ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜನವರಿ 1ರಿಂದ ಕೇಬಲ್, ಡಿಟಿಎಚ್ ಮಾಸಿಕ ದರ ಬದಲಾಗಲಿದೆ

|
Google Oneindia Kannada News

Recommended Video

ಜನವರಿ 1ರಿಂದ ಕೇಬಲ್, ಡಿಟಿಎಚ್ ಮಾಸಿಕ ದರ ಬದಲಾಗಲಿದೆ | Oneindia Kannada

ಬೆಂಗಳೂರು, ಡಿಸೆಂಬರ್ 18 : 2019ರ ಜನವರಿಯಿಂದ ಕೇಬಲ್ ಮತ್ತು ಡಿಟಿಎಚ್ ಮಾಸಿದ ದರ ಬದಲಾವಣೆಯಾಗಲಿದೆ. ಇನ್ನು ಮುಂದೆ ಗ್ರಾಹಕರು ತಮ್ಮ ಆಯ್ಕೆಯ ಚಾನೆಲ್‌ಗಳನ್ನು ಮಾತ್ರ ವೀಕ್ಷಿಸಬಹುದು, ಅವುಗಳಿಗೆ ಮಾತ್ರ ಹಣ ಪಾವತಿ ಮಾಡಬಹುದಾಗಿದೆ.

ಅನಗತ್ಯ ಚಾನೆಲ್‌ಗಳ ಕಿರಿಕಿರಿ ತಪ್ಪಿಸಲು ದೂರ ಸಂಪರ್ಕ ನಿಯಂತ್ರಣ ಪಾಧಿಕಾರ (ಟ್ರಾಯ್) ಜನವರಿ 1ರಿಂದ ಹೊಸ ವ್ಯವಸ್ಥೆ ಜಾರಿಗೆ ತರಲಿದೆ. ಇದರಿಂದಾಗಿ ಕೇಬಲ್ ಮತ್ತು ಡಿಟಿಎಚ್‌ಗಳ ಮಾಸಿಕ ದರದಲ್ಲಿ ಹೆಚ್ಚು ಕಡಿಮೆ ಆಗಲಿದೆ.

ಸನ್ ಟಿವಿ Nxt ಆಪ್ 4000 ಸಿನಿಮಾಗಳ ಆಗರಸನ್ ಟಿವಿ Nxt ಆಪ್ 4000 ಸಿನಿಮಾಗಳ ಆಗರ

ಗ್ರಾಹಕರಿಗೆ ಅನಗತ್ಯ ಚಾನೆಲ್ ಕಿರಿಕಿರಿಯನ್ನು ತಪ್ಪಿಸಲು ಕೇಂದ್ರ ಸರ್ಕಾರ ಹೊಸ ನೀತಿ ಜಾರಿಗೆ ತರುತ್ತಿದೆ. ಇದರ ಅನ್ವಯ ಚಾನೆಲ್‌ಗಳ ಆಯ್ಕೆ ಗ್ರಾಹಕದ್ದೇ ಆಗಿರುತ್ತದೆ. ಎಷ್ಟು ಚಾನೆಲ್ ಆಯ್ಕೆ ಮಾಡುತ್ತೀರೋ? ಅಷ್ಟಕ್ಕೆ ಮಾತ್ರ ಹಣ ಪಾವತಿ ಮಾಡಿದರೆ ಸಾಕು.

ಕಾಲ್ ಡ್ರಾಪ್' ಸಮಸ್ಯೆಗೆ ಪರಿಹಾರ ಕಂಡು ಹಿಡಿಯಲು ಮುಂದಾದ ಟ್ರಾಯ್ಕಾಲ್ ಡ್ರಾಪ್' ಸಮಸ್ಯೆಗೆ ಪರಿಹಾರ ಕಂಡು ಹಿಡಿಯಲು ಮುಂದಾದ ಟ್ರಾಯ್

