ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Vivo ಕಥೆ: ಇಡಿ ದಾಳಿ ಮಾಡಿದರೆ ವ್ಯಾಪಾರಕ್ಕೆ ಅಡ್ಡಿ ಎಂದ ಚೀನಾ ರಾಯಭಾರಿ!

|
Google Oneindia Kannada News

ನವದೆಹಲಿ, ಜುಲೈ 7: ಅಕ್ರಮ ಹಣ ವರ್ಗಾವಣೆ ಆರೋಪಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ವಿವೋ ಮತ್ತು ಮತ್ತು ಸಹೋದರ ಸಂಸ್ಥೆಗಳ ಮೇಲೆ ನಡೆಸಿರುವ ದಾಳಿಗೆ ಚೀನಾದ ರಾಯಭಾರಿ ಕಚೇರಿ ಪ್ರತಿಕ್ರಿಯೆ ನೀಡಿದೆ.

ಚೀನಾದ ಉದ್ಯಮಗಳ ಮೇಲಿನ ತನಿಖೆಗಳು ಸಾಮಾನ್ಯ ವ್ಯಾಪಾರದ ಮೇಲೆ ಅಡ್ಡಿಯನ್ನು ಉಂಟು ಮಾಡುತ್ತದೆ. ಭಾರತದಲ್ಲಿ ವಿದೇಶಿ ಹೂಡಿಕೆದಾರರಿಗೆ ವ್ಯಾಪಾರದ ವಾತಾವರಣಕ್ಕೆ ಅಡ್ಡಿಪಡಿಸಿದಂತೆ ಆಗುತ್ತದೆ ಎಂದು ಚೀನಾ ರಾಯಭಾರಿ ಕಚೇರಿ ತಿಳಿಸಿದೆ.

ಕೌತುಕದ ಕಾರಣ: ದೇಶ ಬಿಟ್ಟು ಓಡಿದ ವಿವೋ ಮೊಬೈಲ್ಸ್ ನಿರ್ದೇಶಕ ಝೆಂಗ್ ಔ!ಕೌತುಕದ ಕಾರಣ: ದೇಶ ಬಿಟ್ಟು ಓಡಿದ ವಿವೋ ಮೊಬೈಲ್ಸ್ ನಿರ್ದೇಶಕ ಝೆಂಗ್ ಔ!

"ಭಾರತದಲ್ಲಿ ಚೀನೀ ಉದ್ಯಮಗಳ ಮೇಲೆ ನಡೆಯುತ್ತಿರುವ ತನಿಖೆಗಳು ಸಾಮಾನ್ಯ ವ್ಯಾಪಾರ ಚಟುವಟಿಕೆಗಳಿಗೆ ಅಡ್ಡಿಯಾಗುತ್ತಿದೆ. ಉದ್ಯಮಿಗಳ ಅಭಿಮಾನವನ್ನು ಹಾಳು ಮಾಡುತ್ತದೆ. ವ್ಯಾಪಾರ ವಾತಾವರಣದ ಸುಧಾರಣೆಗೆ ಅಡ್ಡಿಯಾಗುತ್ತಿದೆ. ಭಾರತದಲ್ಲಿ ಹೂಡಿಕೆ ಮಾಡಲು ಮತ್ತು ಕಾರ್ಯ ನಿರ್ವಹಿಸುವುದಕ್ಕೆ ಚೀನೀ ಉದ್ಯಮಗಳು ಹಾಗೂ ಇತರೆ ದೇಶಗಳು ವಿಶ್ವಾಸವನ್ನು ಕಳೆದುಕೊಳ್ಳುತ್ತವೆ," ಎಂದು ಚೀನಾ ರಾಯಭಾರಿ ಕಚೇರಿಯ ವಕ್ತಾರ ವಾಂಗ್ ಕ್ಸಿಯಾಜಿಯಾನ್ ಹೇಳಿದ್ದಾರೆ.

