ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹಳೆ ಫೀಚರ್ ಫೋನ್‌ ಕೊಟ್ಟು ಜಿಯೋ ಫೋನ್ ಪಡೆಯಿರಿ

By Mahesh
|
Google Oneindia Kannada News

ಬೆಂಗಳೂರು, ಜುಲೈ 19: ಗ್ರಾಹಕರು ತಮ್ಮ ಹಳೆಯ ಫೀಚರ್ ಫೋನ್‌ಗಳನ್ನು ಕೇವಲ ರೂ. 501 ವಾಸ್ತವಿಕ ಬೆಲೆಗೆ ಹೊಸ ಜಿಯೋಫೋನ್‌ನೊಡನೆ ವಿನಿಮಯ ಮಾಡಿಕೊಳ್ಳಲು ಅನುವುಮಾಡಿಕೊಡಲಿದೆ ಜಿಯೋಫೋನ್ ಮಾನ್ಸೂನ್ ಹಂಗಾಮ ಜ್ಞಾನ, ಶಿಕ್ಷಣ ಹಾಗೂ ಮನರಂಜನೆಗಳನ್ನು ಗ್ರಾಹಕರ ಬೆರಳತುದಿಗೆ ತಂದಿಡಲು ಉತ್ತಮಪಡಿಸಲಾದ ಜಿಯೋಫೋನ್ ಆಪ್ ಇಕೋಸಿಸ್ಟಮ್ ಸನ್ನದ್ಧ

500 ಮಿಲಿಯನ್‌ಗೂ ಹೆಚ್ಚಿನ ಭಾರತೀಯರು ಇನ್ನೂ ಅಂತರಜಾಲ ಸಂಪರ್ಕವಿಲ್ಲದ ಫೀಚರ್ ಫೋನುಗಳನ್ನು ಬಳಸುತ್ತಿದ್ದಾರೆ. ಅಂತರಜಾಲ ಸಂಪರ್ಕ ಇನ್ನೂ ಕೈಗೆಟುಕದಿರುವುದರಿಂದ ಅವರು ಡಿಜಿಟಲ್ ಜೀವನಶೈಲಿಯಿಂದ ದೂರವೇ ಉಳಿದಿದ್ದಾರೆ.

ಒಪ್ಪೊ ಹ್ಯಾಂಡ್ ಸೆಟ್ ಖರೀದಿಯೊಂದಿಗೆ ಜಿಯೋ ಕ್ಯಾಶ್ ಬ್ಯಾಕ್ ಒಪ್ಪೊ ಹ್ಯಾಂಡ್ ಸೆಟ್ ಖರೀದಿಯೊಂದಿಗೆ ಜಿಯೋ ಕ್ಯಾಶ್ ಬ್ಯಾಕ್

ಕೈಗೆಟುಕುವ ಬೆಲೆಯಲ್ಲಿ ಅಭೂತಪೂರ್ವ ಮಟ್ಟದ ಸಂವಹನವನ್ನು ಸಾಧ್ಯವಾಗಿಸಿರುವ ಜಿಯೋ ಮತ್ತು ಜಿಯೋಫೋನ್, ಈ ಪರಿಸ್ಥಿತಿಯನ್ನು ಬದಲಿಸಲು ಸಜ್ಜಾಗಿವೆ. ಅವುಗಳ ಮೂಲಕ ಇದೀಗ ಭಾರತದ ಎಲ್ಲ ಜಿಲ್ಲೆ, ತಾಲ್ಲೂಕು, ಗ್ರಾಮ ಪಂಚಾಯಿತಿ ಹಾಗೂ ಹಳ್ಳಿಗಳಲ್ಲೂ ಡಿಜಿಟಲ್ ಜೀವನಶೈಲಿಯನ್ನು ಅನುಭವಿಸುವುದು ಸಾಧ್ಯವಾಗಿದೆ.

