ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕರ್ನಾಟಕದ ರಸ್ತೆ ಅಭಿವೃದ್ಧಿಗೆ 1 ಲಕ್ಷ ಕೋಟಿ ರು ತಗೊಳ್ಳಿ!

By Mahesh
|
Google Oneindia Kannada News

ಬೆಂಗಳೂರು, ಫೆ. 03: ಜಾಗತಿಕ ಹೂಡಿಕೆದಾರರ ಸಮಾವೇಶ ಈಗ ಇನ್ವೆಸ್ಟ್ ಕರ್ನಾಟಕ ಆಗಿ ಹೆಸರು ಬದಲಿಸಿಕೊಂಡು ಜೋಳಿಗೆ ಹಿಡಿದು ಉದ್ಯಮಿಗಳನ್ನು ಆಕರ್ಷಿಸುತ್ತಿದೆ.

ಇನ್ಫೋಸಿಸ್, ವಿಪ್ರೋ ಸಂಸ್ಥೆಯ ಪ್ರತಿನಿಧಿಗಳು ಮೊದಲ ದಿನ ಸಮಾರಂಭದಲ್ಲೇ ಕರ್ನಾಟಕದಲ್ಲಿ ರಸ್ತೆ, ನೀರು, ಮೂಲ ಸೌಕರ್ಯ ಇಲ್ಲ ಆದರೂ ನಾವು ಇಲ್ಲೇ ಇದ್ದೀವಿ ಎನ್ನುವಂತೆ ಭಾಷಣ ಮಾಡಿದರು. [ಇನ್ವೆಸ್ಟ್ ಕರ್ನಾಟಕ 2016 : ಅರಮನೆ ಮೈದಾನದಲ್ಲಿ ಉದ್ಯಮಿಗಳ ದಂಡು]

ಇದನ್ನು ಆಲಿಸಿದ ಕೇಂದ್ರ ರಸ್ತೆ ಸಾರಿಗೆ, ಹೆದ್ದಾರಿ ಹಾಗೂ ಬಂದರು ಸಚಿವ ನಿತಿನ್ ಗಡ್ಕರಿ ಅವರು ರಾಜ್ಯದ ರಸ್ತೆ ಅಭಿವೃದ್ಧಿಗೆ ಕೇಂದ್ರ ಸರ್ಕಾರದಿಂದ 1 ಲಕ್ಷ ಕೋಟಿ ರೂ ನೀಡುವುದಾಗಿ ಘೋಷಿಸಿದರು.[ಇನ್ವೆಸ್ಟ್ ಕರ್ನಾಟಕ ಮೊಬೈಲ್ ಅಪ್ಲಿಕೇಶನ್]

ಮುಂದಿನ ಎರಡು ವರ್ಷಗಳಲ್ಲಿ ಕರ್ನಾಟಕ ರಾಜ್ಯದಲ್ಲಿ ರಸ್ತೆ ಅಭಿವೃದ್ಧಿಗೆ ಕೇಂದ್ರ ಸರ್ಕಾರ 1 ಲಕ್ಷ ಕೋಟಿ ರೂ. ಗಳನ್ನು ಹೂಡಿಕೆ ಸಿಗಲಿದೆ ಎಂದು ಘೋಷಿಸಿದ ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರು ಮಿಕ್ಕ ಮೊತ್ತವನ್ನು ಪಿಪಿಪಿ ಮಾದರಿ ಯೋಜನೆ ಬಳಸಿ ಖಾಸಗಿ ಕಂಪನಿಗಳಿಂದ ಪಡೆದುಕೊಳ್ಳುವಂತೆ ಸಿದ್ದರಾಮಯ್ಯ ಅವರಿಗೆ ಸೂಚಿಸಿದರು.