ವಿವೋ ಸಂಸ್ಥೆ 44 ಕಡೆಗಳಲ್ಲಿ ಇಡಿ ಅಧಿಕಾರಿಗಳ ದಾಳಿ

ವಿವೋ ಸಂಸ್ಥೆ 44 ಕಡೆಗಳಲ್ಲಿ ಇಡಿ ಅಧಿಕಾರಿಗಳ ದಾಳಿ

ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ(ಪಿಎಂಎಲ್‌ಎ) ಉಲ್ಲಂಘನೆಯ ಅಡಿಯಲ್ಲಿ ಜೂನ್ 5ರಂದು ಚೀನಾದ ಸ್ಮಾರ್ಟ್‌ಫೋನ್ ತಯಾರಕ ಸಂಸ್ಥೆ ವಿವೋ ಮತ್ತು ಅದ ಸಹೋದರ ಸಂಸ್ಥೆಗಳು ಸೇರಿದಂತೆ 44 ಸ್ಥಳಗಳ ಮೇಲೆ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ದಾಳಿ ನಡೆಸಿದ್ದರು. "ಸರ್ಕಾರಿ ಅಧಿಕಾರಿಗಳು ಮತ್ತು ಬ್ಯಾಂಕ್‌ಗಳನ್ನು ದಾರಿ ತಪ್ಪಿಸುವ" ವಿವೋ-ಸಂಯೋಜಿತ ಘಟಕದ ವಿರುದ್ಧ ದೆಹಲಿ ಪೊಲೀಸರು ಎಫ್‌ಐಆರ್ ದಾಖಲಿಸಿದ ನಂತರ ತನಿಖೆಯನ್ನು ಪ್ರಾರಂಭಿಸಲಾಗಿದೆ ಎಂದು ವರದಿಯಾಗಿದೆ.

ಚೀನೀ ನಿರ್ದೇಶಕರು ಸಲ್ಲಿಸಿದ ನಕಲಿ ದಾಖಲೆಗಳು

ಚೀನೀ ನಿರ್ದೇಶಕರು ಸಲ್ಲಿಸಿದ ನಕಲಿ ದಾಖಲೆಗಳು

ಕಾರ್ಪೊರೇಟ್ ವ್ಯವಹಾರಗಳ ಸಚಿವಾಲಯವು ಜಮ್ಮು ಮತ್ತು ಕಾಶ್ಮೀರದಲ್ಲಿ ವಿವೋ ವಿತರಕ ಗ್ರ್ಯಾಂಡ್ ಪ್ರಾಸ್ಪೆಕ್ಟ್ ಇಂಟರ್ ನ್ಯಾಷನಲ್ ಕಮ್ಯುನಿಕೇಶನ್‌ನ ಕನಿಷ್ಠ ಇಬ್ಬರು ಚೀನೀ ನಿರ್ದೇಶಕರು ನಕಲಿ ದಾಖಲೆ ಮತ್ತು ನಕಲಿ ಭಾರತೀಯ ವಿಳಾಸಗಳನ್ನು ಸಲ್ಲಿಸಿದ್ದಾರೆ ಎಂದು ಕಂಡುಹಿಡಿಯಲಾಗಿದೆ. "ಚೀನೀ ಸರ್ಕಾರವು ಯಾವಾಗಲೂ ಚೀನೀ ಉದ್ಯಮಗಳನ್ನು ಸಾಗರೋತ್ತರ ಕಾನೂನುಗಳು ಮತ್ತು ನಿಬಂಧನೆಗಳಿಗೆ ಬದ್ಧವಾಗಿರುವಂತೆ ಕೇಳುತ್ತದೆ. ಚೀನೀ ಉದ್ಯಮಗಳು ತಮ್ಮ ಕಾನೂನುಬದ್ಧ ಹಕ್ಕುಗಳು ಮತ್ತು ಹಿತಾಸಕ್ತಿಗಳನ್ನು ಕಾಪಾಡುವಲ್ಲಿ ದೃಢವಾಗಿ ಬೆಂಬಲಿಸುತ್ತದೆ," ಎಂದು ಕ್ಸಿಯಾಜಿಯಾನ್ ಹೇಳಿದ್ದಾರೆ.

ಅಗತ್ಯ ಮಾಹಿತಿ ನೀಡಲು ಸಹಕರಿಸುವುದಾಗಿ ಹೇಳಿದ್ದವರು ಮಾಯ?

ಅಗತ್ಯ ಮಾಹಿತಿ ನೀಡಲು ಸಹಕರಿಸುವುದಾಗಿ ಹೇಳಿದ್ದವರು ಮಾಯ?

ಅಗತ್ಯ ಮಾಹಿತಿ ನೀಡಲು ಅಧಿಕಾರಿಗಳಿಗೆ ಸಹಕಾರ ನೀಡುತ್ತಿರುವುದಾಗಿ ವಿವೋ ತಿಳಿಸಿದೆ. "ಜವಾಬ್ದಾರಿಯುತ ಕಾರ್ಪೊರೇಟ್ ಆಗಿ, ನಾವು ಸಂಪೂರ್ಣವಾಗಿ ಕಾನೂನುಗಳನ್ನು ಅನುಸರಿಸಲು ಬದ್ಧರಾಗಿದ್ದೇವೆ" ಎಂದು ವಿವೋ ವಕ್ತಾರರು ತಿಳಿಸಿದ್ದಾರೆ. ಇದರ ಮಧ್ಯೆ ವಿವೋ ಇಂಡಿಯಾ ನಿರ್ದೇಶಕರಾದ ಝೆಂಗ್‌ಶೆನ್ ಔ ಮತ್ತು ಜಾಂಗ್ ಜೀ ದೇಶ ತೊರೆದಿದ್ದಾರೆ ಎಂದು ಹೇಳಲಾಗುತ್ತಿದೆ.

