ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

981 ಕೋಟಿ ಎಫ್‌ಡಿಐ ಹೂಡಿಕೆಗೆ ಕೇಂದ್ರ ಸರ್ಕಾರ ಅಸ್ತು

|
Google Oneindia Kannada News

ನವದೆಹಲಿ, ಜು. 30: ಭಾರತದ ಮಾರುಕಟ್ಟೆಯಲ್ಲಿ ಬೃಹತ್ ಪ್ರಮಾಣದ ವಿದೇಶಿ ನೇರ ಬಂಡವಾಳ (ಎಫ್​ಡಿಐ) ಹೂಡಿಕೆಗೆ ಕೇಂದ್ರ ಸರ್ಕಾರ ಅನುಮತಿ ನೀಡಿದೆ. ಹಾಥ್​ವೇ ಕೇಬಲ್ ಮತ್ತು ಡೇಟಾಕಾಂ ಸೇರಿದಂತೆ ವಿವಿಧ 7 ಕಂಪನಿಗಳಿಗೆ 981.15 ಕೋಟಿ ರೂ.ಗಳ ಬಂಡವಾಳ ಹೂಡಲು ಹಸಿರು ನಿಶಾನೆ ನೀಡಿದೆ.

ವಿದೇಶಿ ಹೂಡಿಕೆ ಉತ್ತೇಜನಾ ಮಂಡಳಿಯ (ಎಫ್​ಐಪಿಬಿ) ಶಿಫಾರಸಿನ ಅನ್ವಯ ಹಣಕಾಸು ಸಚಿವಾಲಯ ಎಫ್​ಡಿಐಗೆ ಅನುಮೋದನೆ ನೀಡಿದೆ. ಜುಲೈ 3 ರಂದು ನಡೆದ ಮಂಡಳಿಯ ಸಭೆಯಲ್ಲಿ ಎಫ್ ಡಿಐ ಗೆ ಸಂಬಂಧಿಸಿ ಅನೇಕ ತೀರ್ಮಾನ ತೆಗೆದುಕೊಂಡ ಮಂಡಳಿ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಿತ್ತು.[ಮಿಂಟ್ರಾ ಕೈವಶವಾದ ಬೆಂಗಳೂರಿನ ಪುಟ್ಟ ಕಂಪನಿ]

fdi

ಕೇಂದ್ರ ಸರ್ಕಾರದ ಆದೇಶದ ಪರಿಣಾಮ ಟೆಲಿಕಾಂ ಮತ್ತು ಪ್ರಸಾರ ವಲಯಗಳಿಗೆ ಅಪಾರ ಪ್ರಮಾಣದ ಹಣ ಹರಿದು ಬರಲಿದೆ. ಅಲ್ಲದೇ ರಿಟೈಲ್ ಉದ್ಯಮದಲ್ಲೂ ಮಹತ್ತರ ಬದಲಾವಣೆಗಳಾಗಲಿದೆ. ಇದರ ಜತೆಗೆ ರಿಯಲ್ ಎಸ್ಟೇಟ್ ಉದ್ಯಮದಲ್ಲೂ ವಿದೇಶಿ ಬಂಡವಾಳ ಹೂಡಿಕೆಗೆ ಗ್ರೀನ್ ಸಿಗ್ನಲ್ ಸಿಕ್ಕಿದೆ.

ಕೋಟಕ್ ಮಹೀಂದ್ರಾ ಬ್ಯಾಂಕ್ ನ ಅರ್ಜಿಯನ್ನು ಕೇಂದ್ರ ಸರ್ಕಾರ ಪುರಸ್ಕರಿಸಿದ್ದು ಐಎನ್ ಜಿ ವೈಶ್ಯ ಬ್ಯಾಂಕ್ ಮತ್ತು ಕೋಟಕ್ ಮಹೀಂದ್ರ ವಿಲೀನಕ್ಕೆ ಇದ್ದ ಎಲ್ಲ ತೊಡಕು ನಿವಾರಣೆಯಾಗಿದ್ದು ವಿದೇಶಿ ಬಂಡವಾಳ ಪಡೆದುಕೊಳ್ಳಬಹುದು.

ಡೆನ್ ನೆಟ್ ವರ್ಕ್, ರಿಲಯನ್ಸ್ ಗ್ಲೋಬೋಕಾಮ್(ಬರ್ಮುಡಾ), ಸಿಸ್ಟೇಮಾ ಶ್ಯಾಮ್ ಟೆಲಿ ಸರ್ವೀಸಸ್, ಇಂಡಿಯನ್ ರೋಟೋಕ್ರಾಪ್ ನ ವಿದೇಶಿ ಬಂಡವಾಳ ಪ್ರಸ್ತಾವನೆಯನ್ನು ಸಹ ಕೇಂದ್ರ ಸರ್ಕಾರ ಪರಿಗಣಿಸಿದದ್ದು ಈ ಬಗ್ಗೆ ಇನ್ನು ನಿರ್ಧಾರ ಪ್ರಕಟ ಮಾಡಿಲ್ಲ.

English summary
Government today said it has cleared seven foreign investment proposals, including that of Hathway Cable and Datacom, totalling over Rs 981 crore. The proposals worth Rs 981.15 crore have been cleared by the Finance Ministry following recommendations for the same by the Foreign Investment Promotion Board (FIP
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X