ಬೆಂಗಳೂರಿನ ಅರಮನೆ ಮೈದಾನದಲ್ಲಿಂದು ನಡೆಯುತ್ತಿರುವ ಮೂರು ದಿನಗಳ (ಫೆಬ್ರವರಿ 3 ರಿಂದ 5)'ಇನ್ವೆಸ್ಟ್ ಕರ್ನಾಟಕ 2016' ಸಮಾವೇಶದಲ್ಲಿ ಮಾತನಾಡಿದ ಅವರು, ಕೇಂದ್ರ ಸರ್ಕಾರ ಮೂಲಭೂತ ಸೌಕರ್ಯ ಅಭಿವೃದ್ಧಿಗೆ ಗಮನ ನೀಡಿದೆ ಎಂದರು.ಗಡ್ಕರಿ ಬಳಿ ಉದ್ಯಮಿಗಳು ಮಾಡಿಕೊಂಡ ಮನವಿ ಏನು? ನವ ಮಂಗಳೂರು ಬಂದರಿಗೆ ಕೇಂದ್ರ ಸರ್ಕಾರ ಕೊಟ್ಟಿದ್ದೆಷ್ಟು? ಮುಂದೆ ಓದಿ...

ಸಂಚಾರ ದಟ್ಟಣೆಯನ್ನು ಪರಿಹಾರ ಸೂಚಿಸಿ ಎಂದ ಉದ್ಯಮಿಗಳು

ಸಂಚಾರ ದಟ್ಟಣೆಯನ್ನು ಪರಿಹಾರ ಸೂಚಿಸಿ ಎಂದ ಉದ್ಯಮಿಗಳು

ಉದ್ಯಮಿಗಳಾದ ಕಿರಣ್ ಮಜುಂದಾರ್ ಷಾ, ಅಜೀಂ ಪ್ರೇಮ್ ಜೀ, ಮತ್ತಿತರರು ಬೆಂಗಳೂರು ನಗರದಲ್ಲಿ ಸಂಚಾರ ದಟ್ಟಣೆ ಹೆಚ್ಚಿದ್ದು, ಇದಕ್ಕೆ ಪರಿಹಾರ ಒದಗಿಸುವಂತೆ ಬಂಡವಾಳ ಹೂಡಿಕೆದಾರರ ಸಮಾವೇಶದಲ್ಲಿ ಪಾಲ್ಗೊಂಡಿರುವ ನಿತಿನ್ ಗಡ್ಕರಿ ಅವರನ್ನು ಮನವಿ ಮಾಡಿದರು. ಇದೇ ವಿಷಯವನ್ನು ತಮ್ಮ ಭಾಷಣದಲ್ಲಿ ಪ್ರಸ್ತಾಪಿಸಿದ ಗಡ್ಕರಿ, ಸಂಚಾರ ದಟ್ಟಣೆ ಸಮಸ್ಯೆಯನ್ನು ಬಗೆಹರಿಸಲು ಕೇಂದ್ರ ಸರ್ಕಾರ, ರಾಜ್ಯ ಸರ್ಕಾರಕ್ಕೆ ಎಲ್ಲಾ ಸಹಕಾರ ನೀಡ‌ಲಿದೆ ಎಂದರು.

ಹಲವು ರಸ್ತೆ ಅಭಿವೃದ್ಧಿ ಯೋಜನೆಗಳು ಪ್ರಗತಿಯಲ್ಲಿವೆ

ಹಲವು ರಸ್ತೆ ಅಭಿವೃದ್ಧಿ ಯೋಜನೆಗಳು ಪ್ರಗತಿಯಲ್ಲಿವೆ

* ಬೆಂಗಳೂರು - ಮೈಸೂರು ನಡುವಿನ ರಸ್ತೆ ಅಭಿವೃದ್ಧಿ, ಶಿರಾಡಿ ಘಾಟ್ ರಸ್ತೆ ಅಭಿವೃದ್ಧಿ ಯೋಜನೆ, ರಾಷ್ಟ್ರೀಯ ಹೆದ್ದಾರಿ 75 ವಿಸ್ತರಣೆ ಯೋಜನೆಗಳನ್ನು ಕೈಗೆತ್ತಿಕೊಳ್ಳಲಾಗಿದೆ.
* ದೇಶದಲ್ಲಿ ಪ್ರಸ್ತುತ 96 ಸಾವಿರ ಕಿಲೋ ಮೀಟರ್ ರಾಷ್ಟ್ರೀಯ ಹೆದ್ದಾರಿ ಇದ್ದು, ಇದನ್ನು 1 ಲಕ್ಷ 50 ಸಾವಿರ ಕಿ.ಮೀ ಏರಿಸುವ ಗುರಿ ಇದೆ.
* ದೇಶದಲ್ಲಿ ಪ್ರತಿದಿನ 18 ಕಿ.ಮೀ ರಸ್ತೆ ನಿರ್ಮಾಣ ಕಾರ್ಯ ನಡೆದಿದ್ದು, ಇದನ್ನು ಬರುವ ಮಾರ್ಚ್ ವೇಳೆಗೆ 30 ಕಿ.ಮೀಗೆ ಏರಿಸುವ ಗುರಿ ಹೊಂದಲಾಗಿದೆ.

