆಗೆ, 2015-16ರಲ್ಲಿ ಇನ್ಫೋಸಿಸ್ ಕಂಪನಿಯು 17,857 ಇಂಜಿನಿಯರ್ ಗಳಿಗೆ ತನ್ನಲ್ಲಿ ಕೆಲಸ ಕೊಟ್ಟಿದ್ದರೆ, 2016-17ರಲ್ಲಿ ಈ ನೇಮಕಾತಿಯ ಪ್ರಮಾಣ 6,320ರಷ್ಟಿತ್ತು. ಅಂದರೆ, ನೇಮಕಾತಿಯಲ್ಲಿ ಅರ್ಧಕ್ಕಿಂತಲೂ ಕಡಿಮೆ ಎಂದರ್ಥ.

ಇನ್ನು, ಫ್ರಾನ್ಸ್ ಮೂಲದ ಕ್ಯಾಪ್ ಜೆಮಿನಿಯಲ್ಲೂ ಕೆಲವಾರು ಬದಲಾವಣೆಗಳನ್ನು ಮಾಡಲು ನಿರ್ಧರಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. ಔಟ್ ಸೋರ್ಸಿಂಗ್ ಲೆಕ್ಕಾಚಾರದಲ್ಲಿ ಸುಮಾರು ಶೇ. 40ರಷ್ಟು ಸಿಬ್ಬಂದಿಯನ್ನು ಹೊರಗುತ್ತಿಗೆ ರೂಪದಲ್ಲಿ ಕೆಲಸ ಕೊಡುತ್ತಿದ್ದ ಈ ಕಂಪನಿ ಅದರ ಪ್ರಮಾಣವನ್ನು ಶೇ. 15ಕ್ಕೆ ಇಳಿಸಿದೆ.

ಟಾಟಾ ಕನ್ಸಲ್ಟೆನ್ಸಿ ಕಂಪನಿ ಕೂಡ ತನ್ನ ಹೊಸ ನೇಮಕಾತಿಯಲ್ಲಿ ಗಣನೀಯ ಕಡಿತ ಮಾಡಲು ಮುಂದಾಗಿದೆ.

ಈ ಎಲ್ಲಾ ಬೆಳವಣಿಗಳಿಂದಾಗಿ, ಕೆಲಸ ಕಳೆದುಕೊಂಡ ಸಾಫ್ಟ್ ವೇರ್ ಇಂಜಿನಿಯರ್ ಗಳಿಗೆ ಮತ್ತೊಂದೆಡೆ ಕೆಲಸ ಸಿಕ್ಕುವುದು ದುರ್ಲಭ ಎನ್ನುವಂತಾಗಿದೆ.

English summary
Wipro's move to sack around 500 of its employees as part of its appraisal process is indicative of the churn in India's information technology (IT) sector — which is moving towards increasing automation, use of artificial intelligence and is beset by tightening visa regulations.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X