ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೈಕ್ರೋಸಾಫ್ಟ್ ಟೀಮ್ಸ್ ಈಗ ಕನ್ನಡದಲ್ಲಿಯೂ ಲಭ್ಯ

|
Google Oneindia Kannada News

ಬೆಂಗಳೂರು, ಜೂನ್ 15: ಈಗಿನ ಸಂಕಷ್ಟ ಕಾಲದಲ್ಲಿ ಸಾಮಾಜಿಕ ಅಂತರವು ನಮ್ಮನ್ನು ನಮ್ಮ ಸ್ನೇಹಿತರಿಂದ ಮತ್ತು ಕುಟುಂಬದಿಂದ ದೈಹಿಕವಾಗಿ ದೂರ ಇಟ್ಟಿದ್ದರೂ ತಂತ್ರಜ್ಞಾನವು ನಮ್ಮನ್ನು ಮತ್ತಷ್ಟು ಹತ್ತಿರಕ್ಕೆ ತರುವಲ್ಲಿ ನೆರವಾಗಿದೆ. ಇಂಥ ಸಂದರ್ಭದಲ್ಲಿ ಸಂಪರ್ಕದಲ್ಲಿರಲು ಮೈಕ್ರೋಸಾಫ್ಟ್ ಉದ್ದೇಶಿಸಿದೆ- ಏಕೆಂದರೆ ನಾವು ಒಟ್ಟಿಗೆ ಸೇರಿದಾಗ ಜೀವನವು ಉತ್ತಮವಾಗಿರುತ್ತದೆ!

ಎಲ್ಲರಿಗೂ ಚಾಟ್ ಮತ್ತು ಸಹಯೋಗದ ಪ್ಲಾಟ್ ಫಾರ್ಮ್ ಆಗಿರುವ ಮೈಕ್ರೋಸಾಫ್ಟ್ ಟೀಮ್ಸ್, ವೃತ್ತಿಪರ ಉದ್ಯೋಗಿಗಳಿಗೆ ಈಗಾಗಲೇ ಮುಂಚೂಣಿಯಲ್ಲಿರುವ ಪರಿಹಾರವಾಗಿದೆ. ಈಗ ಮೈಕ್ರೋಸಾಫ್ಟ್ ಟೀಮ್ಸ್ ಮೂಲಕ ನೀವು ನಿಮ್ಮ ಕುಟುಂಬ ಮತ್ತು ಸ್ನೇಹಿತರೊಂದಿಗೆ ಸಂಪರ್ಕ ಸಾಧಿಸಬಹುದಾಗಿದೆ. ನೀವು iOS, ಆ್ಯಂಡ್ರಾಯ್ಡ್ ಅಥವಾ ಡೆಸ್ಕ್ ಟಾಪ್ ಆಪ್ ಅನ್ನು ಡೌನ್ಲೋಡ್ ಮಾಡಿಕೊಂಡು ಸಂವಹನ ನಡೆಸಬಹುದು. ನೀವು ಕಾಳಜಿವಹಿಸುವ ಜನರೊಂದಿಗೆ ಸುಲಭ ಮತ್ತು ತ್ವರಿತ ಸಂಭಾಷಣೆಗಳನ್ನು ಖಚಿತಪಡಿಸಿಕೊಳ್ಳಲು ಹೊಸ ವೈಶಿಷ್ಟ್ಯತೆಗಳನ್ನು ವಿನ್ಯಾಸಗೊಳಿಸಲಾಗಿದೆ. ಈ ಬಗ್ಗೆ

“ಡಿಜಿಟಲ್ ಕೃಷಿ”; ಕೇಂದ್ರ ಕೃಷಿ ಸಚಿವಾಲಯ ಮತ್ತು ಮೈಕ್ರೋಸಾಫ್ಟ್ ನಡುವೆ ಒಪ್ಪಂದ“ಡಿಜಿಟಲ್ ಕೃಷಿ”; ಕೇಂದ್ರ ಕೃಷಿ ಸಚಿವಾಲಯ ಮತ್ತು ಮೈಕ್ರೋಸಾಫ್ಟ್ ನಡುವೆ ಒಪ್ಪಂದ

