ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೈಕ್ರೋಸಾಫ್ಟ್ ನಿಂದ ಶಾಲೆಗಳಲ್ಲಿ ಶೌಚಾಲಯಗಳ ನಿರ್ಮಾಣ

By Mahesh
|
Google Oneindia Kannada News

ಬೆಂಗಳೂರು, ಅ. 21: ಪ್ರತಿ ವರ್ಷ ಅಕ್ಟೋಬರ್ ತಿಂಗಳಲ್ಲಿ ಆಚರಿಸುವ ವಾರ್ಷಿಕ ಗೀವಿಂಗ್ ಕ್ಯಾಂಪೇನ್ ನ ಭಾಗವಾಗಿ, ಮೈಕ್ರೋಸಾಫ್ಟ್ ಇಂಡಿಯಾ ಮತ್ತು ಅದರ ಉದ್ಯೋಗಿಗಳು ಕರ್ನಾಟಕ, ಹರ್ಯಾಣ ಮತ್ತು ತೆಲಂಗಾಣದ 42 ಶಾಲೆಗಳಿಗೆ ಅಧಿಕೃತವಾಗಿ ನೈರ್ಮಲ್ಯ ಸೌಕರ್ಯಗಳನ್ನು ಹಸ್ತಾಂತರ ಮಾಡಿದ್ದಾರೆ.

ಇದು ಈ 42 ಶಾಲೆಗಳ 10,746 ವಿದ್ಯಾರ್ಥಿಗಳಿಗೆ ನೈರ್ಮಲ್ಯ ಹಾಗೂ ಶುಚಿತ್ವದ ಅರಿವು ಮೂಡಿಸುವ ಆರು ತಿಂಗಳ ಅಭಿಯಾನದ ಸಮಾರೋಪವೂ ಆಗಿತ್ತು. ಈ ಅಭಿಯಾನವನ್ನು ಮೈಕ್ರೋಸಾಫ್ಟ್ ಉದ್ಯೋಗಿಗಳು ಚಾರಿಟಿ, ಏಯ್ಡ್ ಫೌಂಡೇಶನ್ ನ ನೆರವಿನೊಂದಿಗೆ ನಡೆಸಲಾಯಿತು. ಭಾರತದ ಸಾವಿರಾರು ಮೈಕ್ರೋಸಾಫ್ಟ್ ಉದ್ಯೋಗಿಗಳು ಕಂಪನಿಯ ಗೀವಿಂಗ್ ಕ್ಯಾಂಪೇನ್ ನಲ್ಲಿ ಅಕ್ಟೋಬರ್ ತಿಂಗಳುದ್ದಕ್ಕೂ ಭಾಗವಹಿಸುತ್ತಿದ್ದಾರೆ.

ಮೈಕ್ರೋಸಾಫ್ಟ್ ಉದ್ಯೋಗಿಗಳು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ, ಹೈಸ್ಕೂಲ್ ಕಾಕ್ಸ್ ಟೌನ್, ಬೆಂಗಳೂರು ಇಲ್ಲಿ ಉಪಸ್ಥಿತರಿದ್ದು ನೈರ್ಮಲ್ಯ ಸೌಕರ್ಯಗಳನ್ನು ಶಾಲಾ ವ್ಯವಸ್ಥಾಪಕರು, ಶಿಕ್ಷಕರು ಹಾಗೂ ವಿದ್ಯಾರ್ಥಿಗಳಿಗೆ ಹಸ್ತಾಂತರಿಸಿದರು.

ಈ ವೇಳೆ ಕರ್ನಾಟಕ ರಾಜ್ಯ, ಪ್ರಭುಲಿಂಗ ಕಾವಲಿಕಟ್ಟಿ, ಕೆಎಎಸ್, ಜಂಟಿ ಆಯುಕ್ತರು, ಬಿಬಿಎಂಪಿ ಪಶ್ಚಿಮ, ಬೆಂಗಳೂರು, ಶ್ರೀಮತಿ ಶಶಿರೇಖಾ ಮುಕುಂದ್, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ), ಸದಸ್ಯೆಯರು, ಸರ್ವಜ್ಞನಗರ ಮತ್ತು ಸೆಂಥಿಲ್ ಜ್ಞಾನಸೇಖರನ್, ನಿರ್ದೇಶಕರು-ಎಚ್‍ಆರ್, ಮೈಕ್ರೋಸಾಫ್ ಇಂಡಿಯಾ ಉಪಸ್ಥಿತರಿದ್ದರು.

Microsoft’s ‘Giving Campaign

ಸೆಂಥಿಲ್ ಜ್ಞಾನಸೇಖರನ್, ನಿರ್ದೇಶಕರು-ಎಚ್‍ಆರ್, ಮೈಕ್ರೋಸಾಫ್ ಇಂಡಿಯಾ ಮಾತನಾಡಿ, "ನೀಡುವುದು ಮೈಕ್ರೋಸಾಫ್ಟ್ ನ ಸಂಸ್ಕೃತಿಯ ಪ್ರಮುಖ ಭಾಗವಾಗಿದೆ. ನಮ್ಮ ತಂತ್ರಜ್ಞಾನ ಮತ್ತು ನಮ್ಮ ಚಿಂತನೆಗಳೊಂದಿಗೆ ನಾವು ಸಮುದಾಯದಲ್ಲಿ ಬದಲಾವಣೆ ತರುವ ಸಾಮರ್ಥ್ಯ ನಮಗಿದೆ ಎಂಬುದು ನಮ್ಮ ನಂಬಿಕೆಯಾಗಿದೆ.

