ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೈಕ್ರೋಸಾಫ್ಟ್ ಸತ್ಯ ಮಹಿಳೆಯರ ಕ್ಷಮೆಯಾಚಿಸಿದ್ರು

By Mahesh
|
Google Oneindia Kannada News

ಸಿಯಾಟಲ್, ಅ. 10: ಆರಿಜೋನಾದ ಫೀನಿಕ್ಸ್ ನಲ್ಲಿ ಮೂರು ದಿನಗಳ ಸಮಾವೇಶವೊಂದರಲ್ಲಿ ಮೈಕ್ರೋಸಾಫ್ಟ್ ಸಿಇಒ ಸತ್ಯ ನಡೆಲ್ಲಾ ಹೇಳಿದ ಒಂದು ವಾಕ್ಯ ಅನೇಕ ಮಹಿಳಾಮಣಿಗಳ ಹುಬ್ಬೇರಿಸಿತು. ಸಾಮಾಜಿಕ ಜಾಲ ತಾಣ ಫೇಸ್ ಬುಕ್, ಟ್ವಿಟ್ಟರ್ ನಲ್ಲಿ ಸತ್ಯ ಅವರ ಮಾತಿನ ಸತ್ಯಾಸತ್ಯತೆ ಚಿಂತನ ಮಂಥನವಾಗಿ ರಾಡಿಯಾಗಿಬಿಟ್ಟಿತು. ಕೊನೆಗೂ ಸತ್ಯ ಅವರು ಕ್ಷಮೆಯಾಚಿಸಿದರು.

ಸಮಾವೇಶದಲ್ಲಿ ಸಭಿಕರೊಡನೆ ಮಾತುಕತೆ ನಡೆಸುವಾಗ ಸತ್ಯ ಅವರ ಮುಂದೆ ತಂತ್ರಜ್ಞಾನ ಕ್ಷೇತ್ರದಲ್ಲಿ ಮಹಿಳೆಯರ ಪಾತ್ರವೇನು? ಎಂಬ ಪ್ರಶ್ನೆಯೊಂದು ಬಂದಿದೆ. [ಮೈಕ್ರೋಸಾಫ್ಟ್ ನಿಂದ 18 ಸಾವಿರ ಉದ್ಯೋಗ ಕಡಿತ]

ಇದಕ್ಕೆ ಉತ್ತರಿಸಿದ ಸತ್ಯ, 'ತಂತ್ರಜ್ಞಾನ ಕ್ಷೇತ್ರದಲ್ಲಿರುವ ಮಹಿಳೆಯರು ಸಂಬಳ ಏರಿಕೆ ಬಗ್ಗೆ ಪ್ರಶ್ನಿಸಬಾರದು ವ್ಯವಸ್ಥೆ ಬಗ್ಗೆ ನಂಬಿಕೆ ಇರಿಸಿಕೊಳ್ಳಬೇಕು. ವ್ಯವಸ್ಥೆ ಮೇಲೆ ನಂಬಿಕೆ ಇದ್ದರೆ ಸರಿಯಾದ ಸಮಯಕ್ಕೆ ಸೂಕ್ತ ಸಂಭಾವನೆ, ಗೌರವಾದರಗಳು ನಿಮಗೆ ತಲುಪುತ್ತದೆ' ಎಂಬರ್ಥದ ಉತ್ತರ ನೀಡಿದರು.

First a goof-up then an apology: Satya Nadella says 'Women should not ask for a raise'

ಈ ರೀತಿ ಉತ್ತರ ಬಂದ ಮೇಲೆ ಸಾಮಾಜಿಕ ಜಾಲ ತಾಣ ಟ್ವಿಟ್ಟರ್ ನಲ್ಲಿ ಸತ್ಯ ಅವರ ವಿರುದ್ಧ ಮಹಿಳೆಯರು ತಿರುಗಿ ಬಿದ್ದರು ಸರಣಿ ಟ್ವೀಟ್ ಗಳ ಬಾಂಬ್ ಎಸೆದರು. ಕೊನೆಗೂ ತಪ್ಪೊಪ್ಪಿಕೊಂಡ ಸತ್ಯ ಅವರು ಪುರುಷ ಹಾಗೂ ಮಹಿಳಾ ಉದ್ಯೋಗಿಗಳಿಗೆ ಸಮಾನ ಸಂಬಳ ಸಿಗಬೇಕು ಎಂದು ಟ್ವೀಟ್ ಮಾಡಿ ಗೊಂದಲ ನಿವಾರಿಸಿದರು. [ನಿಟ್ಟೆ ಕಾಲೇಜಿನಲ್ಲಿ ಮೈಕ್ರೋಸಾಫ್ಟ್ ಉನ್ನತ ಕೇಂದ್ರ]

English summary
Microsoft CEO Satya Nadella raised a few eyebrows on Thursday when he was speaking at a three-day conference in Phoenix, Arizona.However hours after being bashed on the net, Nadella apologised for his comments and said that men and women should get equal pay for equal work.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X