1. ಕನ್ನಡದಲ್ಲಿಯೇ ಟೀಮ್ಸ್ ಬಳಸಿ: ಮೈಕ್ರೋಸಾಫ್ಟ್ ಟೀಮ್ಸ್ ಅನ್ನು ನೀವು ನಿಮ್ಮದೇ ಆದ ಭಾಷೆಯಲ್ಲಿ ಬಳಸಬಹುದು- ಅಂದರೆ ಕನ್ನಡದಲ್ಲಿ! ನೀವು ಟೀಮ್ಸ್ ನ ಎಲ್ಲಾ ವೈಶಿಷ್ಟ್ಯತೆಗಳನ್ನು ಅಕ್ಸೆಸ್ ಮಾಡಿಕೊಳ್ಳಬಹುದಾಗಿದೆ ಮತ್ತು ನೀವು ಯಾವುದೇ ಸಂದರ್ಭದಲ್ಲಿ ಬೇಕಾದರೂ ಭಾಷೆಯನ್ನು ಇಂಗ್ಲೀಷ್‌ಗೆ ಮರಳಬಹುದು. ನೀವು ಸ್ವೀಕರಿಸುವ ಸಂದೇಶಗಳನ್ನು ಕನ್ನಡದಲ್ಲಿಯೇ ಕೇಳಲು ಆ್ಯಪ್ ಅವಕಾಶ ಕಲ್ಪಿಸುತ್ತದೆ.

Microsoft Teams now available in Kannada

2. 24 ಗಂಟೆಗಳ ಉಚಿತ ಕರೆ: ಮೈಕ್ರೋಸಾಫ್ಟ್ ಟೀಮ್ಸ್‌ನೊಂದಿಗೆ ನೀವು ಇನ್ನು ಮುಂದೆ 300 ಕ್ಕೂ ಹೆಚ್ಚು ಜನರೊಂದಿಗೆ ದಿನದ 24 ಗಂಟೆಯೂ ಮಾತನಾಡಬಹುದು! ಮೈಕ್ರೋಸಾಫ್ಟ್ ಟೀಮ್ಸ್ ನೊಂದಿಗೆ ಫೋನ್ ಬಿಲ್ ಬಗ್ಗೆ ತಲೆ ಕೆಡಿಸಿಕೊಳ್ಳಬೇಡಿ. ಈ ಸಾಂಕ್ರಾಮಿಕದ ಅವಧಿಯಲ್ಲಿ ನೀವು ನಿರಂತರವಾಗಿ ದೀರ್ಘ ಕರೆಗಳನ್ನು ಮಾಡಬಹುದು.

3. ವಿಡಿಯೋ ಕಾಲಿಂಗ್: ವಿಡಿಯೋ ಕಾಲ್ ಅನ್ನು ಸಂಪರ್ಕಿಸುವ ಮೂಲಕ ನಿಮ್ಮ ಪ್ರೀತಿ ಪಾತ್ರರ ಜತೆಯಲ್ಲಿ ಮಾತನಾಡಿ. ಟೀಮ್ಸ್‌ನಲ್ಲಿನ ವಿಡಿಯೋ ಕಾಲ್ ಲಿಂಕ್ ಗಳನ್ನು ಯಾರೊಂದಿಗೆ ಬೇಕಾದರೂ ಷೇರ್ ಮಾಡಿಕೊಳ್ಳಬಹುದು. ನೀವು ಆ್ಯಪ್ ಅನ್ನು ಉಪಯೋಗಿಸದಿದ್ದರೂ ಇದು ಸಾಧ್ಯವಾಗುತ್ತದೆ. ನಿಮ್ಮ ಸ್ನೇಹಿತರು ಅಥವಾ ಕುಟುಂಬ ಸದಸ್ಯರು ಯಾವುದೇ ಡಿವೈಸ್ ಅಥವಾ ವೆಬ್ ಬ್ರೌಸರ್ ಬಳಸಿ ಮೀಟಿಂಗ್‌ಗೆ ಸೇರಿಕೊಳ್ಳಲು ಸಾಧ್ಯವಿದೆ.