25 ಮಿಲಿಯನ್ ಭಾರತೀಯರು ಈಗಾಗಲೇ ಜಿಯೋಫೋನ್ ಬಳಸುತ್ತಿದ್ದು ಇನ್ನೂ ಹಲವು ಮಿಲಿಯನ್ ಜನರು ಜಿಯೋಫೋನ್ ಬಳಕೆ ಪ್ರಾರಂಭಿಸಲು ನೆರವಾಗುವಂತೆ ಮಾನ್ಸೂನ್ ಹಂಗಾಮ ಕೊಡುಗೆಯನ್ನು ಘೋಷಿಸಲಾಗಿದೆ. ಈ ಮೂಲಕ ಜಿಯೋಫೋನ್‌ನ ಪ್ರಾರಂಭಿಕ ವೆಚ್ಚವನ್ನು ಗಮನಾರ್ಹವಾಗಿ ಕಡಿಮೆ ಮಾಡಲಾಗುತ್ತಿದೆ. ಡೇಟಾದ ಶಕ್ತಿಯೊಡನೆ ಜಿಯೋ ಭಾರತವನ್ನು ಬದಲಿಸಲು ಹೊರಟಿದೆ.

ಮಾನ್ಸೂನ್ ಹಂಗಾಮ ಕೊಡುಗೆ

ಮಾನ್ಸೂನ್ ಹಂಗಾಮ ಕೊಡುಗೆ

ಜುಲೈ 20, 2018ರ ಸಂಜೆ 5:01ರಿಂದ ಪ್ರಾರಂಭಿಸಿ ಗ್ರಾಹಕರು ತಮ್ಮ ಯಾವುದೇ ಹಳೆಯ ಫೀಚರ್ ಫೋನ್‌ಗಳನ್ನು ಕೇವಲ ರೂ. 501 ವಾಸ್ತವಿಕ ವೆಚ್ಚ ಪಾವತಿಸಿ ಹೊಸ ಜಿಯೋಫೋನ್‌ನೊಡನೆ (ಸದ್ಯದ ಮಾದರಿ) ವಿನಿಮಯ ಮಾಡಿಕೊಳ್ಳಬಹುದು. ಇಷ್ಟು ಕಡಿಮೆ ಪ್ರಾರಂಭಿಕ ವೆಚ್ಚದಿಂದಾಗಿ ಹಲವಾರು ಬಳಕೆದಾರರು ಮೊತ್ತಮೊದಲ ಬಾರಿಗೆ ಡೇಟಾದ ಶಕ್ತಿ ಹಾಗೂ ಅಂತರಜಾಲದ ಅನುಭವವನ್ನು ಪಡೆದುಕೊಳ್ಳಬಹುದಾಗಿದೆ.

ಉತ್ತಮಪಡಿಸಲಾದ ಆಪ್ ಇಕೋಸಿಸ್ಟಮ್

ಉತ್ತಮಪಡಿಸಲಾದ ಆಪ್ ಇಕೋಸಿಸ್ಟಮ್

ಈ ಹಿಂದೆ ನೀಡಲಾದ ವಾಗ್ದಾನದಂತೆ ಜಿಯೋಫೋನ್ ತನ್ನ ಗ್ರಾಹಕರಿಗೆ ವಿಶ್ವದ ಅತ್ಯುತ್ತಮ ಆಪ್‌ಗಳನ್ನು ಒದಗಿಸಲು ಬದ್ಧವಾಗಿದೆ. ಈವರೆಗೆ ಸ್ಮಾರ್ಟ್‌ಫೋನುಗಳಲ್ಲಿ ಮಾತ್ರವೇ ಲಭ್ಯವಿದ್ದ ಅನೇಕ ಆಪ್‌ಗಳನ್ನು ಉತ್ತಮಪಡಿಸಲಾದ ಆಪ್ ಇಕೋಸಿಸ್ಟಮ್ ಮೂಲಕ ಜಿಯೋಫೋನ್ ತನ್ನ ಗ್ರಾಹಕರಿಗೆ ನೀಡುತ್ತಿದೆ.

ಫೇಸ್‌ಬುಕ್, ವಾಟ್ಸ್‌ಆಪ್ ಹಾಗೂ ಯೂಟ್ಯೂಬ್‌ನಂತಹ ವಿಶ್ವವಿಖ್ಯಾತ ಆಪ್‌ಗಳನ್ನು ನೀಡುವ ಮೂಲಕ ಭಾರತೀಯರು ಶಿಕ್ಷಣ, ಮನರಂಜನೆ, ಜ್ಞಾನ ಮತ್ತಿತರ ಸೇವೆಗಳನ್ನು ಪಡೆದುಕೊಳ್ಳುವ ವಿಧಾನವನ್ನೇ ಬದಲಿಸಲು ಜಿಯೋಫೋನ್ ಸನ್ನದ್ಧವಾಗಿದೆ. ಈ ಆಪ್‌ಗಳು ಆಗಸ್ಟ್ 15, 2018ರಿಂದ ಪ್ರಾರಂಭಿಸಿ ಎಲ್ಲ ಜಿಯೋಫೋನ್ ಬಳಕೆದಾರರಿಗೂ ದೊರಕಲಿವೆ.
ಜಿಯೋಫೋನ್‌ನ ತೊಡಕಿಲ್ಲದ 4ಜಿ ಸಂಪರ್ಕ

