ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮನಿ ಲಾಂಡ್ರಿಂಗ್ ಪ್ರಕರಣ: ಯೆಸ್ ಬ್ಯಾಂಕ್ ಸಂಸ್ಥಾಪಕ ರಾಣಾ ಕಪೂರ್‌ಗೆ ಜಾಮೀನು

|
Google Oneindia Kannada News

ಮುಂಬೈ, ಫೆಬ್ರವರಿ 17: ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಯೆಸ್ ಬ್ಯಾಂಕ್ ಸಹ ಸಂಸ್ಥಾಪಕ ರಾಣಾ ಕಪೂರ್ ಮತ್ತು ಅವನಾಥ ಗ್ರೂಪ್‌ನ ಗೌತಮ್ ಥಾಪರ್ ಮತ್ತು ಅವಂತ ಗ್ರೂಪ್‌ನ ಬಿ.ಹರಿಹರನ್ ಅವರಿಗೆ ಮುಂಬೈ ನ್ಯಾಯಾಲಯ ಬುಧವಾರ ಜಾಮೀನು ನೀಡಿದೆ.

ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ಎಂ.ಜಿ. ದೇಶಪಾಂಡೆ ಅವರು ರಾಣಾ ಕಪೂರ್ ಹಾಗೂ ಇತರರಿಗೆ ಜಾಮೀನು ಮಂಜೂರು ಮಾಡಿದ್ದಾರೆ. ಥಾಪರ್ ಪರ ಹಿರಿಯ ವಕೀಲ ಮಹೇಶ್ ಜೇಠ್ಮಲಾನಿ ಮತ್ತು ಹರಿಹರನ್ ಪರ ಸಂದೀಪ್ ಕಪೂರ್ ವಾದ ಮಂಡಿಸಿದ್ದರು.

ಬಹುಕೋಟಿ ಯೆಸ್ ಬ್ಯಾಂಕ್ ಹಗರಣದಲ್ಲಿ ''2G'' ನೀರಾ ಹೆಸರು, ಸಮನ್ಸ್ ಬಹುಕೋಟಿ ಯೆಸ್ ಬ್ಯಾಂಕ್ ಹಗರಣದಲ್ಲಿ ''2G'' ನೀರಾ ಹೆಸರು, ಸಮನ್ಸ್

ಯೆಸ್ ಬ್ಯಾಂಕ್ ಲಿಮಿಟೆಡ್‌ನ ಆಗಿನ ಎಂಡಿ ಮತ್ತು ಸಿಇಒ ರಾಣಾ ಕಪೂರ್ ಅವರು ನವದೆಹಲಿಯ ಅಮೃತಾ ಶೆರ್ಗಿಲ್ ಮಾರ್ಗ್‌ನಲ್ಲಿರುವ ಆಸ್ತಿಯನ್ನು 378 ಕೋಟಿ ರೂ.ಗೆ ಸ್ವಾಧೀನಪಡಿಸಿಕೊಳ್ಳುವ ಮೂಲಕ 307 ಕೋಟಿ ರೂಪಾಯಿಗಳ ಅಕ್ರಮ ಸಂಪಾದನೆಗಾಗಿ ಕ್ರಿಮಿನಲ್ ಸಂಚು ರೂಪಿಸಿದ್ದಾರೆ. 685 ಕೋಟಿ ರೂ ಎಂದು ಘೋಷಿಸಲಾಗಿದೆ ಎಂದು ಆರೋಪಿಸಲಾಗಿದೆ.

Money Laundering Case: Yes Bank Co-founder Rana Kapoor Granted Bail

ಹಗರಣ ಪೀಡಿತ ದಿವಾನ್ ಹೌಸಿಂಗ್ ಫೈನಾನ್ಸ್ ಲಿಮಿಟೆಡ್ (ಡಿಎಚ್‌ಎಫ್‌ಎಲ್) ಗೆ ಸಂಬಂಧಿಸಿರುವ ಒಂದು ಸಂಸ್ಥೆಯಿಂದ ಕಪೂರ್, ಅವರ ಪತ್ನಿ ಮತ್ತು ಮೂವರು ಹೆಣ್ಣುಮಕ್ಕಳಿಂದ 600 ಕೋಟಿ ರುಪಾಯಿ ಪಡೆದಿದ್ದರು. ಕಪೂರ್, ಅವರ ಕುಟುಂಬ ಸದಸ್ಯರು ಮತ್ತು ಇತರರು ಬೃಹತ್ ಸಾಲಗಳನ್ನು ಮಂಜೂರು ಮಾಡಲು ಕಿಕ್‌ಬ್ಯಾಕ್ ಆಗಿ ನಿಯಂತ್ರಿಸುತ್ತಿರುವ ಕಂಪನಿಗಳ ಮೂಲಕ 4,300 ಕೋಟಿ ರುಪಾಯಿ ಪಡೆದಿದ್ದರು. ನ್ಯೂಯಾರ್ಕ್, ಲಂಡನ್ ಹಾಗೂ ಮುಂಬೈನಲ್ಲಿರುವ ರಾಣಾ ಕಪೂರ್ ಹಾಗೂ ಕುಟುಂಬಸ್ಥರಿಗೆ ಸೇರಿದ ಸರಿ ಸುಮಾರು 2,200 ಕೋಟಿ ರು ಆಸ್ತಿ ಜಪ್ತಿ ಮಾಡಲಾಗಿದೆ ಎಂದು ಜಾರಿ ನಿರ್ದೇಶನಾಲಯದ ಮೂಲಗಳಿಂದ ತಿಳಿದು ಬಂದಿದೆ. ಇನ್ನೊಂದೆಡೆ, ಯೆಸ್ ಬ್ಯಾಂಕ್ ರಾಣಾ ಕಪೂರ್, ದಿವಾನ್ ಹೌಸಿಂಗ್ ಫೈನಾನ್ಸ್ ಲಿಮಿಟೆಡ್ ಮತ್ತು ಪ್ರವರ್ತಕರಾದ ಕಪಿಲ್ ವಾಧವನ್ ಮತ್ತು ಧೀರಜ್ ವಾಧವನ್ ವಿರುದ್ಧ ಕೇಂದ್ರೀಯ ತನಿಖಾ ದಳ (ಸಿಬಿಐ) ಚಾರ್ಜ್‌ಶೀಟ್ ದಾಖಲಿಸಿ, ತನಿಖೆ ಮುಂದುವರೆಸಿದೆ.