4. ಒಟ್ಟು ಮೋಡ್ (Together Mode): ಈ ಟುಗೆದರ್ ಮೋಡ್‌ನಲ್ಲಿ ಸಂವಹನ ನಡೆಸುವ ವೇಳೆಯಲ್ಲಿ ನೀವು ನಿಮ್ಮ ಪ್ರೀತಿಪಾತ್ರರೊಂದಿಗೆ ಒಂದೇ ಕೊಠಡಿಯಲ್ಲಿರುವ ಅನುಭವವಾಗುತ್ತದೆ. ಈ ವೈಶಿಷ್ಟ್ಯತೆಯೊಂದಿಗೆ ನೀವು ಯಾವುದೇ ಸಾಮಾನ್ಯ ವಿಡಿಯೋ ಕಾಲ್‌ಅನ್ನು ವರ್ಚುವಲ್ ಸನ್ನಿವೇಶದಲ್ಲಿ ಹಂಚಿಕೊಳ್ಳಬಹುದಾಗಿದೆ. ಕಾಫಿ ಶಾಪ್, ಹಾಲಿಡೇ ತಾಣ- ಹೀಗೆ ನೀವು ನಿಮ್ಮ ನೆಚ್ಚಿನ ವರ್ಚುವಲ್ ವಾತಾವರಣವನ್ನು ಆಯ್ಕೆ ಮಾಡಿಕೊಳ್ಳಬಹುದು.

5. ಚಾಟಿಂಗ್ ಆರಂಭಿಸಿ: ನೀವು ಅಪ್ಲಿಕೇಷನ್ ಆರಂಭಿಸುವಾಗ ನಿಮ್ಮ ಸಂಪರ್ಕಗಳೊಂದಿಗೆ ಚಾಟ್ ಆರಂಭ ಮಾಡಬಹುದು. ನೀವು ನಿಮ್ಮ ಸಂಪರ್ಕಗಳಿಂದ ವೈಯಕ್ತಿಕ ಸಂದೇಶಗಳನ್ನು ಕಳುಹಿಸಬಹುದು ಅಥವಾ ಗ್ರೂಪ್ ಚಾಟ್ ಅನ್ನೂ ಸಹ ಆರಂಭಿಸಬಹುದು. ನಿಮ್ಮ ಗ್ರೂಪ್‌ಗೊಂದು ಹೆಸರಿಡಿ ಮತ್ತು ಅದನ್ನು ಸಂಘಟಿತವಾಗಿಟ್ಟುಕೊಳ್ಳಬಹುದು. ಒಂದು ವೇಳೆ ಯಾರಾದರೂ ಟೀಮ್ಸ್ ಅನ್ನು ಹೊಂದಿರದೇ ಇದ್ದರೂ ಅವರು ಎಸ್ಎಂಎಸ್ ಸಂದೇಶಗಳ ಮೂಲಕ ಎಲ್ಲಾ ಚಾಟ್ ಗಳಿಗೆ ಪ್ರತಿಕ್ರಿಯೆ ನೀಡಬಹುದು.

6. ಮತದಾನಕ್ಕೆ ಹೋಗಿ: ಮೈಕ್ರೋಸಾಫ್ಟ್ ಟೀಮ್ಸ್‌ನಲ್ಲಿನ ಪೋಲಿಂಗ್ ವೈಶಿಷ್ಟ್ಯತೆಯ ಮೂಲಕ ನಿಮ್ಮ ಸ್ನೇಹಿತರು ಅಥವಾ ಕುಟುಂಬದವರೊಂದಿಗೆ ನಿಮ್ಮ ನಿರ್ಧಾರಗಳನ್ನು ಪ್ರಕಟಿಸಬಹುದು. ನಿಮ್ಮ ಟೀಮ್ಸ್ ಚಾಟ್‌ನಲ್ಲಿ ಮತವನ್ನು ಹಾಕಬಹುದು ಮತ್ತು ಡಿನ್ನರ್‌ಗೆ ಏನು ಬೇಕೆಂಬುದರ ಬಗ್ಗೆ ಆರ್ಡರ್ ಮಾಡಲು ತ್ವರಿತವಾಗಿ ಪ್ರತಿಕ್ರಿಯೆ ನೀಡಬಹುದು ಅಥವಾ ನಿಮ್ಮ ಅಜ್ಜಿಯ ಹುಟ್ಟುಹಬ್ಬದ ಸಂಭ್ರಮದ ಪಾರ್ಟಿಗೆ ಕನೆಕ್ಟ್ ಮಾಡಲೂಬಹುದು! (ಮೈಕ್ರೋಸಾಫ್ಟ್ ಪ್ರಕಟಣೆ)

English summary
Microsoft Teams, a chat and collaboration platform for all, is already a leading solution for working professionals.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X