300-350 ರೂ.ಗಳಿಗೆ ಪ್ರಸ್ತುತ 400ಕ್ಕೂ ಅಧಿಕ ಚಾನೆಲ್‌ಗಳನ್ನು ಕೇಬಲ್ ಆಪರೇಟರ್‌ಗಳು ನೀಡುತ್ತಿದ್ದಾರೆ. ಹೊಸ ವ್ಯವಸ್ಥೆ ಜಾರಿಗೆ ಬಂದರೆ ದರ ಹೆಚ್ಚು ಅಥವ ಕಡಿಮೆಯಾಗಲಿದೆ. ಎಲ್ಲಾ ರೀತಿಯ ಚಾನೆಲ್ ಬೇಕು ಎಂದಾದರೆ 500 ರಿಂದ 1500 ರೂ. ಪಾವತಿ ಮಾಡಬೇಕಾಗಿದೆ.

ದೂರದರ್ಶನದಲ್ಲಿ ಮತ್ತೆ ಮಹಾಭಾರತ, ರಾಮಾಯಣ ಪ್ರಸಾರದೂರದರ್ಶನದಲ್ಲಿ ಮತ್ತೆ ಮಹಾಭಾರತ, ರಾಮಾಯಣ ಪ್ರಸಾರ

ಕನಿಷ್ಠ ದರ 130 ರೂ.

ಕನಿಷ್ಠ ದರ 130 ರೂ.

'ಹೊಸ ದರ ಜಾರಿ ನಂತರ ಸೆಟ್‌ ಟಾಪ್‌ ಬಾಕ್ಸ್‌ ಸಂಪರ್ಕ ಹೊಂದಿರುವ ಗ್ರಾಹಕರು 130 ರೂ. ಕನಿಷ್ಠ ದರ ಮತ್ತು ಶೇ 18ರಷ್ಟು ಜಿಎಸ್‌ಟಿ ತೆರಿಗೆ ಪಾವತಿಸಿ 100 ಉಚಿತ ಚಾನೆಲ್ ಪಡೆಯಬಹುದು. ಇದರಲ್ಲಿ ದೂರದರ್ಶನದ ಎಲ್ಲಾ ಚಾನೆಲ್, ಕೆಲವು ನ್ಯೂಸ್ ಚಾನೆಲ್, ಕೆಲವು ಕನ್ನಡ ಚಾನೆಲ್ ಸಿಗಲಿದೆ' ಎನ್ನುತ್ತಾರೆ ಭುವನೇಶ್ವರಿ ಕೇಬಲ್‌ ನೆಟ್‌ವರ್ಕ್‌ನಲ್ಲಿ ಕೆಲಸ ಮಾಡುವ ಶಶಿಶಧರ್.

ಪ್ರತ್ಯೇಕ ಹಣ ಪಾವತಿ ಮಾಡಬೇಕು

ಪ್ರತ್ಯೇಕ ಹಣ ಪಾವತಿ ಮಾಡಬೇಕು

ಉಚಿತ ಚಾನೆಲ್‌ಗಳನ್ನು ಹೊರತುಪಡಿಸಿ ಬೇರೆ ಕನ್ನಡ ಚಾನೆಲ್‌ಗಳು ಬೇಕು ಎಂದರೆ ಅವುಗಳನ್ನು ಆಯ್ಕೆ ಮಾಡಿಕೊಂಡು ಪ್ರತ್ಯೇಕ ಶುಲ್ಕ ಪಾವತಿಸಬೇಕು. ಅದೇ ರೀತಿ ಪ್ರಾದೇಶಿಕ ಭಾಷೆಯ ತೆಲಗು, ತಮಿಳು, ಹಿಂದಿ ಇನ್ಯಾವುದೇ ಭಾಷೆ ಅಥವ ಕ್ರೀಡಾ ಚಾನೆಲ್ ಬೇಕು ಎಂದರೆ ಆಯಾ ಚಾನೆಲ್‌ಗಳಿಗೆ ಪ್ರತ್ಯೇಕ ಶುಲ್ಕವನ್ನು ಕಟ್ಟಬೇಕು.