ಮಂಗಳವಾರ ಇಡಿ ಅಧಿಕಾರಿಗಳಿಂದ ದಾಳಿ

ಮಂಗಳವಾರ ಇಡಿ ಅಧಿಕಾರಿಗಳಿಂದ ದಾಳಿ

ಕಳೆದ ಜುಲೈ 5ರ ಮಂಗಳವಾರ ಉತ್ತರ ಪ್ರದೇಶ, ಮಧ್ಯಪ್ರದೇಶ, ಬಿಹಾರ, ದೆಹಲಿ, ಮೇಘಾಲಯ ಮತ್ತು ದಕ್ಷಿಣದ ಕೆಲವು ರಾಜ್ಯಗಳಲ್ಲಿನ ಚೀನಾದ ಸ್ಮಾರ್ಟ್‌ಫೋನ್ ಕಂಪನಿಯ ಶಾಖೆಗಳ ಮೇಲೆ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ದಾಳಿ ನಡೆಸಿದರು. ಇದರಲ್ಲಿ ಅದರ ಅನೇಕ ಚೀನೀ ವಿತರಕ ಉದ್ಯಮಗಳೂ ಸಹ ಸೇರಿದ್ದವು. 2020 ರಲ್ಲಿ ಗಾಲ್ವಾನ್ ಕಣಿವೆಯ ಗಡಿ ಘರ್ಷಣೆಯ ನಂತರ ಚೀನೀ ಕಂಪನಿಗಳ ಮೇಲೆ ಹೆಚ್ಚಿನ ನಿಗಾ ವಹಿಸಲಾಗುತ್ತಿದೆ.

Xiaomi ಸಂಸ್ಥೆಗೆ ಸಂಬಂಧಿಸಿದ ಆಸ್ತಿ ವಶಕ್ಕೆ

Xiaomi ಸಂಸ್ಥೆಗೆ ಸಂಬಂಧಿಸಿದ ಆಸ್ತಿ ವಶಕ್ಕೆ

ಕಳೆದ ವರ್ಷ ಗುಪ್ತಚರ ಇಲಾಖೆ ಮಾಹಿತಿಯ ಆಧಾರದ ಮೇಲೆ ಆದಾಯ ಮರೆಮಾಚುವ ಮತ್ತು ತೆರಿಗೆ ವಂಚನೆ ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಆದಾಯ ತೆರಿಗೆ ಇಲಾಖೆ Xiaomi ಮತ್ತು Oppo ಕಂಪನಿಗಳ ಮೇಲೆ ದಾಳಿ ನಡೆಸಿತ್ತು. Xiaomi ನಂತರ ಏಪ್ರಿಲ್‌ನಲ್ಲಿ ಜಾರಿ ನಿರ್ದೇಶನಾಲಯವು ವಿದೇಶಿ ವಿನಿಮಯ ಉಲ್ಲಂಘನೆಯ ಆರೋಪವನ್ನು ಹೊರಿಸಿದ್ದು, ಅದರ 5500 ಕೋಟಿ ರೂಪಾಯಿ ಮೌಲ್ಯದ ಬ್ಯಾಂಕ್ ಆಸ್ತಿಯನ್ನು ವಶಪಡಿಸಿಕೊಳ್ಳಲು ಆದೇಶಿಸಲಾಯಿತು.

ಕರ್ನಾಟಕ ಹೈಕೋರ್ಟ್ ಆದೇಶವನ್ನು ತಡೆಹಿಡಿದಿದ್ದು, Xiaomi ಮನವಿಯನ್ನು ಆಲಿಸಲು FEMA ಅಡಿಯಲ್ಲಿ ಸಕ್ಷಮ ಪ್ರಾಧಿಕಾರಕ್ಕೆ ನಿರ್ದೇಶಿಸಿದೆ.

ಚೀನಾದ ಟಿಕ್‌ಟಾಕ್, PUBG ಮೊಬೈಲ್, ಶೇನ್, ಅಲೈಕ್ಸ್‌ಪ್ರೆಸ್ ಮತ್ತು ಹೆಚ್ಚಿನವು ಸೇರಿದಂತೆ 200 ಕ್ಕೂ ಹೆಚ್ಚು ಮೊಬೈಲ್ ಅಪ್ಲಿಕೇಶನ್‌ಗಳನ್ನು ಭಾರತೀಯ ಸರ್ಕಾರವು ಈಗಾಗಲೇ ನಿಷೇಧಿಸಿದೆ.

Recommended Video

Rohit Sharma ಪಂದ್ಯಕ್ಕೂ ಮುನ್ನ ಕಠಿಣ ಅಭ್ಯಾಸದಲ್ಲಿ ತೊಡಗಿದ್ದರು | OneIndia Kannada

English summary
Amid Enforcement Directorate intensifies money laundering probe Vivo India director Zhengsheng Ou and Zhang Jie is leave country.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X