ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಎಲ್ ಅಂಡ್ ಟಿ ಪಾಲಾಗಲಿರುವ ಮೈಂಡ್ ಟ್ರೀ, ರಾಜೀನಾಮೆಗೆ ಮುಂದಾದ ಸಿಇಒ

|
Google Oneindia Kannada News

ಬೆಂಗಳೂರು, ಜೂನ್ 27: ಪ್ರಮುಖ ಐಟಿ ಕಂಪನಿ ಮೈಂಡ್ ಟ್ರೀಯನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳಲು ಮೂಲ ಸೌಕರ್ಯ ಸಂಸ್ಥೆ ಲಾರ್ಸನ್ ಅಂಡ್ ಟರ್ಬೋ (ಎಲ್ ಅಂಡ್ ಟಿ) ಮುಂದಾಗಿದೆ. ಈ ಬೆಳವಣಿಗೆ ನಂತರ ಮೈಂಡ್ ಟ್ರೀ ಸಿಇಒ ರೊಸ್ತೋ ರಾವಣನ್ ಅವರು ರಾಜೀನಾಮೆ ನೀಡುವ ಸುದ್ದಿ ಹಬ್ಬಿದೆ.

ಕಳೆದ ಮಾರ್ಚ್ ನಲ್ಲಿ ಮೈಂಡ್ ಟ್ರೀ ಲಿಮಿಟೆಡ್ ಖರೀದಿ ಮಾತುಕತೆ ನಡೆಸಿದ ಎಲ್ ಅಂಡ್ ಟಿ ಸದ್ಯ ಮುಕ್ತ ಆಫರ್ ಮೂಲಕ ಷೇರು ಮಾರಾಟಕ್ಕೆ ಮುಂದಾಗಿದೆ. ಇದಕ್ಕಾಗಿ ಸಿಂಗಪುರ ಮೂಲದ ಹೂಡಿಕೆದಾರರಾ ನಲಂದಾ ಕ್ಯಾಪಿಟಲ್ ನೆರವು ಪಡೆದಿದೆ. ಮೈಂಡ್ ಟ್ರೀ ಸ್ಥಾಪಕರು, ರಾವಣನ್ ಅವರನ್ನು ಮುಂದುವರೆಸುವಂತೆ ಕೋರಿದ್ದಾರೆ.

ಈ ನಡುವೆ ಮೈಂಡ್ ಟ್ರೀ ಸ್ಥಾಪಕರಾದ ಸುಬ್ರತೋ ಬಾಗ್ಚಿ, ಎನ್ ಎಸ್ ಪಾರ್ಥಸಾರಥಿ ಹಾಗೂ ಕೃಷ್ಣಕುಮಾರ್ ನಟರಾಜನ್ ಅವರು ತಮ್ಮ ಪಾಲಿನ ಶೇ 13ರಷ್ಟು ಪಾಲನ್ನು ಮಾರಾಟ ಮಾಡುವ ಸಾಧ್ಯತೆಯೂ ಕಂಡು ಬಂದಿದೆ.

Mindtree CEO Ravanan likely to quit after L&T picks majority stake: Report

ಕೆಫೆ ಕಾಫಿ ಡೇಯ ಸ್ಥಾಪಕ ವಿಜಿ ಸಿದ್ದಾರ್ಥ ಅವರು ಮೈಂಡ್ ಟ್ರೀ ಹಾಗೂ ಕಾಫಿ ಉದ್ಯಮ ಒಂದು ಭಾಗವಾಗಿ ತಮ್ಮ ಬಳಿ ಇದ್ದ ಶೇ 20.32ರಷ್ಟು ಪಾಲನ್ನು ಮಾರ್ಚ್ ತಿಂಗಳಿನಲ್ಲಿ ಸುಮಾರು 3,000 ಕೋಟಿ ರು ಮೌಲ್ಯಕ್ಕೆ ಮಾರಾಟ ಮಾಡಿದ್ದರು.

ಸದ್ಯ ಮೈಂಡ್ ಟ್ರೀಯಲ್ಲಿ ಶೇ 30ರಷ್ಟು ಪಾಲು ಹೊಂದಿರುವ ಎಲ್ ಅಂಡ್ ಟಿ, ಇನ್ನು ಶೇ 31ರಷ್ಟು ಪಾಲು ಪಡೆದು ಸಂಪೂರ್ಣ ಹಿಡಿತ ಹೊಂದಲಿದೆ. 980 ರು ಪ್ರತಿ ಷೇರಿನಂತೆ ಇದ್ದ ಓಪನ್ ಆಫರ್ ಜೂನ್ 17ರಂದು ಆರಂಭವಾಗಿದ್ದು, ಜೂನ್ 28ಕ್ಕೆ ಮುಕ್ತಾಯವಾಗಲಿದೆ. ಒಟ್ಟಾರೆ 5.13 ಕೋಟಿ ಷೇರುಗಳು ಎಲ್ ಅಂಡ್ ಟಿ ಪಾಲಾದರೆ ಮೈಂಡ್ ಟ್ರೀಯಲ್ಲಿ ಒಟ್ಟು 66.32% ಪಾಲು ಹೊಂದಲಿದೆ. ಜೂನ್ 26ರ ಅಂತ್ಯಕ್ಕೆ ಎಲ್ ಅಂಡ್ ಟಿ ಓಪನ್ ಆಫರ್ ಗೆ 4.83ಕೋಟಿ ಷೇರು ಅಥವಾ 94.16% ಗೆ ಬಿಡ್ ಬಂದಿವೆ.(ಪಿಟಿಐ)

English summary
Mindtree CEO Rostow Ravanan is likely to resign in a few weeks after infrastructure company Larsen and Toubro (L&T) acquired a majority stake in the IT company, sources said. L&T started an unsolicited takeover for Mindtree Ltd. in March
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X