ಪ್ರತಿ ಅಕ್ಟೋಬರ್ ನಲ್ಲಿ, ನಮ್ಮ ಉದ್ಯೋಗಿಗಳು ಒಟ್ಟುಗೂಡಿ ನಮ್ಮ ಸಮುದಾಯದೊಂದಿಗಿನ ಸಂಬಂಧಕ್ಕೆ ಶಕ್ತಿ ತುಂಬುತ್ತಾರೆ. ಸರ್ಕಾರದ ಸ್ವಚ್ಛ ಭಾರತ ಅಭಿಯಾನಕ್ಕೆ ಬೆಂಬಲವಾಗಿ ನಾವು ಶಿಕ್ಷಣ ಪ್ರಾಜೆಕ್ಟ್ ಗಾಗಿ ಆರು ತಿಂಗಳ ನೈರ್ಮಲ್ಯ ಅಭಿಯಾನವನ್ನು ಪೂರ್ಣಗೊಳಸಿರುವುದಕ್ಕೆ ಹೆಮ್ಮೆಯಾಗುತ್ತಿದೆ'' ಎಂದರು.

ಕರ್ನಾಟಕ ರಾಜ್ಯ, ಪ್ರಭುಲಿಂಗ ಕಾವಲಿಕಟ್ಟಿ, ಕೆಎಎಸ್, ಜಂಟಿ ಆಯುಕ್ತರು, ಬಿಬಿಎಂಪಿ ಪಶ್ಚಿಮ ಮಾತನಾಡಿ, "ಸ್ವಚ್ಛ ಭಾರತ ಅಭಿಯಾನಕ್ಕೆ ಬೆಂಬಲವಾಗಿ ಸ್ವಚ್ಛ ಹಾಗೂ ಆರೋಗ್ಯಕರ ರಾಜ್ಯವನ್ನಾಗಿಸುವ ನಿಟ್ಟಿನಲ್ಲಿ ಕರ್ನಾಟಕ ಸರ್ಕಾರ ವಿವಿಧ ಕ್ರಮಗಳನ್ನು ಕೈಗೊಳ್ಳುತ್ತಿದೆ.

ನಿವಾಸಿಗಳಿಗೆ ನೈರ್ಮಲ್ಯದ ಸೌಕರ್ಯ ಕಲ್ಪಿಸುವುದು ನಮ್ಮ ಮೊದಲ ಆದ್ಯತೆಯಾಗಿದೆ. ಇದನ್ನು ಮುಂದಕ್ಕೆ ಒಯ್ದು ಮೈಕ್ರೋಸಾಫ್ಟ್ ಇಂಡಿಯಾ ಮತ್ತು ಸಿಎಎಫ್ ಇಂಡಿಯಾ ನೈರ್ಮಲ್ಯದ ಕುರಿತು ರಾಜ್ಯದಲ್ಲಿ ಶಿಕ್ಷಣಕ್ಕಾಗಿ ನೈರ್ಮಲ್ಯ ಉಪಕ್ರಮದ ಮೂಲಕ ಕೈಗೊಂಡಿರುವುದದು ಸಂತಸದ ಸಂಗತಿ'' ಎಂದು ಹೇಳಿದರು.

ಮೀನಾಕ್ಷಿ ಬಾತ್ರಾ, ಸಿಇಒ, ಚಾರಿಟೀಸ್ ಏಯ್ಡ್ ಫೌಂಡೇಶನ್ ಇಂಡಿಯಾ ಮಾತನಾಡಿ,'ಮೈಕ್ರೋಸಾಫ್ಟ್ ಇಂಡಿಯಾದ ಕಾರ್ಪೊರೇಟ್ ಸಾಮಾಜಿಕ ಜವಾಬ್ದಾರಿಯನ್ನು ಕೈಗೊಳ್ಳಲು ನಾವು ಸಹಭಾಗಿಗಳಾಗುತ್ತಿರುವುದಕ್ಕೆ ಹೆಮ್ಮೆಯಾಗುತ್ತಿದೆ. ಚೌಕಟ್ಟಿನಿಂದಾಚೆಗೆ ಯೋಚಿಸಿವುದರ ಶಕ್ತಿಯೇನು ಎಂಬುದನ್ನು ಅವರು ತೋರಿಸಿದ್ದಾರೆ.

ಶಿಕ್ಷಣಕ್ಕಾಗಿ ನೈರ್ಮಲ್ಯ ಪ್ರಾಜೆಕ್ಟ್, ಮೈಕ್ರೋಸಾಫ್ಟ್ ಇಂಡಿಯಾವನ್ನು ಬೇರೆ ಕಾರ್ಪೊರೇಟ್ ಕಂಪನಿಗಳು ಅನುಸರಿಸಬೇಕಾದ ಪರಿಪೂರ್ಣ ಉದಾಹರಣೆಯಾಗಿದೆ. ಈ ವಿಶಿಷ್ಟ ಪ್ರಾಜೆಕ್ಟ್ ನ ಲ್ಲಿ ಮೈಕ್ರೋಸಾಫ್ಟ್ ಇಂಡಿಯಾ 2 ವರ್ಷಗಳ ಕಾಲ ಶಾಲೆಗಳನ್ನು ಬೆಂಬಲಿಸಲು ಬದ್ಧವಾಗಿದೆ. ಆ ಅವಧಿಯಲ್ಲಿ ನೈರ್ಮಲ್ಯ ಸೌಕರ್ಯಗಳ ನಿರ್ವಹಣೆ, ಸ್ವಚ್ಛತಾ ಪರಿಕರ ಪೂರೈಕೆಯನ್ನು ಮಾಡಲಿದೆ'' ಎಂದು ಹೇಳಿದರು.

English summary
Microsoft’s ‘Giving Campaign’is a platform that enables employees to volunteer their time and contribute money for causes that matter to them. It started in 1983 in Redmond, Washingtonas the ‘United Way of Giving’ and today contributes significantly in bringing about a real impact on local communities.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X