ಯೆಸ್ ಬ್ಯಾಂಕ್ ಹಣಕಾಸು ಅವ್ಯವಹಾರ ಪ್ರಕರಣದಲ್ಲಿ, ಸಂಸ್ಥಾಪಕ ರಾಣಾ ಕಪೂರ್ ಮತ್ತು ಅವರ ಕುಟುಂಬ ಸದಸ್ಯರಿಗೆ ಸೇರಿದ ಬ್ಯಾಂಕ್ ಖಾತೆಗಳನ್ನು ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಮತ್ತೊಮ್ಮೆ ಜಪ್ತಿ ಮಾಡಲಾಗಿತ್ತು.

ಲಂಡನ್ನಿನ 77 ಸೌತ್ ಆಡ್ಲೆ ಸ್ಟ್ರೀಟ್ ನಲ್ಲಿರ ಯೆಸ್ ಬ್ಯಾಂಕ್ ಸಹ ಸಂಸ್ಥಾಪಕ ರಾಣಾ ಕಪೂರ್ ಅವರಿಗೆ ಸೇರಿರುವ ಸುಮಾರು 127 ಕೋಟಿ ರು ಮೌಲ್ಯ ಫ್ಲ್ಯಾಟ್ ಜಪ್ತಿ ಮಾಡಲಾಗಿದೆ. ಮನಿ ಲಾಂಡರಿಂಗ್ ತಡೆ ಕಾಯ್ದೆ (ಪಿಎಂಎಲ್ ಎ) ಅಡಿ ಜಪ್ತಿ ಮಾಡಲು ನ್ಯಾಯಾಲಯದ ಆದೇಶ ಪಡೆದುಕೊಳ್ಳಲಾಗಿತ್ತು ಎಂದು ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಹೇಳಿದ್ದರು.

ಈ ವಸತಿ ಕಟ್ಟಡದ ಸದ್ಯ ಮಾರುಕಟ್ಟೆ ಮೌಲ್ಯವು 13.5 ಮಿಲಿಯನ್ ಪೌಂಡ್ (ಸುಮಾರು 127 ಕೋಟಿ ರು ). 2017ರಲ್ಲಿ ರಾಣಾ ಕಪೂರ್ ಅವರು DOIT ಕ್ರಿಯೇಷನ್ಸ್ ಜರ್ಸಿ ಲಿಮಿಟೆಡ್ ಹೆಸರಿನಲ್ಲಿ 9.9 ಮಿಲಿಯನ್ ಪೌಂಡ್ ಗೆ ಈ ಆಸ್ತಿಯನ್ನು ಖರೀದಿಸಿದ್ದರು ಎಂಬ ಮಾಹಿತಿ ಸಿಕ್ಕಿದೆ.

ಆಸ್ತಿ ಮಾರಲು ಯತ್ನ: ಲಂಡನ್‌ನಲ್ಲಿರುವ ಈ ಆಸ್ತಿಯನ್ನು ಮಾರಾಟ ಮಾಡಲು ಮಧ್ಯವರ್ತಿಯನ್ನು ನೇಮಿಸಿದ್ದರು. ವೆಬ್ ತಾಣಗಳಲ್ಲೂ ಆಸ್ತಿ ವಿವರ ಮಾರಟಕ್ಕಿರುವ ಬಗ್ಗೆ ಜಾಹೀರಾತು ಕಾಣಿಸಿಕೊಂಡಿತ್ತು. ಈ ಬಗ್ಗೆ ತಿಳಿದ ತನಿಖಾ ಸಂಸ್ಥೆ ಲಂಡನ್ ಅಲ್ಲದೆ, ಅಮೆರಿಕ, ದುಬೈ ಮತ್ತು ಆಸ್ಟ್ರೇಲಿಯಾಗಳಲ್ಲಿರುವ ಆಸ್ತಿಗಳನ್ನು ವಶಪಡಿಸಿಕೊಂಡಿದ್ದರು.

Recommended Video

ಜಗದೀಶ್ ರಿಲೀಸ್ ಆಗೋದು ಯಾವಾಗ !! | Oneindia Kannada

English summary
A Mumbai court on Wednesday granted bail to Yes Bank co-founder Rana Kapoor and Avanatha Group’s Gautam Thapar and B. Hariharan of Avantha Group in a money laundering case.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X