ಸೆಟ್‌ ಆಫ್‌ ಬಾಕ್ಸ್ ಬದಲು ಇಲ್ಲ

ಸೆಟ್‌ ಆಫ್‌ ಬಾಕ್ಸ್ ಬದಲು ಇಲ್ಲ

ಕೇಬಲ್ ಆಪರೇಟರ್‌ಗಳಿಗೂ ಹೊಸ ವ್ಯವಸ್ಥೆ ಬಗ್ಗೆ ಇನ್ನು ಸ್ಪಷ್ಟವಾದ ಮಾಹಿತಿ ಸಿಕ್ಕಿಲ್ಲ. ಆದರೆ, ಯಾವುದೇ ಕಾರಣಕ್ಕೂ ಸೆಟ್‌ ಆಫ್‌ ಬಾಕ್ಸ್ ಬದಲಾವಣೆ ಮಾಡುವುದು ಬೇಡ ಎಂದು ಅವರು ಸ್ಪಷ್ಟನೆ ನೀಡಿದ್ದಾರೆ. ಒಂದೆರಡು ತಿಂಗಳು ಗ್ರಾಹಕರಿಗೆ ಗೊಂದಲ ಉಂಟಾಗಬಹುದು ಬಳಿಕ ಎಲ್ಲವೂ ಸರಿಯಾಗಲಿದೆ ಎನ್ನುವುದು ಕೇಬಲ್ ಆಪರೇಟರ್‌ಗಳ ಮಾತು.

ಕೇಬಲ್ ಬಂದ್ ಆಗುವುದಿಲ್ಲ

ಕೇಬಲ್ ಬಂದ್ ಆಗುವುದಿಲ್ಲ

ಗ್ರಾಹಕರ ಮನೆಗೆ ಕೇಬಲ್ ಸೌಲಭ್ಯ ನೀಡಿರುವ ಆಪರೇಟರ್‌ಗಳು ಬಂದು ನಿಮಗೆ ಯಾವ ಚಾನೆಲ್ ಬೇಕು? ಎಂದು ಮಾಹಿತಿ ಸಂಗ್ರಹಿಸಿ ಆ ಚಾನೆಲ್‌ಗಳನ್ನು ಮಾತ್ರ ನೀಡುತ್ತಾರೆ. ಅವುಗಳಿಗೆ ಮಾತ್ರ ನೀವು ಪಾವತಿ ಮಾಡಿದರೆ ಸಾಕು. ಕೇಬಲ್ ಸಂಪರ್ಕ ಯಾವುದೇ ಕಾರಣಕ್ಕೂ ಬಂದ್ ಆಗುವುದಿಲ್ಲ ಎಂದು ಕೇಬಲ್ ಆಪರೇಟರ್‌ಗಳು ಸ್ಪಷ್ಟಪಡಿಸಿದ್ದಾರೆ.

ಹೆಚ್ಚು ಕಡಿಮೆ ಆಗಬಹುದು

ಹೆಚ್ಚು ಕಡಿಮೆ ಆಗಬಹುದು

ಗ್ರಾಹಕರಿಗೆ ಅನಗತ್ಯ ಚಾನೆಲ್ ನೀಡುವುದನ್ನು ತಪ್ಪಿಸಲು ಈ ನಿಯಮ ಜಾರಿಗೆ ಬರುತ್ತಿದೆ. ಅವರಿಗೆ ಇಷ್ಟವಾದ ವಾಹಿನಿಗೆ ಮಾತ್ರ ಹಣ ನೀಡಿ ವೀಕ್ಷಿಸಬಹುದಾಗಿದೆ. ಹೊಸ ನಿಯಮದಿಂದಾಗಿ ಈಗಿರುವ ಕೇಬಲ್, ಡಿಟಿಎಚ್ ದರ ಸ್ವಲ್ಪ ಹೆಚ್ಚು, ಕಮ್ಮಿಯಾಗುವ ಸಾಧ್ಯತೆ ಇದೆ.

English summary
Telecom Regulatory Authority of India (TRAI) will revised the monthly cable TV rent charges from January 1, 2019. Customer to pay for the channels which they want to see.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X