ಜಿಯೋಫೋನ್‌ನ ತೊಡಕಿಲ್ಲದ 4ಜಿ ಸಂಪರ್ಕ

ಜಿಯೋಫೋನ್‌ನ ತೊಡಕಿಲ್ಲದ 4ಜಿ ಸಂಪರ್ಕ ಹಾಗೂ ಧ್ವನಿರೂಪದ ಆದೇಶ ನೀಡಬಹುದಾದ ವಿಶಿಷ್ಟ ವ್ಯವಸ್ಥೆಯ (ವಾಯ್ಸ್ ಕಮ್ಯಾಂಡ್) ಮೂಲಕ ಪ್ರಾರಂಭಿಕ ಬಳಕೆದಾರರೂ ಫೇಸ್‌ಬುಕ್, ವಾಟ್ಸ್‌ಆಪ್ ಹಾಗೂ ಯೂಟ್ಯೂಬ್‌ ಆಪ್‌ಗಳನ್ನು ಸರಳ ಹಾಗೂ ಅನುಕೂಲಕರವಾಗಿ ಬಳಸಬಹುದಾಗಿದೆ.

ಕರೆ ಮಾಡಲು, ಸಂದೇಶ ಕಳುಹಿಸಲು, ಅಂತರಜಾಲದಲ್ಲಿ ಮಾಹಿತಿ ಹುಡುಕಲು, ಹಾಡು ಕೇಳಲು, ವೀಡಿಯೋಗಳನ್ನು ನೋಡಲು ಹಾಗೂ ಜಿಯೋಫೋನ್‌ನಲ್ಲಿರುವ ಬೇರೆಲ್ಲ ಆಪ್‌ಗಳನ್ನು ಬಳಸಲು ಗ್ರಾಹಕರಿಗೆ ವಾಯ್ಸ್ ಕಮ್ಯಾಂಡ್ ಸೌಲಭ್ಯ ನೆರವಾಗಲಿದೆ.
ಹಲವಾರು ಹೊಸ ಸಾಧ್ಯತೆಗಳನ್ನು ರೂಪಿಸುತ್ತಿದೆ

ಹಲವಾರು ಹೊಸ ಸಾಧ್ಯತೆಗಳನ್ನು ರೂಪಿಸುತ್ತಿದೆ

ಹೊಸ ಆಪ್ ಇಕೋಸಿಸ್ಟಮ್ ಮೂಲಕ ಜಿಯೋಫೋನ್ ತನ್ನ ಗ್ರಾಹಕರಿಗೆ ಹಲವಾರು ಹೊಸ ಸಾಧ್ಯತೆಗಳನ್ನು ರೂಪಿಸುತ್ತಿದೆ. ಈಗ ಪರಿಚಯಿಸಲಾಗುತ್ತಿರುವ ಹೊಸ ಆಪ್‌ಗಳು ಹಾಗೂ ಈಗಾಗಲೇ ಲಭ್ಯವಿರುವ ಇನ್ನಿತರ ಆಪ್‌ಗಳ ಮೂಲಕ, ತನ್ನ ಗ್ರಾಹಕರು ಹೊಸ ವಾಣಿಜ್ಯ ಹಾಗೂ ಉದ್ಯೋಗ ಅವಕಾಶಗಳನ್ನೂ ಶಿಕ್ಷಣ - ಮನರಂಜನೆ ಮತ್ತಿತರ ಸೇವೆಗಳನ್ನೂ ಪಡೆಯಲು ಜಿಯೋಫೋನ್ ನೆರವಾಗುತ್ತಿದೆ.

English summary
Millions of feature phone users are now readying to embrace Jio Digital Life with the upcoming JioPhone Monsoon Hungama Offer. Customers will be able to exchange any old feature phone (of any brand) for a brand new JioPhone
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X