ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಮೆರಿಕದಲ್ಲಿ ಮೈಕ್ರೋಸಾಫ್ಟ್ ಸಿಇಒ ಸತ್ಯ ಸಂಬಳವೇ ಅಧಿಕ!

By Mahesh
|
Google Oneindia Kannada News

ವಾಷ್ಟಿಂಗ್ಟನ್, ಏ.17: ಅಮೆರಿಕದ ಸಿಇಒಗಳ ಪೈಕಿ ಭಾರತ ಮೂಲದ ಸತ್ಯಾ ನಾದೆಳ್ಲ ಅವರ ಸಂಬಳವೇ ಅಧಿಕವಾಗಿದೆ. ಅಮೆರಿಕ ಅಧ್ಯಕ್ಷ ಬರಾಕ್ ಒಬಾಮಾ ಅವರಿಂದ ಹೊಗಳಿಕೆಗೆ ಪಾತ್ರವಾಗಿರುವ ನಾದೆಳ್ಲ ಅವರಿಗೆ ವಾರ್ಷಿಕವಾಗಿ ಸರಿ ಸುಮಾರು 525 ಕೋಟಿ (84.3 ಮಿಲಿಯನ್ ಯುಎಸ್ ಡಾಲರ್) ಪ್ಯಾಕೇಜ್ ಸಂಬಳ ಸಿಗುತ್ತಿದೆ.

ಈಕ್ವಿಲರ್ 100 ಸಿಇಒ ಪೇ ಸ್ಟಡಿ ಹೊಸ ಪಟ್ಟಿಯ ಪ್ರಕಾರ ಮೈಕ್ರೋಸಾಫ್ಟ್ ಸಿಇಒ ಸತ್ಯ ಟಾಪ್ ಸ್ಥಾನದಲ್ಲಿದ್ದಾರೆ. ಯುಎಸ್ ಕಂಪನಿಗಳ ಆದಾಯ ಹಾಗೂ ಸಿಇಒಗಳ ವಾರ್ಷಿಕ ವೇತನದ ಲೆಕ್ಕಾಚಾರದ ಮೇಲೆ ಈ ಪಟ್ಟಿ ಪ್ರಕಟಿಸಲಾಗಿದೆ. ಕಳೆದ ವರ್ಷ ಆರೇಕಲ್ ನ ಲಾರಿ ಎಲ್ಲಿಸನ್ ಟಾಪ್ ಸ್ಥಾನದಲ್ಲಿದ್ದರು. ಈಗ ಎಲ್ಲಿಸನ್ ಎರಡನೇ ಸ್ಥಾನಕ್ಕೆ ದೂಡಲ್ಪಟ್ಟಿದ್ದಾರೆ.

Microsoft’s Satya Nadella said to be top-paid CEO in the US

ಭಾರತೀಯ ಮೂಲದ ಮತ್ತೊಬ್ಬ ಸಿಇಒ ಪೆಪ್ಸಿ ಕೋ ಕಂಪನಿಯ ಇಂದ್ರಾ ನೂಯಿ ಅವರು 19.08 ಮಿಲಿಯನ್ ಡಾಲರ್ 19ನೇ ಸ್ಥಾನದಲ್ಲಿದ್ದಾರೆ. ಬರ್ಕ್ ಷೈರ್ ಹಾಥವೇನ ಹೂಡಿಕೆದಾರ ವಾರೆನ್ ಬಫೆಟ್ ಅವರು 100ನೇ ಸ್ಥಾನದಲ್ಲಿದ್ದಾರೆ. 464,011ಮಿಲಿಯನ್ ಡಾಲರ್. [ಮೈಕ್ರೋಸಾಫ್ಟ್ ಸತ್ಯ ಸಂಬಳದ ಹೋಲಿಕೆ ಪಟ್ಟಿ]

ಎಲಿಸನ್ ಗಳಿಕೆ 67.3 ಮಿಲಿಯನ್ ಡಾಲರ್, ಕ್ವಾಲ್ ಕಾಮ್ ನ ಸ್ಟೀವನ್ ಮೊಲೆನ್ ಕೊಪ್ ಮೂರನೇ ಸ್ಥಾನದಲ್ಲಿದ್ದು 60.7 ಮಿಲಿಯನ್ ಡಾಲರ್ ಗಳಿಕೆ ಹೊಂದಿದ್ದಾರೆ.

ಟಾಪ್ ಟೆನ್ ನಲ್ಲಿ ರಾಬರ್ಟ್ ಐಗರ್ (ವಾಲ್ಟ್ ಡಿಸ್ನಿ), ಲಾರಿ ಮರ್ಲೋ (ಸಿವಿಎಸ್ ಹೆಲ್ತ್), ಕೆ ರೂಪರ್ಟ್ ಮುರ್ಡೋಕ್ ( ಟ್ವೆಂಟಿ ಫಸ್ಟ್ ಸೆಂಚುರಿ ಫಾಕ್ಸ್), ಜೇಮ್ಸ್ ಮೆಕ್ ನರ್ನಿ ಜ್ಯೂ.(ಬೋಯಿಂಗ್), ಜೇಮ್ಸ್ ಗೋರ್ಮನ್ (ಮಾರ್ಗನ್ ಸ್ಟ್ಯಾನ್ಲಿ), ಡೇವಿಡ್ ಕೋಟ್ (ಹನಿವೆಲ್ ಇಂಟರ್ ನ್ಯಾಷನಲ್) ಹಾಗೂ ಕೆನೆತ್ ಚೆನಾಲ್ಟ್ (ಅಮೆರಿಕನ್ ಎಕ್ಸ್ ಪ್ರೆಸ್).

ಈಕ್ವಿಲರ್ ಸಮೀಕ್ಷೆ ಪ್ರಕಾರ 100 ಸಿಇಒಗಳ ಗಳಿಕೆ 14.3 ಮಿಲಿಯನ್ ಡಾಲರ್ ಸರಾಸರಿಯಷ್ಟಿದ್ದು, ಶೇ 15ರಷ್ಟು ಏರಿಕೆ ಕಂಡಿದೆ. (ಪಿಟಿಐ)

English summary
With a pay package of $84.3 million (Rs. 525 crores) a year, technology giant Microsoft’s Indian-origin chief Satya Nadella has emerged as the top-paid CEO in the US, as per a new list.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X