ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೈಕ್ರೋಸಾಫ್ಟ್ ಸತ್ಯ ಸಂಬಳದ ಹೋಲಿಕೆ ಪಟ್ಟಿ

By Mahesh
|
Google Oneindia Kannada News

ಬೆಂಗಳೂರು, ಫೆ.6: ಹೈದರಾಬಾದ್ ಮೂಲದ, ಮಣಿಪಾಲದಲ್ಲಿ ವ್ಯಾಸಂಗ ಮಾಡಿರುವ ಮೈಕ್ರೋಸಾಫ್ಟ್ ಸಂಸ್ಥೆತ ನೂತನ ಸಿಇಒ ಸತ್ಯ ನಾದೆಳ್ಲ ಅವರ ವಾರ್ಷಿಕ ಸಂಬಳದ ಮೊತ್ತ ಬಹಿರಂಗಗೊಂಡಿದೆ. ಸತ್ಯ ಅವರಿಗೆ ವಾರ್ಷಿಕವಾಗಿ 1.2 ಮಿಲಿಯನ್ ಯುಎಸ್ ಡಾಲರ್ (ಸುಮಾರು 7.50 ಕೋಟಿ) ಸಿಗಲಿದೆ.

ಒಟ್ಟಾರೆ ಪ್ಯಾಕೇಜ್ ನಂತೆ ಬೋನಸ್, ಸ್ಟಾಕ್ ಅವಾರ್ಡ್ ಮತ್ತಿತರ ಸೌಲಭ್ಯ ಸೇರಿ ಲೆಕ್ಕ ಮಾಡಿದರೆ ಒಟ್ಟಾರೆ ವೇತನ 18 ಮಿಲಿಯನ್ ಯುಎಸ್ ಡಾಲರ್ (112 ಕೋಟಿ ರು) ಎಂದು ಹೊಸ ಉದ್ಯೋಗದ ಒಪ್ಪಂದದಲ್ಲಿ ತಿಳಿಸಲಾಗಿದೆ.

ಸುಮಾರು 78 ಬಿಲಿಯನ್ ಯುಎಸ್ ಡಾಲರ್ ತೂಗುವ ಕಂಪನಿಯ ಸಿಇಒ ಆಗಿರುವ 46 ವರ್ಷದ ಸತ್ಯ ಅವರಿಗೆ 'ಸೆಮಿ ಮಂಥ್ಲಿ' ಸೌಲಭ್ಯದಂತೆ ಸಂಬಳ ಸಿಗಲಿದೆಯಂತೆ. ಹೀಗಾಗಿ ತಿಂಗಳ ಸಂಬಳದ ಲೆಕ್ಕ ಸಿಗುವುದಿಲ್ಲ. ಮೈಕ್ರೋಸಾಫ್ಟ್ ನಲ್ಲಿ ಸುಮಾರು 22 ವರ್ಷಗಳ ಕಾಲ ದುಡಿದ ಅನುಭವ ಇರುವ ಸತ್ಯ ಅವರಿಗೆ ನಗದು ರೂಪದಲ್ಲಿ ಬೋನಸ್ ಕೂಡಾ ನೀಡಲಾಗುತ್ತದೆ. ಇದರ ಅನುಪಾತ ಶೂನ್ಯದಿಂದ 300 % ತನಕ ಇದ್ದು 3.6 ಮಿಲಿಯನ್ ಯುಎಸ್ ಡಾಲರ್ ಲಭಿಸಲಿದೆ. ಇನ್ನೂ ಸ್ಟಾಕ್ ಅವಾರ್ಡ್ ವಿಷಯಕ್ಕೆ ಬಂದರೆ 13.2 ಮಿಲಿಯನ್ ಯುಎಸ್ ಡಾಲರ್ ಸಿಗಲಿದ್ದು ಒಟ್ಟಾರೆ 18 ಮಿಲಿಯನ್ ಯುಎಸ್ ಡಾಲರ್ ಲಭಿಸಲಿದೆ. 2015 ರ ಆರ್ಥಿಕ ವರ್ಷದಿಂದ ಸ್ಟಾಕ್ ಅವಾರ್ಡ್ ಮೊತ್ತ ಸಿಗಲಿದೆ. (ಪಿಟಿಐ)

ಮೈಕ್ರೋಸಾಫ್ಟ್ ಸತ್ಯ ಸಂಬಳ ಎಷ್ಟಿದೆ?

ಮೈಕ್ರೋಸಾಫ್ಟ್ ಸತ್ಯ ಸಂಬಳ ಎಷ್ಟಿದೆ?