ನವ ಮಂಗಳೂರು ಬಂದರಿನ ಅಭಿವೃದ್ಧಿ

ನವ ಮಂಗಳೂರು ಬಂದರಿನ ಅಭಿವೃದ್ಧಿ

ರಾಜ್ಯದಲ್ಲಿ ರಸ್ತೆ ಅಭಿವೃದ್ಧಿ ಜತೆಗೆ ಬಂದರು ಅಭಿವೃದ್ಧಿಗೂ ಕೇಂದ್ರ ಸರ್ಕಾರ ಹಣ ಒದಗಿಸಿದೆ. ನವ ಮಂಗಳೂರು ಬಂದರಿನ ಸಾಮರ್ಥ್ಯವನ್ನು ದ್ವಿಗುಣಗೊಳಿಸಲು 10 ಸಾವಿರ ಕೋಟಿ ರೂ. ಗಳನ್ನು ಒದಗಿಸಲಾಗಿದೆ.
ದೇಶದ ವಿವಿಧೆ‌ಡೆ ಲೈಟ್‌ಹೌಸ್ ಹಾಗೂ ದ್ವೀಪಗಳ ಅಭಿವೃದ್ಧಿಗೂ ಗಮನ ನೀಡಲಾಗಿದೆ. ಕರ್ನಾಟಕದಲ್ಲೂ ನಾಲ್ಕು ಲೈಟ್‌ಹೌಸ್‌ಗಳನ್ನು ಖಾಸಗಿ ಸಹಭಾಗಿತ್ವದಲ್ಲಿ ಕೈಗೆತ್ತಿಕೊಳ್ಳಲಾಗುತ್ತಿದ್ದು, ಇದರಲ್ಲಿ 200 ಕೋಟಿ ರೂ. ಬಂಡವಾಳ ಹೂಡಿಕೆಯಾಗಲಿದೆ.

ದೇಶದಲ್ಲಿ ಒಳನಾಡು ಹಾಗೂ ಜಲಸಾರಿಗೆಗೆ 2500 ಕೋಟಿ ರೂ. ಗಳನ್ನು ಈ ವರ್ಷದ ಡಿಸೆಂಬರ್ ಅಂತ್ಯದಲ್ಲಿ ಹೂ‌ಡಿಕೆ ಮಾಡಲಾಗುವುದು.

50 ಲಕ್ಷ ಉದ್ಯೋಗ ಒದಗಿಸುವ ಗುರಿ

50 ಲಕ್ಷ ಉದ್ಯೋಗ ಒದಗಿಸುವ ಗುರಿ

ಮುಂದಿನ ಮೂರು ವರ್ಷಗಳಲ್ಲಿ ರಸ್ತೆ ಸೆಕ್ಟರ್ ನಲ್ಲಿ 50 ಲಕ್ಷ ಉದ್ಯೋಗ ಒದಗಿಸುವ ಗುರಿ ಹೊಂದಲಾಗಿದೆ. ಈಗಾಗಲೇ 1.5 ಲಕ್ಷ ಕೋಟಿ ರು ಮೌಲ್ಯದ ಒಪ್ಪಂದಗಳಿಗೆ ಸಹಿ ಹಾಕಲಾಗಿದೆ. ಸರಿ ಸುಮಾರು 25,000 ರಿಂದ 30,000 ಕೋಟಿ ಮೌಲ್ಯದ 15ಕ್ಕೂ ಅಧಿಕ ಬಾಕಿ ಉಳಿದಿರುವ ಯೋಜನೆಗಳಿಗೆ ಹಸಿರು ನಿಶಾನೆ ನೀಡಲಾಗುವುದು ಎಂದು ಗಡ್ಕರಿ ಹೇಳಿದರು.

English summary
Invest Karnataka 2016: Union Transport Minister Nitin Gadkari today(Feb 03) said the central government will contribute Rs 1 lakh crore in next two years for road development in Karnataka.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X