ಮೈಕ್ರೋಸಾಫ್ಟ್ನಿಂದ ಸರ್ಫೇಸ್ ಲ್ಯಾಪ್ಟಾಪ್ 4 ಬಿಡುಗಡೆ
ಬೆಂಗಳೂರು,ಮೇ 25: ಮೈಕ್ರೋಸಾಫ್ಟ್ ಇಂಡಿಯಾ ಇಂದು ಶೈಕ್ಷಣಿಕ ಗ್ರಾಹಕರು ಮತ್ತು ಅಧಿಕೃತ ರೀಟೇಲರ್ಗಳಿಗೆ ತನ್ನ ಸರ್ಫೇಸ್ ಲ್ಯಾಪ್ಟಾಪ್ 4 ಅನ್ನು ಬಿಡುಗಡೆ ಮಾಡಿದೆ. ಈ ಲ್ಯಾಪ್ಟಾಪ್ ಅಮೆಜಾನ್.ಇನ್ನಲ್ಲಿ ಲಭ್ಯವಿದೆ. ಈ ಆವಿಷ್ಕಾರಕ ಮತ್ತು ವೈವಿಧ್ಯಮಯ ಲ್ಯಾಪ್ಟಾಪ್ ನಿರಂತರವಾಗಿ ಕೆಲಸ ಮಾಡುವುದು ಅಥವಾ ಕಲಿಕೆಯಲ್ಲಿ ತೊಡಗುವವರಿಗೆ ಅಥವಾ ಹೈಬ್ರೀಡ್ ಕೆಲಸ ಮಾಡುವ ಬಳಕೆದಾರರಿಗೆ ಹೇಳಿ ಮಾಡಿಸಿದ ಉತ್ಪನ್ನವಾಗಿದೆ.
ಈ ಬಗ್ಗೆ ಮಾತನಾಡಿದ ಮೈಕ್ರೋಸಾಫ್ಟ್ ಇಂಡಿಯಾದ ಚೀಫ್ ಆಪರೇಟಿಂಗ್ ಆಫೀಸರ್ ರಾಜೀವ್ ಸೋಧಿ ಅವರು,"ನಾವು ಭಾರತಕ್ಕೆ ಹೊಸ ಸರ್ಫೇಸ್ ಲ್ಯಾಪ್ಟಾಪ್ 4 ಅನ್ನು ಬಿಡುಗಡೆ ಮಾಡಲು ಸಂತಸವೆನಿಸುತ್ತಿದೆ. ಈ ಮೂಲಕ ನಾವು ನಮ್ಮ ಆವಿಷ್ಕಾರಕ ಮತ್ತು ನಾವೀನ್ಯತೆಯ ಉತ್ಪನ್ನಗಳು ಮತ್ತು ಪರಿಹಾರಗಳನ್ನು ನಮ್ಮ ಗ್ರಾಹಕರಿಗೆ ನೀಡಲು ಬಯಸಿದ್ದೇವೆ. ಇದರ ಮೂಲಕ ಗ್ರಾಹಕರು ಅಥವಾ ಬಳಕೆದಾರರು ಹೊಸ ಮಾರ್ಗಗಳಲ್ಲಿ ಹೈಬ್ರೀಡ್ ಮಾದರಿಯಲ್ಲಿ ಕೆಲಸ ನಿರ್ವಹಣೆ ಮತ್ತು ಕಲಿಕೆಯಲ್ಲಿ ತೊಡಗಬಹುದಾಗಿದೆ.
ಸರ್ಫೇಸ್ ಲ್ಯಾಪ್ಟಾಪ್ 4 ಮೈಕ್ರೋಫ್ಟ್ ಹೊಸ ಮೀಟಿಂಗ್ ಮತ್ತು ಸಹಯೋಗಿತ ಅಕ್ಸೆಸರಿಗಳನ್ನು ಹೊಂದಿದೆ. ಇದರಿಂದ ಬಳಕೆದಾರರನ್ನು ಹೈಬ್ರೀಡ್ ಪರಿಸರಕ್ಕೆ ತಕ್ಕಂತೆ ಹೊಂದಿಕೊಳ್ಳಲು ಸಹಕಾರಿಯಾಗುತ್ತದೆ. ನಮ್ಮ ಇತ್ತೀಚಿನ ಲೈನ್-ಅಪ್ ಮೊಬಿಲಿಟಿಯನ್ನು ಹೆಚ್ಚು ಮಾಡಲಿದ್ದರೆ, ಕಾರ್ಯದಕ್ಷತೆ ಪ್ರಮಾಣವನ್ನು ದುಪ್ಪಟ್ಟುಗೊಳಿಸಲಿದೆ. ಅಲ್ಲದೇ ಎಂಟರ್ ಪ್ರೈಸಸ್ ಗ್ರೇಡ್ ಸೆಕ್ಯೂರಿಟಿ ವೈಶಿಷ್ಟ್ಯತೆಗಳನ್ನು ಹೊಂದಿದ್ದು, ಆಧುನಿಕ ಯುಗದ ಬಳಕೆದಾರರು ಹೈಬ್ರೀಡ್ ಯುಗಕ್ಕೆ ರೂಪಾಂತರಗೊಳ್ಳಲು ನೆರವಾಗುತ್ತದೆ" ಎಂದರು.