ಸತ್ಯ ಅವರು ವಾರ್ಷಿಕ ಸಂಬಳ 675,000 ಯುಎಸ್ ಡಾಲರ್ ಗೂ ಅಧಿಕ ಸಂಭಾವನೆ ಪಡೆಯುತ್ತಿರುವ ಮೂರನೇ ಸಿಇಒ ಎನಿಸಿದ್ದಾರೆ. ಈ ಮುಂಚೆ ಬಿಲ್ ಗೇಟ್ಸ್ ಹಾಗೂ ಸ್ಟೀವ್ ಬಾಲ್ಮರ್ ಇದೇ ಪ್ರಮಾಣದ ಸಂಬಳ ಎಣಿಸಿದ್ದರು.

ಕಳೆದ ವರ್ಷ ಸತ್ಯ ಅವರಿಗೆ ಕಳೆದ ವರ್ಷದ ಎಣಿಕೆಯಂತೆ 1.6 ಮಿಲಿಯನ್ ಯುಎಸ್ ಡಾಲರ್ ನಗದು ಬೋನಸ್ ಸಿಗಲಿದೆ. ಮೈಕ್ರೋಸಾಫ್ಟ್ ಆರ್ಥಿಕ ವರ್ಷ ಜುಲೈ 1 ರಿಂದ ಜೂ 30 ತನಕ ಇದೆ.

ಟಿಸಿಎಸ್ ಸಂಸ್ಥೆಯ ಎನ್ ಚಂದ್ರಶೇಖರನ್

ಟಿಸಿಎಸ್ ಸಂಸ್ಥೆಯ ಎನ್ ಚಂದ್ರಶೇಖರನ್

ಭಾರತೀಯ ಮೂಲದ ಟಾಟಾ ಕನ್ಸಲ್ಟೆನ್ಸಿ ಸರ್ವೀಸ್ ಸಂಸ್ಥೆಯ ಎನ್ ಚಂದ್ರಶೇಖರನ್ ಅವರ 11.6 ಕೋಟಿ ರು ನಷ್ಟಿದೆ.

ಎಂಫಾಸೀಸ್ ನ ಬಾಲು ಗಣೇಶ್ ಅಯ್ಯರ್

ಎಂಫಾಸೀಸ್ ನ ಬಾಲು ಗಣೇಶ್ ಅಯ್ಯರ್

ಎಂಫಾಸೀಸ್ ನ ಬಾಲು ಗಣೇಶ್ ಅಯ್ಯರ್ ಸಂಬಳ 7.45 ಕೋಟಿ ರು

ವಿಪ್ರೋ ಸಂಸ್ಥೆ ಕುರಿಯನ್ ಸಂಬಳ

ವಿಪ್ರೋ ಸಂಸ್ಥೆ ಕುರಿಯನ್ ಸಂಬಳ

ವಿಪ್ರೋ ಸಂಸ್ಥೆ ಕುರಿಯನ್ ಸಂಬಳ ವಿಪ್ರೋ ಸಂಸ್ಥೆ ಕುರಿಯನ್ ಸಂಬಳ 6.13 ಕೋಟಿ ರು

ಎಚ್ ಸಿಎಲ್ ಟೆಕ್ ಸಂಸ್ಥೆ ವಿನೀತ್ ನಾಯರ್

ಎಚ್ ಸಿಎಲ್ ಟೆಕ್ ಸಂಸ್ಥೆ ವಿನೀತ್ ನಾಯರ್

ಎಚ್ ಸಿಎಲ್ ಟೆಕ್ ಸಂಸ್ಥೆ ವಿನೀತ್ ನಾಯರ್ ಸಂಬಳ 8.42 ಕೋಟಿ ರು

ಐಗೇಟ್ ಸಂಸ್ಥೆ ಅಶೋಕ್ ವೆಮೂರಿ ಸಂಬಳ

ಐಗೇಟ್ ಸಂಸ್ಥೆ ಅಶೋಕ್ ವೆಮೂರಿ ಸಂಬಳ

ಐಗೇಟ್ ಸಂಸ್ಥೆ ಅಶೋಕ್ ವೆಮೂರಿ ಸಂಬಳ 8.17 ಕೋಟಿ ರು

English summary
Cricket-loving Hyderabad-born Satya Nadella will get a base annual salary of USD 1.2 million as new CEO of Microsoft, but his overall package after taking into account bonus and stock awards may reach USD 18 million (Rs 112 crore) a year besides various other perks.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X