ಮೈಕ್ರೋಸಾಫ್ಟ್ನಿಂದ
ಸರ್ಫೇಸ್
ಲ್ಯಾಪ್ಟಾಪ್
4:
*
13.5"
ಮತ್ತು
15"
ಮಾದರಿಗಳು
ಸಿಗ್ನೇಚರ್
3:2
ಪಿಕ್ಸೆಲ್ಸೆನ್ಸ್
ಹೈ-ಕಾಂಟ್ರಾಸ್ಟ್
ಟಚ್ಸ್ಕ್ರೀನ್
ಡಿಸ್ಪ್ಲೇ
*
Dolby®
AtmosTM
Omnisonic
ಸ್ಪೀಕರ್
ಒಳಗೊಂಡಿವೆ.
*
ಬಿಲ್ಟ್-ಇನ್
ಎಚ್ಡಿ
ಫ್ರಂಟ್-ಫೇಸಿಂಗ್
ಕ್ಯಾಮೆರಾ
ಇದ್ದು,
ಕಡಿಮೆ
ಬೆಳಕಿನ
ಸಾಮರ್ಥ್ಯವನ್ನು
ಹೊಂದಿದ್ದು,
ಸ್ಟುಡಿಯೋ
ಮೈಕ್ರೋಫೋನ್
ಹೊಂದಿದೆ.
*
ಲಾರ್ಜ್
ಟ್ರ್ಯಾಕ್ಪ್ಯಾಡ್
ಗೆಸ್ಚರ್
ಸಪೋರ್ಟ್
ಅನ್ನು
ಹೊಂದಿದೆ.
*
ಪ್ಲಾಟಿನಂ
ಅಥವಾ
ಬ್ಲ್ಯಾಕ್
ಕಲರ್ಗಳಲ್ಲಿ
ಅಲ್ಕಾಂಟರ
ಅಥವಾ
ಮೆಟಲ್
ಫಿನಿಶ್ನಲ್ಲಿ
ಈ
ಲ್ಯಾಪ್ಟಾಪ್
ಲಭ್ಯವಿದೆ.
*
ಈ
ಸಾಧನವು
ಪವರ್
ಮಾಡರ್ನ್
ಆಗಿದ್ದು,
ಕಚೇರಿ,
ಲಿವಿಂಗ್
ರೂಂ,
ಕಾಫಿ
ಶಾಪ್
ಅಥವಾ
ಕ್ಲಾಸ್ರೂಂಗಳಲ್ಲಿ
ಬಹುಕಾರ್ಯಗಳ
ಬೇಡಿಕೆಗಳನ್ನು
ಪೂರೈಸಲಿದೆ.
*
ಭಾರತದಲ್ಲಿನ
ಎಲ್ಲಾ
ಗ್ರಾಹಕರು
ಸ್ಥಳೀಯ
ಮಾರಾಟಗಾರರು,
ರೀಟೇಲರ್
ಅಥವಾ
ಅಮೆಜಾನ್.ಇನ್ನಲ್ಲಿ
ಈ
ಹೊಸ
ಸರ್ಫೇಸ್
ಲ್ಯಾಪ್ಟಾಪ್
4
ಅನ್ನು
ಆರ್ಡರ್
ಮಾಡಬಹುದಾಗಿದೆ.
9
ತಿಂಗಳವರೆಗಿನ
ನೋ-ಕಾಸ್ಟ್
ಇಎಂಐ
ಸೌಲಭ್ಯವು
ಕನ್ಸೂಮರ್
ಎಸ್ಕೆಯುಗೆ
ಲಭ್ಯವಿದೆ.
ಇಎಂಐ
ಮಾಸಿಕ
11,444
ರೂಪಾಯಿಗಳಿಂದ
ಆರಂಭವಾಗಲಿದೆ.